ಎಸ್ಸೆಸ್ಸೆಲ್ಸಿ ಪಾಸಾಗದವನು ಸಿಎ ಫೇಲಾದವನಿಗೆ ಲೇವಡಿ ಮಾಡಿದಂತಾಯ್ತು; ಪಾಕ್ ಸಚಿವನಿಗೆ ತಿರುಗೇಟು ನೀಡಿದ ಭಾರತೀಯರು

Chandrayaan 2: ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡು ಇಸ್ರೋ ವಿಜ್ಞಾನಿಗಳಪ್ರಯತ್ನ ವಿಫಲವಾದ ಬಗ್ಗೆ ನಿನ್ನೆ ಮಧ್ಯರಾತ್ರಿ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಕೇಂದ್ರ ವಿಜ್ಞಾನ ಸಚಿವ ಫವಾದ್ ಹುಸೇನ್ IndiaFailed  ಎಂಬ ಹ್ಯಾಶ್​ಟ್ಯಾಗ್ ಮೂಲಕ ಟ್ರೋಲ್ ಮಾಡಿದ್ದಾರೆ.

Sushma Chakre | news18-kannada
Updated:September 7, 2019, 12:01 PM IST
ಎಸ್ಸೆಸ್ಸೆಲ್ಸಿ ಪಾಸಾಗದವನು ಸಿಎ ಫೇಲಾದವನಿಗೆ ಲೇವಡಿ ಮಾಡಿದಂತಾಯ್ತು; ಪಾಕ್ ಸಚಿವನಿಗೆ ತಿರುಗೇಟು ನೀಡಿದ ಭಾರತೀಯರು
Chandrayaan 2: ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡು ಇಸ್ರೋ ವಿಜ್ಞಾನಿಗಳಪ್ರಯತ್ನ ವಿಫಲವಾದ ಬಗ್ಗೆ ನಿನ್ನೆ ಮಧ್ಯರಾತ್ರಿ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಕೇಂದ್ರ ವಿಜ್ಞಾನ ಸಚಿವ ಫವಾದ್ ಹುಸೇನ್ IndiaFailed  ಎಂಬ ಹ್ಯಾಶ್​ಟ್ಯಾಗ್ ಮೂಲಕ ಟ್ರೋಲ್ ಮಾಡಿದ್ದಾರೆ.
  • Share this:
ಭಾರತ- ಪಾಕಿಸ್ತಾನ ನಡುವಿನ ವಾದ-ವಿವಾದ ಹೊಸತೇನಲ್ಲ. ಚಂದ್ರಯಾನ ವಿಷಯದಲ್ಲೂ ಭಾರತದ ವೈಫಲ್ಯವನ್ನು ಪಾಕಿಸ್ತಾನ ಗೇಲಿ ಮಾಡಿದ್ದು, ಭಾರತ ವಿಫಲವಾಗಿದೆ ಎಂದು ಹ್ಯಾಶ್​ಟ್ಯಾಗ್ ಹಾಕಿ ಟ್ವಿಟ್ಟರ್​ನಲ್ಲಿ ಕಾಲೆಳೆಯುತ್ತಿದ್ದಾರೆ. ಇದಕ್ಕೆ ಭಾರತೀಯರು ತಿರುಗೇಟು ನೀಡುತ್ತಿದ್ದಾರೆ.

ಚಂದ್ರಯಾನ-2 ಯಶಸ್ವಿಯಾಗುವ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ನಿರಾಸೆಯಾಗಿದೆ. ಚಂದ್ರನ ಮೇಲೆ ಇಳಿಯಲು ಸ್ವಲ್ಪ ದೂರದಲ್ಲಿದ್ದಾಗಲೇ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡಿತ್ತು. ಚಂದ್ರನತ್ತ ಯಶಸ್ವಿಯಾಗಿ ಉಪಗ್ರಹವನ್ನು ಉಡಾವಣೆ ಮಾಡಿದ್ದ ಇಸ್ರೋ ವಿಜ್ಞಾನಿಗಳು ಇಡೀ ವಿಶ್ವವೇ ನಮ್ಮ ದೇಶದತ್ತ ತಿರುಗಿ ನೋಡುವಂತೆ ಮಾಡಿದ್ದರು. ಚಂದ್ರನ ಮೇಲೆ ಲ್ಯಾಂಡ್ ಆಗಬೇಕಾಗಿದ್ದ ಉಪಗ್ರಹ ಕೊನೇ ಕ್ಷಣದಲ್ಲಿ ವಿಫಲವಾಗಿತ್ತು. ಈ ಬಗ್ಗೆ ಪಾಕಿಸ್ತಾನ ಟ್ರೋಲ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರತವನ್ನು ಹೀಯಾಳಿಸಿ ಪೋಸ್ಟ್ ಮಾಡಲಾಗುತ್ತಿದೆ.

ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡು ಇಸ್ರೋ ವಿಜ್ಞಾನಿಗಳ ಸತತ ಪ್ರಯತ್ನದ ನಡುವೆಯೂ ಸಂಪರ್ಕ ಸಿಗದ ಬಗ್ಗೆ ನಿನ್ನೆ ಮಧ್ಯರಾತ್ರಿ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಕೇಂದ್ರ ವಿಜ್ಞಾನ ಸಚಿವ ಫವಾದ್ ಹುಸೇನ್ IndiaFailed  ಎಂಬ ಹ್ಯಾಶ್​ಟ್ಯಾಗ್ ಮೂಲಕ ಟ್ರೋಲ್ ಮಾಡಿದ್ದಾರೆ.


ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ಯಾಟಲೈಟ್ ಕಮ್ಯುನಿಕೇಷನ್ ಬಗ್ಗೆ ಭಾಷಣ ಮಾಡುವುದನ್ನು ನೋಡಿದರೆ ಅವರು ರಾಜಕಾರಣಿಯೋ ಅಥವಾ ಗಗನಯಾತ್ರಿಯೋ ಎಂಬ ಅನುಮಾನ ಮೂಡುತ್ತದೆ. ಬಡ ರಾಷ್ಟ್ರದ ಜನರ 900 ಕೋಟಿ ರೂ. ಹಣವನ್ನು ದುಂದುವೆಚ್ಚ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಲ್ಲಿ ಲೋಕಸಭೆ ಲೆಕ್ಕ ಕೇಳಲಿ ಎಂದು ಪಾಕ್ ಸಚಿವ ಲೇವಡಿ ಮಾಡಿದ್ದಾರೆ.Chandrayaan 2: ಕನಸು ನನಸಾಗದ್ದಕ್ಕೆ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ ಕೆ. ಶಿವನ್; ತಬ್ಬಿ ಸಂತೈಸಿದ ಪ್ರಧಾನಿ ಮೋದಿ

ಇದಕ್ಕೆ ಭಾರತೀಯ ಟ್ವಿಟ್ಟಿಗರು ತಿರುಗೇಟು ನೀಡಿದ್ದು, ನಾವು ಇಸ್ರೋ ಚಂದ್ರಯಾನಕ್ಕೆ ಇಟ್ಟ ಹಣ ಪಾಕಿಸ್ತಾನದ ಬಜೆಟ್​ಗಿಂತಲೂ ಹೆಚ್ಚಿದೆ. ಅಂಥವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಟಾಂಟ್ ನೀಡಿದ್ದಾರೆ.ಭಾರತ ಚಂದ್ರನ ಮೇಲೆ ನೀರಿದೆ ಎಂದು ಕಂಡುಹಿಡಿದಿದೆ. ಆದರೆ, ಪಾಕಿಸ್ತಾನವಿನ್ನೂ ಚಂದ್ರ ಎಲ್ಲಿದ್ದಾನೆ ಎಂದು ಹುಡುಕುವುದರಲ್ಲೇ ನಿರತವಾಗಿದೆ ಎಂದು ಭಾರತೀಯರು ಲೇವಡಿ ಮಾಡಿದ್ದಾರೆ.ತಮ್ಮ ವಿರುದ್ಧ ಟ್ರೋಲ್ ಮಾಡಿರುವ ಭಾರತೀಯರ ಬಗ್ಗೆ ಮತ್ತೆ ಟ್ವೀಟ್ ಮಾಡಿರುವ ಪಾಕ್ ಸಚಿವ ಫವಾದ್ ಹುಸೇನ್, ನಾನೇ ಚಂದ್ರಯಾನವನ್ನು ವಿಫಲಗೊಳಿಸಿದ್ದೀನೇನೋ ಎಂಬಂತೆ ಎಲ್ಲರೂ ನನ್ನ ಮೇಲೆ ಸವಾರಿ ಮಾಡುತ್ತಿದ್ದಾರೆ. ಭಾರತ ಕಳುಹಿಸಿದ ಆಟಿಕೆ ಚಂದ್ರನ ಮೇಲೆ ಲ್ಯಾಂಡ್ ಆಗುವ ಬದಲು ಮುಂಬೈನಲ್ಲಿ ಲ್ಯಾಂಡ್​ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Chandrayaan-2 | ಚಂದ್ರನ ಸಮೀಪ ವಿಕ್ರಮ್, ಪ್ರಗ್ಯಾನ್ ನಾಪತ್ತೆ; ಚಂದ್ರಯಾನ-2 ಮುಂದಿನ ಕಥೆ?

ಚಂದ್ರಯಾನ ಉಪಗ್ರಹ ತನ್ನ ಕಕ್ಷೆ ತಲುಪಲು ವಿಫಲವಾಗುತ್ತಿದ್ದಂತೆ ಪ್ರಧಾನಿ ಮೋದಿ ಕಂಟ್ರೋಲ್ ರೂಂನಿಂದ ಓಡಿಹೋದರು ಎಂದು ಟ್ವೀಟ್ ಮಾಡಲಾಗಿದ್ದು, ನಾನು ಒಂದು ಅದ್ಭುತ ಕ್ಷಣವನ್ನು ಮಿಸ್ ಮಾಡಿಕೊಂಡೆ ಎಂದು ಪಾಕ್ ಸಚಿವ ಟ್ವೀಟ್ ಮಾಡಿದ್ದಾರೆ.ಪಾಕ್ ಸಚಿವರ ಹೇಳಿಕೆಗೆ ಭಾರತೀಯರು ಗರಂ ಆಗಿದ್ದು, ಪಾಕಿಸ್ತಾನ ಯಾವತ್ತಿದ್ದರೂ ನಮ್ಮ ಕಾಲ ಕೆಳಗೆ ಇರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.


ಈ ಬಾರಿಯ ವಿಶ್ವಕಪ್​ನಲ್ಲಿ ಸೆಮಿ ಫೈನಲ್ ವರೆಗೆ ಹೋಗದಿದ್ದರೂ ನಮ್ಮ ದೇಶ ಸೆಮಿಫೈನಲ್​ನಲ್ಲಿ ಸೋತಾಗ ಪಾಕ್ ಸಂಭ್ರಮಿಸಿತ್ತು. ಪಾಕಿಸ್ತಾನಕ್ಕೆ ನಮ್ಮ ದೇಶದ ಹಾಗೆ ಚಂದ್ರಯಾನದ ಪ್ರಯೋಗ ಮಾಡುವ ಯೋಚನೆಯೂ ತಲೆಗೆ ಬರಲಿಲ್ಲ. ಅಂಥವರು ಈಗ ನಮ್ಮ ಪ್ರಯೋಗ ವಿಫಲವಾಗಿದ್ದನ್ನು ಆಡಿಕೊಳ್ಳುತ್ತಿದ್ದಾರೆ. ಪಾಕಿಸ್ತಾನಿ ಸಚಿವರ ಹೇಳಿಕೆ ಹೇಗಿದೆಯೆಂದರೆ 10ನೇ ಕ್ಲಾಸ್​ ಫೇಲಾದ ಹುಡುಗ ಸಿಎ ಪರೀಕ್ಷೆಯಲ್ಲಿ ಫೇಲಾದ ಹುಡುಗನನ್ನು ಲೇವಡಿ ಮಾಡಿದ ಹಾಗಿದೆ! ಎಂದು ಕಾಲೆಳೆದಿದ್ದಾರೆ. 

First published:September 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading