ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕತ್ತೆ ಕಾಲು ಹಿಡಿದ ಪಾಕಿಸ್ತಾನ!

2017-18 ರ ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯು 2018 ರ ಏಪ್ರಿಲ್​​ನಲ್ಲಿ ಬಿಡುಗಡೆಯಾಯಿತು.

zahir | news18
Updated:February 3, 2019, 5:06 PM IST
ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕತ್ತೆ ಕಾಲು ಹಿಡಿದ ಪಾಕಿಸ್ತಾನ!
@Golf Punk
zahir | news18
Updated: February 3, 2019, 5:06 PM IST
ಆರ್ಥಿಕತೆಯ ಹೊಡೆತದಿಂದ ಪಾಕಿಸ್ತಾನ ದಿವಾಳಿಯಾಗಿದೆ. ಇದೀಗ ವಿದೇಶಿ  ವಿನಿಮಯಕ್ಕಾಗಿ ಕತ್ತೆಗಳನ್ನು ರಫ್ತು ಮಾಡುವ ಪರಿಸ್ಥತಿಗೆ ಅಲ್ಲಿನ ಸರ್ಕಾರ ತಲುಪಿದೆ. ಇದಕ್ಕಾಗಿ ಬೇಡಿಕೆಯಿರುವ ರಾಷ್ಟ್ರಗಳಿಗೆ ಕತ್ತೆಗಳನ್ನು ರಫ್ತು ಮಾಡಿ ಡಾಲರ್​ ವಿನಿಮಯ ಹೆಚ್ಚಿಸಿಕೊಳ್ಳುತ್ತಿದೆ. ಇಲ್ಲಿನ ಕತ್ತೆಗಳಿಗೆ ಚೀನಾ ದೇಶದಿಂದ ಭಾರೀ ಬೇಡಿಕೆಯಿದ್ದು, ಈ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಚೀನಾಗೆ ಕತ್ತೆಗಳನ್ನು ರಫ್ತು ಮಾಡುತ್ತಿದೆ ಎಂದು ಜಾನುವಾರು ಇಲಾಖೆಯ ಹಿರಿಯ ಅಧಿಕಾರಿ ಖೈಬರ್ ಪಖ್ತೂಂವೂ ತಿಳಿಸಿದ್ದಾರೆ.

ಭಾರತದ ನೆರೆ ರಾಷ್ಟ್ರ ಪಾಕಿಸ್ತಾನ 50 ಲಕ್ಷಕ್ಕಿಂತಲೂ ಹೆಚ್ಚು ಕತ್ತೆಗಳನ್ನು ಹೊಂದಿರುವ ವಿಶ್ವದ ಮೂರನೇ ಅತಿದೊಡ್ಡ ದೇಶ. ಲಾಹೋರ್​​ನಲ್ಲಿಯೇ 41,000 ಕ್ಕಿಂತಲೂ ಹೆಚ್ಚು ಕತ್ತೆಗಳಿದ್ದು, ಇವುಗಳ ಬೇಡಿಕೆ ಹೆಚ್ಚಿದೆ ಎಂದು ತಿಳಿದು ಬಂದಿದೆ. ಇಲ್ಲಿನ ಸರ್ಕಾರ ಕತ್ತೆಗಳಿಗಾಗಿ ಪಾಕ್ ಪಂಜಾಬ್​ನಲ್ಲಿ ಪ್ರತ್ಯೇಕ ಉಚಿತ ಆಸ್ಪತ್ರೆಯನ್ನು ತೆರೆದಿದೆ. ಪಂಜಾಬ್​ನ ಈ ಆಸ್ಪತ್ರೆಯಲ್ಲಿ ಕತ್ತೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅವುಗಳಿಗೆ ಯಾವುದೇ ರೋಗ ಬಾರದ ರೀತಿ ವ್ಯಾಕ್ಸಿನೇಷನ್​ ಮಾಡಲಾಗುತ್ತದೆ.

ಒಂದು ಕತ್ತೆಯ ಬೆಲೆ 35,000 ದಿಂದ 55,000 ಇರುತ್ತದೆ. ದಿನಕ್ಕೆ 800-900 ರೂ ಸಂಪಾದನೆಯಾಗುತ್ತದೆ ಎಂದು ಕತ್ತೆ ಮಾಲಿಕರೊಬ್ಬರು ಹೇಳುತ್ತಾರೆ. ಕತ್ತೆ ಸಾಕುವುದರಿಂದ ಸಾಕಷ್ಟು ಹಣ ಸಂಪಾದಿಸಬಹುದಾಗಿದೆ. ಮಾರಿದರೆ ಇನ್ನೂ ಹೆಚ್ಚಿನ ಮೊತ್ತದ ದುಡ್ಡು ಸಿಗುತ್ತದೆ ಎನ್ನುತ್ತಾರೆ. ಕತ್ತೆಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಅವುಗಳನ್ನು ಮಾರಿ ಹಣ ಗಳಿಸುವುದೇ ನಮ್ಮ ಗುರಿ ಎಂದು ಕತ್ತೆ ಸಾಕುದಾರರು ಹೇಳುತ್ತಾರೆ.

ಇದರೊಂದಿಗೆ ಚೀನಾ ದೇಶದ ಕೆಲ ಕಂಪೆನಿಗಳು ಪಾಕ್​ನಲ್ಲಿ ಕತ್ತೆ ಫಾರ್ಮ್​​ಗಳನ್ನ ತೆರೆಯಲು ಆಸಕ್ತಿ ತೋರುಸುತ್ತಿವೆ ಎನ್ನಲಾಗಿದೆ. ಈ ಕುರಿತು ಪಾಕಿಸ್ತಾನ ಚೀನಾ ಜತೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಚೀನಾ ಕತ್ತೆ ವಾಣಿಜ್ಯ ಕೃಷಿಗೆ 3 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಎಂದು ಹೇಳಲಾಗಿದೆ.

2017-18 ರ ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯು 2018 ರ ಏಪ್ರಿಲ್​​ನಲ್ಲಿ ಬಿಡುಗಡೆಯಾಯಿತು. ಈ ಸಮೀಕ್ಷೆಯು ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ 1 ಲಕ್ಷದಿಂದ 53 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಅತಿ ಹೆಚ್ಚು ಕತ್ತೆಗಳನ್ನು ಹೊಂದಿರುವ ಪೈಕಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಇಥಿಯೋಪಿಯಾ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ​ ಹೊಸ ದಾಖಲೆ​ ನಿರ್ಮಿಸಿದ ಮಿಥಾಲಿ ರಾಜ್

ಇಲ್ಲಿ ಮತ್ತೊಂದು ಮುಖ್ಯ ಅಂಶವೆಂದರೆ ಪಾಕಿಸ್ತಾನದಲ್ಲಿ 70 ಸಾವಿರ ಜನ ಕೆಲಸಕ್ಕೆ ಕತ್ತೆಗಳನ್ನ ಅವಲಂಬಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಕತ್ತೆಗಳಿಗೆ ಬಹುಬೇಡಿಕೆಯಿದ್ದು, ಅದರೊಂದಿಗೆ ವಿದೇಶಗಳಿಂದ ಬೇಡಿಕೆ ಹೆಚ್ಚಾದ ಕಾರಣ ಪಾಕಿಸ್ತಾನಿಗಳು ಆದಾಯಕ್ಕಾಗಿ ಕತ್ತೆ ಬಾಲದ ಹಿಡಿದಿರುವುದು ಸುಳ್ಳಲ್ಲ.
Loading...

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೊಸ ಇತಿಹಾಸ ಬರೆದ ಹಿಂದೂ ಮಹಿಳೆ!

First published:February 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...