ಕೊರೊನಾ ಸಮಯದಲ್ಲಿ ದುಡಿಮೆಯಿಲ್ಲದೆ ಆಹಾರ ಸಂಕಷ್ಟ ಎದುರಿಸುತ್ತಿರುವವರು ಕೆಲವರಾದರೆ. ಇಲ್ಲೊಂದು ಪೊಲೀಸ್ ಅಧಿಕಾರಿಗಳ ತಂಡ ಉಚಿತ ಬರ್ಗರ್ ನೀಡಿಲ್ಲ ಎಂಬ ಕಾರಣಕ್ಕೆ ರೆಸ್ಟೋರೆಂಟ್ನಲ್ಲಿರುವ ಕಾರ್ಮಿಕರನ್ನೇ ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಲಾಹೋರ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಉಚಿತವಾಗಿ ಬರ್ಗರ್ ನೀಡದ ಕಾರಣ ಫಾಸ್ಟ್ಫುಡ್ ರೆಸ್ಟೋರೆಂಟ್ನಲ್ಲಿರುವ 19 ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.
‘ನಮ್ಮ ರೆಸ್ಟೋರೆಂಟ್ನಲ್ಲಿ ಈ ರೀತಿಯ ಘಟನೆ ನಡೆದಿರುವ ಇದೇ ಮೊದಲಲ್ಲ‘ ಎಂದು ಬರ್ಗರ್ ತಯಾರಿಸುವ ಜಾನಿ ಮತ್ತು ಜುಗ್ನು ದೂರಿದ್ದಾರೆ.
ಘಟನೆಗೆ ಸಂಬಂದಿಸಿದಂತೆ 9 ಪೊಲೀಸ್ ಅಧಿಕಾರಿಗಳು, ರೆಸ್ಟೋರೆಂಟ್ಗೆ ತೆರಳಿ ಉಚಿತವಾಗಿ ಬರ್ಗರ್ ನೀಡಬೇಕೆಂದು ಕೇಳಿದ್ದರು. ಅದನ್ನು ನಿರಾಕರಿಸ ಕಾರಣ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣ ವೈರಲ್ ಆಗುತ್ತಿದ್ದಂತೆ. ಪೊಲೀಸರ ಮಾಡಿರುವ ದಬ್ಬಾಳಿಕೆಯ ಕೃತ್ಯ ಬೆಳಕಿಗೆ ಬಂದಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ವ್ಯಾಪಾರ, ದುಡಿಮೆ ಇಲ್ಲದೆ ಒಂದು ಹೊತ್ತಿನ ಆಹಾರಕ್ಕೆ ಅರಸುವ ಸಾಕಷ್ಟು ಜನರಿದ್ದಾರೆ. ಇಂತವರ ಸಂಕಷ್ಟವನ್ನು ಅರಿತು ಆಹಾರ ಒದಗಿಸುವ ಮೂಲಕ ಮಾನವೀಯತೆ ಮೆರೆದವರು ಅನೇಕರಿದ್ದಾರೆ. ಆದರೆ ಲಾಹೋರ್ನಲ್ಲಿ ಪೊಲೀಸರು ಉಚಿತ ಬರ್ಗರ್ಗಾಗಿ ದಬ್ಬಾಳಿಕೆ ನಡೆಸಿದ್ದರು. ಆದರೀಗ ಘಟನೆಗೆ ಭಾಗಿಯಾಗಿದ್ದ ಒಂಭತ್ತು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ