'ಚಾಯ್​ವಾಲಾ' ಎಂದು ಪ್ರಖ್ಯಾತರಾದ ಪಾಕಿಸ್ತಾನಿ ಸಂಸದ ಈಗ ಕೋಟ್ಯಾಧಿಪತಿ!


Updated:August 13, 2018, 10:24 PM IST
'ಚಾಯ್​ವಾಲಾ' ಎಂದು ಪ್ರಖ್ಯಾತರಾದ ಪಾಕಿಸ್ತಾನಿ ಸಂಸದ ಈಗ ಕೋಟ್ಯಾಧಿಪತಿ!

Updated: August 13, 2018, 10:24 PM IST
ನ್ಯೂಸ್​ 18 ಕನ್ನಡ

ಇಸ್ಲಮಾಬಾದ್​(ಆ.13): ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ 'ಚಾಯ್​ವಾಲಾ' ಆಗಿ ಭರ್ಜರಿ ಪ್ರಚಾರ ನಡೆಸಿದ್ದ, ಪಾಕ್​ನ ತಹರೀಕ್​ ಎ ಇನ್ಸಾಫ್​ನ ಓರ್ವ ಸಂಸದರು ಇದೀಗ ಕೋಟ್ಯಾಧಿಪತಿಯಾಗಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ದಾಖಲೆಳ ಆಧಾರದಲ್ಲಿ ಜಿಯೋ ಟಿವಿ ವರದಿಯೊಂದನ್ನು ಮಾಡಿದೆ. ಇದರಲ್ಲಿ ಪಾಕಿಸ್ತಾನದ ಖೈಬರ್​ ಪಖ್ತುನ್ಖಾ ಪ್ರಾಂತ್ಯದ ಎನ್​ಎ 41ನೇ ಕ್ಷೇತ್ರದಲ್ಲಿ ಪಿಟಿಐ ಸಂಸದ ಗುಲ್​ ಜಫರ್​ ಖಾನ್​ ಬಳಿ ನ3 ಕೋಟಿ ಮೌಲ್ಯದ ಸಂಪತ್ತು ಇದೆ ಎಂದು ಹೇಳಿದೆ.

ದಾಖಲೆಗಳ ಅನ್ವಯ ಚುನಾಯಿತ ಸಂಸದರು ಬಟ್ಟೆ ವ್ಯಾಪಾರ ನಡೆಸುತ್ತಿದ್ದಾರೆ. ಇದರ ಅನ್ವಯ ಜಫರ್​ ಬಳಿ ಒಂದು ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊರತುಪಡಿಸಿ ಒಂದು ಕೋಟಿ ಇಪ್ಪತ್ತು ಲಕ್ಷ ಮೌಲ್ಯದ ಎರಡು ಮನೆಗಳು ಹಾಗೂ ಕೃಷಿ ಭೂಮಿ ಕೂಡಾ ಇದೆ ಎಂದು ತಿಳಿದು ಬಂದಿದೆ.ಇನ್ನು ಇಮ್ರಾನ್​ ಖಾನ್​ರವರ ಪಿಟಿಐ ಪಕ್ಷದ ಟಿಕೆಟ್​ ಸಿಗುವುದಕ್ಕೂ ಮೊದಲು ಜಫರ್​ ರಾವಲ್ಪಿಂಡಿಯ ಹೊಟೇಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದರೆಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ ಜುಲೈ 25ರಂದು ನಡೆದ ಸಾರ್ವತ್ರಿಕ ಚುನಾವಣೆಗೂ ಮೊದಲು ಜನರಿಗೆ ಚಹಾ ಮಾರುತ್ತಿದ್ದ ಜಫರ್​ರವರ ಫೋಟೋ ತೆಗೆಯಲಾಗಿತ್ತೆನ್ನಲಾಗಿದೆ. ಇನ್ನು ಚಹಾ ಮಾರುತ್ತಿದ್ದ ಅವರ ವಿಡಿಯೋ ಚುನಾವಣೆಗೂ ಮೊದಲು ಭಾರೀ ವೈರಲ್​ ಆಗಿತ್ತೆನ್ನಲಾಗಿದೆ. ಇನ್ನು ಮತದಾನ ನಡೆದ ಬಳಿಕವೂ ಇವರು ಚಹಾ ಮಾರುವುದನ್ನು ಮುಂದುವರೆಸಿದ್ದರೆನ್ನಲಾಗಿದೆ.

ಚುನಾಯಿತರಾದ ಸಂಸದ ಜಫರ್​ ಜಿಯೋ ಟಿವಿಯೊಂದಿಗೆ ಮಾತನಾಡುತ್ತಾ "ಇದು ನನ್ನ ಕೆಲ, ಆದರೆ ಈಗ ನಾನು ಸಂಸದನಾಗಿದ್ದೇನೆ. ಇನ್ಮುಂದೆ ಇಲ್ಲಿನ ಎಲ್ಲಾ ಜನರಿಗೂ ಶಿಕ್ಷಣ ಕೊಡಿಸಲು ನಾನು ಶ್ರಮಿಸುತ್ತೇನೆ" ಎಂದಿದ್ದಾರೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...