• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Pakistan: ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡುವುದರಲ್ಲೂ ಕಳ್ಳಾಟ, ಟರ್ಕಿ ನೀಡಿದ್ದ ಸಾಮಗ್ರಿಯನ್ನೇ ರೀಪ್ಯಾಕ್ ಮಾಡಿ ಕಳಿಸಿದ ಪಾಕ್!

Pakistan: ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡುವುದರಲ್ಲೂ ಕಳ್ಳಾಟ, ಟರ್ಕಿ ನೀಡಿದ್ದ ಸಾಮಗ್ರಿಯನ್ನೇ ರೀಪ್ಯಾಕ್ ಮಾಡಿ ಕಳಿಸಿದ ಪಾಕ್!

ಪಾಕಿಸ್ತಾನಕ್ಕೆ ಮಜುಗರ

ಪಾಕಿಸ್ತಾನಕ್ಕೆ ಮಜುಗರ

ಪ್ರವಾಹದ ಸಂದರ್ಭದಲ್ಲಿ ಟರ್ಕಿಯ ಅಧಿಕಾರಿಗಳು ಸಿಂಧ್ ಪ್ರಾಂತ್ಯದ ಕಳುಹಿಸಿದ್ದ ಪರಿಹಾರ ಸಾಮಗ್ರಿಗಳನ್ನು ಮತ್ತೆ ಸ್ವೀಕರಿಸಿರುವುದಾಗಿ ಅಲ್ಲಿನ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನಿ ಅಧಿಕಾರಿಗಳು ಹೊರಗಿನ ದೊಡ್ಡ ಪೆಟ್ಟಿಗೆಯನ್ನು ಬದಲಾಯಿಸಿದ್ದಾರೆ. ಆದರೆ ಒಳಗಿನ ಸಣ್ಣ ಪೆಟ್ಟಿಗೆಗಳನ್ನು ಬದಲಾಯಿಸುವುದನ್ನು ಮರೆತು ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ.

ಮುಂದೆ ಓದಿ ...
  • Share this:

ಟರ್ಕಿ: ಟರ್ಕಿ ಮತ್ತು ಸಿರಿಯಾದಲ್ಲಿ (Turkey and Syria) ಭೀಕರ ಭೂಕಂಪ (Earthquake)ಸಂಭವಿಸಿ 45 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಗಾಯಾಳುಗಳಾಗಿದ್ದಾರೆ. ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಿದ್ದು, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಎರಡೂ ದೇಶಗಳು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಹಲವು ದೇಶಗಳು ತಕ್ಷಣಕ್ಕೆ ನೆರವಾಗುವಂತೆ ಪರಿಹಾರ ಸಾಮಗ್ರಿಗಳನ್ನು ( Relief Material) ಒದಗಿಸಿಕೊಟ್ಟಿವೆ. ಭಾರತ (India) ಕೂಡ ತನ್ನ ಎನ್​ಡಿಆರ್​ಎಫ್ ತಂಡವನ್ನು ಕಳುಹಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿತ್ತು. ಜೊತೆಗೆ 7 ವಿಮಾನಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಟರ್ಕಿಗೆ ತಲುಪಿಸಿತ್ತು. ಪಾಕಿಸ್ತಾನ (Pakistan) ಕೂಡ ಪರಿಹಾರ ನೀಡುವುದಕ್ಕೆ ಹೋಗಿ ಎಡವಟ್ಟು ಮಾಡಿಕೊಂಡಿದೆ. ಈ ಹಿಂದೆ ಪ್ರವಾಹದ ಸಂದರ್ಭದಲ್ಲಿ ಟರ್ಕಿ ಕಳುಹಿಸಿಕೊಟ್ಟಿದ್ದ ಪರಿಹಾರ ಸಾಮಗ್ರಿಗಳನ್ನೇ ರೀಪ್ಯಾಕ್ ಮಾಡಿ ಕಳುಹಿಸಿ ಮುಜುಗರಕ್ಕೀಡಾಗಿದೆ.


ಪಾಕಿಸ್ತಾನಕ್ಕೆ ಮುಜುಗರ ತಂಡ ಪತ್ರಕರ್ತನ ಹೇಳಿಕೆ


ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿ ಬೆಲೆ ಏರಿಕೆ, ವಿದ್ಯುತ್​ ಸಮಸ್ಯೆ, ಅಹಾರ ಪದಾರ್ಥಗಳ ಅಭಾವ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಕಳೆದ ವರ್ಷ ವಿನಾಶಕಾರಿ ಪ್ರವಾಹ ಎದುರಿಸಿತ್ತು. ಈ ಸಂದರ್ಭದಲ್ಲಿ ಹಲವು ರಾಷ್ಟ್ರಗಳು ಪಾಕಿಸ್ತಾನಕ್ಕೆ ನೆರವು ನೀಡಿದ್ದವು. ಅಂತೆಯೇ ಟರ್ಕಿ ಕೂಡ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿತ್ತು. ಇದೀಗ ಭೂಕಂಪದಿಂದ ಸಂಕಷ್ಟಕ್ಕೀಡಾಗಿರುವ ಟರ್ಕಿಗೆ ನೆರವು ನೀಡುವ ದೃಷ್ಟಿಯಿಂದ ಮತ್ತೆ ಅದೇ ಸಾಮಗ್ರಿಗಳನ್ನು ರೀಪ್ಯಾಕ್ ಮಾಡಿ ಮಾಡಿ ಕಳುಹಿಸಿದೆ ಎಂದು ಪಾಕಿಸ್ತಾನ ಮೂಲದ ಪತ್ರಕರ್ತ ಶಾಹೀದ್​ ಮಸೂದ್​ ಚಾನೆಲ್​ ವೊಂದಕ್ಕೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.


ಟರ್ಕಿ ತಾನೂ ಪ್ರವಾಹದ ಸಂದರ್ಭದಲ್ಲಿ ನೀಡಿದ್ದ ಪರಿಹಾರವನ್ನು ಇದೀಗ ಮತ್ತೆ ಪಡೆದುಕೊಂಡಿದೆ. ಎಲ್ಲಾ ಸಾಮಾಗ್ರಿಗಳನ್ನು ಪಾಕಿಸ್ತಾನ ಮರುಪ್ಯಾಕ್ ಮಾಡಿ ಭೂಕಂಪದ ನೆರವಿನ ಹೆಸರಿನಲ್ಲಿ ಟರ್ಕಿಗೆ ವಾಪಸ್ ಕಳುಹಿಸಿದೆ ಎಂದು ಮಸೂದ್​ ತಿಳಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಟರ್ಕಿಯ ಭೂಕಂಪ ಪೀಡಿತ ಪ್ರದೇಶಗಳಲ್ಲಿನ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಮಸೂದ್ ಆರೋಪ ದೊಡ್ಡ ಮುಜುಗರವನ್ನುಂಟು ಮಾಡಿದೆ.


ಇದನ್ನೂ ಓದಿ:Terror Attack: ಪಾಕ್‌ ಪೊಲೀಸ್‌ ಕಚೇರಿಗೆ ನುಗ್ಗಿ ಅಟ್ಟಹಾಸ ಮೆರೆದ ಉಗ್ರರು! 4 ಸಾವು, 14 ಮಂದಿಗೆ ಗಾಯ


ಸಣ್ಣ ಪ್ಯಾಕೆಟ್​ಗಳನ್ನು ಗಮನಿಸದ ಪಾಕ್ ಅಧಿಕಾರಿಗಳು


ಪ್ರವಾಹದ ಸಂದರ್ಭದಲ್ಲಿ ಟರ್ಕಿಯ ಅಧಿಕಾರಿಗಳು ಸಿಂಧ್ ಪ್ರಾಂತ್ಯದ ಕಳುಹಿಸಿದ್ದ ಪರಿಹಾರ ಸಾಮಗ್ರಿಗಳನ್ನು ಮತ್ತೆ ಸ್ವೀಕರಿಸಿರುವುದಾಗಿ ಅಲ್ಲಿನ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನಿ ಅಧಿಕಾರಿಗಳು ಹೊರಗಿನ ದೊಡ್ಡ ಪೆಟ್ಟಿಗೆಯನ್ನು ಬದಲಾಯಿಸಿದ್ದಾರೆ. ಆದರೆ ಒಳಗಿನ ಸಣ್ಣ ಪೆಟ್ಟಿಗೆಗಳನ್ನು ಬದಲಾಯಿಸುವುದನ್ನು ಮರೆತು ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ.




ಪರಿಹಾರ ಸಾಮಗ್ರಿಗಳಲ್ಲಿ ವಿಭಿನ್ನ ಹೆಸರು


ಭೂಕಂಪವನ್ನು ಎದುರಿಸುತ್ತಿರುವ ಟರ್ಕಿಯ ಜನರಿಗೆ ಸಹಾಯ ಮಾಡಲು ಪಾಕಿಸ್ತಾನದ ಜನರು ಈ ವಸ್ತುಗಳನ್ನು ದಾನ ಮಾಡಿದ್ದಾರೆ ಎಂಬ ಸಂದೇಶವನ್ನು ಹೊರಗಿನ ಪ್ಯಾಕಿಂಗ್ ಮೇಲೆ ಬರೆಯಲಾಗಿದೆ. ಆದರೆ ಪೆಟ್ಟಿಗೆಯೊಳಗಿನ ಸಂದೇಶದಲ್ಲಿ ಟರ್ಕಿಯಿಂದ ಪ್ರವಾಹಕ್ಕೆ ಒಳಗಾಗಿರುವ ಪಾಕಿಸ್ತಾನದ ಜನರಿಗೆ ಈ ವಸ್ತುಗಳನ್ನು ಪರಿಹಾರವಾಗಿ ಕಳುಹಿಸಿಕೊಡಲಾಗಿದೆ ಎಂದು ಬರೆಯಲಾಗಿದೆ.


ಟರ್ಕಿಸ್ ಅಧಿಕಾರಿಗಳು ಈ ವಿಚಾರವನ್ನು ಬಹಿರಂಗಪಡಿಸಿ, ಇದು ಪಾಕಿಸ್ತಾನ ಚಾನೆಲ್​ಗಳಲ್ಲಿ ಪ್ರಸಾರವಾಗಿದೆ. ಈ ವಿಡಿಯೋಗಳು ಸಾಮಾಜಿಲ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಪಾಕಿಸ್ಥಾನವನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಪಾಕಿಸ್ತಾನ ಎಲ್ಲಾ ಕ್ಷೇತ್ರದಲ್ಲೂ ನಮ್ಮನ್ನು ರಂಜಿಸುತ್ತದೆ, ಇದೀಗ ಟರ್ಕಿಗೆ ನೆರವು ನೀಡುವ ವಿಚಾರದಲ್ಲೂ ಮರೆತಿಲ್ಲ ಎಂದು ಅಪಹಾಸ್ಯ ಮಾಡುತ್ತಿದ್ದಾರೆ.


45000 ಗಡಿ ದಾಟಿದ ಸಾವಿನ ಸಂಖ್ಯೆ


ಫೆಬ್ರವರಿ 6 ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಸುಮಾರು 45 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲೇ ಮೃತಪಟ್ಟವರ ಸಂಖ್ಯೆ 40,642ಕ್ಕೆ ಏರಿಕೆಯಾಗಿದೆ. ಭಾನುವಾರ ಸಂಜೆಯ ವೇಳೆಗೆ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಲೇ ಇದೆ. ಈ ಪ್ರದೇಶದಲ್ಲಿ ಸುಮಾರು 13,000 ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Published by:Rajesha M B
First published: