Pakistan : ಹರಕು ಬಾಯಿ ಪಾಕ್ ಸಚಿವನ ಕಿತಾಪತಿ, ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನ್ ಬಗ್ಗೆ ವ್ಯಂಗ್ಯ!

Pakistan : ಅದರಲ್ಲೂ ಇಮ್ರಾನ್​ ಖಾನ್​ ರೈಟ್​ ಹ್ಯಾಂಡ್ ಪಾಕ್ ಸಚಿವ ಫವಾದ್ ಚೌಧರಿ(Imran Chaudhry)ದು ಹರುಕು ಬಾಯಿ.  ಬಾಯಿಗೆ ಬಂದಂತೆ ಮಾತನಾಡಿ ವಿವಾದ ಸೃಷ್ಟಿಸುವುದು ಹೊಸದೇನೂ ಅಲ್ಲ ಬಿಡಿ.  ಅವರ ದೇಶದ ಒಳಗೆ ವಿವಾದ ಮಾಡಿಕೊಂಡು ಇದ್ದರೆ ಬಚಾವ್​. ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವ ಪ್ರಶ್ನೆಯೆ ಇಲ್ಲ.

ಪಾಕಿಸ್ತಾನದ ಸಚಿವ ಫವಾದ್​ ಚೌದರಿ

ಪಾಕಿಸ್ತಾನದ ಸಚಿವ ಫವಾದ್​ ಚೌದರಿ

  • Share this:
‘ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಜುಟ್ಟಿಗೆ ಮಲ್ಲಿಗೆ ಹೂ’ ಅಂತಾರಲ್ಲ ಹಾಗಾಗಿದೆ ಪಾಕಿಸ್ತಾನ(Pakistan) ಪರಿಸ್ಥಿತಿ. ಅಲ್ಲಿನ ಜನರು ಸರಿಯಾಗಿ ಆಹಾರ(Food) ಸಿಗದೇ ಪರದಾಡುತ್ತಿದ್ದಾರೆ. ಅದನ್ನು ಸರಿ ಮಾಡುವುದು ಬಿಟ್ಟು ಭಾರತದಲ್ಲಿ ಏನಾಗುತ್ತಿದೆ ಎಂದು ಬಗ್ಗಿ  ನೋಡುವುದನ್ನು ಅವರು ಮುಂದುವರಿಸಿದ್ದಾರೆ. ಅಲ್ಲಿನ ಸಚಿವರು(Ministers) ಅಬ್ಬಬ್ಬಾ.. ಒಬ್ಬರಿಗಿಂತ ಒಬ್ಬರು ಅದ್ಭುತ ಕಾಮಿಡಿಯನ್​(Comedian)ಗಳು ಎಂದು ಹೇಳಬಹುದು. ತನ್ನ ಖುರ್ಚಿ ಭದ್ರ ಮಾಡಿಕೊಳ್ಳುವಲ್ಲಿ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್​ ಖಾನ್​(Imran Khan) ಬ್ಯುಸಿಯಾಗಿದ್ದಾರೆ. ಇತ್ತಅವರ ಸಚಿವರು ತಮ್ಮ ಬಾಯಿಗೆ ಬಂದಂತೆ ಮಾತನಾಡಿ  ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಅದರಲ್ಲೂ ಇಮ್ರಾನ್​ ಖಾನ್​ ರೈಟ್​ ಹ್ಯಾಂಡ್ ಪಾಕ್ ಸಚಿವ ಫವಾದ್ ಚೌಧರಿ(Imran Chaudhry)ದು ಹರುಕು ಬಾಯಿ.  ಬಾಯಿಗೆ ಬಂದಂತೆ ಮಾತನಾಡಿ ವಿವಾದ ಸೃಷ್ಟಿಸುವುದು ಹೊಸದೇನೂ ಅಲ್ಲ ಬಿಡಿ.  ಅವರ ದೇಶದ ಒಳಗೆ ವಿವಾದ ಮಾಡಿಕೊಂಡು ಇದ್ದರೆ ಬಚಾವ್​. ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವ ಪ್ರಶ್ನೆಯೆ ಇಲ್ಲ. ಇದೀಗ ವೀರಯೋಧ ವಿಂಗ್​ ಕಮಾಂಡರ್​ ಅಭಿನಂದರ್​ ವರ್ಧಮಾನ್​ ಅವರ ಬಗ್ಗೆ ವ್ಯಂಗ್ಯಮಾಡಿದ್ದಾರೆ. ಫೆಬ್ರವರಿ 2019 ರಲ್ಲಿ ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್ -16 (F-16) ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (Wing Commander Abhinandan Varthaman) ಅವರಿಗೆ ಸೋಮವಾರ, ನವೆಂಬರ್ 22 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramanath Kovind) ಅವರು ವೀರ ಚಕ್ರವನ್ನು ಪ್ರದಾನ ಮಾಡಿದ್ದರು.

ಕಾಲ್ಕೆರೆದು ಕೆಣಕುತ್ತಿರುವ ಸಚಿವ ಫವಾದ್​ ಚೌದರಿ

ಇದೇ ವಿಚಾರವನ್ನು  ಅಭಿನಂದನ್  ಹೆಸರುನ್ನು ಪಾಕ್ ಸಚಿವ ಫವಾದ್ ಚೌಧರಿ ಕೆಣಕಿದ್ದಾರೆ.ಎಫ್ -16 ಯುದ್ಧ ವಿಮಾನ ಹೊಡೆದುರುಳಿಸಿದ ಏಕೈಕ ಮಿಗ್ -21 ಪೈಲಟ್ (Mig-21) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಭಿನಂದನ್ ಅವರನ್ನು ಭಾರತೀಯ ವಾಯುಪಡೆ ಕಮಾಂಡರ್ ಅಭಿನಂದನ್ ಪೋಸ್ಟ್ ಗೆ ಬಡ್ತಿ ನೀಡಲಾಗಿತ್ತು. ಫವಾದ್ ಚೌಧರಿ ಈ  ಬಾರಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಕೆಣಕುವ ಯತ್ನ ಮಾಡಿದ್ದಾರೆ.  #AbhiNoneDone ಎಂದು ವೀರ  ಚಕ್ರ ಪುರಸ್ಕಾರಕ್ಕೆ ಪಾತ್ರವಾದ ಅಭಿನಂದನ್ ಅವರ ಹೆಸರಿನ ಮೇಲೆಯೇ ಕಮೆಂಟ್ ಮಾಡಿದ್ದು  ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿ ಬಾಯಿಗೆ ಬಂದ ಹಾಗೇ ಮಾತನಾಡಿ ಪಾಕಿಸ್ತಾನದಲ್ಲೇ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಇದನ್ನು ಓದಿ : Pak Ministerಗೆ ಬೆಳ್ಳುಳ್ಳಿ ಯಾವುದು, ಶುಂಠಿ ಯಾವುದು ಅಂತ ಗೊತಿಲ್ವಾ? ಟ್ರೋಲ್​ಗೆ ಆಹಾರವಾದ ಸಚಿವ!

ಅಭಿನಂದನ್  ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ F-16 ಅನ್ನು ಹೊಡೆದುರುಳಿಸಿದ್ದರು. ಆದರೆ ಅವರ ವಿಮಾನವನ್ನು ಶತ್ರು ಪಡೆಗಳು ಹೊಡೆದುರುಳಿಸಿದ ನಂತರ ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು. ಇದಾದ ಮೇಲೆ ಹಲವು ಬೆಳವಣಿಗೆಗಳು ನಡೆದು ಪಾಕಿಸ್ತಾವೇ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಗಡಿವರೆಗೆ ತಂದು ಬಿಟ್ಟು ಹೋಗಿತ್ತು.ಅವರ ಶೌರ್ಯಕ್ಕೆ ಇಡೀ ಭಾರತವೇ ಮೆಚ್ಚುಗೆ ವ್ಯಕ್ತ ಪಡಿಸಿತ್ತು. ​ನವೆಂಬರ್ 22 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್  ಅವರು ವೀರ ಚಕ್ರವನ್ನು ಪ್ರದಾನ ಮಾಡಿದ್ದರು.

ಇದನ್ನು ಓದಿ : ಪಾಕಿಸ್ತಾನ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ಪ್ರಧಾನಿ Imran Khan.. ಇದೇ ಕಾರಣ!

ಬೆಳ್ಳುಳ್ಳಿ ವಿಚಾರಕ್ಕೆ ಟ್ರೋಲ್​ ಆದ ಫವಾದ್​ ಚೌದರಿ!

ಈರುಳ್ಳಿ- ಬೆಳ್ಳುಳ್ಳಿ ಬೆಲೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾದ ಮಾಹಿತಿ ಮತ್ತು ಪ್ರಸಾರ ಸಚಿವ  ಫವಾದ್‌ ಚೌಧರಿ ಅವರು( ಬೆಳ್ಳುಳ್ಳಿ ಅನ್ನು ಶುಂಠಿ ಅಂತ ಕರೆದಿದ್ದಾರೆ) ಗಾರ್ಲಿಕ್‌ ಅಂದ್ರೆ ಶುಂಠಿ ಅಂತ ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಈ ವಿಡಿಯೋ ನೋಡಿ ನೆಟ್ಟಿಗರು ನಗೆಪಾಟಲಿನಲ್ಲಿ ತೇಲಾಡಿದ್ದಾರೆ. ಓರ್ವ ಪ್ರತಿಷ್ಠಿತ ಸ್ಥಾನದಲ್ಲಿರುವ ವ್ಯಕ್ತಿಗೆ ಸಾಮಾನ್ಯ ಜ್ಞಾನವಿಲ್ಲದಿದ್ರೇ ಹೇಗೆ, ಇವರು ಸರಕಾರವನ್ನು ಹೇಗೆ ನಡೆಸುತ್ತಾರೆ ಎಂದು ಜನರು ಪ್ರಶ್ನೆ ಮಾಡುವಂತಾಗಿದೆ.
Published by:Vasudeva M
First published: