ಖಲಿಸ್ತಾನ ಉಗ್ರರಿಗೆ ಪಾಕ್​ ಬೆಂಬಲ, ಭಾರತದ ಮೂಲಕ ಶಸ್ತ್ರಾಸ್ತ್ರ ಪೂರೈಕೆ; ಗುಪ್ತಚರ ಇಲಾಖೆ ಎಚ್ಚರಿಕೆ

ಭಾರತದ ಪಂಜಾಬ್​ ವಲಯದಿಂದ ಪಾಕಿಸ್ತಾನ ಶಸ್ತ್ರಾಸ್ತ್ರ, ಮಾನವ ಕಳ್ಳಸಾಗಣೆ, ವಿದೇಶಿ ಹಣ, ಮಾದಕ ವಸ್ತುಸಾಗಣೆ ನಡೆಸಲಾಗುತ್ತಿದೆಯಾ ಎಂಬ ಬಗ್ಗೆ ಕೂಡ ಮಾಹಿತಿ ಸಂಗ್ರಹಿಸಲಾಗುತ್ತಿದೆ.

Seema.R | news18-kannada
Updated:January 14, 2020, 1:32 PM IST
ಖಲಿಸ್ತಾನ ಉಗ್ರರಿಗೆ ಪಾಕ್​ ಬೆಂಬಲ, ಭಾರತದ ಮೂಲಕ ಶಸ್ತ್ರಾಸ್ತ್ರ ಪೂರೈಕೆ; ಗುಪ್ತಚರ ಇಲಾಖೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜ.14):  ಪಂಜಾಬ್‌ ಹಾಗೂ ಗಡಿ ಭಾಗದಲ್ಲಿ ದುಷ್ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಖಲಿಸ್ತಾನಕ್ಕೆ ನೆರವು ನೀಡುತ್ತಿದ್ದು, ಇದಕ್ಕಾಗಿ ಭಾರತದ ಮೂಲಕ ಅಕ್ರಮವಾಗಿ ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆಗೆ ಮುಂದಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿ ಮಾಡಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಶಸ್ತ್ರಾಸ್ತ್ರ ಕಳ್ಳಸಾಗಣೆ ಕುರಿತು ಕೂಡ ತನಿಖೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ನವೆಂಬರ್​ನಲ್ಲಿ ಲೂದಿಯಾನದಲ್ಲಿ ಬಂಧಿಯಾದ ಫರಿದ್​ಕೋಟ್​ನಲ್ಲಿ ನರ್ಸ್​ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ ಮತ್ತು ದುಬೈನಲ್ಲಿ ಡ್ರೈವರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯ ವಿಚಾರಣೆ ನಡೆಸಿದ ಬಳಿಕ ಈ ಮಾಹಿತಿ ಹೊರಬಿದ್ದಿದೆ.

ಇವರ ಮಾಹಿತಿ ಪ್ರಕಾರ ಹರಿಯಾಣ ಮತ್ತು ರಾಜಸ್ಥಾನದ ಮೂಲಕ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ಸಾಗಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ದೇಶದಲ್ಲಿ ನಡೆಯುತ್ತಿರುವ ಪ್ರತ್ಯೇಕ ಖಲಿಸ್ತಾನಕ್ಕೆ ಬೆಂಬಲಿಸಿರುವ ಪಾಕಿಸ್ತಾನಿ ಮುಖಂಡರು ಅವರನ್ನು ಭೇಟಿಯಾಗಿದ್ದಾರೆ. ಪ್ರತ್ಯೇಕ ಖಲಿಸ್ತಾನ ಹೋರಾಟಕ್ಕೆ ಮುಂದಾಗಿರುವವರಿಗೆ ಪಾಕಿಸ್ತಾನ ತರಬೇತಿ ಶಿಬಿರ ಇದೆಯಾ ಎಂಬ ಬಗ್ಗೆ ಕೂಡ ಹಿರಿಯ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನು ಓದಿ: ಮೂವರು ಉಗ್ರರಿಗೆ ಮನೆಯಲ್ಲಿ ಆಶ್ರಯ: ಜಮ್ಮು-ಕಾಶ್ಮೀರದ ಡಿವೈಎಸ್​​​ಪಿ ದೇವೇಂದರ್​​ ಸಿಂಗ್ ಅಮಾನತು

ಭಾರತದ ಪಂಜಾಬ್​ ವಲಯದಿಂದ ಪಾಕಿಸ್ತಾನ ಶಸ್ತ್ರಾಸ್ತ್ರ, ಮಾನವ ಕಳ್ಳಸಾಗಣೆ, ವಿದೇಶಿ ಹಣ, ಮಾದಕ ವಸ್ತುಸಾಗಣೆ ನಡೆಸಲಾಗುತ್ತಿದೆಯಾ ಎಂಬ ಬಗ್ಗೆ ಕೂಡ ಮಾಹಿತಿ ಸಂಗ್ರಹಿಸಲಾಗುತ್ತಿದೆ.
Published by: Seema R
First published: January 14, 2020, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading