ಎಮ್ಮೆಯ ಸಂದರ್ಶನ ಮಾಡಿದ್ದ ಪಾಕ್ ನಿರೂಪಕನಿಂದ ಮತ್ತೊಂದು ಪ್ರಯೋಗ; ಟ್ರೋಲ್ ಆಯ್ತು ವಿಡಿಯೋ

ಪಾಕಿಸ್ತಾನದ ನಿರೂಪಕ ಅಮೀನ್ ಹಫೀಜ್ ರಾಜ ಪೋಷಾಕು ಧರಿಸಿ ವರದಿ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ಹಫೀಜ್ ಈ ಹಿಂದೆ ಎಮ್ಮೆಗಳ ಮುಂದೆ ಮೈಕ್ ಹಿಡಿದು, ಅವುಗಳ ಸಂದರ್ಶನ ಮಾಡಿದ್ದರು.

Sushma Chakre | news18-kannada
Updated:January 16, 2020, 11:35 AM IST
ಎಮ್ಮೆಯ ಸಂದರ್ಶನ ಮಾಡಿದ್ದ ಪಾಕ್ ನಿರೂಪಕನಿಂದ ಮತ್ತೊಂದು ಪ್ರಯೋಗ; ಟ್ರೋಲ್ ಆಯ್ತು ವಿಡಿಯೋ
ವೈರಲ್ ಆಗಿರುವ ಪಾಕಿಸ್ತಾನ ವಿಡಿಯೋ ದೃಶ್ಯ
  • Share this:
ನವದೆಹಲಿ (ಜ. 16): ಮಾಧ್ಯಮಗಳಲ್ಲಿ ದಿನದಿಂದ ದಿನಕ್ಕೆ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಆ ಪ್ರಯೋಗಗಳು ಮೆಚ್ಚುಗೆಗೆ ಪಾತ್ರವಾದರೆ, ಇನ್ನು ಕೆಲವೊಮ್ಮೆ ಟೀಕೆಗೂ ಒಳಗಾಗುತ್ತವೆ. ಆ ರೀತಿಯ ಹಲವು ಘಟನೆಗಳು ಪಾಕಿಸ್ತಾನದಲ್ಲಿ ನಡೆದಿದ್ದು, ರಾಜಪೋಷಾಕು ಧರಿಸಿದ ನಿರೂಪಕನೊಬ್ಬನ ಹೊಸ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ.

ಕೆಲವು ವರ್ಷಗಳ ಹಿಂದೆ ಪಾಕಿಸ್ತಾನದ ಪತ್ರಕರ್ತ ಚಾಂದ್ ನವಾಬ್ ಅವರ ವಿಡಿಯೋಗಳು ವೈರಲ್ ಆಗಿದ್ದವು. ಪಾಕ್​ನ ಪಾನ್ ಬಗ್ಗೆ ವರದಿ ಮಾಡುವಾಗ ಕೈಯಲ್ಲಿ ಪಾನ್ ಹಿಡಿದು, ಅದನ್ನು ತಿನ್ನುತ್ತ ವರದಿ ಮಾಡಿದ್ದ ಚಾಂದ್ ನವಾಬ್ ಆ ಪಾನ್ ಅನ್ನು ತಿನ್ನಲಾಗದೆ ಪರದಾಡಿದ್ದು ವೈರಲ್ ಆಗಿತ್ತು. ವರದಿಗಾರನೊಬ್ಬ ನೀರಿನಲ್ಲಿ ಮುಳುಗುತ್ತ ವರದಿ ಮಾಡಿದ್ದು ಕೂಡ ಟ್ರೋಲ್ ಆಗಿತ್ತು. ಪಾಕ್ ಪತ್ರಕರ್ತನೊಬ್ಬ ಎಮ್ಮೆಗಳ ಸಂದರ್ಶನ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ನೇರಪ್ರಸಾರದಲ್ಲಿ ವರದಿಗಾರ ಕತ್ತೆ ಮೇಲೆ ಹೋಗಿದ್ದು ಕೂಡ ವೈರಲ್ ಆಗಿತ್ತು.

ಇದೀಗ ಅದೇ ರೀತಿಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಪಾಕಿಸ್ತಾನದ ಪತ್ರಕರ್ತ ಅಮೀನ್ ಹಫೀಜ್ ರಾಜ ಪೋಷಾಕು ಧರಿಸಿ ವರದಿ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ಹಫೀಜ್ ಈ ಹಿಂದೆ ಎಮ್ಮೆಗಳ ಮುಂದೆ ಮೈಕ್ ಹಿಡಿದು, ಅವುಗಳ ಸಂದರ್ಶನ ಮಾಡಿದ್ದರು.

ಲಾಹೋರ್​ನಲ್ಲಿರುವ ಅರಮನೆಯನ್ನು ಮದುವೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ವರದಿ ಮಾಡಲು ತೆರಳಿದ್ದ ಹಫೀಜ್ ರಾಜಪೋಷಾಕು ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ವೀರಾವೇಷದಿಂದ ಕ್ಯಾಮೆರಾ ಮುಂದೆ ನಿಂತು ವರದಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿರುವ ಅನೇಕರು 'ಭಾರತೀಯ ಮಾಧ್ಯಮಗಳು ಯಾಕಿನ್ನೂ ಈ ರೀತಿಯ ಪ್ರಯೋಗಗಳನ್ನು ಮಾಡಿಲ್ಲ ಎಂದು ಅಚ್ಚರಿಯಾಗುತ್ತಿದೆ. ನಮ್ಮ ದೇಶದ ಮಾಧ್ಯಮಗಳ ಭವಿಷ್ಯ ಕೂಡ ಹೀಗೇ ಇರಬಹುದು' ಎಂದು ಲೇವಡಿ ಮಾಡಿದ್ದಾರೆ.ಪಾಕ್​ನಂತೆಯೇ ನಮ್ಮ ದೇಶದ ಚಾನೆಲ್​ಗಳೂ ಈಗ ಭಾರೀ ಮುಂದುವರೆದಿದ್ದು, ಈ ರೀತಿಯ ಪ್ರಯೋಗಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗದು. ಆ ದಿನವೂ ಬಹಳ ದೂರವೇನಿಲ್ಲ ಎಂದು ಟ್ವಿಟ್ಟಿಗರು ಟ್ವೀಟ್ ಮಾಡಿದ್ದಾರೆ.ಭಾರತದ ಸುದರ್ಶನ ನ್ಯೂಸ್​ ಚಾನೆಲ್​ ಈಗಾಗಲೇ ಇದೇ ರೀತಿಯ ಪ್ರಯೋಗವನ್ನು ಮಾಡಿದೆ. ನಮ್ಮಲ್ಲಿ ಬಂದ ನಂತರ ಪಾಕಿಸ್ತಾನದವರು ಮಾಡಿದ್ದಾರೆ ಎಂದು ರೋಹಿಣಿ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದಾರೆ.

(ವರದಿ: ರಖಾ ಮುಖರ್ಜಿ)
Published by: Sushma Chakre
First published: January 16, 2020, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading