ಜಮ್ಮು-ಕಾಶ್ಮೀರ ಸಂಬಂಧ ಚರ್ಚಿಸಲು ತುರ್ತು ಸಭೆ ಆಯೋಜಿಸುವಂತೆ ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಪತ್ರ ಬರೆದ ಪಾಕಿಸ್ತಾನ

ವಿಶ್ವಸಂಸ್ಥೆಯ ಭದ್ರತಾ ಸಮಿತಿ ಅಧ್ಯಕ್ಷ, ಪೊಲೀಶ್​ ವಿದೇಶಾಂಗ ಸಚಿವ ಜಾಸೆಕ್​ ಕ್ಜಾಪುಟೊವಿಕ್ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳವಾರ ಪಾಕಿಸ್ತಾನದಿಂದ ವಿಶ್ವಸಂಸ್ಥೆಗೆ ಪತ್ರ ಬಂದಿದೆ. ಮತ್ತು ಈ ಬಗ್ಗೆ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

HR Ramesh | news18
Updated:August 14, 2019, 2:03 PM IST
ಜಮ್ಮು-ಕಾಶ್ಮೀರ ಸಂಬಂಧ ಚರ್ಚಿಸಲು ತುರ್ತು ಸಭೆ ಆಯೋಜಿಸುವಂತೆ ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಪತ್ರ ಬರೆದ ಪಾಕಿಸ್ತಾನ
ಇಮ್ರಾನ್​ ಖಾನ್ ಮತ್ತು ಮೋದಿ
  • News18
  • Last Updated: August 14, 2019, 2:03 PM IST
  • Share this:
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯವನ್ನು ತೆಗೆದುಹಾಕಿದ ಭಾರತದ ನಿರ್ಧಾರ ಸಂಬಂಧ ತುರ್ತು ಸಭೆ ನಡೆಸುವಂತೆ ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಹೇಳಿದೆ. ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಷಿ ಅವರು ಮಾತನಾಡಿ, ನಾವು ಸಂಘರ್ಷಕ್ಕೆ ಪ್ರಚೋದನೆ ನೀಡುವುದಿಲ್ಲ. ಆದರೆ, ನಮ್ಮ ಸಂಯಮವನ್ನು ನಮ್ಮ ದೌರ್ಬಲ್ಯ ಎಂದು ಭಾರತ ತಿಳಿದರೆ ಅದು ಅವರ ತಪ್ಪು ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಪತ್ರ ಬರೆದಿರುವ ಖುರೇಷಿ, ಒಂದು ವೇಳೆ ಭಾರತ ಸೇನೆಯನ್ನು ಬಳಸಿದರೆ, ಪಾಕಿಸ್ತಾನ ಸ್ವ ರಕ್ಷಣೆಗಾಗಿ ಎಲ್ಲ ಸಾಮರ್ಥ್ಯದೊಂದಿಗೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಹೇಳಿದ್ದಾರೆ. ಜೊತೆಗೆ ಅಪಾಯಕಾರಿ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ತುರ್ತು ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ.

ಇದನ್ನು ಓದಿ: ಜಮ್ಮು ಮೇಲಿದ್ದ ನಿರ್ಬಂಧ ತೆರವು, ಕಾಶ್ಮೀರದಲ್ಲಿ ಮುಂದುವರಿಕೆ

ಕಳೆದ ಶುಕ್ರವಾರ ಚೀನಾಗೆ ಭೇಟಿ ನೀಡಿದ್ದ ಖುರೇಷಿ ಚೀನಾದ ವಿದೇಶಾಂಗ ಸಚಿವ ವಾಂಗ್​ ಯಿ ಮತ್ತು ಸರ್ಕಾರದ ಉನ್ನತಾಧಿಕಾರಿಗಳನ್ನು ಭೇಟಿಯಾಗಿದ್ದರು. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕಿದ ಆದೇಶವನ್ನು ವಿಶ್ವಸಂಸ್ಥೆ ರದ್ದುಮಾಡುವಂತೆ ಪಾಕಿಸ್ತಾನದ ಆಗ್ರಹಕ್ಕೆ ಬೀಜಿಂಗ್​ ಸಹಕಾರ ನೀಡಿದೆ ಎಂದು ಶನಿವಾರ ಅವರು ಹೇಳಿದ್ದರು. ಬಳಿಕ ಚೀನಾ, ಭಾರತ ಮತ್ತು ಪಾಕಿಸ್ತಾನ ಅಕ್ಕಪಕ್ಕದ ಮಿತ್ರ ರಾಷ್ಟ್ರಗಳು. ಸಮಸ್ಯೆಯನ್ನು ವಿಶ್ವಸಂಸ್ಥೆ ನಿರ್ಣಯಗಳು ಮತ್ತು ಶಿಮ್ಲಾ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳುವಂತೆ ಖುರೇಷಿಗೆ ಸಲಹೆ ನೀಡಿತ್ತು.

ವಿಶ್ವಸಂಸ್ಥೆಯ ಭದ್ರತಾ ಸಮಿತಿ ಅಧ್ಯಕ್ಷ, ಪೊಲೀಶ್​ ವಿದೇಶಾಂಗ ಸಚಿವ ಜಾಸೆಕ್​ ಕ್ಜಾಪುಟೊವಿಕ್ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳವಾರ ಪಾಕಿಸ್ತಾನದಿಂದ ವಿಶ್ವಸಂಸ್ಥೆಗೆ ಪತ್ರ ಬಂದಿದೆ. ಮತ್ತು ಈ ಬಗ್ಗೆ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

First published: August 14, 2019, 1:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading