ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ವಿಮಾನ ಕೂಡ ಪಾಕ್ ವಾಯು ಮಾರ್ಗದಲ್ಲಿ ಚಲಿಸದಂತೆ ನಿರ್ಬಂಧ

ಕಳೆದ ತಿಂಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೈಗೊಳ್ಳಲಿದ್ದ ಐಸ್​ಲ್ಯಾಂಡ್​ ಪ್ರವಾಸಕ್ಕೂ ಪಾಕಿಸ್ತಾನದ ವಾಯಮಾರ್ಗವನ್ನು ಬಳಸಿಕೊಳ್ಳಲು ಪಾಕ್​ ನಿರ್ಬಂಧ ವಿಧಿಸಿತ್ತು. ಜಮ್ಮು-ಕಾಶ್ಮೀರದ ವಿಷಯವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಷಯ ಪರಿಸ್ಥಿತಿ ತಲೆದೋರಿದ ಬಳಿಕ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದರು.

HR Ramesh | news18-kannada
Updated:September 18, 2019, 9:27 PM IST
ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ವಿಮಾನ ಕೂಡ ಪಾಕ್ ವಾಯು ಮಾರ್ಗದಲ್ಲಿ ಚಲಿಸದಂತೆ ನಿರ್ಬಂಧ
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ತೆರಳಲು  ಪಾಕಿಸ್ತಾನದ ವಾಯು ಪ್ರದೇಶವನ್ನು ಬಳಸಿಕೊಳ್ಳದಂತೆ ಪಾಕ್ ನಿರ್ಬಂಧ ವಿಧಿಸಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಶಾ ಮೆಹಮೊದ್​ ಖುರೇಷಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ನಮ್ಮ ವಾಯುಪ್ರದೇಶವನ್ನು ಉಪಯೋಗಿಸದಂತೆ ನಾವು ಭಾರತದ ಹೈ ಕಮಿಷನರ್​ ಅವರಿಗೆ ಮಾಹಿತಿ ರವಾನಿಸಿದ್ದೇವೆ ಎಂದು ಖುರೇಷಿ ಹೇಳಿರುವುದಾಗಿ ಎಎನ್​ಐ ವರದಿ ಮಾಡಿದೆ.

ಇದೇ ತಿಂಗಳ 21ರಿಂದ 27ರವರೆಗೂ ಪ್ರಧಾನಿ ಮೋದಿ ಅಮೆರಿಕಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕಕ್ಕೆ ಪ್ರಧಾನಿ ಮೋದಿ ಪಾಕಿಸ್ತಾನದ ವಾಯುಪ್ರದೇಶದ ಮಾರ್ಗವಾಗಿ ತೆರಳಬೇಕು. ಹೀಗಾಗಿ ಪಾಕಿಸ್ತಾನದ ವಾಯುಪ್ರದೇಶದ ಮಾರ್ಗವಾಗಿ ಪ್ರಧಾನಿ ಮೋದಿ ಅವರ ವಿಮಾನ ಹೋಗಲು ಭಾರತ ಸಾಂಪ್ರದಾಯಿಕವಾಗಿ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು ಎಂದು ಪಾಕಿಸ್ತಾನದ ಮಾಧ್ಯಮಗಳು ಬುಧವಾರ ವರದಿ ಮಾಡಿದ್ದವು.

ಕಳೆದ ತಿಂಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೈಗೊಳ್ಳಲಿದ್ದ ಐಸ್​ಲ್ಯಾಂಡ್​ ಪ್ರವಾಸಕ್ಕೂ ಪಾಕಿಸ್ತಾನದ ವಾಯಮಾರ್ಗವನ್ನು ಬಳಸಿಕೊಳ್ಳಲು ಪಾಕ್​ ನಿರ್ಬಂಧ ವಿಧಿಸಿತ್ತು. ಜಮ್ಮು-ಕಾಶ್ಮೀರದ ವಿಷಯವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಷಯ ಪರಿಸ್ಥಿತಿ ತಲೆದೋರಿದ ಬಳಿಕ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದರು.

ಇದನ್ನು ಓದಿ: ವಿದೇಶ ಭೇಟಿಗೆ ಪಾಕ್​ ವಾಯುಮಾರ್ಗ ಬಳಸಿಕೊಳ್ಳಲು ರಾಷ್ಟ್ರಪತಿ ಕೋವಿಂದ್​ ಮಾಡಿದ್ದ ಮನವಿ ತಿರಸ್ಕರಿಸಿದ ಪ್ರಧಾನಿ ಇಮ್ರಾನ್​ ಖಾನ್

ಫೆಬ್ರವರಿ 14ರ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಫೆಬ್ರವರಿ 26ರಂದು ಬಾಲಾಕೋಟ್​ನಲ್ಲಿ ಜೈಷ್​-ಎ-ಮೊಹಮ್ಮದ್​ ಉಗ್ರರ ತರಬೇತಿ ಶಿಬಿರದ ಮೇಲೆ ವಾಯು ದಾಳಿ ನೆಡೆಸಿತ್ತು. ಆ ಬಳಿಕ ಪಾಕಿಸ್ತಾನ ತನ್ನ ದೇಶದ ವಾಯು ಮಾರ್ಗದಲ್ಲಿ ಭಾರತೀಯ ವಿಮಾನಗಳು ಹಾರದಂತೆ ಸಂಪೂರ್ಣ ನಿಷೇಧ ಹೇರಿತ್ತು. ಆ ಬಳಿಕ ಜುಲೈ 16ರಂದು ನಾಗರಿಕ ವಿಮಾನಗಳ ಹಾರಾಟಕ್ಕೆ ತನ್ನ ವಾಯು ಮಾರ್ಗ ಬಳಕೆ ಅನುಮತಿ ನೀಡಿತ್ತು. ಆದರೆ, ಆಗಸ್ಟ್​ 5ರಂದು ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಪಾತಿನಿಧ್ಯದ 370ನೇ ವಿಧಿಯನ್ನು ರದ್ದುಗೊಳಿಸಿದ್ದ ಬಳಿಕ ಎರಡು ದೇಶಗಳ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪಾಕ್​ ಭಾರತದೊಂದಿಗಿನ ಎಲ್ಲ ವಾಣಿಜ್ಯ ವಹಿವಾಟು ಸೇರಿದಂತೆ ಸಂಪರ್ಕ ವ್ಯವಸ್ಥೆಯನ್ನು ನಿರ್ಬಂಧಿಸಿದೆ.

First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading