​ಗಡಿ ಬೇಲಿ ಹಾರಿ ಪಾಕಿಸ್ತಾನ ಪ್ರವೇಶಿಸಿದ್ದ ಹೈದ್ರಾಬಾದ್​​ ಟೆಕ್ಕಿಗೆ ಕಡೆಗೂ ಸಿಕ್ತು ಬಿಡುಗಡೆ ಭಾಗ್ಯ

ಭಾರತ- ಪಾಕಿಸ್ತಾನ ಗಡಿಯ ನಡುವೆ ಹಾಕಿದ್ದ ಮುಳ್ಳು ತಂತಿ ಬೇಲಿ ಹಾರಿ ಪಾಕ್​ಗೆ ನಸುಳಿದ್ದರು.

ಪೊಲೀಸರಿಗೆ ಧನ್ಯವಾದ ತಿಳಿಸಿದ ಪ್ರಶಾಂತ್​​

ಪೊಲೀಸರಿಗೆ ಧನ್ಯವಾದ ತಿಳಿಸಿದ ಪ್ರಶಾಂತ್​​

 • Share this:
  ಹೈದ್ರಾಬಾದ್​ (ಜೂ. 2): ಪಾಕಿಸ್ತಾನದ ಗಡಿ ನುಸುಳಿದ ಒಂದೇ ಕಾರಣಕ್ಕೆ ಹೈದ್ರಾಬಾದ್​ ಟೆಕ್ಕಿಯೊಬ್ಬರು ನಾಲ್ಕು ವರ್ಷಗಳ ಕಾಲ ಸೆರೆಯಾಳುವಾಗಿ ಶಿಕ್ಷೆ ಅನುಭವಿಸಿದ್ದಾರೆ. ತೆಲಂಗಾಣ ಸರ್ಕಾರ ಅವಿರಹಿತ ಪ್ರಯತ್ನದ ಜೊತೆಗೆ ಭಾರತ ವಿದೇಶಾಂಗ ಸರ್ಕಾರದ ಬೆಂಬಲದಿಂದ ಕಡೆಗೂ ಆತ ಬಿಡುಗಡೆ ಭಾಗ್ಯ ಪಡೆದು ತನ್ನ ಕುಟುಂಬ ಸೇರಿಕೊಂಡಿದ್ದಾನೆ. ನಾಲ್ಕು ವರ್ಷಗಳ ಕಾಲ ಪಾಕಿಸ್ತಾನದ ಜೈಲಲ್ಲಿಯೇ ದಿನ ಕಳೆದ ಟೆಕ್ಕಿಗೆ ತನಗೆ ಬಿಡುಗಡೆಯೇ ಸಿಗುವುದಿಲ್ಲ ಎಂಬ ಮನಸ್ಥಿತಿ ಮೂಡಿತ್ತಂತೆ ಕಡೆಗೂ ತನಗೆ ಮರುಹುಟ್ಟು ಸಿಕ್ಕಿದೆ. ಇದಕ್ಕಾಗಿ ತೆಲಂಗಾಣ ಸರ್ಕಾರ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ.

  ಏನಿದು ಘಟನೆ
  ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಶಾಂತ್​ ಸ್ವಿಜರ್ಲೆಂಡ್​ಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ತಮಗೆ ಅರಿವಿಲ್ಲದೇ ಅವರು ಪಾಕಿಸ್ತಾನಕ್ಕೆ ನುಸುಳಿದ್ದಾರೆ. ಅಕ್ರಮವಾಗಿ ದೇಶ ಪ್ರವೇಶಿದ ಆರೋಪದ ಮೇಲೆ ಪಾಕಿಸ್ತಾನ ಸರ್ಕಾರ ಆತನ ವಶಕ್ಕೆ ಪಡೆದಿತ್ತು. ಇನ್ನು ಸ್ವಿಜರ್ಲೆಂಡ್​ಗೆ ಹೋದ ಮಗ ನಾಪತ್ತೆಯಾದ ಹಿನ್ನಲೆ ಅವರ ಪೋಷಕರು ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಬಳಿಕ ಪ್ರಶಾಂತ್​ ಪಾಕಿಸ್ತಾನದ ವಶದಲ್ಲಿರುವುದ ತಿಳಿದು ಬಂದಿದೆ. ತಕ್ಷಣಕ್ಕೆ ಈ ಸಂಬಂಧ ಸೈಬರ್​ ಪೊಲೀಸರು, ತೆಲಂಗಾಣ ಸರ್ಕಾರ ಮತ್ತು ಭಾರತ ಸರ್ಕಾರಕ್ಕೆ ಮಾಹಿತಿ ಮುಟ್ಟಿಸಿದರು.
  ಈ ಪ್ರಕರಣದ ಕುರಿತು ತೆಲಂಗಾಣ ಪೊಲೀಸರು ಹಾಗೂ ಭಾರತ ಸರ್ಕಾರ ಕೈಗೊಂಡ ಕ್ರಮದ ಫಲವಾಗಿ ಟೆಕ್ಕಿ ಮತ್ತೆ ಕುಟುಂಬ ಸೇರಲು ನೆರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

  ಪಾಕ್​ ಬೇಲಿ ಹಾರಿದ್ದ ಟೆಕ್ಕಿ

  2017ರ ಏಪ್ರಿಲ್​ನಲ್ಲಿ ಸ್ವಿಜರ್ಲೆಂಡ್​ಗೆ ಹೋಗಲು ಟೆಕ್ಕಿ ಪ್ರಶಾಂತ್​ ಮುಂದಾಗಿದ್ದರು. ಈ ವೇಳೆ ವಿಮಾನಕ್ಕೆ ಹಣ ಹೊಂದಿಸಲು ಸಾಧ್ಯವಾಗದೇ, ರಸ್ತೆ ಮಾರ್ಗದ ಮೂಲಕ ಬಸ್​, ಟ್ರೈನ್​ ಹಿಡಿದು ಹೋಗಲು ಮುಂದಾದರು. ಈ ಸಂದರ್ಭದಲ್ಲಿ ರೈಲಿನಲ್ಲಿ ರಾಜಸ್ಥಾನ ಬಿಕನೆರ್​ವರೆಗೂ ಹೋದರು. ಅಲ್ಲಿಂದ ಮುಂದೆ ಭಾರತ ಪಾಕಿಸ್ತಾನದ ಗಡಿಯನ್ನು ಅಕ್ರಮವಾಗಿ ದಾಡಿದರು. ಗಡಿಯಲ್ಲಿ ಹಾಕಿದ್ದ ಮುಳ್ಳು ತಂತಿಯನ್ನು ಹಾರಿ ಪಾಕ್​ಗೆ ನಸುಳಿದ್ದರು. ಅಲ್ಲದೇ ಪಾಕಿಸ್ತಾನದ ಪ್ರದೇಶದಲ್ಲಿ ಪ್ರಯಾಣ ಆರಂಭಿಸಿದ್ದರು. ಈ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಪಾಕಿಸ್ತಾನ ಪ್ರದೇಶಕ್ಕೆ ಪ್ರವೇಶಕ್ಕೆ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ನುಸುಳಿದ ಹಿನ್ನಲೆ ಅವರನ್ನು ಬಂಧಿಸಲಾಗಿತ್ತು.

  ಇದನ್ನು ಓದಿ: ರಾಜ್ಯದಲ್ಲೂ ಪಿಯು ಪರೀಕ್ಷೆ ರದ್ದು ಮಾಡಲು ಹೆಚ್ಚಿದ ಒತ್ತಡ; ಮೌನವಹಿಸಿದ ಶಿಕ್ಷಣ ಇಲಾಖೆ

  ಮೇ. 31 ರ 2021ರಂದು ಟೆಕ್ಕಿ ಪ್ರಶಾಂತ್​​ನನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ, ಅಟಾರಿ ಗಡಿ ಪ್ರದೇಶದ ಮೂಲಕ ಪಂಜಾಬ್​ ಪೊಲೀಸರಿಗೆ ಅವರನ್ನು ಒಪ್ಪಿಸಲಾಗಿದೆ. ಇದಾದ ಬಳಿಕ ಪೊಲೀಸರು ಅವರನ್ನು ಹೈದ್ರಾಬಾದ್​ ಪೊಲೀಸರಿಗೆ ಒಪ್ಪಿಸಿದ್ದು, ಸುರಕ್ಷಿತವಾಗಿ ಕುಟುಂಬವನ್ನು ಸೇರಿದ್ದಾರೆ.

  ಇದಾದ ಬಳಿಕ ಮಾತನಾಡಿದ ಪ್ರಶಾಂತ್​ ತಮ್ಮ ಬಿಡುಗಡೆಗೆ ಪ್ರಯತ್ನಿಸಿದ ತೆಲಂಗಾಣ, ಭಾರತ ಸರ್ಕಾರಕ್ಕೆ ಧನ್ಯಾವಾದ ತಿಳಿಸಿದ್ದಾರೆ. ಇದೇ ವೇಳೆ ತಮ್ಮಂತೆ ಅನೇಕ ಜನರು ಅಕ್ರಮವಾಗಿ ಗಡಿ ನುಸುಳಿದ ಆರೋಪದ ಮೇಲೆ ಪಾಕಿಸ್ತಾನದ ಜೈಲಿನಲ್ಲಿ ವರ್ಷನುಗಟ್ಟಲೇ ಸೆರೆವಾಸ ಅನುಭವಿಸುತ್ತಿದ್ದಾರೆ. ತಾವು ಕೂಡ ಬಿಡುಗಡೆಯಾವುದಿಲ್ಲ ಎಂಬ ಮನಸ್ಥಿತಿಗೆ ತಲುಪಿದ್ದೆ ಆದರೆ ಇಷ್ಟು ಬೇಗ ನನ್ನ ಕುಟುಂಬವನ್ನು ನಾನು ನೋಡುವ ಭಾಗ್ಯ ಪಡೆದು ಎಂದು ಸಂತಸ ಪಟ್ಟಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
  Published by:Seema R
  First published: