Breaking News: ಪಾಕಿಸ್ತಾನದಲ್ಲಿ 2 ರೈಲುಗಳು ಮುಖಾಮುಖಿ ಡಿಕ್ಕಿ; 30 ಮಂದಿ ಸಾವು, 50 ಜನರಿಗೆ ಗಾಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಾಹೋರ್​ನಿಂದ ಕರಾಚಿಗೆ ಹೊರಟಿದ್ದ ಸರ್ ಸೈಯ್​ ಎಕ್ಸ್​​ಪ್ರೆಸ್​​ ರೈಲು ಮಿಲ್ಲತ್​ ಎಕ್ಸ್​​ಪ್ರೆಸ್​​ಗೆ ಡಿಕ್ಕಿ ಹೊಡೆದಿದೆ. ಮಿಲ್ಲತ್​ ಎಕ್ಸ್​ಪ್ರೆಸ್​​ ಕರಾಚಿಯಿಂದ ಸರ್ಗೋಢಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

  • Share this:

    ಪಾಕಿಸ್ತಾನ(ಜೂ.07): ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿ ಸುಮಾರು 30 ಮಂದಿ ದುರಂತ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್​ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಕರಾಚಿಯಿಂದ ಸರ್ಗೋಡಕ್ಕೆ ತೆರಳುತ್ತಿದ್ದ ಮಿಲ್ಲತ್​ ಎಕ್ಸ್​ಪ್ರೆಸ್​​ ರೈಲು ಹಳಿ ತಪ್ಪಿದ ಪರಿಣಾಮ ಈ ದುರಂತ ಸಂಭವಿಸಿದೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸರ್ ಸೈಯದ್​ ಎಕ್ಸ್​​ಪ್ರೆಸ್​​ ರೈಲಿಗೆ ಮಿಲ್ಲತ್​ ಎಕ್ಸ್​​ಪ್ರೆಸ್​ ಡಿಕ್ಕಿ ಹೊಡೆದಿದೆ. ಪರಿಣಾಮ ಮಿಲ್ಲತ್​ ಎಕ್ಸ್​​ಪ್ರೆಸ್​​ನ ಬೋಗಿಗಳು ಉರುಳಿ ಬಿದ್ದಿವೆ. ಸರ್ ಸೈಯ್​ ಎಕ್ಸ್​​ಪ್ರೆಸ್​​ ರೈಲು ಲಾಹೋರ್​ನಿಂದ ಕರಾಚಿಗೆ ಹೊರಟಿತ್ತು ಎಂದು ತಿಳಿದು ಬಂದಿದೆ.


    ಸಿಂಧ್​ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧರ್ಕಿ ನಗರದಲ್ಲಿ ಈ ಪ್ರಮುಖ ದುರಂತ ನಡೆದಿದೆ. ಘೋಟ್ಕಿ, ಧರ್ಕಿ, ಒಬಾರೋ ಮತ್ತು ಮಿರ್ಪುರ್ ಮಥೆಲೋ ಆಸ್ಪತ್ರೆಗಳಲ್ಲಿ ಎಮೆರ್ಜೆನ್ಸಿ ಘೋಷಣೆ ಮಾಡಲಾಗಿದೆ.


    ಇದನ್ನೂ ಓದಿ:Breaking News: ಪಾಕಿಸ್ತಾನದಲ್ಲಿ 2 ರೈಲುಗಳು ಮುಖಾಮುಖಿ ಡಿಕ್ಕಿ; 30 ಮಂದಿ ಸಾವು, 50 ಜನರಿಗೆ ಗಾಯ


    ಈ ಅಪಘಾತದಲ್ಲಿ ಸುಮಾರು 30 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಘೋಟ್ಕಿಯ ಜಿಲ್ಲಾಧಿಕಾರಿ ಉಸ್ಮಾನ್​ ಅಬ್ದುಲ್ಲಾ ತಿಳಿಸಿದ್ದಾರೆ.


    ಉರುಳಿ ಬಿದ್ದ ಬೋಗಿಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. 13 ರಿಂದ 14 ಬೋಗಿಗಳು ಹಳಿತಪ್ಪಿದ್ದು, ಅವುಗಳಲ್ಲಿ 6-8 ಬೋಗಿಗಳು ಸಂಪೂರ್ಣ ನಾಶವಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.


    ಇದೊಂದು ಸವಾಲಿನ ಕೆಲಸವಾಗಿದ್ದು, ಬೋಗಿಗಳ ಅಡಿಯಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸಬೇಕಿದೆ. ಹೀಗಾಗಿ ಅವರನ್ನು ಹೊರತೆಗೆದು ಕಾಪಾಡಲು ತುಂಬಾ ಸಮಯ ಹಿಡಿಯುತ್ತೆ. ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಮೆಡಿಕಲ್​ ಕ್ಯಾಂಪ್​ಗಳನ್ನು ಆಯೋಜಿಸುತ್ತಿದ್ದೇವೆ ಎಂದರು.


    ಇದನ್ನೂ ಓದಿ:Morning Digest: ರಾಜ್ಯದಲ್ಲಿಂದು ಭಾರೀ ಮಳೆ; ಬಳ್ಳಾರಿ, ಶಿರಸಿ, ಚಿಕ್ಕಮಗಳೂರಿನಲ್ಲಿ 100 ರೂ.ದಾಟಿದ ಪೆಟ್ರೋಲ್ ಬೆಲೆ


    ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:Latha CG
    First published: