ನಮ್ಮ ಕಡೆಯಿಂದ ಮೊದಲಿಗೆ ನಾವು ಪರಮಾಣು ಅಣು ಬಾಂಬ್​ ಉಪಯೋಗಿಸುವುದಿಲ್ಲ; ಪಾಕ್ ಪ್ರಧಾನಿ ಇ​ಮ್ರಾನ್​ ಖಾನ್

ಭಾರತ ಮತ್ತು ಪಾಕ್​ ಎರಡು ದೇಶಗಳು ಪರಮಾಣು ಅಣು ಬಾಂಬ್​ಗಳನ್ನು ಹೊಂದಿವೆ. ಒಂದು ವೇಳೆ ಇದೇ ಒತ್ತಡ ಪರಿಸ್ಥಿತಿ ಹೆಚ್ಚಾದರೆ ಅದು ಜಗತ್ತಿಗೆ ಅಪಾಯವಾಗಲಿದೆ. ಪರಮಾಣು ಅಣು ಬಾಂಬ್​ ಅನ್ನು ನಮ್ಮ ಕಡೆಯಿಂದ ಮೊದಲಿಗೆ ನಾವು ಬಳಸುವುದಿಲ್ಲ ಎಂದು ಇ​ಮ್ರಾನ್​ ಖಾನ್​ ಹೇಳಿದರು.

HR Ramesh | news18-kannada
Updated:September 3, 2019, 10:13 AM IST
ನಮ್ಮ ಕಡೆಯಿಂದ ಮೊದಲಿಗೆ ನಾವು ಪರಮಾಣು ಅಣು ಬಾಂಬ್​ ಉಪಯೋಗಿಸುವುದಿಲ್ಲ; ಪಾಕ್ ಪ್ರಧಾನಿ ಇ​ಮ್ರಾನ್​ ಖಾನ್
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
  • Share this:
ಇಸ್ಲಾಮಾಬಾದ್​: ಪಾಕಿಸ್ತಾನವೇ ಮೊದಲಿಗೆ ಅಣು ಬಾಂಬ್ಅನ್ನು ಉಪಯೋಗಿಸುವುದಿಲ್ಲ ಎಂದು ಪಾಕ್​ ಪ್ರಧಾನಿ ಇ​ಮ್ರಾನ್​ ಖಾನ್​ ಸೋಮವಾರ ಹೇಳಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿ, ಈ ಎರಡು ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ಬಳಿಕ ಪಾಕ್ ಮತ್ತು ಭಾರತ ನಡುವಿನ ಪರಿಸ್ಥಿತಿ ಮತ್ತಷ್ಟು ವಿಷಮಗೊಂಡಿತ್ತು.

ಭಾರತ ಮತ್ತು ಪಾಕ್​ ಎರಡು ದೇಶಗಳು ಪರಮಾಣು ಅಣು ಬಾಂಬ್​ಗಳನ್ನು ಹೊಂದಿವೆ. ಒಂದು ವೇಳೆ ಇದೇ ಒತ್ತಡ ಪರಿಸ್ಥಿತಿ ಹೆಚ್ಚಾದರೆ ಅದು ಜಗತ್ತಿಗೆ ಅಪಾಯವಾಗಲಿದೆ. ಪರಮಾಣು ಅಣು ಬಾಂಬ್​ ಅನ್ನು ನಮ್ಮ ಕಡೆಯಿಂದ ಮೊದಲಿಗೆ ನಾವು ಬಳಸುವುದಿಲ್ಲ ಎಂದು ಇ​ಮ್ರಾನ್​ ಖಾನ್​ ಹೇಳಿದರು.

ಇದನ್ನು ಓದಿ: ತನ್ನ​ ನಿರೂಪಣೆಯಂತೆ ಸುಳ್ಳು ಹೇಳಲು ಕುಲಭೂಷಣ್ ಜಾಧವ್ ಮೇಲೆ ಪಾಕ್ ತೀವ್ರ ಒತ್ತಡ ಹೇರುತ್ತಿದೆ; ಭಾರತ

ಲಾಹೋರ್​ನ ಪೂರ್ವ ನಗರದಲ್ಲಿ ಆಯೋಜನೆಗೊಂಡಿದ್ದ ಸಿಖ್​ ಸಮುದಾಯದ ಸಮಾರಂಭದಲ್ಲಿ ಇ​ಮ್ರಾನ್​ ಖಾನ್​ ಈ ಮಾತುಗಳನ್ನು ಹೇಳಿದರು.

ಕಳೆದ ವಾರದ ಹಿಂದೆ ಇ​ಮ್ರಾನ್​ ಖಾನ್ ಅವರು, ನಮ್ಮ ಬಳಿಯೂ ಅಣು ಬಾಂಬ್​ ಇದೆ ಎಂದು ಭಾರತಕ್ಕೆ ಬೆದರಿಕೆಯೊಡ್ಡಿದ್ದರು.

First published:September 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading