• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ‘ಗೋ ಬ್ಯಾಕ್ ಮೋದಿ’; ಸಾಮಾಜಿಕ ಜಾಲತಾಣದಲ್ಲಿನ ಈ ಕ್ಯಾಂಪೇನ್ ಹಿಂದಿದೆಯಾ ಪಾಕಿಸ್ತಾನದ ಕೈವಾಡ?

‘ಗೋ ಬ್ಯಾಕ್ ಮೋದಿ’; ಸಾಮಾಜಿಕ ಜಾಲತಾಣದಲ್ಲಿನ ಈ ಕ್ಯಾಂಪೇನ್ ಹಿಂದಿದೆಯಾ ಪಾಕಿಸ್ತಾನದ ಕೈವಾಡ?

ಟ್ರೆಂಡಿಂಗ್ ಆಗಿರುವ ಗೋ ಬ್ಯಾಕ್ ಮೋದಿ ಟ್ವೀಟ್.

ಟ್ರೆಂಡಿಂಗ್ ಆಗಿರುವ ಗೋ ಬ್ಯಾಕ್ ಮೋದಿ ಟ್ವೀಟ್.

ಪಾಕ್ ಸರ್ಕಾರದ ನಡೆ ಎಲ್ಲೆಡೆ ವೈಫಲ್ಯ ಕಾಣುತ್ತಿದ್ದಂತೆ ಅಲ್ಲಿನ ಪ್ರಜೆಗಳು ಸಾಮಾಜಿಕ ಜಾಲತಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಖಳನಾಯಕನಂತೆ ಬಿಂಬಿಸಲು ಮುಂದಾಗಿದ್ದಾರೆಯೇ?, ಅದರಲ್ಲೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಭಾರತಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ “ಗೋ ಬ್ಯಾಕ್ ಮೋದಿ” ಎಂಬ ಘೋಷಣೆಯನ್ನು ಮತ್ತೆ ಮತ್ತೆ ಶೇರ್ ಮಾಡುವ ಮೂಲಕ ಮೋದಿಯ ತೇಜೋವಧೆಗೆ ಮುಂದಾಗಿದ್ದಾರೆಯೇ? ಎಂಬ ಸಂಶಯ ಇದೀಗ ಮನೆಮಾಡಿದೆ.

ಮುಂದೆ ಓದಿ ...
  • Share this:

    ಎರಡು ದಿನದ ಅನೌಪಚಾರಿಕ ಶೃಂಗಸಭೆಯ ನಿಮಿತ್ತ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಇಂದು ಭಾರತಕ್ಕೆ ಆಗಮಿಸಿದ್ದಾರೆ. ತಮಿಳುನಾಡಿನ ಸಾಂಸ್ಕೃತಿಕ ನಗರಿ ಮಹಾಬಲಿಪುರಂನಲ್ಲಿ ನಡೆಯಲಿರುವ ಮೋದಿ-ಕ್ಸಿ ಚಿನ್​ಪಿಂಗ್ ಭೇಟಿ ಅನೇಕ ಕಾರಣಗಳಿಂದಾಗಿ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಈ ಶೃಂಗಸಭೆಯಲ್ಲಿ ಉಬಯ ರಾಷ್ಟ್ರಗಳ ಅಂತಾರಾಷ್ಟ್ರೀಯ ಸಂಬಂಧದ ಜೊತೆಗೆ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಬಿಕ್ಕಟ್ಟಿನ ಕುರಿತೂ ಚರ್ಚೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಆದರೆ, ದಕ್ಷಿಣ ಏಷ್ಯಾ ಖಂಡದ ಈ ಎರಡು ಬೃಹತ್ ರಾಷ್ಟ್ರಗಳ ನಾಯಕರು ಇಂದು ತಮಿಳುನಾಡಿನಲ್ಲಿ ಭೇಟಿ ಮಾಡಿರುವ ಬೆನ್ನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ "ಗೋ ಬ್ಯಾಕ್ ಮೋದಿ" ಎಂಬ ಕ್ಯಾಂಪೇನ್ ಟ್ರೆಂಡಿಂಗ್ ಆಗಿದೆ. ಈ ಘೋಷಣೆ ಟ್ರೆಂಡ್​ ಆಗುತ್ತಿದ್ದಂತೆ ಇದರ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬ ಮಾಹಿತಿ ಇದೀಗ ಹೊರ ಬೀಳುತ್ತಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ.





    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೆಪ್ಟೆಂಬರ್ 5ರಂದು 370ನೇ ವಿಧಿಯ ಅನ್ವಯ ಜಮ್ಮು ಕಾಶ್ಮೀರಕ್ಕೆ ನೀಡುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು. ಆದರೆ, ಭಾರತ ಸರ್ಕಾರದ ಈ ನಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ಎರಡು ತಿಂಗಳಿನಿಂದ ಪಾಕಿಸ್ತಾನ ಪ್ರಶ್ನೆ ಮಾಡುತ್ತಲೇ ಇದೆ. ಆದರೆ, ಪಾಕಿಸ್ತಾನದ ಈ ನಡೆ ಈವರೆಗೆ ಫಲ ನೀಡಿಲ್ಲ ಎಂಬುದು ಬಹಿರಂಗ ಸತ್ಯ.


    ಆದರೆ, ಪಾಕ್ ಸರ್ಕಾರದ ನಡೆ ಎಲ್ಲೆಡೆ ವೈಫಲ್ಯ ಕಾಣುತ್ತಿದ್ದಂತೆ ಅಲ್ಲಿನ ಪ್ರಜೆಗಳು ಸಾಮಾಜಿಕ ಜಾಲತಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಖಳನಾಯಕನಂತೆ ಬಿಂಬಿಸಲು ಮುಂದಾಗಿದ್ದಾರೆಯೇ?, ಅದರಲ್ಲೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಭಾರತಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ “ಗೋ ಬ್ಯಾಕ್ ಮೋದಿ” ಎಂಬ ಘೋಷಣೆಯನ್ನು ಮತ್ತೆ ಮತ್ತೆ ಶೇರ್ ಮಾಡುವ ಮೂಲಕ ಮೋದಿಯ ತೇಜೋವಧೆಗೆ ಮುಂದಾಗಿದ್ದಾರೆಯೇ? ಎಂಬ ಸಂಶಯ ಇದೀಗ ಮನೆಮಾಡಿದೆ.


    ಈ ಸಂಶಯಕ್ಕೆ ಕಾರಣಗಳೂ ಇಲ್ಲದೆ ಏನಿಲ್ಲ. ಇಂದು ಗೋ ಬ್ಯಾಕ್​ ಮೋದಿ ಎಂದು ಟ್ರೆಂಡಿಂಗ್​ನಲ್ಲಿರುವ ಟ್ವೀಟ್​ಗಳ ಪೈಕಿ ಬಹುತೇಕ ಎಲ್ಲಾ ಟ್ವೀಟ್​ಗಳು ಪಾಕಿಸ್ತಾನದ ಲಾಹೋರ್​ನಿಂದ ಪೋಸ್ಟ್​ ಆಗಿವೆ. ಅಲ್ಲದೆ, ಈ ಪೋಸ್ಟ್​ನಲ್ಲಿ "ಕಾಶ್ಮೀರಿಗಳ ಸಾವಿಗೆ ಮೋದಿ ಕಾರಣ, ಮೋದಿ ಸರ್ವಾಧಿಕಾರಿ" ಎಂದು ದೂರಲಾಗಿದೆ. ಅಲ್ಲದೆ, ಮೋದಿ ಕಾಶ್ಮೀರದಿಂದ ಹೊರ ನಡೆಯುವಂತೆಯೂ ಒತ್ತಾಯಿಸಲಾಗಿದೆ. ಇನ್ನೂ ಕೆಲವು ಟ್ವೀಟ್​ಗಳಲ್ಲಿ ಕಾಶ್ಮೀರದ ಹಿಂಸಾಚಾರಕ್ಕೆ ಮೋದಿಯೇ ನೇರ ಕಾರಣ ಎಂಬಂತೆ ದೂರಿದ್ದರೆ, ಮತ್ತೆ ಕೆಲವು ಟ್ವೀಟ್​ಗಳಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆಯಲಾಗಿದೆ.


    ಇವನ್ನೆಲ್ಲಾ ಗಮನಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಕಾಶ್ಮೀರಿಗಳೆ "ಗೋ ಬ್ಯಾಕ್ ಮೋದಿ" ಎಂಬ ಘೋಷಣೆ ಕೂಗುತ್ತಿರುವಂತಹ ಒಂದು ಸನ್ನಿವೇಶನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೃಷ್ಟಿಸಲು ಪಾಕಿಸ್ತಾನಿಗಳು ಹವಣಿಸುತ್ತಿರುವುದು ಸ್ಪಷ್ಟವಾಗಿದೆ. ಆದರೆ, ಪಾಕಿಗಳು ಏನೇ ಪ್ರಯತ್ನಿಸಿದರೂ ಚೀನಾ ಅಧ್ಯಕ್ಷ ಜಿನ್​ಪಿಂಗ್ ಜೊತೆಗಿನ ಎರಡು ದಿನದ ಔಪಚಾರಿಕ ಶೃಂಗಸಭೆ ಉಬಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂಬುದು ಕೇಂದ್ರ ಸರ್ಕಾರದ ಅಚಲವಾದ ನಂಬಿಕೆಯಾಗಿದೆ.

    ಇದನ್ನೂ ಓದಿ :  ಮಹಾಬಲಿಪುರಂಗೆ ಆಗಮಿಸಿದ ಮೋದಿ-ಕ್ಸಿ ಜಿನ್​ಪಿಂಗ್; ಎರಡು ದಿನಗಳ ಶೃಂಗಸಭೆ, ಭಾರತ-ಚೀನಾ ಸಂಬಂಧ ಸುಧಾರಿಸುವ ಸಾಧ್ಯತೆ?

    First published: