• Home
  • »
  • News
  • »
  • national-international
  • »
  • Pakistan Minister: ಪಾಕಿಸ್ತಾನದ ಬಳಿ ಅಣ್ವಸ್ತ್ರ ಇದೆ ಅನ್ನೋದು ಭಾರತಕ್ಕೆ ಗೊತ್ತಿರಲಿ! ಪಾಕ್ ಸಚಿವೆಯಿಂದ ಎಚ್ಚರಿಕೆ

Pakistan Minister: ಪಾಕಿಸ್ತಾನದ ಬಳಿ ಅಣ್ವಸ್ತ್ರ ಇದೆ ಅನ್ನೋದು ಭಾರತಕ್ಕೆ ಗೊತ್ತಿರಲಿ! ಪಾಕ್ ಸಚಿವೆಯಿಂದ ಎಚ್ಚರಿಕೆ

ಪಾಕ್ ಸಚಿವೆ ಶಾಜಿಯಾ ಮಾರಿ

ಪಾಕ್ ಸಚಿವೆ ಶಾಜಿಯಾ ಮಾರಿ

ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನದ ಮತ್ತೋರ್ವ ಸಚಿವರು ಮತ್ತೊಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಸಚಿವೆ ಹಾಗೂ ಆಡಳಿತಾರೂಢ ಪೀಪಲ್ಸ್ ಪಾರ್ಟಿ ನಾಯಕಿ ಶಾಜಿಯಾ ಮಾರಿ, "ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎನ್ನುವುದನ್ನು ಭಾರತ ಮರೆಯಬಾರದು!" ಅಂತ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಪಾಕಿಸ್ತಾನ: ಗಡಿ ವಿಚಾರವಾಗಿ (border issue) ಸದಾ ಭಾರತದೊಂದಿಗೆ (India) ಕಿರಿಕ್ ಮಾಡಿಕೊಳ್ಳುವ ನೆರೆಯ ರಾಷ್ಟ್ರ ಪಾಕಿಸ್ತಾನ (Pakistan), ಇದೀಗ ಭಾರತದ ವಿರುದ್ಧ ಉದ್ಧಟತನದ ಹೇಳಿಕೆ ಕೊಡುತ್ತಿದೆ. ಮೊನ್ನೆಯಷ್ಟೇ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Pakistan Foreign Minister Bilawal Bhutto Zardari) ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಗಂಭೀರ ಆರೋಪ ಮಾಡಿದ್ದರು. "ಒಸಾಮಾ ಬಿನ್ ಲಾಡೆನ್ (Osama bin Laden) ಸತ್ತಿದ್ದಾನೆ. ಆದರೆ ಗುಜರಾತ್‌ನ ಕಟುಕ (butcher of Gujarat) ಇನ್ನೂ ಬದುಕಿದ್ದಾನೆ ಮತ್ತು ಆತ ಭಾರತದ ಪ್ರಧಾನ ಮಂತ್ರಿ (Prime Minister of India)" ಎಂದು ವೈಯಕ್ತಿಕ ಟೀಕೆ ಮಾಡಿದ್ದರು. ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿಕೆ ವಿರುದ್ಧ ಭಾರತದಾದ್ಯಂತ ಪ್ರತಿಭಟನೆ ನಡೆದಿದ್ದವು. ಇದರ ಬೆನ್ನಲ್ಲೇ ಪಾಕಿಸ್ತಾನದ ಮತ್ತೋರ್ವ ಸಚಿವರು ಮತ್ತೊಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಸಚಿವೆ (Pakistan's minister) ಹಾಗೂ ಆಡಳಿತಾರೂಢ ಪೀಪಲ್ಸ್ ಪಾರ್ಟಿಯ (People's Party) ನಾಯಕಿ ಶಾಜಿಯಾ ಮಾರಿ (Shazia Murray) ಅವರು, “ಪಾಕಿಸ್ತಾನದ ಬಳಿ ಅಣುಬಾಂಬ್ (nuclear bomb) ಇದೆ ಎನ್ನುವುದನ್ನು ಭಾರತ ಮರೆಯಬಾರದು” ಅಂತ ಹೇಳಿದ್ದಾರೆ.


ನರೇಂದ್ರ ಮೋದಿ ವಿರುದ್ಧ ಟೀಕಿಸಿದ್ದ ಪಾಕ್ ಸಚಿವ


ಕಳೆದ 2 ದಿನಗಳ ಹಿಂದಷ್ಟೇ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನ ವಿದೇಶಾಂಗ ಸಚಿವ ನಾಲಿಗೆ ಹರಿಬಿಟ್ಟಿದ್ದ.  ಸಭೆಯಲ್ಲಿ ಮಾತನಾಡಿದ್ದ ಭಾರತದ ವಿದೇಶಾಂಗ ಸಚಿವ ಜೈಶಂಕರ್, “ನಿಮ್ಮ ದೇಶ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ” ಎಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು.


ಪಾಕ್ ವಿದೇಶಾಂಗ ಸಚಿವ


ಈ ವೇಳೆ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, “ಭಾರತ ಎರಡೂ ದೇಶಗಳಲ್ಲಿನ ಮುಸ್ಲಿಮರನ್ನು ಭಯೋತ್ಪಾದಕರೊಂದಿಗೆ ಸೇರಿಸಲು ಪ್ರಯತ್ನಿಸುತ್ತಿದೆ. ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್‌ನ ಕಟುಕ ಇನ್ನೂ ಬದುಕಿದ್ದಾನೆ ಮತ್ತು ಆತ ಭಾರತದ ಪ್ರಧಾನ ಮಂತ್ರಿ" ಅಂತ ಉದ್ಧಟತನದ ಹೇಳಿಕೆ ನೀಡಿದ್ದರು.


ಪಾಕ್ ಸಚಿವೆ ಸುದ್ದಿಗೋಷ್ಠಿ


ಇದನ್ನೂ ಓದಿ: Bilawal Bhutto: ಮೋದಿ ಬಗ್ಗೆ ಅಸಭ್ಯ ಹೇಳಿಕೆ; ಪಾಕ್ ವಿರುದ್ಧ ದೇಶದಾದ್ಯಂತ ಬೀದಿಗಿಳಿದ ಬಿಜೆಪಿ!


 ಪಾಕಿಸ್ತಾನ ಸಚಿವೆಯಿಂದ ಉದ್ಧಟತನದ ಹೇಳಿಕೆ


ಪಾಕ್ ವಿದೇಶಾಂಗ ಸಚಿವ ಉದ್ಧಟತನದ ಹೇಳಿಕೆ ನೀಡಿದ್ದ ಬೆನ್ನಲ್ಲೇ ಪಾಕಿಸ್ತಾನದ ಸಚಿವೆಯೊಬ್ಬರು ಮತ್ತೊಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಸಚಿವೆ ಹಾಗೂ ಆಡಳಿತಾರೂಢ ಪೀಪಲ್ಸ್ ಪಾರ್ಟಿಯ ನಾಯಕಿ ಶಾಜಿಯಾ ಮಾರಿ ಅವರು, “ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎನ್ನುವುದನ್ನು ಭಾರತ ಮರೆಯಬಾರದು” ಅಂತ ಹೇಳಿದ್ದಾರೆ.


ಭಾರತದ ಪರಮಾಣು ಶಕ್ತಿ


ಸಚಿವೆ ಶಾಜಿಯಾ ಮಾರಿ ಹೇಳಿದ್ದೇನು?


ಪಾಕ್ ವಿದೇಶಾಂಗ ಸಚಿವರ ವಿರುದ್ಧ ಭಾರತದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಬೆಂಬಸಿಸಿ ಸಚಿವೆ ಶಾಜಿಯಾ ಮಾರಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, "ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ನಮ್ಮ ಪರಮಾಣು ಅಸ್ತ್ರದ ಉದ್ದೇಶ ಮೌನವಾಗಿ ಇರಬೇಕು ಎನ್ನುವುದಲ್ಲ. ಅಗತ್ಯ ಬಿದ್ದರೆ ನಾವು ಹಿಂದೆ ಸರಿಯುವುದಿಲ್ಲ" ಎಂದು ಹೇಳಿದ್ದಾರೆ.


ಪಾಕ್ ಪರಮಾಣು ಶಕ್ತಿ


ಇದನ್ನೂ ಓದಿ: T20 World Cup 2022: ದೇಶವು ತನ್ನ ಆಟಗಾರರ ಬಗ್ಗೆ ಹೆಮ್ಮೆಪಡುತ್ತದೆ, ಅಂಧರ ಟಿ20 ವಿಶ್ವಕಪ್ ಗೆಲುವಿಗೆ ಮೋದಿ ಮೆಚ್ಚುಗೆ


ಪಾಕಿಸ್ತಾನಕ್ಕೆ ಭಾರತ ಛೀಮಾರಿ


ಇನ್ನು ಪಾಕಿಸ್ತಾನಕ್ಕೆ ಭಾರತ ಸರಿಯಾಗಿಯೇ ತಿರುಗೇಟು ನೀಡಿದೆ. "ನ್ಯೂಯಾರ್ಕ್, ಮುಂಬೈ, ಪುಲ್ವಾಮಾ, ಪಠಾಣ್‌ಕೋಟ್ ಮತ್ತು ಲಂಡನ್‌ನಂತಹ ನಗರಗಳು ಪಾಕಿಸ್ತಾನ ಪ್ರಾಯೋಜಿತ, ಬೆಂಬಲಿತ ಮತ್ತು ಪ್ರಚೋದಿತ ಭಯೋತ್ಪಾದನೆಯ ಗಾಯದ ಗುರುತುಗಳನ್ನು ಹೊಂದಿವೆ. ಈ ಹಿಂಸಾಚಾರವು ಅವರ ವಿಶೇಷ ಭಯೋತ್ಪಾದಕ ವಲಯಗಳಿಂದ ಹೊರಹೊಮ್ಮಿದೆ ಮತ್ತು ಪ್ರಪಂಚದ ಎಲ್ಲಾ ಭಾಗಗಳಿಗೆ ರಫ್ತು ಮಾಡಿದೆ. ಮೇಕ್ ಇನ್ ಪಾಕಿಸ್ತಾನ್ ಭಯೋತ್ಪಾದನೆ ನಿಲ್ಲಬೇಕು ಅಂತ ಭಾರತ ತಿರುಗೇಟು ನೀಡಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು