Shahbaz Sharif: ಭಾರತ - ಪಾಕ್​ ನಡುವೆ ಶಾಂತಿ ನೆಲೆಸಲು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬೇಕು: ಶೆಹಬಾಜ್ ಷರೀಫ್

ಶೆಹಬಾಜ್ ಷರೀಫ್ ಇಸ್ಲಾಮಾಬಾದ್ ಮತ್ತು ನವದೆಹಲಿ ಎರಡು ನೆರೆಹೊರೆಯವರ ನಡುವೆ ಶಾಂತಿಯನ್ನು ತರಲು ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.

ಶೆಹಬಾಜ್ ಷರೀಫ್

ಶೆಹಬಾಜ್ ಷರೀಫ್

  • Share this:
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ (Imran Khan) ಸರ್ಕಾರ ಅಧಿಕಾರದಿಂದ ಕೆಳಗಿಳಿದಿದ್ದು, ಈಗ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಸಹೋದರ ಶೆಹಬಾಜ್ ಷರೀಫ್ ನಮ್ಮ ನೆರೆಯ ದೇಶದ (Pak New PM Shahbaz Sharif) ಹೊಸ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ. ಶೆಹಬಾಜ್ ಷರೀಫ್ (Shahbaz Sharif ) ಪಂಜಾಬ್ ಪ್ರಾಂತ್ಯದಲ್ಲಿ ಈವರೆಗೆ 3 ಬಾರಿ ಸಿಎಂ ಆಗಿದ್ದರು. ಕಾಪ್​ ಪ್ರಧಾನಿ ಆಗುತ್ತಿದ್ದಂತೆ ಭಾರತ - ಪಾಕಿಸ್ತಾನದ ಕುರಿತು ಮಾತನಾಡಿರುವ ಶೆಹಬಾಜ್ ಷರೀಫ್ ಇಸ್ಲಾಮಾಬಾದ್ ಮತ್ತು ನವದೆಹಲಿ ಎರಡು ನೆರೆಹೊರೆಯವರ ನಡುವೆ ಶಾಂತಿಯನ್ನು ತರಲು ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆ ಪರಿಹಾರವಿಲ್ಲದೆ ಶಾಂತಿ ಸಾಧ್ಯವಿಲ್ಲ:

ನ್ಯಾಶನಲ್ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಮತದಾನವನ್ನು ಮೊಟಕುಗೊಳಿಸಿದ ನಂತರ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಅಧ್ಯಕ್ಷರು ಇಸ್ಲಾಮಾಬಾದ್‌ನ ಉನ್ನತ ಕಚೇರಿಗೆ ಏರಿದ್ದಾರೆ. ಈ ನಡುವೆ, ನಾವು (ಪಾಕಿಸ್ತಾನ) ಭಾರತದೊಂದಿಗೆ ಶಾಂತಿಯನ್ನು ಬಯಸುತ್ತೇವೆ, ಆದರೆ ಕಾಶ್ಮೀರ ಸಮಸ್ಯೆಯ ಪರಿಹಾರವಿಲ್ಲದೆ ಶಾಂತಿ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್ ಭಾನುವಾರ ಇಸ್ಲಾಮಾಬಾದ್‌ನಲ್ಲಿ ಹೇಳಿದ್ದಾರೆ.

ಪಾಕ್ ಜೊತೆ ಮಾತುಕತೆಗೆ ಭಾರತ ಸಿದ್ಧ:

ಇತ್ತೀಚೆಗೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಭಾರತದೊಂದಿಗೆ ತಮ್ಮ ರಾಷ್ಟ್ರದ ವಿವಾದಗಳನ್ನು ಇತ್ಯರ್ಥಗೊಳಿಸಲು ಸಂವಾದ ಮತ್ತು ರಾಜತಾಂತ್ರಿಕತೆಗೆ ಕರೆ ನೀಡಿದ್ದರು. ಶೆಹಬಾಜ್ ಅಥವಾ ಜನರಲ್ ಬಾಜ್ವಾ ಅವರ ಕಾಮೆಂಟ್‌ಗಳಿಗೆ ಭಾರತ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ, ಆದರೆ 1972 ರ ಶಿಮ್ಲಾ ಒಪ್ಪಂದ ಮತ್ತು 1999 ರ ಲಾಹೋರ್ ಘೋಷಣೆಗೆ ಅನುಗುಣವಾಗಿ ಎಲ್ಲಾ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಭಾರತ ಸಿದ್ಧವಾಗಿದೆ ಎಂದು ಅದು ತಿಳಿಸಿದೆ. ಆದಾಗ್ಯೂ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡುವುದನ್ನು ನಿಲ್ಲಿಸುವ ಮತ್ತು ಮಾತುಕತೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯು ಪಾಕಿಸ್ತಾನದ ಮೇಲಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: Shehbaz Sharif Net Worth: ಪಾಕ್ ಹೊಸ ಪ್ರಧಾನಿ ಶೆಹಬಾಜ್ ಷರೀಫ್ ಬಡವರೇ? ಶ್ರೀಮಂತರೇ?

ಭಾರತಕ್ಕೆ ಭೇಟಿ ನೀಡಿದ್ದ ಶೆಹಬಾಜ್ :

ಆಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಶೆಹಬಾಜ್ ಅವರು 2013 ರಲ್ಲಿ ನವದೆಹಲಿಗೆ ಭೇಟಿ ನೀಡಿದ್ದರು. ಅವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ದೆಹಲಿ ಮೆಟ್ರೋದಲ್ಲಿಯೂ ಸವಾರಿ ಮಾಡಿದ್ದರು. 2018 ರ ಸಂಸತ್ತಿನ ಚುನಾವಣೆಯಲ್ಲಿ ಪಿಎಂಎಲ್ (ಎನ್) ಅನ್ನು ಅದರ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಮುನ್ನಡೆಸುತ್ತಿದ್ದಾಗ, ಶೆಹಬಾಜ್ ಯುಎಸ್ ಮತ್ತು ಉತ್ತರ ಕೊರಿಯಾ ನಡುವಿನ ಮಾತುಕತೆಗಳ ಉದಾಹರಣೆಯನ್ನು ಉಲ್ಲೇಖಿಸಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಪ್ರಯತ್ನಿಸಬಹುದು ಮತ್ತು ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸಬಹುದು ಎಂದಿದ್ದರು.

ಇದನ್ನೂ ಓದಿ: Pakistan New PM: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ.. ಯಾರಿವರು? ಇಲ್ಲಿದೆ ಮಾಹಿತಿ

ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದೇಗೆ?:

174 ಸದಸ್ಯರು ನಿರ್ಣಯದ ಪರವಾಗಿ ತಮ್ಮ ಮತಗಳನ್ನು ದಾಖಲಿಸಿದ್ದಾರೆ, ಇದರ ಪರಿಣಾಮವಾಗಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಗಿದೆ ಎಂದು ಮತದಾನ ಪ್ರಕ್ರಿಯೆಯ ನಂತರ ಅಯಾಜ್ ಸಾದಿಕ್ ಘೋಷಿಸಿದರು. ಇಮ್ರಾನ್​​ ಖಾನ್​ ರಾಜೀನಾಮೆ ನೀಡಿದ ಬಳಿಕ ಶೆಹಬಾಜ್ ಷರೀಫ್ ಪ್ರಧಾನಿ ಹುದ್ದೆಗೆ ಆಯ್ಕೆ ಆಗಿದ್ದಾರೆ.
Published by:shrikrishna bhat
First published: