• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Pakistan: ಕೆಟ್ಟರೂ ಬುದ್ದಿ ಕಲಿಯದ ಪಾಕಿಸ್ತಾನ, ಭಾರತದ ವಿರುದ್ಧ ಮತ್ತೊಂದು ಪಿತೂರಿಗೆ ಪಾಕ್ ಸಜ್ಜು!

Pakistan: ಕೆಟ್ಟರೂ ಬುದ್ದಿ ಕಲಿಯದ ಪಾಕಿಸ್ತಾನ, ಭಾರತದ ವಿರುದ್ಧ ಮತ್ತೊಂದು ಪಿತೂರಿಗೆ ಪಾಕ್ ಸಜ್ಜು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೆಬ್ರವರಿ 5ರಂದು ಪಾಕಿಸ್ತಾನ ಕಾಶ್ಮೀರ ಒಗ್ಗಟ್ಟಿನ ದಿನ (Kashmir Solidarity Day) ಆಚರಿಸುತ್ತದೆ. ಇದರ ಭಾಗವಾಗಿ ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ತನ್ನ ಎಲ್ಲಾ ರಾಯಭಾರ ಕಚೇರಿಗಳಿಗೆ ಫ್ಯಾಕ್ಸ್ ಮತ್ತು ಇಮೇಲ್‌ಗಳನ್ನು ಕಳುಹಿಸಿದ್ದು, ಅದರಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಧ್ವಂಸ ಮಾಡುವ ಯೋಜನೆಗಳ ಬಗ್ಗೆ ವಿವರಿಸಿದೆ ಎಂದು ಗುಪ್ತಚರ ಇಲಾಖೆ ಭಾರತೀಯ ಸೇನೆ ಮತ್ತು ರಕ್ಷಣಾ ಸಚಿವಾಲಯಕ್ಕೆ ಮಾಹಿತಿ ನೀಡಿದೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • New Delhi, India
 • Share this:

  ಶ್ರೀನಗರ: ಇಡೀ ಪಾಕಿಸ್ತಾನ(Pakistan) ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ನರಳುತ್ತಿದೆ. ಮತ್ತೊಂದು ದಿನಕ್ಕೊಂದು ಅವಗಢ ಸಂಭವಿಸಿ ಜನರೂ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲೂ ಪಾಕಿಸ್ತಾನ ತನ್ನ ನೀಚ ಬುದ್ದಿಯನ್ನು ಬಿಡದೇ ಭಾರತದ (India) ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಪಿತೂರಿ ನಡೆಸಿದೆ ಎಂದು ಭಾರತೀಯ ಗುಪ್ತಚರ ಏಜೆನ್ಸಿಗಳು (Indian Intelligence Agencies) ಮಾಹಿತಿ ನೀಡಿವೆ. ಇಂಟಲಿಜೆನ್ಸ್​ ಮಾಹಿತಿಯ ಪ್ರಕಾರ ಪಾಕಿಸ್ತಾನವು ಕಾಶ್ಮೀರದ (Kashmir)ಕಣಿವೆಯಲ್ಲಿ ಭಾರತ ಸರ್ಕಾರ ಹಾಗೂ ಭಾರತೀಯ ಸೇನೆಯ ಪ್ರತಿಷ್ಠೆಯನ್ನು ಹಾಳು ಮಾಡುವ ರೀತಿಯಲ್ಲಿ ಸಂಚು ರೂಪಿಸಲು ಪಾಕಿಸ್ತಾನವು ಪ್ರಪಂಚದಾದ್ಯಂತ ಇರುವ ತನ್ನ ರಾಯಭಾರ ಕಚೇರಿಗಳನ್ನು ಕೇಳಿದೆ. ಪಾಕಿಸ್ತಾನ ವಿದೇಶಾಂಗ ಸಚಿವಾಲು ಭಾರತದ ವಿರುದ್ಧ ಪಿತೂರಿ ನಡೆಸುವ ವಿಚಾರವಾಹಿ ತನ್ನ ರಾಯಭಾರ ಕಚೇರಿಗಳಿಗೆ ರಹಸ್ಯ ಟಿಪ್ಪಣಿಗಳುಗಳನ್ನು ಕಳುಹಿಸಿದ ಎಂಬ ಮಾಹಿತಿ ತಿಳಿದುಬಂದಿದೆ.


  ಫೆಬ್ರವರಿ 5ರಂದು ಪಾಕಿಸ್ತಾನ ಕಾಶ್ಮೀರ ಒಗ್ಗಟ್ಟಿನ ದಿನ (Kashmir Solidarity Day) ಆಚರಿಸುತ್ತದೆ. ಇದರ ಭಾಗವಾಗಿ ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ತನ್ನ ಎಲ್ಲಾ ರಾಯಭಾರ ಕಚೇರಿಗಳಿಗೆ ಫ್ಯಾಕ್ಸ್ ಮತ್ತು ಇಮೇಲ್‌ಗಳನ್ನು ಕಳುಹಿಸಿದ್ದು, ಅದರಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಧ್ವಂಸ ಮಾಡುವ ಯೋಜನೆಗಳ ಬಗ್ಗೆ ವಿವರಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.


  ಜೈಶ್- ಇ -ಮೊಹಮ್ಮದ್​ ಉಗ್ರರ ಬಂಧನ


  ಜಮ್ಮು ಮತ್ತು ಕಾಶ್ಮೀರದ ಪೊಲೀಸರು ನಷೇಧಿ ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್​ (JEM) ಜೊತೆ ಸಂಬಂಧ ಹೊಂದಿದ್ದ 6 ಜನ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.


  ಇದನ್ನೂ ಓದಿ: Pervez Musharraf Death: ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ಇನ್ನಿಲ್ಲ


  ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಬಂಧಿತ ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಎಂ ಜೊತೆ ಸಂಬಂಧ ಹೊಂದಿದ್ದಾರೆ. ಅವರು ವಿವಿಧ ಸಾಮಾಜಿಕ ಜಾಲತಾಣ ಪ್ಲಾಟ್​ಫಾರ್ಮ್ ಮೂಲಕ ಗಡಿಯುದ್ದಕ್ಕೂ ಭಯೋತ್ಪಾದಕ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.


  ಅಶಾಂತಿ ನಿರ್ಮಾಣ


  ಬಂಧಿತ ಆರೋಪಿಗಳು ಗ್ರೆನೇಡ್ ದಾಳಿ, ಅಮಾಯಕ ನಾಗರಿಕರನ್ನು ಬೆದರಿಸುವುದು, ಪಿಆರ್‌ಐ ಸದಸ್ಯರು, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಕುಲ್ಗಾಮ್ ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಿ, ಅಲ್ಲಿನ ಜನರಿಗೆ ನರಕಯಾತನೆ ಸೃಷ್ಟಿಸುತ್ತದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
  ಪಾಕಿಸ್ತಾನ ಗುಪ್ತಚರರೊಂದಿಗೆ ಭಾರತೀಯ ಸೇನಾ ಸಿಬ್ಬಂಧಿ ಸಂಪರ್ಕ


  ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಸಂಚು ನಿರ್ಮಾಣ ಮಾಡುತ್ತಿದೆ ಎನ್ನುವು ವಿಚಾರ ಒಂದು ಕಡೆಯಾದರೆ, ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಪಾಕ್​ ಗುಪ್ತಚರರು ಸಂಪರ್ಕ ಹೊಂದಿದ್ದಾರೆ ಎಂಬ ಮತ್ತೊಂದು ಆಘಾತಕಾರಿ ಸುದ್ದಿಯನ್ನು ಭಾರತೀಯ ಗುಪ್ತಚರ ಇಲಾಖೆ ತಿಳಿಸಿದೆ. ಕಳೆದ ನವೆಂಬರ್​ನಲ್ಲೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಿಬ್ಬಂದಿಯನ್ನು ಬಂಧಿಸಿತ್ತು. ಇದೀಗ ಇಬ್ಬರು ಭಾರತೀಯ ವಾಯುಪಡೆಯ ಸಿಬ್ಬಂದಿ ಹಾಗೂ ಒಬ್ಬ ಸೇನಾ ಸಿಬ್ಬಂದಿ ಪಾಕಿಸ್ತಾನ ಗುಪ್ತಚರ ಇಲಾಖೆಯ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.


  pakistan planned protests conspiracy to defame indian armed forces report by intel agencies
  ಸಾಂದರ್ಭಿಕ ಚಿತ್ರ


  ಸಶಸ್ತ್ರ ಪಡೆ ಮತ್ತು ಸಚಿವಾಲಯಗಳಿಗೆ ಎಚ್ಚರಿಕೆ


  ಭಾರತೀಯ ಗುಪ್ತಚರ ಇಲಾಖೆ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಶಸ್ತ್ರ ಪಡೆ ಮತ್ತು ಸಚಿವಾಲಯಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಎಚ್ಚರಿಕೆ ನೀಡಿವೆ. ಮೂಲಗಳ ಪ್ರಕಾರ, ಗುಜರಾತ್‌ನಲ್ಲಿ ಈ ವಿಷಯ ವರದಿಯಾಗಿದ್ದು, ಅಲ್ಲಿ ಪಿಐಒಗಳು ಫೇಸ್‌ಬುಕ್ ಮೂಲಕ ಕೆಲವು ನಾಗರಿಕರು ಮತ್ತು ಇಬ್ಬರು ಸಿಬ್ಬಂದಿಯನ್ನು ತಮ್ಮ ಬಲೆಯಲ್ಲಿ ಬೀಳಿಸಿಕೊಂಡಿದ್ದಾರೆ ಎಂದು ಕಂಡುಬಂದಿದೆ. ತಾಂತ್ರಿಕ ತನಿಖೆಯಲ್ಲಿ ಪಿಐಒಗಳು ವಾಟ್ಸಾಪ್‌ನಲ್ಲಿ ಸಿಬ್ಬಂದಿಯನ್ನು ಸಂಪರ್ಕಿಸಿ ಸಂವಾದ ನಡೆಸಿದ್ದಾರೆ. ಸೇನಾ ಸಿಬ್ಬಂದಿ ಮಾತ್ರವಲ್ಲ, ಕೆಲ ಸಾಮಾನ್ಯ ನಾಗರಿಕರನ್ನೂ ಪಾಕಿಸ್ತಾನೀ ಗುಪ್ತಚರರು ತಮ್ಮ ಸಂಪರ್ಕಕ್ಕೆ ಪಡೆದಿರುವುದು ಬೆಳಕಿಗೆ ಬಂದಿದೆ. ಇನ್ನಷ್ಟು ಆಳವಾಗಿ ವಿವರ ಕಲೆಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.

  Published by:Rajesha B
  First published: