HOME » NEWS » National-international » PAKISTAN TO AMEND ITS ARMY ACT ALLOW KULBHUSHAN JADHAV TO APPEAL IN CIVILIAN COURT AS PER ICJ RULING RH

ಪಾಕಿಸ್ತಾನದ ಸೇನಾ ಕಾಯ್ದೆಗೆ ತಿದ್ದುಪಡಿ; ನಾಗರಿಕ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಅರ್ಜಿ ಸಲ್ಲಿಸಲು ಅವಕಾಶ

ಭಾರತ ನೌಕಾಪಡೆಯ ಮಾಜಿ ಕಮಾಂಡರ್ ಆಗಿರುವ ಜಾಧವ್ ಅವರು ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದರು ಎಂಬ ಆರೋಪದ ಮೇಲೆ 2016ರಲ್ಲಿ ಬಂಧನಕ್ಕೆ ಒಳಗಾಗಿದ್ದರು. ಬಳಿಕ ಜಾಧವ್ ಅವರನ್ನು ಇರಾನ್​ನಿಂದ ಅಪಹರಿಸಿ, ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ಭಾರತ ಹೇಳಿತು.

HR Ramesh | news18-kannada
Updated:November 13, 2019, 3:17 PM IST
ಪಾಕಿಸ್ತಾನದ ಸೇನಾ ಕಾಯ್ದೆಗೆ ತಿದ್ದುಪಡಿ; ನಾಗರಿಕ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಅರ್ಜಿ ಸಲ್ಲಿಸಲು ಅವಕಾಶ
ಕುಲಭೂಷಣ್ ಜಾಧವ್
  • Share this:
ನವದೆಹಲಿ: ಪಾಕಿಸ್ತಾನವು ಸೇನಾ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಇದರಡಿ ಪಾಕ್ ಸೇನಾ ನ್ಯಾಯಾಲಯದಿಂದ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಶಿಕ್ಷೆಯನ್ನು ಪ್ರಶ್ನೆ ಮಾಡಿ ನಾಗರಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹಾಲಿ ಕಾಯ್ದೆಯ ಪ್ರಕಾರ ಸೇನಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದವರು ವ್ಯಕ್ತಿಗಳು ಅಥವಾ ಗುಂಪುಗಳು ಅದನ್ನು ನಾಗರಿಕ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ಇರಲಿಲ್ಲ. ಆದರೆ, ಇದೀಗ ತರಲಿರುವ ತಿದ್ದಪಡಿಯಿಂದಾಗಿ ಜಾಧವ್ ನಾಗರಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದಾಗಿ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿರುವುದಾಗಿ ಎಎನ್​ಐ ಉಲ್ಲೇಖಿಸಿದೆ.

ಭಾರತ ನೌಕಾಪಡೆಯ ಮಾಜಿ ಕಮಾಂಡರ್ ಆಗಿರುವ ಜಾಧವ್ ಅವರು ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದರು ಎಂಬ ಆರೋಪದ ಮೇಲೆ 2016ರಲ್ಲಿ ಬಂಧನಕ್ಕೆ ಒಳಗಾಗಿದ್ದರು. ಬಳಿಕ ಜಾಧವ್ ಅವರನ್ನು ಇರಾನ್​ನಿಂದ ಅಪಹರಿಸಿ, ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ಭಾರತ ಹೇಳಿತು. ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ 2017ರ ಏಪ್ರಿಲ್​ನಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿತು. ಈ ಕ್ರಮವನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯ ಪ್ರಶ್ನೆ ಮಾಡಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಮರಣದಂಡನೆ ಶಿಕ್ಷೆಗೆ ತಡೆ ನೀಡುವಂತೆ ಪಾಕಿಸ್ತಾನಕ್ಕೆ ನಿರ್ದೇಶನ ನೀಡಿ, ಜಾಧವ್ ಅವರಿಗೆ ರಾಯಭಾರ ಕಚೇರಿ ಅಧಿಕಾರಿಯೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಹೇಳಿತ್ತು.

ಇದನ್ನು ಓದಿ: ತೀರ್ಪು ನೀಡುವವರೆಗೂ ‘ಕುಲಭೂಷಣ್ ಜಾಧವ್​​’ರನ್ನು ಗಲ್ಲಿಗೇರಿಸುವಂತಿಲ್ಲ; ಅಂತರಾಷ್ಟ್ರೀಯ ನ್ಯಾಯಲಯ ಆದೇಶ!

First published: November 13, 2019, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories