Viral Video: ದೋಣಿ ಸಾಗಲಿಲ್ಲ, ಮುಂದೆ ಹೋಗಲಿಲ್ಲ,ಹೀರೋ ಆಗೋಕೆ ಹೋಗಿ ಜೋಕರ್ ಆದ ಪಾಕಿಸ್ತಾನ ಸಚಿವ!

Viral Video: ಈ ವಿಡಿಯೋ ಪಾಕಿಸ್ತಾನಿ ನಾಗರಿಕರ ಗಮನಕ್ಕೆ ಬಂದಿದ್ದೇ ತಡ, ಅದು ಅಪಹಾಸ್ಯಕ್ಕೆ ಒಳಗಾಗಲು ಆರಂಭವಾಯಿತು. ಆ ವಿಡಿಯೋದಲ್ಲಿ ಶೇಕ್ ರಶೀದ್ ಅಹಮದ್ ಕುಳಿತಿದ್ದ ದೋಣಿ ಚಲಿಸುತ್ತಲೇ ಇಲ್ಲ , ಬದಲಿಗೆ ಒಂದೇ ಜಾಗದಲ್ಲಿ ಸುತ್ತುತ್ತಿದೆ. ಅವರು ಒಂದೇ ದಿಕ್ಕಿನಲ್ಲಿ ಹುಟ್ಟು ಹಾಕುತ್ತಿದ್ದುದೇ ಅದಕ್ಕೆ ಕಾರಣ.

ಪಾಕಿಸ್ತಾನ ಸಚಿವ ಶೇಖ್ ರಶೀದ್ ಅಹಮದ್

ಪಾಕಿಸ್ತಾನ ಸಚಿವ ಶೇಖ್ ರಶೀದ್ ಅಹಮದ್

  • Share this:

    ಪಾಕಿಸ್ತಾನದ ಆಂತರಿಕ ಸಚಿವ ಶೇಕ್ ರಶೀದ್ ಅಹಮದ್ ತಮ್ಮನ್ನು ತಾವು ವಿವಾದಗಳಿಂದ ದೂರ ಇಡುವಂತೆ ಕಾಣುತ್ತಿಲ್ಲ. ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಟೀಕೆ ಮತ್ತು ಅಪಹಾಸ್ಯಕ್ಕೆ ಗುರಿಯಾಗುತ್ತಲೇ ಇರುತ್ತಾರೆ. ಈ ಹಿಂದೆ ಪಾಕಿಸ್ತಾನದಲ್ಲಿ ಅಫಘಾನ್ ರಾಯಭಾರಿಯ ಮಗಳ ಅಪಹರಣವಾಗಿ, ಆಕೆಯ ಬಿಡುಗಡೆ ಆದ ಬಳಿಕ, ಅಫಘಾನ್ ರಾಯಭಾರಿಯ ಮಗಳ ಅಪಹರಣ ಆಗಿಯೇ ಇಲ್ಲ ಎಂದು ಶೇಖ್ ರಶೀದ್ ಅಹಮದ್ ಹೇಳಿಕೆ ನೀಡಿ ನಗೆಪಾಟಲಿಗೆ ಒಳಗಾಗಿದ್ದರು. ಅವ್ಯಾವುವು ಸಾಲಲಿಲ್ಲ ಎಂಬಂತೆ, ಇದೀಗ ಫಾರಂ ಹೌಸ್‍ನಲ್ಲಿ ತಾವು ದೋಣಿಯೊಂದರಲ್ಲಿ ಕುಳಿತು ಹುಟ್ಟು ಹಾಕುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಮತ್ತೆ ಅಪಹಾಸ್ಯಕ್ಕೆ ಒಳಗಾಗಿದ್ದಾರೆ.


    ಶನಿವಾರ ಆಂತರಿಕ ಸಚಿವ ಶೇಕ್ ರಶೀದ್ ಅಹಮದ್ , ತಾನು ಸರೋವರದಲ್ಲಿ ದೋಣಿಗೆ ಹುಟ್ಟು ಹಾಕುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು, ಮತ್ತು ಆ ವಿಡಿಯೋಗೆ “ಈದ್‍ನ ಎರಡನೇ ದಿನ: ಫ್ರೀಡಮ್ ಹೌಸ್‍ನಲ್ಲಿ ದೋಣಿಯಾನ ಮಾಡುತ್ತಿರುವ ಆಂತರಿಕ ಸಚಿವ ಶೇಖ್ ರಶೀದ್ ಅಹಮದ್” ಎಂದು ಅಡಿಬರಹವನ್ನು ನೀಡಿದ್ದರು. ಅದನ್ನು ಅವರು ಟ್ವಿಟ್ಟರ್ ಸೇರಿದಂತೆ ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು. ಕೇವಲ ದೋಣಿ ಹುಟ್ಟು ಹಾಕುತ್ತಿರುವ 49 ಸೆಕೆಂಡುಗಳ ವಿಡಿಯೋವದು.





    ಈ ವಿಡಿಯೋ ಪಾಕಿಸ್ತಾನಿ ನಾಗರಿಕರ ಗಮನಕ್ಕೆ ಬಂದಿದ್ದೇ ತಡ, ಅದು ಅಪಹಾಸ್ಯ ಒಳಗಾಗಲು ಆರಂಭವಾಯಿತು. ಆ ವಿಡಿಯೋದಲ್ಲಿ ಶೇಕ್ ರಶೀದ್ ಅಹಮದ್ ಕುಳಿತಿದ್ದ ದೋಣಿ ಚಲಿಸುತ್ತಲೇ ಇಲ್ಲ , ಬದಲಿಗೆ ಒಂದೇ ಜಾಗದಲ್ಲಿ ಸುತ್ತುತ್ತಿದೆ. ಅವರು ಒಂದೇ ದಿಕ್ಕಿನಲ್ಲಿ ಹುಟ್ಟು ಹಾಕುತ್ತಿದ್ದದ್ದೇ ಅದಕ್ಕೆ ಕಾರಣ.


    ಇದನ್ನೂ ಓದಿ: Healthy Habits: ತೂಕ ಇಳಿಸಿಕೊಂಡು, ಹಣ್ಣು - ತರಕಾರಿ ಹೆಚ್ಚು ತಿಂದ್ರೆ ಬಹುಮಾನ ಕೊಡಲಿದೆ ಬ್ರಿಟನ್, ಆರೋಗ್ಯವಂತರಿಗೆ ಸನ್ಮಾನ!

    “ಓ . .. ಶೇಖ್ ಸಾಹೇಬರೇ ಏನು ಮಾಡುತ್ತಿದ್ದೀರಿ, ನಿಮ್ಮನ್ನು ನೀವು ಎಲ್ಲಿ ಸಿಕ್ಕಿಹಾಕಿಸಿಕೊಂಡಿದ್ದೀರಿ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದರೆ, “ಆಂತರಿಕ ಸಚಿವ ಸ್ವತಂತ್ರ ಕಾಶ್ಮೀರದ ಮಾರ್ಗದಲ್ಲಿದ್ದಾರೆ” ಎಂದು ಇನ್ನೊಬ್ಬರು ಬರೆದಿದ್ದಾರೆ.
    “ಶೇಖ್ ಸಾಹೇಬರು ಕೇವಲ ಹುಟ್ಟು ಹಾಕುತ್ತಿದ್ದಾರೆ, ದೋಣಿ ಅಲ್ಲಾಡುತ್ತಿಲ್ಲ” ಎಂದು ಒಂದು ಟ್ವಿಟ್ಟರ್ ಬಳಕೆದಾರ ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಬ್ಬರು “ಪಾಕಿಸ್ತಾನಿ ನಾವಿಕ ಅಲಿಯಾಸ್ ಶೇಖ್ ರಶೀದ್ ದೋಣಿ ಚಲಾಯಿಸುವುದರಲ್ಲಿ ಚಿನ್ನದ ಪದಕ ಪಡೆಯಲಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. “ಶೇಖ್ ರಶೀದ್ ನಟನೆಯಲ್ಲಿ, ಕಾಸ್ಟ್ ಅವೇಯ ಮತ್ತೊಂದು ಭಾಗ” ಎಂದು ಇನ್ನೊಬ್ಬರು ಬರೆದಿದ್ದಾರೆ.


    ಪಾಕಿಸ್ತಾನದ ಮಂತ್ರಿಗಳ ಹಾಸ್ಯಾಸ್ಪದ ಸಂಗತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಜೂನ್‍ನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೇಹಮೂದ್ ಖುರೇಶಿ, 50 ನಿಮಿಷಗಳ ಸುದೀರ್ಘ ಸಂದರ್ಶನವೊಂದರಲ್ಲಿ ತಾಲೀಬಾನಿಗಳನ್ನು ಸಮರ್ಥಿಸಿಕೊಳ್ಳುವ ವಿವಾದಾತ್ಮಕ ವಿಡಿಯೋವೊಂದು ವೈರಲ್ ಆಗಿತ್ತು. ಆ ಸಂದರ್ಶನದಲ್ಲಿ, ಮತ್ತೊಂದು ವಿಷಯವನ್ನು ಕೂಡ ನೆಟ್ಟಿಗರು ಗಮನಿಸಿದ್ದರು, ಅದೇನೆಂದರೆ, ಪ್ರತೀ ಬಾರಿ ಉತ್ತರಿಸುವಾಗಲೂ ಕೊಂಚ ಸುಮ್ಮನಾಗುವುದು, ವಾಕ್ಯಗಳ ಮಧ್ಯೆ ಸ್ಥಬ್ಧರಾದಂತೆ ಮೌನವಾಗುವುದು, ಪ್ರತೀ ಉತ್ತರಕ್ಕೆ ಮುನ್ನ 9 ಸೆಕೆಂಡುಗಳ ವಿರಾಮ ತೆಗೆದುಕೊಳ್ಳುವುದು.




    ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಕೂಡ ಕೆಲವು ತಿಂಗಳುಗಳ ಹಿಂದೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ , ತಮ್ಮ ಹೇಳಿಕೆಯ ಮೂಲಕ ಅಪಹಾಸ್ಯಕ್ಕೆ ಒಳಗಾಗಿದ್ದರು.
    Published by:Soumya KN
    First published: