• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • PM Modi ವಿರುದ್ಧ ದೂರು ದಾಖಲಿಸ್ತಾರಂತೆ ಈ ಪಾಕ್ ನಟಿ! ಇದಕ್ಕೆ ದೆಹಲಿ ಪೊಲೀಸರ ಪ್ರತಿಕ್ರಿಯೆ ಹೇಗಿದೆ ನೋಡಿ

PM Modi ವಿರುದ್ಧ ದೂರು ದಾಖಲಿಸ್ತಾರಂತೆ ಈ ಪಾಕ್ ನಟಿ! ಇದಕ್ಕೆ ದೆಹಲಿ ಪೊಲೀಸರ ಪ್ರತಿಕ್ರಿಯೆ ಹೇಗಿದೆ ನೋಡಿ

ಸೆಹರ್ ಶಿನ್ವಾರಿ ಮೋದಿ ವಿರುದ್ದ ಟ್ವೀಟ್​ ಮಾಡಿದ ನಟಿ

ಸೆಹರ್ ಶಿನ್ವಾರಿ ಮೋದಿ ವಿರುದ್ದ ಟ್ವೀಟ್​ ಮಾಡಿದ ನಟಿ

ಪಾಕಿಸ್ತಾನದಲ್ಲಿ ಉದ್ವಿಗ್ನ ರಾಜಕೀಯ ಪರಿಸ್ಥಿತಿಯನ್ನು ಹೆಚ್ಚಿಸಲು ಭಾರತ ಪ್ರಯತ್ನಿಸುತ್ತಿದೆ. ಭಾರತದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಾನು ವಿಶ್ವಸಂಸ್ಥೆಯನ್ನು ವಿನಂತಿಸುತ್ತೇನೆ" ಎಂದೆಲ್ಲ ಬರೆದುಕೊಂಡವರಿವರು.

  • Share this:
  • published by :

ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನ ಮತ್ತು ಅದರ ನಂತರದಲ್ಲಿ ಎಂದರೆ ಮೇ 9 ರಂದು ಅವರ ಬೆಂಬಲಿಗರು ಮತ್ತು ಭದ್ರತಾ ಪಡೆಗಳ ನಡುವೆ ದೇಶದ ವಿವಿಧ ಭಾಗಗಳಿಗೆ ಹರಡಿದ ಹಿಂಸಾಚಾರವು ಪಾಕಿಸ್ತಾನವನ್ನು ದೀರ್ಘಕಾಲದ ರಾಜಕೀಯ ಅಸ್ಥಿರತೆಗೆ ತಳ್ಳುವ ಸೂಚನೆಗಳನ್ನು ನೀಡಿದೆ. ಅದರಲ್ಲೂ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 1.1 ಬಿಲಿಯನ್ ಡಾಲರ್ ಆರ್ಥಿಕ ಬೇಲ್ ಔಟ್ ಪ್ಯಾಕೇಜ್ ಬಗ್ಗೆ ಮಾತುಕತೆ ನಡೆಸುತ್ತಿರುವಾಗ ಇಂತಹ ಘಟನೆಗಳು ದೇಶದ ಚಿತ್ರಣವನ್ನು ಮತ್ತಷ್ಟು ಹದಗೆಡಿಸಬಹುದು ಅಂತ ಹೇಳಲಾಗುತ್ತಿದೆ.


ಇಮ್ರಾನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದು ಯಾವಾಗ ಗೊತ್ತೇ?


ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರೂ ಆಗಿರುವ ಇಮ್ರಾನ್ ಖಾನ್ ಅವರ ಬಂಧನದ ನಂತರ ಇಸ್ಲಾಮಾಬಾದ್, ಲಾಹೋರ್, ಕರಾಚಿ ಮತ್ತು ಕ್ವೆಟ್ಟಾ ಸೇರಿದಂತೆ ಪಾಕಿಸ್ತಾನದ ಹಲವಾರು ನಗರಗಳಲ್ಲಿ ಮಂಗಳವಾರ ಹಿಂಸಾಚಾರ ಭುಗಿಲೆದ್ದಿದೆ.


ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣ ಎಂದು ಕರೆಯಲ್ಪಡುವ ಭೂ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ ಹಾಜರಾಗಬೇಕಾಗಿ ಬಂದಾಗ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ ನಿಂದ ಪಾಕಿಸ್ತಾನಿ ರೇಂಜರ್ ಗಳು ಬಂಧಿಸಿದ್ದರು.


ಪಾಕಿಸ್ತಾನದಲ್ಲಿ ನಡೆದುದ್ದಕ್ಕೆಲ್ಲಾ ಪ್ರಧಾನಿ ಮೋದಿಯೇ ಕಾರಣವಂತೆ..


ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ನಲ್ಲಿ ಬಂಧಿಸಿದ ಒಂದು ದಿನದ ನಂತರ, ನೆರೆಯ ದೇಶದ ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಪಾಕಿಸ್ತಾನದಲ್ಲಿ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂಷಿಸಿದ್ದಾರೆ.


ಸೆಹರ್ ಶಿನ್ವಾರಿ ಎಂಬ ನಟಿ ಮೋದಿ ಅವರ ವಿರುದ್ಧ ಈಗ ದೂರು ದಾಖಲಿಸಲು ಆನ್ಲೈನ್ ನಲ್ಲಿ ದೆಹಲಿ ಪೊಲೀಸರ ಆನ್ಲೈನ್ ಲಿಂಕ್ ಅನ್ನು ಕೇಳಿದ್ದಾರೆ ನೋಡಿ.


ಈ ಬಗ್ಗೆ ಟ್ವೀಟ್ ಮಾಡಿರುವ ನಟಿ "ದೆಹಲಿ ಪೊಲೀಸರ ಆನ್ಲೈನ್ ಲಿಂಕ್ ಯಾರಿಗಾದರೂ ತಿಳಿದಿದೆಯೇ? ನನ್ನ ದೇಶ ಪಾಕಿಸ್ತಾನದಲ್ಲಿ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವ ಭಾರತೀಯ ಪ್ರಧಾನಿ ಮತ್ತು ಭಾರತೀಯ ಗುಪ್ತಚರ ಸಂಸ್ಥೆ ವಿರುದ್ಧ ನಾನು ದೂರು ದಾಖಲಿಸಬೇಕಾಗಿದೆ.




ಭಾರತೀಯ ನ್ಯಾಯಾಲಯಗಳು ಮುಕ್ತವಾಗಿದ್ದರೆ ಭಾರತದ ಸುಪ್ರೀಂ ಕೋರ್ಟ್ ನನಗೆ ನ್ಯಾಯವನ್ನು ಒದಗಿಸುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಬರೆದಿದ್ದಾರೆ.


ಟ್ವೀಟ್ ನಲ್ಲಿ ಏನೆಲ್ಲಾ ಬರೆದಿದ್ದಾರೆ ನೋಡಿ ಈ ಪಾಕ್ ನಟಿ


ಪ್ರತ್ಯೇಕ ಟ್ವೀಟ್ ಗಳಲ್ಲಿ ಶಿನ್ವಾರಿ "ನಾನು ನರೇಂದ್ರ ಮೋದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಿದ್ದೇನೆ ಏಕೆಂದರೆ ಅವರು ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ಹಿಂದಿನ ಮುಖ್ಯ ಮೂಲವಾಗಿದ್ದಾರೆ.


ಪಾಕಿಸ್ತಾನದಲ್ಲಿ ಉದ್ವಿಗ್ನ ರಾಜಕೀಯ ಪರಿಸ್ಥಿತಿಯನ್ನು ಹೆಚ್ಚಿಸಲು ಭಾರತ ಪ್ರಯತ್ನಿಸುತ್ತಿದೆ. ಭಾರತದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಾನು ವಿಶ್ವಸಂಸ್ಥೆಯನ್ನು ವಿನಂತಿಸುತ್ತೇನೆ" ಎಂದೆಲ್ಲ ಬರೆದುಕೊಂಡಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು "ಪಾಕಿಸ್ತಾನದಲ್ಲಿ ನಮಗೆ ಇನ್ನೂ ನ್ಯಾಯವ್ಯಾಪ್ತಿ ಇಲ್ಲ, ನಿಮ್ಮ ದೇಶದಲ್ಲಿ ಇಂಟರ್ನೆಟ್ ಸ್ಥಗಿತಗೊಂಡಿರುವಾಗ ನೀವು ಹೇಗೆ ಈ ಟ್ವೀಟ್ ಮಾಡುತ್ತಿದ್ದೀರಿ ಎಂದು ತಿಳಿಯಲು ನಾವು ಬಯಸುತ್ತೇವೆ” ಅಂತ ದೆಹಲಿ ಪೊಲೀಸರು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದೆ.


ಪಾಕ್ ನಲ್ಲಿ ಈಗ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆಯಂತೆ..


ಇಮ್ರಾನ್ ಖಾನ್ ಬಂಧನದ ನಂತರ ಪಾಕಿಸ್ತಾನ ಮಂಗಳವಾರ ದೇಶಾದ್ಯಂತ ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಪಾಕಿಸ್ತಾನದ ದಿ ನೇಷನ್ ಪತ್ರಿಕೆಯ ಪ್ರಕಾರ, ಪ್ರಮುಖ ನಗರಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ, ಲಾಹೋರ್, ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯ ಹೆಚ್ಚಿನ ಪ್ರದೇಶಗಳಲ್ಲಿ ಮೊಬೈಲ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.


ಜಾಗತಿಕ ಇಂಟರ್ನೆಟ್ ಮಾನಿಟರ್ ನೆಟ್‌ಬ್ಲಾಕ್ಸ್, ಖಾನ್ ಬಂಧನದ ನಂತರ ಮಂಗಳವಾರ ಪಾಕಿಸ್ತಾನದ ಅನೇಕ ಇಂಟರ್ನೆಟ್ ಪೂರೈಕೆದಾರರಲ್ಲಿ ಟ್ವಿಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ಗೆ ಅಡ್ಡಿಯಾಗಿದೆ ಎಂದು ದೃಢಪಡಿಸಿದೆ.

First published: