ಕೇರಳಕ್ಕೆ ಮಾನವಿಯ ನೆರವು ನೀಡಲು ಮುಂದಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

news18
Updated:August 24, 2018, 11:25 AM IST
ಕೇರಳಕ್ಕೆ ಮಾನವಿಯ ನೆರವು ನೀಡಲು ಮುಂದಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಇಮ್ರಾನ್ ಖಾನ್
news18
Updated: August 24, 2018, 11:25 AM IST
ನ್ಯೂಸ್ 18 ಕನ್ನಡ

ಇಸ್ಲಾಮಾಬಾದ್ (ಆ.24): ಪರಸ್ಪರ ಶತ್ರುಗಳಂತೆ ಕಾಣುವ ಭಾರತ-ಪಾಕಿಸ್ತಾನ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಕೇರಳದ ಭೀಕರ ಮಹಾಪ್ರವಾಹಕ್ಕೆ ಮಾನವಿಯ ನೆಲೆಗಟ್ಟಿನಲ್ಲಿ ನೆರವು ನೀಡುವುದಾಗಿ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಟ್ವೀಟ್ ಮಾಡುವ ಮೂಲಕ ದಶಕಗಳ ವೈರತ್ವಕ್ಕೆ ತೀಲಾಂಜಲಿ ಹಾಡಲು ಮುನ್ನುಡಿ ಬರೆದಿದ್ದಾರೆ.

ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಸುರಿದ ಭಾರೀ ಮಳೆ 400 ಜನರನ್ನು ಬಲಿ ಪಡೆದು, ಸಾವಿರಾರು ಕೋಟಿ ರೂಪಾಯಿ ಆಸ್ತಿಯನ್ನು ಹಾನಿ ಮಾಡಿತ್ತು. ಕೇರಳದ ಮಹಾಪ್ರವಾಹಕ್ಕೆ ಮರಗಿ ಹಲವು ದೇಶಗಳು ಮರುಗಿ, ನೆರವಿನ ಮಹಾಪೂರವನ್ನೇ ಘೋಷಿಸಿತು. ಇದೀಗ ಪಾಕಿಸ್ತಾನದ ಪ್ರಧಾನಿ "ಕೇರಳದ ಜನರಿಗಾಗಿ ಪಾಕಿಸ್ತಾನದ ಪರವಾಗಿ ಪ್ರಾರ್ಥಿಸುತ್ತೇನೆ. ಕೇರಳಕ್ಕೆ ಅಗತ್ಯವಿದ್ದಲ್ಲಿ ಪಾಕಿಸ್ತಾನ ಮಾನವಿಯ ನೆರವು ನೀಡಲು ಸಿದ್ಧವಿದೆ," ಎಂದು ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

"ಕೇರಳದಲ್ಲಿ ಪ್ರವಾಹದಂದಾಗಿ ಉಂಟಾದ ಅವಘಡಗಳ ಪರಿಹಾರಕ್ಕೆ ಹಲವು ದೇಶಗಳು ನೆರವು ನೀಡಲು ಮುಂದೆ ಬಂದಿರುವುದಕ್ಕೆ ಭಾರತ ಕೃತಜ್ಞವಾಗಿದೆ," ಎಂದು ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ