• Home
  • »
  • News
  • »
  • national-international
  • »
  • Pakistan: ಭಾರತೀಯರಿಗೆ ಬಿರಿಯಾನಿ ಪಾರ್ಟಿ ನೀಡಿದ ಪಾಕ್​ ವ್ಯಕ್ತಿ, ನೆಟ್ಟಿಗರು ಫುಲ್ ಫಿದಾ!

Pakistan: ಭಾರತೀಯರಿಗೆ ಬಿರಿಯಾನಿ ಪಾರ್ಟಿ ನೀಡಿದ ಪಾಕ್​ ವ್ಯಕ್ತಿ, ನೆಟ್ಟಿಗರು ಫುಲ್ ಫಿದಾ!

ಭಾರತೀಯರಿಗೆ ಬಿರಿಯಾನಿ ಪಾರ್ಟಿ ನೀಡಿದ ಪಾಕ್​ ವ್ಯಕ್ತಿ

ಭಾರತೀಯರಿಗೆ ಬಿರಿಯಾನಿ ಪಾರ್ಟಿ ನೀಡಿದ ಪಾಕ್​ ವ್ಯಕ್ತಿ

ತಮ್ಮ ಮಗಳ ಟೆನಿಸ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಭಾರತೀಯ ಕುಟುಂಬಕ್ಕೂ ಸಹ ಪಾಕಿಸ್ತಾನದಲ್ಲಿ ಹೇಗೋ? ಏನೋ ಅನ್ನೋ ಭಯ ಇತ್ತಂತೆ. ಆದರೆ ಅವರು ಒಬ್ಬರಿಗೆ ಪಾಕಿಸ್ತಾನದಲ್ಲಿ ಕಾರಿನಲ್ಲಿ ಲಿಫ್ಟ್ ಕೇಳಿದ ನಂತರ ಆ ಭಯ ಎಲ್ಲಾ ಮಾಯ ಅಯ್ತಂತೆ.

  • Share this:

    ಯಾರಿಗಾದರೂ ತಮ್ಮ ದೇಶ ಬಿಟ್ಟು ವಿದೇಶಕ್ಕೆ ಹೋಗುವುದೆಂದರೆ ಒಂದು ರೀತಿಯ ಭಯ ಮತ್ತು ಆತಂಕ ಇದ್ದೇ ಇರುತ್ತದೆ. ಅಲ್ಲಿ ಹೇಗೋ? ಏನೋ ಅನ್ನುವಂತಹ ಅನೇಕ ಪ್ರಶ್ನೆಗಳು ಅವರನ್ನು ಕಾಡಲು ಶುರು ಮಾಡಿರುತ್ತವೆ ಅಂತ ಹೇಳಬಹುದು. ಆದರೆ ಅದೇ ವಿದೇಶಿಯರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರೆ ಆ ಭಯ ಮತ್ತು ಆತಂಕ ಎಲ್ಲವೂ ಕ್ಷಣ ಮಾತ್ರದಲ್ಲಿಯೇ ಆನಂದದಾಯಕ ಅನುಭವವಾಗಿ ಬದಲಾಗುತ್ತದೆ ಅಂತ ಹೇಳಿದರೆ ಸುಳ್ಳಲ್ಲ. ಅದರಲ್ಲೂ ಭಾರತದಿಂದ (India) ಪಾಕಿಸ್ತಾನಕ್ಕೆ (Pakistan) ಮೊದಲನೇ ಸಲ ಹೋದಾಗ ಆ ಭಯ ಮತ್ತು ಆತಂಕ ಸ್ವಲ್ಪ ಮಟ್ಟಿಗೆ ಹೆಚ್ಚಿಗೆ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ತಮ್ಮ ಮಗಳ ಟೆನಿಸ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಭಾರತೀಯ ಕುಟುಂಬಕ್ಕೂ ಸಹ ಪಾಕಿಸ್ತಾನದಲ್ಲಿ ಹೇಗೋ? ಏನೋ ಅನ್ನೋ ಭಯ ಇತ್ತಂತೆ. ಆದರೆ ಅವರು ಒಬ್ಬರಿಗೆ ಪಾಕಿಸ್ತಾನದಲ್ಲಿ ಕಾರಿನಲ್ಲಿ ಲಿಫ್ಟ್ ಕೇಳಿದ ನಂತರ ಆ ಭಯ ಎಲ್ಲಾ ಮಾಯ ಅಯ್ತಂತೆ.


    ಇದನ್ನೂ ಓದಿ: POK: ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗ ಅಂತ ತೋರಿಸಿದ ರಷ್ಯಾ ನಕಾಶೆ! ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ!


    ಅಲ್ಲಿನ ಸ್ಥಳೀಯ ನಿವಾಸಿಯೊಬ್ಬರು ಅವರನ್ನು ಸ್ವಾಗತಿಸಿದರು ಮತ್ತು ಅವರಿಗೆ ಹೈದರಾಬಾದಿ ಬಿರಿಯಾನಿ ಪಾರ್ಟಿ ನೀಡಿ ಅವರನ್ನು ಸಂತೋಷ ಪಡಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯನ್ನು ಸೆರೆಹಿಡಿದಿರುವ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.


    ವೈರಲ್ ಆದ ವೀಡಿಯೋದಲ್ಲಿ ಏನಿದೆ?


    ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾದ ಈ ವೀಡಿಯೋವು ತಾಹಿರ್ ಖಾನ್ ಎಂಬ ಪಾಕಿಸ್ತಾನಿ ಪ್ರಜೆಯ ಮಾತುಗಳಿಂದ ಪ್ರಾರಂಭವಾಗುತ್ತದೆ, ಅವರು ಹೈದರಾಬಾದ್ ನ ಕುಟುಂಬಕ್ಕೆ ಲಿಫ್ಟ್ ನೀಡಿದರು. ಈ ಕುಟುಂಬವು ಇಸ್ಲಾಮಾಬಾದ್ ನಲ್ಲಿ ನಡೆದ ಅಂತರರಾಷ್ಟ್ರೀಯ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೊರಟಿದ್ದೇವೆ ಎಂದು ತಾಹಿರ್ ಅವರೊಂದಿಗೆ ಹಂಚಿಕೊಂಡರು.


    ಭಾರತದವರು ಅಂತ ಹೇಳಿದ ತಕ್ಷಣ ಅವರನ್ನು ತಮ್ಮ ಕಚೇರಿಗೆ ಕರೆದುಕೊಂಡು ಹೋಗಿ ತಮ್ಮೊಂದಿಗೆ ಊಟ ಮಾಡಬೇಕೆಂದು ತಾಹಿರ್ ಒತ್ತಾಯಿಸಿದರು. ಈ ಕ್ಲಿಪ್ ನಲ್ಲಿ ಕುಟುಂಬವು ತಾಹಿರ್ ಅವರೊಂದಿಗೆ ಹೈದರಾಬಾದಿ ಬಿರಿಯಾನಿಯನ್ನು ತಿನ್ನುವುದನ್ನು ಮತ್ತು ನೆರೆಯ ದೇಶದಲ್ಲಿ ತಮ್ಮ ಆಹ್ಲಾದಕರ ಅನುಭವಗಳನ್ನು ಹಂಚಿಕೊಳ್ಳುತ್ತಿರುವುದನ್ನು ನಾವು ನೋಡುತ್ತೇವೆ.


    ನೀವು ಟ್ರೋಫಿ ತೆಗೆದುಕೊಳ್ಳಿ, ವಿರಾಟ್ ನನ್ನು ನಮಗೆ ಕೊಡಿ ಎಂದ ಪಾಕ್ ವ್ಯಕ್ತಿ..


    "ನನ್ನ ಭಾರತೀಯ ಸ್ನೇಹಿತರು ಈ ವೀಡಿಯೋವನ್ನು ನೋಡಬೇಕೆಂದು ನಾನು ಬಯಸುತ್ತೇನೆ. ಇಸ್ಲಾಮಾಬಾದ್ ನಲ್ಲಿ ತನ್ನ ಮಗಳ ಟೆನಿಸ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಬಗ್ಗೆ ಭಾರತೀಯ ಕುಟುಂಬವು ಹೇಳಿತು. ಈ ಸಂದರ್ಭದಲ್ಲಿ ಭಾರತೀಯ ಕುಟುಂಬವು ಪಾಕಿಸ್ತಾನದ ತಾಹಿರ್ ಖಾನ್ ಅವರನ್ನು ಭೇಟಿಯಾದರು ಮತ್ತು ಅವರಿಗೆ ಲಿಫ್ಟ್ ಕೇಳಿದರು. ಅವರು ತಮ್ಮ ಅನುಭವವನ್ನು ಈ ವೀಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಇದು ನಿಜವಾದ ಪಾಕಿಸ್ತಾನ" ಎಂದು ವೀಡಿಯೋಗೆ ಲಗತ್ತಿಸಲಾದ ಪಠ್ಯದಲ್ಲಿ ಬರೆಯಲಾಗಿದೆ.


    "ನಮಗೆ ವಿರಾಟ್ ಕೊಹ್ಲಿಯನ್ನು ನೀಡಿ, ನೀವು ಟ್ರೋಫಿಯನ್ನು ತೆಗೆದುಕೊಳ್ಳಬಹುದು" ಎಂದು ಅಲ್ಲಿ ನಿರೂಪಕರು ತಮಾಷೆ ಮಾಡುತ್ತಿರುವುದನ್ನು ಸಹ ಈ ವೀಡಿಯೋದಲ್ಲಿ ಕೇಳಬಹುದು.


    ಇದನ್ನೂ ಓದಿ: PM Narendra Modi: ನೋಟುಗಳ ಮೇಲೆ ಮೋದಿ ಚಿತ್ರ ಮುದ್ರಿಸಲು ಆಗ್ರಹಿಸಿದ ಬಿಜೆಪಿ ಶಾಸಕ


    ಈಗಾಗಲೇ ಭಾರತ ಮತ್ತು ಪಾಕಿಸ್ತಾನ ತಂಡವು ಟ್ವೆಂಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಪಂದ್ಯಗಳಲ್ಲಿ ಆಡಲಿವೆ. ಮುಂದಿನ ಕ್ಲಿಪ್ ನಲ್ಲಿ ತನ್ನ ಟೆನಿಸ್ ಪಂದ್ಯವನ್ನು ಆಡಲಿರುವ ಹುಡುಗಿಯರು ಇಂತಹ ಹೃದಯಸ್ಪರ್ಶಿ ಸ್ವಾಗತವನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ಪಾಕಿಸ್ತಾನದ ಜನರ ಆತಿಥ್ಯವನ್ನು ತುಂಬಾನೇ ಇಷ್ಟಪಟ್ಟಿದ್ದಾಗಿ ಹೇಳಿದ್ದಾರೆ.


    ಪಾಕ್ ನ ಆತಿಥ್ಯವನ್ನು ಶ್ಲಾಘಿಸಿದ ನೆಟ್ಟಿಗರು..


    ಈ ಕ್ಲಿಪ್ ಗಳು ಟ್ವಿಟ್ಟರ್ ನಲ್ಲಿ ಹಲವಾರು ವೀಕ್ಷಣೆಗಳನ್ನು ಗಳಿಸಿದವು ಮತ್ತು ಬಳಕೆದಾರರಿಂದ ಹೃದಯಸ್ಪರ್ಶಿ ಪ್ರತಿಕ್ರಿಯೆಗಳನ್ನು ಸಹ ಪಡೆದಿವೆ. "2018 ರಲ್ಲಿ ನನ್ನ ಚಿಕ್ಕಪ್ಪ ಲಾಹೋರ್ ಗೆ ಹೋದಾಗ ಅವರಿಗೆ ನೀಡಿದ ಅದೇ ಆತಿಥ್ಯವನ್ನು ನಾನು ನೆನಪಿಸಿಕೊಳ್ಳಬಹುದು. ಅವರು ಭಾರತದಿಂದ ಬಂದವರು ಎಂದು ಹೇಳಿದ ನಂತರ ಯಾವ ಅಂಗಡಿಯವರೂ ಅವರಿಗೆ ಹೆಚ್ಚಿನ ಶುಲ್ಕವನ್ನು ವಿಧಿಸಲಿಲ್ಲ" ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ.


    "ಯೂಟ್ಯೂಬ್ ನಲ್ಲಿ ಹಲವಾರು ಬ್ಲಾಗ್ ಗಳನ್ನು ನೋಡಿದ್ದೇನೆ. ಅವುಗಳಲ್ಲಿ ಪ್ರತಿಯೊಬ್ಬರೂ ಪಾಕಿಸ್ತಾನದ ಜನರ ಆತಿಥ್ಯವನ್ನು ಶ್ಲಾಘಿಸಿದ್ದಾರೆ" ಎಂದು ಇನ್ನೊಬ್ಬರು ಹೇಳಿದರು.

    Published by:Precilla Olivia Dias
    First published: