Exclusive: ರಹಸ್ಯ ಆಕ್ರಮಣ? ಪಾಕ್ ಭಯೋತ್ಪಾದಕ ಶಿಬಿರ ಗಡಿ ನಿಯಂತ್ರಣ ರೇಖೆಯ ಸಮೀಪಕ್ಕೆ ಶಿಫ್ಟ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸುದ್ದಿಮೂಲಗಳ ಪ್ರಕಾರ ಪಾಕಿಸ್ತಾನವು ತನ್ನ ಎಲ್ಲಾ ಭಯೋತ್ಪಾದಕ ಶಿಬಿರಗಳನ್ನು ಮತ್ತು ಲಾಂಚ್ ಪ್ಯಾಡ್‌ಗಳನ್ನು ನಿಯಂತ್ರಣ ರೇಖೆಯ (LoC) ಬಳಿ ಸ್ಥಳಾಂತರಿಸಿದೆ ಎಂದು ತಿಳಿದು ಬಂದಿದೆ. ಪ್ರತಿಯೊಂದು ಲಾಂಚ್ ಪ್ಯಾಡ್ ಹಾಗೂ ಭಯೋತ್ಪಾದಕ ಶಿಬಿರಗಳು ಗಡಿಯಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿರುವ ರೀತಿಯಲ್ಲಿ ಸ್ಥಳಗಳನ್ನು ಆಯ್ಕೆಮಾಡಲಾಗಿದೆ.

ಮುಂದೆ ಓದಿ ...
  • Share this:

ಸುದ್ದಿಮೂಲಗಳ ಪ್ರಕಾರ ಪಾಕಿಸ್ತಾನವು (Pakistan) ತನ್ನ ಎಲ್ಲಾ ಭಯೋತ್ಪಾದಕ ಶಿಬಿರಗಳನ್ನು ಮತ್ತು ಲಾಂಚ್ ಪ್ಯಾಡ್‌ಗಳನ್ನು (Launch pad) ನಿಯಂತ್ರಣ ರೇಖೆಯ (LoC) ಬಳಿ ಸ್ಥಳಾಂತರಿಸಿದೆ ಎಂದು ತಿಳಿದು ಬಂದಿದೆ. ಪ್ರತಿಯೊಂದು ಲಾಂಚ್ ಪ್ಯಾಡ್ ಹಾಗೂ ಭಯೋತ್ಪಾದಕ ಶಿಬಿರಗಳು (Terrorist camp) ಗಡಿಯಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿರುವ ರೀತಿಯಲ್ಲಿ ಸ್ಥಳಗಳನ್ನು ಆಯ್ಕೆಮಾಡಲಾಗಿದೆ. ರಹಸ್ಯಾಕ್ರಮಣವನ್ನು ಮಾಡುವುದಕ್ಕಾಗಿ ಪಾಕಿಸ್ತಾನ ಈ ರೀತಿ ಮಾಡಿದೆ ಎಂಬುದಾಗಿ ಗುಪ್ತಚರ ಸಂಸ್ಥೆಗಳ ಮೂಲಗಳು ಬಹಿರಂಗಪಡಿಸಿವೆ. ಭಯೋತ್ಪಾದಕ ಶಿಬಿರಗಳು ಲಷ್ಕರ್-ಎ-ತಯ್ಯಬಾ (LeT), ಜೈಶ್-ಎ-ಮೊಹಮ್ಮದ್ (JeM), ಮತ್ತು ಹಿಜ್ಬುಲ್ ಮುಜಾಹಿದ್ದೀನ್ (HM) ನಂತಹ ಜಿಹಾದಿ ಗುಂಪುಗಳಿಗೆ ಸೇರಿವೆ.


ನಕ್ಷೆಗಳನ್ನು ಅವಲೋಕಿಸಿದಾಗ ಅವರಿಗೆ ಹೆಚ್ಚಿನ ಪ್ರವೇಶ ಮಾರ್ಗಗಳು ಇರುವಂತೆ ಕಂಡುಬಂದಿದೆ. ಈ ಪ್ರವೇಶ ಮಾರ್ಗಗಳಲ್ಲಿ ಯಾವುದೇ ರೀತಿಯ ಗುಂಡಿನ ದಾಳಿಯನ್ನು ತಪ್ಪಿಸಲು ಹಾಗೂ ಭಾರತೀಯ ಭದ್ರತಾ ಪಡೆಗಳು ಕಾರ್ಯನಿರತವಾಗಿರುವಂತೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.


ಸಣ್ಣ ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಭಾರತಕ್ಕೆ ಇಳಿಸಿದ  ಪಾಕ್
CNN-News18 ಗೆ ದೊರೆತಿರುವ ಇತ್ತೀಚಿನ ಗುಪ್ತಚರ ಮಾಹಿತಿಯ ಪ್ರಕಾರ, ಎಲ್ಲಾ ಲಾಂಚ್ ಪ್ಯಾಡ್‌ಗಳಲ್ಲಿ ತರಬೇತಿ ಪಡೆದ ಭಯೋತ್ಪಾದಕ ಪಡೆಗಳೇ ಕಾರ್ಯನಿರ್ವಹಿಸುತ್ತಿದ್ದು ಈ ಪಡೆಗಳನ್ನು ಪಾಕಿಸ್ತಾನದ ISI ನಿಂದ ನೇರವಾಗಿ ನಿರ್ವಹಿಸಲಾಗುತ್ತದೆ ಎಂದಾಗಿದೆ. ಭಯೋತ್ಪಾದಕರ ಒಳನುಸುಳುವಿಕೆಯು ISI ಗೆ ಹೆಚ್ಚುವರಿ ಲಾಭದಾಯಕವಾಗಿದ್ದು ಸುದ್ದಿಮೂಲಗಳು ಹೇಳಿರುವಂತೆ ಪಾಕಿಸ್ತಾನವು 300 ಕ್ಕೂ ಅಧಿಕ ಸಣ್ಣ ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಭಾರತಕ್ಕೆ ಇಳಿಸಿದೆ ಎನ್ನಲಾಗಿದೆ.


ಶ್ರೀನಗರದಲ್ಲಿ ಬೀಡುಬಿಟ್ಟ 50 ವಿದೇಶಿ ಭಯೋತ್ಪಾದಕರು 
ಈ 300 ಸಣ್ಣ ಶಸ್ತ್ರಾಸ್ತ್ರಗಳು ಶ್ರೀನಗರದ ಸುತ್ತಮುತ್ತ ಗಿರಕಿ ಹೊಡೆಯುತ್ತಿದ್ದು ಹೈಬ್ರೀಡ್ ಹತ್ಯೆಯ ಸಂಚಿನ ಮುನ್ನಾಳುಗಳಾಗಿವೆ. ಅಂದಾಜಿನ ಪ್ರಕಾರ ಎಲ್‌ಇಟಿ ಮತ್ತು ಜೈಶ್‌ನ ಸುಮಾರು 50 ವಿದೇಶಿ ಭಯೋತ್ಪಾದಕರು ಈಗಾಗಲೇ ಶ್ರೀನಗರದ ಮುಖ್ಯ ಪಟ್ಟದಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ. ಅವರನ್ನು ಆರಾಮದಾಯಕವಾದ ಸ್ಥಳದಲ್ಲಿ ಇರಿಸಲಾಗಿದ್ದು ಅಗತ್ಯ ಬಿದ್ದಾಗ ಹಾಗೂ ಸೂಕ್ತ ಅವಕಾಶ ದೊರೆತಾಗ ಅವರು ಕಾರ್ಯತತ್ಪರರಾಗುತ್ತಾರೆ ಎಂಬುದು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ.


ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಿಸುವ ಸಾಧ್ಯತೆ
ಕದನ ವಿರಾಮ ಉಲ್ಲಂಘಿಸುವಂತೆ ಭಯೋತ್ಪಾದಕ ಸಂಘಟನೆಗಳು ಸೇನೆಯ ಮೇಲೆ ಒತ್ತಡ ಹೇರುತ್ತಿರುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನವು ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು CNN-News18 ಇತ್ತೀಚೆಗೆ ವರದಿ ಮಾಡಿತ್ತು.


ಇದನ್ನೂ ಓದಿ: Explained: ಚೀನಾದ ಆರ್ಥಿಕ ಬಿಕ್ಕಟ್ಟು ವಿಶ್ವದಾದ್ಯಂತ ಹೇಗೆ ಪರಿಣಾಮ ಬೀರಲಿದೆ? ಇದ್ರಿಂದ ಭಾರತಕ್ಕೆ ಆತಂಕವೋ, ಅನುಕೂಲವೋ?


ಪೇಶಾವರ, ಬಹವಲ್ಪುರ್ ಮತ್ತು ಮುಜಫರಾಬಾದ್‌ನಲ್ಲಿ ಹೆಚ್ಚಿನ ಸಂಖ್ಯೆಯ ತರಬೇತಿ ಪಡೆದ ಸಣ್ಣ ಗುಂಪುಗಳು ಕಾದು ಕುಳಿತಿವೆ, ಅದಲ್ಲದೆ ನಂಗರ್‌ಹಾರ್ ಮತ್ತು ಅಫ್ಘಾನಿಸ್ತಾನದ ಇತರ ಗಡಿ ಪ್ರದೇಶಗಳಲ್ಲಿದ್ದ ತರಬೇತಿ ಪಡೆದ ಸಣ್ಣ ಗುಂಪುಗಳನ್ನು ಮರಳಿ ಬರುವಂತೆ ತಾಲಿಬಾನ್ ಒತ್ತಾಯ ಪಡಿಸಿದ ನಂತರ ಕೇಡರ್ (ತರಬೇತಿ ಪಡೆದ ಸಣ್ಣ ಗುಂಪುಗಳು) ಮರಳಿದೆ ಎಂದು ಮೂಲಗಳು ತಿಳಿಸಿವೆ. ಕೇಡರ್ ಮೂಲಕ ರಹಸ್ಯಾಕ್ರಮಣ ಎಂದರೆ ಗಡಿ ನಿಯಂತ್ರಣ ರೇಖೆಯಿಂದ (ಎಲ್‌ಒಸಿ) ಪಾಕಿಸ್ತಾನ ಸೇನೆಯು ಅವರನ್ನು ಬೆಂಬಲಿಸುತ್ತದೆ.


ಪಾಕ್ ಆಕ್ರಮಿತ ಕಾಶ್ಮೀರ (PoK) ಪ್ರದೇಶದ ಮೂರು ಕ್ಲಸ್ಟರ್‌ಗಳಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮೂಲಕ ಭಯೋತ್ಪಾದಕ ಶಿಬಿರಗಳನ್ನು ಹೇಗೆ ನಡೆಸಲಾಗುತ್ತಿದೆ ಎಂದು CNN-ನ್ಯೂಸ್ 18 ವರದಿ ಮಾಡಿದೆ.


ಯುದ್ಧಕ್ಕೆ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಶಿಬಿರಗಳ ಲಾಂಚ್
ಮನ್ಶೇರಾ, ಮುಜಫರಾಬಾದ್ ಮತ್ತು ಕೋಟ್ಲಿ, ಎಲ್ಲಾ ಗುಂಪುಗಳಾದ ಲಷ್ಕರ್-ಎ-ತೈಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ), ಅಲ್-ಬದರ್ ಮತ್ತು ಹರ್ಕತ್-ಉಲ್-ಮುಜಾಹಿದೀನ್ ಕ್ಲಸ್ಟರ್‌ಗಳಾಗಿವೆ ಎಂದು ಮೂಲಗಳು ತಿಳಿಸಿದ್ದು ಇವುಗಳು ಕ್ಯಾಂಪ್‌ಗಳನ್ನು ನಡೆಸುತ್ತಿವೆ. ಈ ಸಂಘಟನೆಗಳು ಮನ್ಶೇರಾ ಕ್ಲಸ್ಟರ್ ಬೋಯಿ, ಬಾಲಾಕೋಟ್ ಮತ್ತು ಗರ್ಹಿ ಹಬೀಬುಲ್ಲಾದಲ್ಲಿ ಶಿಬಿರಗಳನ್ನು ಹೊಂದಿವೆ.


ಮುಜಫರಾಬಾದ್ ಕ್ಲಸ್ಟರ್, ಚೇಲಾಬಂಡಿ, ಶವೈನಾಲಾ, ಅಬ್ದುಲ್ಲಾ ಬಿನ್ ಮಸೂದ್ ಮತ್ತು ದುಲೈನಲ್ಲಿ ಶಿಬಿರಗಳನ್ನು ಹೊಂದಿದೆ. ಪಾಕಿಸ್ತಾನ ಸೇನೆಯ 3 ಪಿಒಕೆ ಬ್ರಿಗೇಡ್ ಕೋಟ್ಲಿ ಕ್ಲಸ್ಟರ್‌ನ ಸೆನ್ಸಾ, ಕೋಟ್ಲಿ, ಗುಲ್ಪುರ್, ಫಾಗೋಶ್ ಮತ್ತು ದುಬ್ಗಿ ಶಿಬಿರಗಳ ಚಟುವಟಿಕೆಗಳನ್ನು ಸಂಯೋಜಿಸುತ್ತಿದೆ. ಮೂಲಗಳು ಹೇಳುವಂತೆ ಶಿಬಿರಗಳು ಮುಖ್ಯವಾಗಿ ಯುದ್ಧಕ್ಕೆ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಲಾಂಚ್ ಪ್ಯಾಡ್‌ಗಳಿಗೆ ಫೀಡರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.


 ಇದನ್ನೂ ಓದಿ:  Texas Racist Attack: ನೀವು ಭಾರತೀಯರು ಎಲ್ಲೆಡೆ ಇದ್ದೀರಿ: ಟೆಕ್ಸಾಸ್‌ನಲ್ಲಿ ಭೀಕರ ಜನಾಂಗೀಯ ದಾಳಿ!

top videos


    ಯುದ್ಧಕ್ಕೆ ಸಮೀಪವಿರುವ ಪ್ರದೇಶಗಳು ಗುರೆಜ್, ಕೆಲ್, ನೀಲಂ ಕಣಿವೆ, ತಂಗ್‌ಧರ್, ಉರಿ ಚಕೋಟಿ, ಗುಲ್ಮಾರ್ಗ್, ಪೂಂಚ್, ರಜೌರಿ, ನೌಶೇರಾ ಮತ್ತು ಸುಂದರ್‌ಬನಿ ವಲಯಗಳಲ್ಲಿ ಗಡಿ ನಿಯಂತ್ರಣ ರೇಖೆಗೆ (LOC) ಗೆ 2-3 ಕಿ.ಮೀ ಸನಿಹದಲ್ಲಿವೆ.

    First published: