news18-kannada Updated:December 8, 2020, 9:22 PM IST
ಇಮ್ರಾನ್ ಖಾನ್
ಇಸ್ಲಾಮಾಬಾದ್ (ಡಿಸೆಂಬರ್ 08); ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ಟ್ವಿಟರ್ ಖಾತೆಯಿಂದ ಮಾಜಿ ಮೊದಲ ಪತ್ನಿ ಸೇರಿದಂತೆ ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿಯ ಪ್ರಕಾರ, ಸೋಮವಾರ ಸಂಜೆಯಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಅಧಿಕೃತ ಟ್ವಿಟರ್ ಖಾತೆ @ImranKhanPTI ಯಿಂದ ಯಾರನ್ನೂ ಹಿಂಬಾಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಅವರು ಚಲನಚಿತ್ರ ನಿರ್ಮಾಪಕಿ ಹಾಗೂ ತಮ್ಮ ಮಾಜಿ ಪತ್ನಿ ಜಮೀಮಾ ಗೋಲ್ಡ್ಸ್ಮಿತ್ ಅವರನ್ನೂ ಅನ್ಫಾಲೋ ಮಾಡಿದ್ದಾರೆ ಎಂದು ತಿಳಿಸಿದೆ.
ಇಮ್ರಾನ್ ಖಾನ್ 2010 ರಲ್ಲಿ ತನ್ನ ಟ್ವಿಟ್ಟರ್ ಪ್ರೊಫೈಲ್ ಅನ್ನು ರಚಿಸಿದ್ದರು. ಮೊದಲ ಪತ್ನಿ ಜಮೀಮಾ ಗೋಲ್ಡ್ಸ್ಮಿತ್ ಅವರಿಂದ ದೂರಾಗಿ ಮತ್ತೆ ಎರಡು ಮದುವೆಯಾಗಿದ್ದರೂ ಸಹ ಇಮ್ರಾನ್ ಖಾನ್ ಟ್ವಿಟರ್ ಖಾತೆಯಲ್ಲಿ ಜಮೀಮಾ ಅವರನ್ನು ಹಿಂಬಾಲಿಸುತ್ತಿದ್ದರು. ಇಮ್ರಾನ್ ಖಾನೆಎ ಇತರರನ್ನು ಹಿಂಬಾಲಿಸದಿದ್ದರೂ ಟ್ವಿಟರ್ನಲ್ಲಿ ತಮ್ಮ ಮೊದಲ ಪತ್ನಿಯನ್ನು ಅನ್ಫಾಲೋ ಮಾಡುವುದು ಅವರಿಗೆ ಇಷ್ಟವಿಲ್ಲ ಎಂದೇ ಹೇಳಲಾಗುತ್ತಿತ್ತು.
ಇದನ್ನೂ ಓದಿ : ಈ ಕೃಷಿ ಕಾನೂನುಗಳನ್ನು ಕಾಂಗ್ರೆಸ್ ಸಹ ತರಲು ಬಯಸಿತ್ತು ಎಂದಿದ್ದ ಸಚಿವ ರವಿಶಂಕರ್ಗೆ ಶರದ್ ಪವಾರ್ ತಿರುಗೇಟು
ಆದರೆ, ಇದೀಗ ಇಮ್ರಾನ್ ಖಾನ್ ಟ್ವಿಟರ್ನಲ್ಲಿ ತಮ್ಮ ಮೊದಲ ಪತ್ನಿಯನ್ನೂ ಅನ್ಫಾಲೋ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇಬ್ಬರ ನಡುವೆಯೂ ಏನೋ ನಡೆದಿದೆ ಅದಕ್ಕೆ ಇಮ್ರಾನ್ ಖಾನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಜನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
Published by:
MAshok Kumar
First published:
December 8, 2020, 9:22 PM IST