ಪಾಕಿಸ್ತಾನ ಸಹಜ ನೆರೆಯ ದೇಶದಂತೆ ವರ್ತಿಸುವುದನ್ನು ಕಲಿತುಕೊಳ್ಳಲಿ; ವಿದೇಶಾಂಗ ಇಲಾಖೆ ವಕ್ತಾರ ರವೀಶ್​ ಕುಮಾರ್

ಜಮ್ಮು-ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮತ್ತು ಹರಿಯಾಣ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ನೀಡಿರುವ ಹೇಳಿಕೆಗಳನ್ನು ಪಾಕಿಸ್ತಾನದ ಸಚಿವರು ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿರುವುದು ವಿವಾದ ಹುಟ್ಟುಹಾಕಿದೆ.

HR Ramesh | news18-kannada
Updated:August 29, 2019, 5:12 PM IST
ಪಾಕಿಸ್ತಾನ ಸಹಜ ನೆರೆಯ ದೇಶದಂತೆ ವರ್ತಿಸುವುದನ್ನು ಕಲಿತುಕೊಳ್ಳಲಿ; ವಿದೇಶಾಂಗ ಇಲಾಖೆ ವಕ್ತಾರ ರವೀಶ್​ ಕುಮಾರ್
ವಿದೇಶಾಂಗ ಇಲಾಖೆ ವಕ್ತಾರ ರವೀಶ್​ ಕುಮಾರ್
  • Share this:
ನವದೆಹಲಿ: ಕಾಶ್ಮೀರ ವಿಷಯವಾಗಿ ಪಾಕಿಸ್ತಾನದ ಸಚಿವರು ಬೇಜಬಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಭಾರತ ವಿಷಾದ ವ್ಯಕ್ತಪಡಿಸಿದೆ.

ಜಮ್ಮು-ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮತ್ತು ಹರಿಯಾಣ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ನೀಡಿರುವ ಹೇಳಿಕೆಗಳನ್ನು ಪಾಕಿಸ್ತಾನದ ಸಚಿವರು ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿರುವುದು ವಿವಾದ ಹುಟ್ಟುಹಾಕಿದೆ.

ಈ ಸಂಬಂಧ ಇಂದು ಮಾತನಾಡಿರುವ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್​ ಕುಮಾರ್,  ಭಾರತದ ಆಂತರಿಕ ವಿಚಾರವಾಗಿ ಪಾಕಿಸ್ತಾನದ ನಾಯಕರು ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳು ಮತ್ತು ಟ್ವೀಟ್​ಗಳನ್ನು ಭಾರತ ಖಂಡಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನ ಸಹಜ ನೆರೆಯ ದೇಶದಂತೆ ವರ್ತಿಸಲಿ. ಸಹಜವಾಗಿ ಮಾತನಾಡಲಿ, ಸಹಜವಾಗಲಿ ವ್ಯವಹರಿಸಲಿ. ಇದು ಪಾಕಿಸ್ತಾನದಿಂದ ನಡೆಯುತ್ತಿರುವ ವಿಷಯವಲ್ಲ. ನಾವು ಅವರೊಂದಿಗೆ ಸಹಜ ನೆರೆ ದೇಶದಂತೆ ವರ್ತಿಸುತ್ತೇವೆ. ಅವರು ನೆರೆ ದೇಶದ ಮೇಲೆ ಭಯೋತ್ಪಾದಕನ್ನು ಛೂ ಬಿಡುವ ಕೆಲಸ ಮಾಡದಿರಲಿ ಎಂದು ಹೇಳಿದರು.

ಇದನ್ನು ಓದಿ: ಕಾಶ್ಮೀರ ಯಾವಾಗ ನಿಮ್ಮ ದೇಶದ ಭಾಗವಾಗಿತ್ತು? ಪಿಓಕೆ ಸಹ ಭಾರತದ್ದೆ ನೆನಪಿರಲಿ; ಪಾಕ್​ಗೆ ಕಡಕ್ ಎಚ್ಚರಿಕೆ ಕೊಟ್ಟ ರಾಜ್​ನಾಥ್​ ಸಿಂಗ್ಗುಜರಾತ್​ ಕರಾವಳಿ ಪ್ರದೇಶದಲ್ಲಿ ಹೈಅಲರ್ಟ್​ ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ರವೀಶ್​ ಕುಮಾರ್, ಪಾಕಿಸ್ತಾನ ಕಮಾಂಡ್​ಗಳು ಗುಜರಾತ್​ ಮೂಲಕ ಒಳನುಸುಳಲು ಯತ್ನಿಸುತ್ತಿದ್ದಾರೆ. ಜಲಮಾರ್ಗದ ಮೂಲಕ ಭಾರತದ ಒಳನುಸುಳಿಸಿ ಕೋಮು ಸಮಸ್ಯೆ ಹುಟ್ಟುಹಾಕಲು ಅಥವಾ ಭಯೋತ್ಪಾದಕ ದಾಳಿ ಎಸಗಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ