Afghan Crisis: ಅಫ್ಘಾನಿಸ್ತಾನಕ್ಕೆ ಭೂ ಮಾರ್ಗದ ಮೂಲಕ ಗೋಧಿ ಟ್ರಕ್‍ಗಳನ್ನು ಕಳುಹಿಸಲು, ಪಾಕಿಸ್ತಾನದ ಅನುಮತಿಯ ನಿರೀಕ್ಷೆಯಲ್ಲಿ ಭಾರತ

ಅಫ್ಘಾನಿಸ್ತಾನಕ್ಕೆ 50,000 ಟನ್‍ಗಳಷ್ಟು ಗೋಧಿ ಸಾಗಿಸುವ ಕೆಲಸಕ್ಕೆ, ಪಾಕಿಸ್ತಾನ ಮಾರ್ಗವಾಗಿ 5,000 ಟ್ರಕ್‍ಗಳನ್ನು ಕಳುಹಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಫ್ಘಾನಿಸ್ತಾನ(Afghanistan )ಕ್ಕೆ ರಸ್ತೆ ಮಾರ್ಗ(Road Route)ದ ಮೂಲಕ ಆಹಾರ ಧಾನ್ಯ(Food Grains)ಗಳನ್ನು ಕಳುಹಿಸುವ ಕುರಿತು ಕಳೆದ ತಿಂಗಳು ಭಾರತ(India)ವು ಪಾಕಿಸ್ತಾನ(Pakistan)ಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಇಸ್ಲಾಮಾಬಾದ್(Islamabad) ಈ ಪ್ರಸ್ತಾಪ(Proposal)ಕ್ಕೆ ಇನ್ನೂ ಕೂಡ ಇಲ್ಲ ಎಂದು ಹೇಳಿಲ್ಲವಾದರೂ, ದೆಹಲಿಯ ಅಧಿಕಾರಿಗಳು(Delhi Officials) ಒಂದು ತ್ವರಿತ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ. ಹಾಗಾದಲ್ಲಿ, ಅವರು ಸಾಧ್ಯವಾದಷ್ಟು ಬೇಗ ನೆರವಿನ ಕಾರ್ಯಾಚರಣೆಯನ್ನು ಆರಂಭಿಸಲು ಸಾಧ್ಯವಾಗುತ್ತದೆ.

50 ಸಾವಿರ ಮೆಟ್ರಿಕ್ ಟನ್​​ ಗೋಧಿ

ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವುದರ ಪರಿಣಾಮಗಳ ಬಗ್ಗೆ ಆಲೋಚಿಸುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಎಚ್ಚರಿಕೆ ನೀಡಿದ್ದರೂ, ಹಲವಾರು ಸಂದರ್ಭಗಳಲ್ಲಿ, ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ಕಳುಹಿಸುವ ಆಶಯ ವ್ಯಕ್ತಪಡಿಸಿದೆ. ಈಗಲೂ ಅಫ್ಘಾನಿಸ್ತಾನದ ಜನರಿಗೆ ಸಾಧ್ಯವಾದಷ್ಟು ನೆರವು ನೀಡುವ ಆಶಯ ಭಾರತದ್ದು. ಅಫ್ಘಾನಿಸ್ತಾನಕ್ಕೆ, 50,000 ಮೆಟ್ರಿಕ್ ಟನ್‍ಗಳಷ್ಟು ಗೋಧಿ ಸಾಗಿಸುವ ಟ್ರಕ್‍ಗಳ ಚಲನೆಗೆ ಅನುಮತಿ ಕೋರಿ, ಭಾರತವು ಪಾಕಿಸ್ತಾನಕ್ಕೆ ಒಂದು ಮೌಖಿಕ ಟಿಪ್ಪಟಿ ಕಳುಹಿಸಿದೆ.

ಇದನ್ನೂ ಓದಿ:Banned Firecrackers: ದೀಪಾವಳಿ ಹಬ್ಬಕ್ಕೆ ಯಾವ ರಾಜ್ಯಗಳು ಪಟಾಕಿ ಸಿಡಿಸುವುದನ್ನು ನಿಷೇಧಿಸಿವೆ? ಇಲ್ಲಿದೆ ಲಿಸ್ಟ್

ಅಫ್ಘನಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು

ಚಳಿಗಾಲ ಇರುವುದರಿಂದ, ಮತ್ತು ಆರ್ಥಿಕ ಬಿಕ್ಕಟ್ಟು ಅಫ್ಘಾನಿಸ್ತಾನವನ್ನು ದುರ್ಬಲಗೊಳಿಸಿರುವುದರ ಜೊತೆಗೆ, ಆಹಾರದ ಕೊರತೆಗಳು ಕೂಡ ಸನ್ನಿಹಿತವಾಗಲಿದೆ. ಚೀನಾ, ಟರ್ಕಿಯಂತಹ ಕೆಲವು ರಾಷ್ಟ್ರಗಳು, ಕಳೆದ ಕೆಲವು ವಾರಗಳಿಂದ ಅಫ್ಘಾನಿ ನಾಗರಿಕರಿಗೆ ಆಹಾರ ವಿತರಿಸಲು ಆರಂಭಿಸಿವೆ.

ಭಾರತದ ಸಹಾಯ ಹಸ್ತ

ಮೊದಲಿನಿಂದಲೂ ಅಫ್ಘಾನಿಸ್ತಾನ ಜೊತೆ ಉತ್ತಮ ಸಂಬಂಧ ಹೊಂದಿದ್ದ ಹಾಗೂ ಅಫ್ಘಾನಿಸ್ತಾನದ ಜನರಲ್ಲಿ ಸಾಕಷ್ಟು ಅಭಿಮಾನ ಹೊಂದಿರುವ ಭಾರತವು ಕೂಡ, ತನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ವಾಯು ಮಾರ್ಗದ ಮೂಲಕ ಅಷ್ಟೊಂದು ಪ್ರಮಾಣದ ಆಹಾರ ಧಾನ್ಯಗಳನ್ನು ಸಾಗಿಸುವುದು ಕಷ್ಟವಾದ ಕಾರಣ, ಭೂ ಮಾರ್ಗದ ಮೂಲಕ ಸಾಗಿಸುವ ಪ್ರಸ್ತಾಪ ಸಲ್ಲಿಸಿದೆ.

ಎಷ್ಟು ಟ್ರಕ್ ಗೋಧಿ

ಅಫ್ಘಾನಿಸ್ತಾನಕ್ಕೆ 50,000 ಟನ್‍ಗಳಷ್ಟು ಗೋಧಿ ಸಾಗಿಸುವ ಕೆಲಸಕ್ಕೆ, ಪಾಕಿಸ್ತಾನ ಮಾರ್ಗವಾಗಿ 5,000 ಟ್ರಕ್‍ಗಳನ್ನು ಕಳುಹಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ಲಾಮಾಬಾದ್ ಪ್ರಸ್ತಾವನೆಯ ಕುರಿತು ಪರಿಶೀಲನೆ ನಡೆಸುತ್ತಿದೆ, ಆದರೆ ಟ್ರಕ್‍ಗಳು ಮತ್ತು ರಸ್ತೆಗಳ ವಿಷಯದಲ್ಲಿ, ಇದು ಲೆಕ್ಕಾಚಾರ ಮಾಡಬೇಕಾದ ವಿಷಯ ಎಂದು ಹೇಳಿದೆ.

ಪಾಕಿಸ್ತಾನಿ ಟ್ರಕ್​ಗಳಿಗೆ ಲೋಡ್​​

ಲಾಜಿಸ್ಟಿಕ್‍ಗಳ ಸೂಚನೆಯ ಪ್ರಕಾರ, ಭಾರತೀಯ ಟ್ರಕ್‍ಗಳಿಗೆ ಅನುಮತಿ ನೀಡಬೇಕಾಗಬಹುದು ಅಥವಾ, ಅದು ಅದಾಗದಿದ್ದರೆ, ವಾಘಾ –ಅಟ್ಟಾರಿ ಗಡಿಯಲ್ಲಿರುವ ಝೀರೋ ಪಾಯಿಂಟ್‍ನಲ್ಲಿ, ಭಾರತೀಯ ಟ್ರಕ್‍ಗಳಿಂದ ಗೋಧಿಯನ್ನು ಇಳಿಸಿ, ಮತ್ತೆ ಪಾಕಿಸ್ತಾನಿ ಟ್ರಕ್‍ಗಳಿಗೆ ಅದನ್ನು ಲೋಡ್ ಮಾಡಬೇಕಾಗುತ್ತದೆ.

ಇದನ್ನೂ ಓದಿ:KV Ramani: ತಮ್ಮ ಸಂಪತ್ತಿನ 80% ಭಾಗವನ್ನು ಶಿರಡಿ ಸಾಯಿ ಬಾಬಾಗೆ ದೇಣಿಗೆ ನೀಡಿದ ಲೋಕೋಪಕಾರಿ ಕೆ.ವಿ ರಮಣಿ..!

ಭಾರತಕ್ಕೆ ಪಾಕಿಸ್ತಾನ ಅನುಮತಿ ನೀಡುತ್ತಾ?

ಈ ಸಂಕೀರ್ಣ ಪ್ರಕ್ರಿಯೆಯು, ಗಮನಿಸಬೇಕಾದ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ, ಭಾರತವು ರವಾನೆ ಕಳುಹಿಸಲು ಉತ್ಸುಕತೆ ಹೊಂದಿದೆ ಮತ್ತು ಅದನ್ನು ಮಾನವೀಯ ದೃಷ್ಟಿಕೋನದಿಂದ ನೋಡುತ್ತಿದೆ. ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಲು ಭಾರತಕ್ಕೆ ಪಾಕಿಸ್ತಾನ ಅನುಮತಿ ನೀಡುತ್ತದೆಯೇ ನೋಡಬೇಕಿದೆ. ಆದರೆ ಇದರಲ್ಲಿ ಹೆಚ್ಚಿನದ್ದು, ಅಫ್ಘಾನಿಸ್ತಾನಕ್ಕೆ ಸಹಾಯ ನೀಡುವ ಭಾರತದ ಮನವಿಗೆ ರಾವಲ್ಪಿಂಡಿಯ ಪ್ರತಿಕ್ರಿಯೆ ಮತ್ತು ಸಹಾಯ ಸ್ವೀಕರಿಸಲು ತಾಲಿಬಾನ್ ಸಿದ್ಧವಾಗಿದೆಯೇ ಎಂಬ ಅಂಶಗಳನ್ನು ಅವಲಂಬಿಸಿದೆ. ಮಾಸ್ಕೋ ಮತ್ತು ದೋಹಾದಲ್ಲಿ ಭಾರತೀಯ ಅಧಿಕಾರಿಗಳ ಜೊತೆ ಸಂಭಾಷಣೆ ನಡೆಸಿದ್ದ ತಾಲಿಬಾನ್, ಭಾರತದಿಂದ ಸಹಾಯ ಪಡೆಯಲು ಸಿದ್ಧ ಎಂದು ಸೂಚಿಸಿತ್ತು. ಆದರೆ, ಭಾರತ ಮತ್ತು ಅಫ್ಘಾನಿಸ್ತಾನದ ಮಧ್ಯೆ ಪಾಕಿಸ್ತಾನ ಒಂದು ಸವಾಲಾಗಿ ಉಳಿದಿದೆ.
Published by:Latha CG
First published: