ವಾಘಾ ಗಡಿಯಲ್ಲಿ ನಿಂತ ಸಂಜೋತಾ ಎಕ್ಸ್​ಪ್ರೆಸ್​; ಭಾರತಕ್ಕೆ ಕಾಲಿಡಲ್ಲ ಎಂದ ಪಾಕ್​ ರೈಲು ಸಿಬ್ಬಂದಿ

ರೈಲು ವಾಘಾ ಗಡಿ ಬಳಿ ನಿಂತಿರುವ ಕುರಿತು ಪಾಕಿಸ್ತಾನದ ರೈಲ್ವೆ ಸಚಿವರಾದ ಶೇಖ್​ ರಶೀದ್​ ದೃಢಪಡಿಸಿದ್ದಾರೆ. ಪಾಕಿಸ್ತಾನದ ಈ ನಡೆ ಬಗ್ಗೆ ಭಾರತದ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಇದರಿಂದಾಗಿ ನೂರಾರು ಪ್ರಯಾಣಿಕರು ವಾಘಾ ಗಡಿ ಬಳಿ ತೊಂದರೆ ಪಡುವಂತೆ ಆಗಿದೆ,

Seema.R | news18-kannada
Updated:August 8, 2019, 4:09 PM IST
ವಾಘಾ ಗಡಿಯಲ್ಲಿ ನಿಂತ ಸಂಜೋತಾ ಎಕ್ಸ್​ಪ್ರೆಸ್​; ಭಾರತಕ್ಕೆ ಕಾಲಿಡಲ್ಲ ಎಂದ ಪಾಕ್​ ರೈಲು ಸಿಬ್ಬಂದಿ
ಸಂಜೋತಾ ಎಕ್ಸ್​ಪ್ರೆಸ್​
  • Share this:
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಕಲಂ 370ಅನ್ನು ರದ್ದು ಮಾಡಿರುವ ಭಾರತ ಸರ್ಕಾರದ ಕ್ರಮಕ್ಕೆ ಪಾಕಿಸ್ತಾನ ಖಂಡನೆ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ-ಭಾರತದ ನಡುವೆ ಸೌಹರ್ದಯುತವಾಗಿ ಸಂಚರಿಸುತ್ತಿದ್ದ ಸಂಜೋತ ಎಕ್ಸ್​ಪ್ರೆಸ್​ ರೈಲು ನಿಲ್ಲಿಸಲು ಮುಂದಾಗಿದೆ.

ಪಾಕಿಸ್ತಾನದ ಲಾಹೋರ್​ನಿಂದ ಬರುತ್ತಿದ್ದ ಸಂಜೋತಾ ಎಕ್ಸ್​ಪ್ರೆಸ್​ ವಾಘಾ ಗಡಿಯ ಬಳಿ ಮಧ್ಯಾಹ್ನ ನಿಂತಿದೆ. ರೈಲಿನ ಸಿಬ್ಬಂದಿ ಇಲ್ಲಿಂದ ಮುಂದಾಕ್ಕೆ ಭಾರತೀಯ ಸಿಬ್ಬಂದಿಗಳೇ ಭಾರತದ ಪ್ರದೇಶದಲ್ಲಿ ಚಲಿಸಲಿ ಎಂದು ಬೇಡಿಕೆ ಇಟ್ಟಿದ್ದರು. ಸುಮಾರು ಮೂರುಗಂಟೆಗಳ ಬಳಿಕ ರೈಲನ್ನು ಭಾರತೀಯ ಸಿಬ್ಬಂದಿಗಳು ಪಂಜಾಬ್​ನ ಅಟ್ಟರಿವರೆಗೂ ಚಲಾಯಿಸಿಕೊಂಡು ಬಂದರು.

ರೈಲು ವಾಘಗಡಿ ಬಳಿ ನಿಂತಿರುವ ಕುರಿತು ಪಾಕಿಸ್ತಾನದ ರೈಲ್ವೆ ಸಚಿವರಾದ ಶೇಖ್​ ರಶೀದ್​ ದೃಢಪಡಿಸಿದ್ದಾರೆ. ಪಾಕಿಸ್ತಾನದ ಈ ನಡೆ ಬಗ್ಗೆ ಭಾರತದ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಇದರಿಂದಾಗಿ ನೂರಾರು ಪ್ರಯಾಣಿಕರು ವಾಘಾ ಗಡಿ ಬಳಿ ತೊಂದರೆ ಪಡುವಂತೆ ಆಗಿದೆ,

ಇನ್ನು ಈ ಕುರಿತು ಮಾತನಾಡಿರುವ ಅಟ್ಟರಿ ರೈಲ್ವೆ ನಿಲ್ದಾಣದ ಸೂಪರಿಟೆಂಡಂಟ್​ ಅರವಿಂದ್​ ಕುಮಾರ್​,  ಪಾಕಿಸ್ತಾನ ಇಂದು ಭಾರತಕ್ಕೆ ಸಂಜೋತಾ ಎಕ್ಸ್​ಪ್ರೆಸ್​ ರೈಲನ್ನು ಕಳುಹಿಸಬೇಕಿತ್ತು. ಆದರೆ ನಮ್ಮ ನೆರೆಯ ರಾಷ್ಟ್ರ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಇದನ್ನು ಓದಿ: ಇಂದು ದೇಶವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ; ಕಲಂ 370 ರದ್ದು ಪ್ರಸ್ತಾಪ ಸಾಧ್ಯತೆ

ಭಾರತಕ್ಕೆ ರೈಲನ್ನು ಕಳುಹಿಸುವ ಬದಲು ಪಾಕಿಸ್ತಾನ ಭಾರತದ ವಾಘಾ ಗಡಿ ಬಳಿ ತಂದು ನಿಲ್ಲಿಸಿ ಭಾರತದ ಚಾಲಕರನ್ನು ಕಳುಹಿಸಿ ಎಂದು ಮಾಹಿತಿ ನೀಡಿತು. ಪಾಕಿಸ್ತಾನದ ಈ ನಡೆ ರಕ್ಷಣಾ ಕಾರಣದ ಅನುಮಾನ ಹುಟ್ಟುಹಾಕಿದೆ.

ಕಲಂ 370 ರದ್ದು ಮಾಡಿದ ಬಳಿಕ ಭಾರತ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​, ಎರಡು ದೇಶಗಳ ನಡುವಿನ ವಾಣಿಜ್ಯ ವ್ಯವಹಾರ ಮತ್ತು ದ್ವೀಪಕ್ಷಿಯ ಸಂಬಂಧ ಕುರಿತು ಪರಿಶೀಲನೆ ಮಾಡುವುದಾಗಿ ತಿಳಿಸಿದ್ದರು.ಅಲ್ಲದೇ ದೆಹಲಿಯಲ್ಲಿರುವ ನಮ್ಮ ರಾಯಭಾರಿ ಪಾಕ್​ಗೆ ಮರಳಲಿದ್ದು, ಇಲ್ಲಿನ ನಿಮ್ಮ ರಾಯಭಾರಿಯನ್ನು ವಾಪಸ್ಸು ಕಳುಹಿಸುವುದಾಗಿ ತಿಳಿಸಿದ್ದರು.

First published:August 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading