Man Boils Wife: ಮಕ್ಕಳ ಕಣ್ಮುಂದೆಯೇ ಹೆಂಡತಿಯನ್ನು ಕಡಾಯಿಯಲ್ಲಿ ಬೇಯಿಸಿದ ಗಂಡ

ಸ್ವಂತ ಹೆಂಡತಿಯನ್ನು ಕೊಂದು ಕಡಾಯಿಯಲ್ಲಿ ಬೇಯಿಸಿದ ಕ್ರೂರ ಘಟನೆ ವರದಿಯಾಗಿದೆ. ವ್ಯಕ್ತಿ ಮಕ್ಕಳ ಕಣ್ಮುಂದೆಯೇ ಹೆಂಡತಿಯನ್ನು ಕುದಿಯುವ ನೀರಲ್ಲಿ ಹಾಕಿ ಬೇಯಿಸಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಸ್ಲಮಾಬಾದ್(ಜು.15): ಕೆಲವೊಂದು ವಿಚಿತ್ರ, ಜನರನ್ನು ಬೆಚ್ಚಿ ಬೀಳಿಸುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ದಂಪತಿಗಳು (Couple) ದ್ವೇಷವನ್ನು ಕ್ರೌರ್ಯವಾಗಿ ಪರಿವರ್ತಿಸಿ ಕ್ರೂರವಾಗಿ ಸೇಡು ತೀರಿಸಿಕೊಳ್ಳುವುದು, ಅಥವಾ ಚಿಕ್ಕ ಕಾರಣಕ್ಕಾಗಿ ಭೀಕರ ಹತ್ಯೆ, ಕೊಲೆಗಳನ್ನು ಮಾಡುವಂತ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಈಗ ಪಾಕಿಸ್ತಾನದಲ್ಲಿ (Pakistan) ನಡೆದಿರುವ ಘಟನೆಯೊಂದು ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ವ್ಯಕ್ತಿಯೊಬ್ಬ ಮಕ್ಕಳ ಮುಂದೆಯೇ ಕ್ರೂರ ಕೃತ್ಯವೆಸಗಿದ್ದು ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಬೆಚ್ಚಿಬೀಳಿಸಿದ ಘಟನೆಯಲ್ಲಿ ವ್ಯಕ್ತಿಯೊಬ್ಬ ಹೆಂಡತಿಯನ್ನು ಕೊಲೆ (Murder) ಮಾಡಿ ನಂತಗರ ಆಕೆಯ ಮೃತದೇಹವನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿದ್ದಾನೆ (Boiled). ಪಾಕಿಸ್ತಾನದ ಸಿಂಧ್​ನಲ್ಲಿ ಘಟನೆ ನಡೆದಿದ್ದು ವ್ಯಕ್ತಿ ತನ್ನ ಆರು ಜನ ಮಕ್ಕಳ ಕಣ್ಣ ಮುಂದೆಯೇ ಈ ಕೃತ್ಯ ಎಸಗಿದ್ದಾನೆ.

ಖಾಸಗಿ ಶಾಲೆಯ ಅಡುಗೆ ಮನೆಯಲ್ಲಿತ್ತು ಮೃತದೇಹ

ನರ್ಗೀಸ್ ಎಂಬ ಮಹಿಳೆಯ ಮೃತದೇಹ ಗುಲ್ಶನ್ ಇ ಇಕ್ಬಾಲ್​ ಪ್ರದೇಶದಲ್ಲಿ ಖಾಸಗಿ ಶಾಲೆಯೊಂದರ ಕಡಾಯಿಯಲ್ಲಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪತಿ ಆಕೆಯನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿದ ನಂತರ ಪೊಲೀಸರಿಗೆ ಮೃತದೇಹ ಸಿಕ್ಕಿದೆ.

ಪೊಲೀಸರ ಪ್ರಕಾರ, ಬಜಾರ್ ಏಜೆನ್ಸಿಯ ಮಹಿಳೆಯ ಪತಿ ಆಶಿಕ್ ಶಾಲೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಎಂಟರಿಂದ ಒಂಬತ್ತು ತಿಂಗಳಿಂದ ಮುಚ್ಚಲ್ಪಟ್ಟ ಶಾಲೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಘಟನೆಯ ನಂತರ ಆಶಿಕ್ ತನ್ನ ಮೂವರು ಮಕ್ಕಳೊಂದಿಗೆ ಓಡಿಹೋದ ನಂತರ ಸಂತ್ರಸ್ತೆಯ 15 ವರ್ಷದ ಮಗಳು ಅವರಿಗೆ ಕರೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಮಗಳ ಖಾಸಗಿ ಭಾಗಕ್ಕೆ ಕುದಿಯುವ ಎಣ್ಣೆ ಸುರಿದ ತಾಯಿ!

ಜಿಲ್ಲಾ ಪೂರ್ವ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಅಬ್ದುರ್ ರಹೀಮ್ ಶೆರಾಜಿ ಅವರು, ಇತರ ಮೂವರು ಮಕ್ಕಳ ಪಾಲನೆಯನ್ನು ಪೊಲೀಸರು ನೊಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮಕ್ಕಳು ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ಎಸ್‌ಎಸ್‌ಪಿ ಶೆರಾಜಿ ಹೇಳಿದರು.

ಮೊದಲು ಕೊಲೆ ಮಾಡಿ ನಂತರ ಕುದಿಸಿದ 

ಪೊಲೀಸರು ಮೃತದೇಹವನ್ನು ವೈದ್ಯಕೀಯ-ಕಾನೂನು ವಿಧಿವಿಧಾನಗಳಿಗಾಗಿ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ ರವಾನಿಸಿದ್ದಾರೆ ಎಂದು ಶೆರಾಜಿ ಹೇಳಿದರು. ಪ್ರಾಥಮಿಕ ತನಿಖೆಗಳು ಮತ್ತು ಮಕ್ಕಳ ಹೇಳಿಕೆಗಳು ಶಂಕಿತ ತನ್ನ ಹೆಂಡತಿಯನ್ನು ಅವರ ಮುಂದೆ ಕಡಾಯಿಯಲ್ಲಿ ಕುದಿಸುವ ಮೊದಲು ದಿಂಬಿನಿಂದ ಕತ್ತು ಹಿಸುಕಿದ್ದಾನೆ ಕೊಲೆ ಮಾಡಿದ್ದಾನೆ ಎಂದು ಸೂಚಿಸಿದೆ ಎಂದು ಅಧಿಕಾರಿ ಹೇಳಿದರು. ಮಹಿಳೆಯ ಒಂದು ಕಾಲು ಕೂಡ ಆಕೆಯ ದೇಹದಿಂದ ಬೇರ್ಪಟ್ಟಿದೆ ಎಂದು ಅವರು ಹೇಳಿದರು.

ಘಟನೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ

ಪತಿ ತನ್ನ ಹೆಂಡತಿಯನ್ನು ಅಕ್ರಮ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಬಲವಂತಪಡಿಸಿದ್ದ. ಅವಳು ಅದನ್ನು ನಿರಾಕರಿಸಿದಾಗ ಅವಳನ್ನು ಕೊಲೆ ಮಾಡಿದ್ದಾನೆ ಎಂದು ಊಹಿಸಲಾಗಿದೆ ಎಂದು ವರದಿ ಸೇರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ.

ಇದನ್ನೂ ಓದಿ: Hindu Girl Abducted: ಹಿಂದೂ ಬಾಲಕಿ ಅಪಹರಣ, ಮುಸ್ಲಿಂ ವ್ಯಕ್ತಿ ಜೊತೆ ಬಲವಂತದ ಮದುವೆ!

ಈ ಆಘಾತಕಾರಿ ಘಟನೆಯು ಸುಮಾರು 11 ವರ್ಷಗಳ ಹಿಂದೆ ಸಂಭವಿಸಿದ ಇದೇ ರೀತಿಯ ಘಟನೆಯ ಭಯಾನಕ ನೆನಪುಗಳನ್ನು ಮರಳಿ ತಂದಿದೆ. ನವೆಂಬರ್ 2011 ರಲ್ಲಿ ತನ್ನ ಅನುಮತಿಯಿಲ್ಲದೆ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಯೋಜಿಸಿದ ಪತಿಯನ್ನು ಪತ್ನಿ ಕೊಂದು ಅವನ ದೇಹದ ಭಾಗಗಳನ್ನು ಬೇಯಿಸಲು ಯತ್ನಿಸಿದ್ದಾಗ ಪೊಲೀಸರು ಮಹಿಳೆಯನ್ನು ಬಂಧಿಸಿದ್ದರು.
Published by:Divya D
First published: