ಸಂಜೋತಾ ಎಕ್ಸ್​ಪ್ರೆಸ್​ ಬೆನ್ನಲ್ಲೇ ಭಾರತಕ್ಕೆ ಬಸ್​ ಸಂಚಾರವನ್ನೂ ನಿಲ್ಲಿಸಿದ ಪಾಕಿಸ್ತಾನ

ಗುರುವಾರ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದ ಪಾಕಿಸ್ತಾನ ನಿನ್ನೆ ಥಾರ್ ಎಕ್ಸ್​ಪ್ರೆಸ್​ ರೈಲು ಸಂಚಾರವನ್ನು ನಿಲ್ಲಿಸುವುದಾಗಿ ಘೋಷಿಸಿತ್ತು. ಈ ರೈಲು ರಾಜಸ್ಥಾನ ಗಡಿಯಿಂದ ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು.

Sushma Chakre | news18
Updated:August 10, 2019, 2:07 PM IST
ಸಂಜೋತಾ ಎಕ್ಸ್​ಪ್ರೆಸ್​ ಬೆನ್ನಲ್ಲೇ ಭಾರತಕ್ಕೆ ಬಸ್​ ಸಂಚಾರವನ್ನೂ ನಿಲ್ಲಿಸಿದ ಪಾಕಿಸ್ತಾನ
ಭಾರತ- ಪಾಕಿಸ್ತಾನ ಧ್ವಜ
  • News18
  • Last Updated: August 10, 2019, 2:07 PM IST
  • Share this:
ನವದೆಹಲಿ (ಆ. 10):  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿದ್ದನ್ನು ವಿರೋಧಿಸಿ ಸಂಜೋತಾ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಪಾಕಿಸ್ತಾನ ಸ್ಥಗಿತಗೊಳಿಸಿತ್ತು. ಇದೀಗ ಭಾರತಕ್ಕೆ ಬಸ್​ ಸಂಚಾರವನ್ನೂ ನಿಲ್ಲಿಸುವುದಾಗಿ ಘೋಷಿಸಿದೆ. 

ಗುರುವಾರ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದ ಪಾಕಿಸ್ತಾನ ನಿನ್ನೆ ಥಾರ್ ಎಕ್ಸ್​ಪ್ರೆಸ್​ ರೈಲು ಸಂಚಾರವನ್ನು ನಿಲ್ಲಿಸುವುದಾಗಿ ಘೋಷಿಸಿತ್ತು. ಈ ರೈಲು ರಾಜಸ್ಥಾನ ಗಡಿಯಿಂದ ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಜೋಧ್​ಪುರದ ಭಗತ್​ ಕೋಥಿ ಸ್ಟೇಷನ್​ನಿಂದ ಕರಾಚಿಗೆ ಪ್ರತಿ ಶುಕ್ರವಾರ ರಾತ್ರಿ ಹೊರಡುತ್ತಿತ್ತು. 41 ವರ್ಷಗಳ ಕಾಲ ನಿಂತಿದ್ದ ಈ ರೈಲು 2006ರಲ್ಲಿ ಮತ್ತೆ ಸಂಚಾರ ಆರಂಭಿಸಿತ್ತು. ನಿನ್ನೆ ಆ ರೈಲು ಸಂಚಾರವನ್ನು ನಿಲ್ಲಿಸುವುದಾಗಿ ಪಾಕಿಸ್ತಾನ ಘೋಷಿಸಿತ್ತು.

ಕಾಶ್ಮೀರದಲ್ಲಿ ಕರ್ಫ್ಯೂ; ನಗರ ಪ್ರವೇಶಿಸಲು ಯತ್ನಿಸಿದ ಕಮ್ಯೂನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ ಹಾಗೂ ಡಿ. ರಾಜ ಬಂಧನ!

'ಪಾಕಿಸ್ತಾನದ ಖೋಕ್ರಾಪರ್‌ ನಿಂದ ಭಾರತದ ಮೊನಬಾವೊ ನಡುವೆ ಥಾರ್ ಎಕ್ಸ್ ಪ್ರೆಸ್ ವಾರಕ್ಕೊಂದು ಬಾರಿ ಸಂಚರಿಸುತ್ತದೆ. ನಾನು ರೈಲ್ವೆ ಸಚಿವರಾಗಿರುವವರೆಗೆ ಪಾಕಿಸ್ತಾನ ಮತ್ತು ಭಾರತ ನಡುವೆ ಯಾವುದೇ ರೈಲು ಸಂಚರಿಸುವುದಿಲ್ಲ ಎಂದು ಪಾಕಿಸ್ತಾನದ ಸಚಿವ ಶೇಖ್ ರಶೀದ್ ಆಕ್ರೋಶದಿಂದ ಹೇಳಿದ್ದಾರೆ.

ಕಳೆದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿತ್ತು. ಇದರಿಂದ ಜಮ್ಮು ಕಾಶ್ಮೀರ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಭಾರತದ ಈ ನಿರ್ಧಾರದಿಂದ ಪಾಕಿಸ್ತಾನ ಮತ್ತು ಭಾರತದ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಈ ವಿಚಾರವಾಗಿ ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಜಾಗತಿಕ ನಾಯಕರನ್ನು ಭೇಟಿಯಾಗಿದ್ದರು.

 

First published: August 10, 2019, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading