World's Worst City: ಅಯ್ಯಯ್ಯಪ್ಪಾ, ಈ ಸಿಟಿಯಲ್ಲಿ ಜನ ಹೇಗಿರುತ್ತಾರೋ? ಪಾಕಿಸ್ತಾನದ ಕರಾಚಿ ಈಗ ಜಗತ್ತಿನ ಅತ್ಯಂತ ಕೆಟ್ಟ ನಗರ!

ವಿಶ್ವದ ಅತ್ಯಂತ 172 ಕೆಟ್ಟ ನಗರಗಳಲ್ಲಿ ಪಾಕಿಸ್ತಾನದ ಕರಾಚಿ ಸಿಟಿ 2022ರಲ್ಲಿ ಮತ್ತೊಮ್ಮೆ ಸ್ಥಾನ ಪಡೆದಿದೆ. ಖಾಲಿಯಾಗುತ್ತಿರುವ ವಿದೇಶಿ ಕರೆನ್ಸಿ ಮೀಸಲು ಮತ್ತು ಹೆಚ್ಚುತ್ತಿರುವ ಹಣದುಬ್ಬರದೊಂದಿಗೆ, ಪಾಕಿಸ್ತಾನವು ಆರ್ಥಿಕ ಕುಸಿತದ ಅಂಚಿನಲ್ಲಿದೆ ಮತ್ತು ಶ್ರೀಲಂಕಾದ ಆರ್ಥಿಕ ಕುಸಿತದ ಹಾದಿಯತ್ತ ಸಾಗುತ್ತಿದೆ.

ಕರಾಚಿಯಲ್ಲಿ ಕಂಡು ಬಂದ ದೈನಂದಿನ ದೃಶ್ಯ

ಕರಾಚಿಯಲ್ಲಿ ಕಂಡು ಬಂದ ದೈನಂದಿನ ದೃಶ್ಯ

  • Share this:
ಕರಾಚಿ, ಪಾಕಿಸ್ತಾನ: ಹೊಸ ಪ್ರಧಾನಮಂತ್ರಿ (Prime Minister) ಬಂದರೂ ರಾಜಕೀಯ ಸಂಘರ್ಷಗಳಿಂದ (Political Crisis) ಕಂಗೆಟ್ಟಿರುವ ನೆರೆಯ ಪಾಕಿಸ್ತಾನಕ್ಕೆ (Pakistan) ಅಂತರಾಷ್ಟ್ರೀಯ ಮಟ್ಟದಲ್ಲಿ (International Level) ಮತ್ತೊಂದು ಮುಜುಗರ (Embarrassment) ಎದುರಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟ, ಸಾಲದ ಸುಳಿಯಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ವಾಸಿಸಲು ಯೋಗ್ಯವಲ್ಲದ ನಗರವನ್ನು (Worst City) ಹೊಂದಿರುವ ದೇಶ ಎಂಬ ಕುಖ್ಯಾತಿ ಸಿಕ್ಕಿದೆ. ವಿಶ್ವದಲ್ಲಿ ಮನುಷ್ಯರು ವಾಸಿಸಲು ಯೋಗ್ಯವಲ್ಲದ 172 ರಾಷ್ಟ್ರಗಳಲ್ಲಿ ಪಾಕಿಸ್ತಾನದ ಪ್ರಮುಖ ಸಿಟಿ ಕರಾಚಿ (Karachi) ಅಗ್ರ 5ನೇ ಸ್ಥಾನದಲ್ಲಿದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ 2022 ರಲ್ಲಿ ವಾಸಿಸಲು ಯೋಗ್ಯವಲ್ಲದ ವಿಶ್ವದ ಅತ್ಯಂತ ಕೆಟ್ಟ ನಗರಗಳ ವರದಿಯನ್ನು ಬಿಡುಗಡೆ ಮಾಡಿದೆ.

 ವಾಸಿಸಲು ಯೋಗ್ಯವಲ್ಲದ 172 ಅತ್ಯಂತ ಕೆಟ್ಟ ನಗರಗಳು

ಮನುಷ್ಯರಿಗೆ ಸಹಜವಾಗಿ ವಾಸಿಸಲು ಯೋಗ್ಯವಲ್ಲದ ಸಿಟಿಗಳ ಪಟ್ಟಿಯನ್ನು ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್ ವರದಿ ಮಾಡಿದೆ. ಈ ಪಟ್ಟಿಯಲ್ಲಿ 172 ನಗರಗಳನ್ನು ಅಧ್ಯಯನ ಮಾಡಲಾಗಿದೆ. ವರದಿಯನ್ನು ತಯಾರಿಸಲು ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಮನರಂಜನೆ ಎಂಬ ಐದು ಅಂಶಗಳನ್ನು ಪರಿಗಣಿಸಲಾಗಿದೆ.

ಯಾವ ಅಂಶಗಳ ಮೇಲೆ ವರದಿ ತಯಾರಿಸಲಾಗಿದೆ?

ಒಂದು ನಗರದ ರಾಜಕೀಯ ಮತ್ತು ಸಾಮಾಜಿಕ ಪರಿಸರ, ರಾಜಕೀಯ ಸ್ಥಿರತೆ, ಅಪರಾಧ, ಕಾನೂನು ಜಾರಿ, ಆರ್ಥಿಕ ಪರಿಸರ, ಕರೆನ್ಸಿ ವಿನಿಮಯ ನಿಯಮಗಳು, ಬ್ಯಾಂಕಿಂಗ್ ಸೇವೆಗಳು, ಸಾಮಾಜಿಕ-ಸಾಂಸ್ಕೃತಿಕ ಪರಿಸರ, ಮಾಧ್ಯಮ ಲಭ್ಯತೆ ಮತ್ತು ಸೆನ್ಸಾರ್ಶಿಪ್, ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಮಿತಿಗಳು, ವೈದ್ಯಕೀಯ ಮತ್ತು ಆರೋಗ್ಯ ಪರಿಗಣನೆಗಳು, ವೈದ್ಯಕೀಯ ಸರಬರಾಜು ಮತ್ತು ಸೇವೆಗಳು, ಸಾಂಕ್ರಾಮಿಕ ರೋಗಗಳು, ಒಳಚರಂಡಿ, ತ್ಯಾಜ್ಯ ವಿಲೇವಾರಿ, ವಾಯು ಮಾಲಿನ್ಯ, ಶಾಲೆಗಳು ಮತ್ತು ಶಿಕ್ಷಣ, ಅಂತರರಾಷ್ಟ್ರೀಯ ಶಾಲೆಗಳ ಗುಣಮಟ್ಟ ಮತ್ತು ಲಭ್ಯತೆ, ಸಾರ್ವಜನಿಕ ಸೇವೆಗಳು ಮತ್ತು ಸಾರಿಗೆ, ವಿದ್ಯುತ್, ನೀರು, ಸಾರ್ವಜನಿಕ ಸಾರಿಗೆ, ಸಂಚಾರ ದಟ್ಟಣೆ, ಮನರಂಜನೆ, ರೆಸ್ಟೋರೆಂಟ್‌ಗಳು, ಚಿತ್ರಮಂದಿರಗಳು, ಕ್ರೀಡೆ ಮತ್ತು ವಿರಾಮ ಇತ್ಯಾದಿಗಳ ಮೇಲೆ ವರದಿ ತಯಾರಿಸಲಾಗಿದೆ.

ಇದನ್ನೂ ಓದಿ: China vs Taiwan: ಚೀನಾ-ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ಇದರಲ್ಲೇಕೆ ಅಮೆರಿಕಕ್ಕೆ ಆಸಕ್ತಿ?

ಪಾಕಿಸ್ತಾನದ ಕರಾಚಿಗೆ ಮತ್ತೊಮ್ಮೆ ಅಗ್ರ 5ನೇ ಸ್ಥಾನ

ವಿಶ್ವದ ಅತ್ಯಂತ 172 ಕೆಟ್ಟ ನಗರಗಳಲ್ಲಿ ಪಾಕಿಸ್ತಾನದ ಕರಾಚಿ ಸಿಟಿ 2022ರಲ್ಲಿ ಮತ್ತೊಮ್ಮೆ ಸ್ಥಾನ ಪಡೆದಿದೆ. ಖಾಲಿಯಾಗುತ್ತಿರುವ ವಿದೇಶಿ ಕರೆನ್ಸಿ ಮೀಸಲು ಮತ್ತು ಹೆಚ್ಚುತ್ತಿರುವ ಹಣದುಬ್ಬರದೊಂದಿಗೆ, ಪಾಕಿಸ್ತಾನವು ಆರ್ಥಿಕ ಕುಸಿತದ ಅಂಚಿನಲ್ಲಿದೆ ಮತ್ತು ಶ್ರೀಲಂಕಾದ ಆರ್ಥಿಕ ಕುಸಿತದ ಹಾದಿಯತ್ತ ಸಾಗುತ್ತಿದೆ. ಇದೀಗ ಕೆಟ್ಟ ನಗರ ಹೊಂದಿರುವ ದೇಶವೆಂಬ ಕಳಂಕ ತಾಗಿದೆ.

ಸಾಲದಿಂದ ಕಂಗೆಟ್ಟಿರುವ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಜೀವನ ಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವಿದೇಶಿ ವಿನಿಮಯ, ಡಾಲರ್ ಎದುರು ಪಾಕ್ ರೂಪಿ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಕುಸಿತ, ಆರ್ಥಿಕತೆ ಕುಸಿತ ಹಾಗೂ ಇತರೆ ಬೆಳವಣಿಗೆಗಳಿಂದಾಗಿ ಪಾಕಿಸ್ತಾನ ಬಿಕ್ಕಟ್ಟಿನ ಅಂಚಿನಲ್ಲಿದೆ. ಶ್ರೀಲಂಕಾದಲ್ಲಿನ ಪರಿಸ್ಥಿತಿಗಳು ಇಲ್ಲಿ ಕಂಡುಬರುತ್ತವೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಪಾಕಿಸ್ತಾನವು ಈಗಾಗಲೇ 250 ಬಿಲಿಯನ್ ಡಾಲರ್ ಸಾಲವನ್ನು ಹೊಂದಿದೆ ಎಂದು ವರದಿಯೊಂದು ಹೇಳಿದೆ. ಸಾಲವನ್ನು ತೀರಿಸಲು ಪ್ರಸ್ತುತ ದೇಶವು ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: Air Pollution: ಈ ಪಟ್ಟಣಕ್ಕೆ ಏನಾಗಿದೆ? ಬೆಂಗಳೂರಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣವೇನು?

 ಈ ಪಟ್ಟಿಯಲ್ಲಿ ಇರುವ ಇತರೇ ನಗರಗಳು ಯಾವುದು?

ಈ ಪಟ್ಟಿಯಲ್ಲಿರುವ ಇತರ ನಗರಗಳೆಂದರೆ ಇರಾನ್‌ನ ಟೆಹ್ರಾನ್, ಕ್ಯಾಮರೂನ್‌ನ ಡೌಲಾ, ಜಿಂಬಾಬ್ವೆಯ ಹರಾರೆ, ಬಾಂಗ್ಲಾದೇಶದ ರಾಜಧಾನಿ ಢಾಕಾ, ಪೋರ್ಟ್ ಮೊರೆಸ್ಬಿ,  ಅಲ್ಜಿರೀಯಾದ ಅಲ್ಜೀರ್ಸ್, ಲಿಬಿಯಾದ ಟ್ರಿಪೋಲಿ, ನೈಜೀರಿಯಾದ ಲಾಗೋಸ್ ಹಾಗೂ ಸಿರಿಯಾದ ಡಮಾಸ್ಕಸ್ ಸೇರಿದಂತೆ ಒಟ್ಟು 172 ನಗರಗಳು ಸ್ಥಾನ ಪಡೆದಿವೆ.
Published by:Annappa Achari
First published: