ಇಸ್ಲಾಮಾಬಾದ್: ಕಾಶ್ಮೀರದಂತಹ (Kashmir) ಜ್ವಲಂತ ಸಮಸ್ಯೆ ಪರಿಹರಿಸಲು ನಾವು ಗಂಭೀರ ಮತ್ತು ಪ್ರಾಮಾಣಿಕವಾಗಿ ಮಾತುಕತೆ ನಡೆಸೋಣ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ (Prim Minister Narendra Modi) ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Pakistan Prime Minister Shehbaz Sharif) ಕರೆ ನೀಡಿದ್ದಾರೆ. ದುಬೈ (Dubai) ಮೂಲದ ಅಲ್ ಅರೇಬಿಯಾ ಟಿವಿಗೆ (Al Arabiya TV) ನೀಡಿದ ಸಂದರ್ಶನದಲ್ಲಿ (Interview), ಭಾರತದೊಂದಿಗೆ (India) ನಡೆಸಿದ ಮೂರು ಯುದ್ಧಗಳ ನಂತರ ಪಾಕಿಸ್ತಾನ (Pakistan) ಪಾಠವನ್ನು ಕಲಿತಿದೆ ಮತ್ತು ಈಗ ಪಾಕಿಸ್ತಾನ ತನ್ನ ನೆರೆಹೊರೆ ದೇಶಗಳೊಂದಿಗೆ ಶಾಂತಿಯನ್ನು ಬಯಸುತ್ತದೆ ಎಂದು ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಾಮಾಣಿಕವಾಗಿ ಮಾತುಕತೆ ನಡೆಸೋಣ
ಕಾಶ್ಮೀರದಂತಹ ಜ್ವಲಂತ ಸಮಸ್ಯೆ ಪರಿಹರಿಸಲು ನಾವು ಗಂಭೀರ ಮತ್ತು ಪ್ರಾಮಾಣಿಕವಾಗಿ ಮಾತುಕತೆ ನಡೆಸೋಣ. ನಾವು ಶಾಂತಿ ಮತ್ತು ಪ್ರಗತಿಗಾಗಿ ಬದುಕುತ್ತೇವೆಯೇ ಅಥವಾ ನಾವು ಜಗಳವಾಡುತ್ತೇವೆಯೇ? ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತೇವೆ? ಎಂಬುದು ನಮಗೆ ಬಿಟ್ಟದ್ದು ಎಂದಿದ್ದಾರೆ.
ಭಾರತದೊಂದಿಗೆ ನಾವು 3 ಯುದ್ಧ ಮಾಡಿದ್ದೇವೆ
ನಾವು ಭಾರತದೊಂದಿಗೆ ಮೂರು ಯುದ್ಧಗಳನ್ನು ನಡೆಸಿದೆವು. ಇದರಿಂದ ಪಾಕಿಸ್ತಾನ ಜನರು ಹೆಚ್ಚು ದುಃಖ, ಬಡತನ ಮತ್ತು ನಿರುದ್ಯೋಗದಿಂದ ಬಳಲುವಂತಾಗಿದೆ. ನಾವು ಈ ಯುದ್ಧಗಳಿಂದ ಪಾಠವನ್ನು ಕಲಿತಿದ್ದೇವೆ. ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾದಷ್ಟು ಭಾರತದೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ
ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನ ಬಳಲುತ್ತಿದೆ. ಹಿಟ್ಟು ಮತ್ತು ಇಂಧನ ಕೊರತೆಯಿಂದಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಭುಗಿಲೆದಿದ್ದಾರೆ.
ನಿಷೇಧಿತ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಯಿಂದ ಭಯೋತ್ಪಾದಕ ದಾಳಿಗಳ ಹೆಚ್ಚುತ್ತಿರುವ ನಿದರ್ಶನಗಳನ್ನು ಎದುರಿಸುತ್ತಿದೆ. ಕಳೆದ ವರ್ಷದ ಕೊನೆಯಲ್ಲಿ ದೇಶದ ಭದ್ರತಾ ಪಡೆಗಳೊಂದಿಗೆ ಕದನ ವಿರಾಮವನ್ನು ಕೊನೆಗೊಳಿಸಿತು.
ಎರಡೂ ದೇಶದಲ್ಲೂ ಎಂಜಿನಿಯರ್, ವೈದ್ಯರಿದ್ದಾರೆ
ಎರಡು ದೇಶಗಳಲ್ಲಿಯೂ ಎಂಜಿನಿಯರ್ಗಳು, ವೈದ್ಯರು ಮತ್ತು ನುರಿತ ಕಾರ್ಮಿಕರಿದ್ದಾರೆ. ಈ ಆಸ್ತಿಗಳನ್ನು ಸಮೃದ್ಧಿಗಾಗಿ ಬಳಸಿಕೊಳ್ಳಲು ಮತ್ತು ಎರಡೂ ರಾಷ್ಟ್ರಗಳು ಬೆಳೆಯಲು ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ನಾವು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ನಾವು ಬಡತನ ನಿರ್ಮೂಲನೆ ಮಾಡಲು ಬಯಸ್ತೇವೆ ಯುದ್ಧವಲ್ಲ
ನಾವು ದೇಶದಲ್ಲಿನ ಬಡತನವನ್ನು ಕಡಿಮೆ ಮಾಡಲು, ಸಮೃದ್ಧಿ ಸಾಧಿಸಲು. ನಮ್ಮ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯದ ಜೊತೆಗೆ ಉದ್ಯೋಗ ಒದಗಿಸಲು ಬಯಸುತ್ತೇವೆಯೇ ಹೊರತು ಬಾಂಬ್ ದಾಳಿ ನಡೆಸುವುದಿಲ್ಲ. ನಿಮ್ಮ ಬಾಂಬ್ಗಳು ಮತ್ತು ಮದ್ದುಗುಂಡುಗಳಿಗಾಗಿ ಸಂಪನ್ಮೂಲಗಳನ್ನು ವ್ಯರ್ಥ ಮಾಡಲು ಪಾಕಿಸ್ತಾನ ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Pakistan: ಪಾಕ್ ಸೇನೆಗೆ ಹೊಸ ಸಾರಥಿ: ಲೆಫ್ಟಿನೆಂಟ್ ಜನರಲ್ ಅಸೀಮ್ ಮುನೀರ್ ನೂತನ ಸೇನಾ ಮುಖ್ಯಸ್ಥರಾಗಿ ನೇಮಕ
ಪಾಕ್-ಭಾರತ ನಡುವೆ ಯುದ್ಧ ನಡೆದ್ರೆ ಹೇಳಲು ಯಾರು ಬದುಕಿರೋಲ್ಲ
ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಪರಮಾಣು ಅಸ್ತ್ರಗಳನ್ನು ಹೊಂದಿದ್ದು, ಒಂದು ವೇಳೆ ಭೀಕರ ಯುದ್ಧ ನಡೆದರೆ, ಇಲ್ಲಿ ಏನು ನಡೆಯಿತು ಎಂಬುದನ್ನು ಜಗತ್ತಿಗೆ ತಿಳಿಸಲು ಯಾರೂ ಬದುಕಿರುವುದಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ