ಈ ಕಾಲೇಜಲ್ಲಿ ಹುಡುಗ-ಹುಡುಗಿ ಜೊತೆಯಾಗಿ ಓಡಾಡಿದರೆ ಏನಾಗುತ್ತೆ ಗೊತ್ತಾ?

ಪಾಕಿಸ್ತಾನದ ಬಚ್ಚಾ ಖಾನ್ ಯೂನಿವರ್ಸಿಟಿ 2019ರ ಸೆ. 23ರಂದು ಹೊರಡಿಸಿರುವ ಆದೇಶದ ಪ್ರಕಾರ, ಈ ಯೂನಿವರ್ಸಿಟಿ ಆವರಣದಲ್ಲಿ ಹುಡುಗ-ಹುಡುಗಿಯರು ಒಟ್ಟಿಗೇ ಓಡಾಡುವಂತಿಲ್ಲ.

Sushma Chakre | news18-kannada
Updated:September 27, 2019, 1:22 PM IST
ಈ ಕಾಲೇಜಲ್ಲಿ ಹುಡುಗ-ಹುಡುಗಿ ಜೊತೆಯಾಗಿ ಓಡಾಡಿದರೆ ಏನಾಗುತ್ತೆ ಗೊತ್ತಾ?
ಪಾಕಿಸ್ತಾನದ ಬಚ್ಚ ಯೂನಿವರ್ಸಿಟಿ
  • Share this:
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿಸ್ತು ಕಲಿಯಲಿ ಎಂದು ಸಾಕಷ್ಟು ನಿಯಮಗಳನ್ನು ತರುವುದನ್ನು ನೋಡಿದ್ದೇವೆ. ಆದರೆ, ಕೆಲವು ಕಾಲೇಜುಗಳಲ್ಲಿ ಜಾರಿಗೆ ತರುವ ಅತಿಯಾದ ಶಿಸ್ತಿನಿಂದ ವಿದ್ಯಾರ್ಥಿಗಳು ಇರುಸುಮುರುಸಿಗೆ ಒಳಗಾಗುತ್ತಾರೆ. ಇತ್ತೀಚೆಗಷ್ಟೆ ಹೈದರಾಬಾದ್​ನ ಮಹಿಳಾ ಕಾಲೇಜೊಂದರಲ್ಲಿ ಮೊಣಕಾಲಿಗಿಂತ ಗಿಡ್ಡ ಟಾಪ್ ಧರಿಸುವಂತಿಲ್ಲ, ಪೂರ್ತಿ ತೋಳಿರುವ ಉಡುಗೆಯನ್ನೇ ಹಾಕಬೇಕು ಎಂದು ನಿಯಮ ಜಾರಿಗೆ ತರಲಾಗಿತ್ತು. ಅದಕ್ಕೆ ವಿದ್ಯಾರ್ಥಿಗಳು ವಿರೋಧವನ್ನೂ ವ್ಯಕ್ತಪಡಿಸಿದ್ದರು.

ಇಂತಹ ಅನೇಕ ನಿಯಮಗಳನ್ನು ಜಾರಿಗೆ ತರುವ ಕೆಲವು ಕಾಲೇಜುಗಳು ವಿದ್ಯಾರ್ಥಿಗಳ ಮತ್ತು ಪೋಷಕರ ಕೆಂಗಣ್ಣಿಗೂ ಗುರಿಯಾದ ಉದಾಹರಣೆಗಳು ಸಾಕಷ್ಟಿವೆ. ಪಾಕಿಸ್ತಾನದ ಚರ್ಸಡ್ಡದ ಯೂನಿವರ್ಸಿಟಿಯೊಂದರಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದು ಆದೇಶ ಹೊರಡಿಸಿದ್ದು, ಆ ಆದೇಶ ಪತ್ರವೀಗ ಸಾಮಾಜಿಕ ಲಾಜತಾಣಗಳಲ್ಲಿ ಹರಿದಾಡುತ್ತಿದೆ.

ಪಾಕಿಸ್ತಾನದ ಬಚ್ಚಾ ಖಾನ್ ಯೂನಿವರ್ಸಿಟಿ 2019ರ ಸೆ. 23ರಂದು ಹೊರಡಿಸಿರುವ ಆದೇಶದ ಪ್ರಕಾರ, ಈ ಯೂನಿವರ್ಸಿಟಿ ಆವರಣದಲ್ಲಿ ಹುಡುಗ-ಹುಡುಗಿಯರು ಒಟ್ಟಿಗೇ ಓಡಾಡುವಂತಿಲ್ಲ. ಹುಡುಗ-ಹುಡುಗಿ ಜೋಡಿಯಾಗಿ ಓಡಾಡುವುದನ್ನು ನಿಷೇಧಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

'ಯೂನಿವರ್ಸಿಟಿ ಆವರಣದಲ್ಲಿ ವಿದ್ಯಾರ್ಥಿಗಳು ಅಶಸ್ತಿನಿಂದ ಇರುವುದನ್ನು ಸಹಿಸಲಾಗುವುದಿಲ್ಲ. ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಒಟ್ಟಿಗೆ ಓಡಾಡುವುದನ್ನು ನಿಷೇಧಿಸಲಾಗಿದೆ. ಒಂದುವೇಳೆ ಗಂಡು-ಹೆಣ್ಣು ಒಟ್ಟಿಗೆ ತಿರುಗುವುದು ಕಂಡುಬಂದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಂಥವರು ತಮ್ಮ ಅಪ್ಪ-ಅಮ್ಮನನ್ನು ಕರೆದುಕೊಂಡು ಬರಬೇಕಾಗುತ್ತದೆ. ಹೀಗೆ ಒಟ್ಟಾಗಿ ಓಡಾಡುವವರಿಗೆ ದಂಡವನ್ನೂ ವಿಧಿಸಲಾಗುವುದು' ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.ಈ ಪತ್ರ ಟ್ವಿಟ್ಟರ್​ನಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಶುರುವಾಗಿವೆ. 'ಈ ಯೂನಿವರ್ಸಿಟಿಯ ಹೊಸ ನಿಯಮದಿಂದ ಭೂಕಂಪವನ್ನು ತಡೆಗಟ್ಟಲು ಸಾಧ್ಯವೇ?' ಎಂದು ಕೆಲವರು ಟ್ವಿಟ್ಟರ್​ನಲ್ಲಿ ಗೇಲಿ ಮಾಡಿದ್ದಾರೆ. 'ಇನ್ನು ಕೆಲವರು ಯಾವ ಕಾನೂನಿನ ಅಡಿಯಲ್ಲಿ ಬಚ್ಚಾ ಖಾನ್​ ಯೂನಿವರ್ಸಿಟಿ ಈ ನಿರ್ಧಾರ ತೆಗೆದುಕೊಂಡಿದೆ? ಅವರ ಶಿಕ್ಷಣ ವ್ಯವಸ್ಥೆಯೇ ಸರಿಯಿಲ್ಲ' ಎಂದು ಟೀಕಿಸಿದ್ದಾರೆ.

 

First published: September 27, 2019, 1:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading