Pakistan: 8 ವರ್ಷದ ಹಿಂದೂ ಬಾಲಕಿಯ ರೇಪ್, ವಿರೋಧಿಸಿದ್ದಕ್ಕೆ ಕಣ್ಣನ್ನೇ ಕಿತ್ತಾಕಿದ್ರು: ಮೈ ನಡುಗಿಸುತ್ತೆ ಫೋಟೋ!

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಅಪರಾಧಗಳು ನಿಲ್ಲುತ್ತಿಲ್ಲ. ಭಾನುವಾರ ಸಿಂಧ್ ಪ್ರಾಂತ್ಯದ ಉಮರ್‌ಕೋಟ್ ಪ್ರದೇಶದಲ್ಲಿ ಎಂಟು ವರ್ಷದ ಹಿಂದೂ ಬಾಲಕಿಯ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಆಕೆಯ ಕಣ್ಣುಗಳನ್ನು ಕಿತ್ತು ಕ್ರೌರ್ಯ ಮೆರೆಯಲಾಗಿದೆ. ಅಲ್ಲದೇ ಶಂಕಿತರು ಸಂತ್ರಸ್ತೆಯ ಮುಖವನ್ನೂ ವಿರೂಪಗೊಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಸ್ಲಮಾಬಾದ್(ಆ.31): ಪಾಕಿಸ್ತಾನದಲ್ಲಿ (Pakistan) ಅಲ್ಪಸಂಖ್ಯಾತರ (Minorities) ವಿರುದ್ಧ ಸಂಭವಿಸುತ್ತಿರುವ ಅಪರಾಧಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಭಾನುವಾರ ಸಿಂಧ್ ಪ್ರಾಂತ್ಯದ ಉಮರ್‌ಕೋಟ್ ಪ್ರದೇಶದಲ್ಲಿ ಎಂಟು ವರ್ಷದ ಹಿಂದೂ ಬಾಲಕಿಯ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ (Gang Rape) ನಡೆಸಲಾಗಿದ್ದು, ಆಕೆಯ ಕಣ್ಣುಗಳನ್ನು ಕಿತ್ತು ಕ್ರೌರ್ಯ ಮೆರೆಯಲಾಗಿದೆ. ಅಲ್ಲದೇ ಶಂಕಿತರು ಸಂತ್ರಸ್ತೆಯ ಮುಖವನ್ನೂ ವಿರೂಪಗೊಳಿಸಿದ್ದಾರೆ. ಹೌದು ಪಾಕಿಸ್ತಾನದ ಹಿಂದೂ ಹಕ್ಕುಗಳ ಕಾರ್ಯಕರ್ತರೊಬ್ಬರು ವಿಡಿಯೋ ಕ್ಲಿಪ್ ಅನ್ನು ಟ್ವೀಟ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕ್ಲಿಪ್‌ನಲ್ಲಿ, ಸಂತ್ರಸ್ತೆಯನ್ನು ಆಕೆಯ ಪೋಷಕರು ಸ್ಟ್ರೆಚರ್‌ನಲ್ಲಿ ಆಸ್ಪತ್ರೆಯ ಆವರಣದೊಳಗೆ ಹೊತ್ತೊಯ್ಯುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಮಹಿಳೆಯೊಬ್ಬರು ಸಂತ್ರಸ್ತ ಕುಟುಂಬದೊಂದಿಗೆ ಆಸ್ಪತ್ರೆಗೆ ಹೋಗುತ್ತಿರುವುದನ್ನು ಕಾಣಬಹುದು.

    ಇದನ್ನೂ ಓದಿ: Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು

    ಸಂತ್ರಸ್ತೆಯ ರಕ್ತಸ್ರಾವ ನಿಂತಿಲ್ಲ, ಇದರಿಂದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಹಿಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಸಂತ್ರಸ್ತೆಯ ಜನನಾಂಗಗಳಿಂದ ತೀವ್ರ ರಕ್ತಸ್ರಾವವಾಗುತ್ತಿರುವುದರಿಂದ, ಸ್ಥಳೀಯ ತುರ್ತು ಆಸ್ಪತ್ರೆಯ ವೈದ್ಯರು ಅವಳನ್ನು BIDS ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ ಸ್ತ್ರೀರೋಗತಜ್ಞರು ಆಕೆಯ ಪರಿಶೀಲನೆ ನಡೆಸುತ್ತಿದ್ದಾರೆ" ಸಂತ್ರಸ್ತೆಗೆ ಆ್ಯಂಟಿಬಯೋಟಿಕ್‌ಗಳ ಅವಶ್ಯಕತೆಯಿದೆ ಎಂದು ಸಂತ್ರಸ್ತೆಯ ಜೊತೆಗಿದ್ದ ಮಹಿಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.


    "ಅತ್ಯಾಚಾರಿಗಳು ಅಕ್ಷರಶಃ ಅವಳ ಸಂಪೂರ್ಣ ಮುಖವನ್ನು ವಿರೂಪಗೊಳಿಸಿದ್ದಾರೆ. ಅಲ್ಲದೇ ಅವಳ ಕಣ್ಣುಗಳನ್ನು ಕಿತ್ತು ಕ್ರೌರ್ಯ ಮೆರೆದಿದ್ದಾರೆ. ಆಕೆಯನ್ನು ನೋಡಿದವರು ಒಂದು ಬಾರಿ ಭಯದಿಂದ ನಡುಗುತ್ತಾರೆ ಎಂದು ಮಹಿಳೆ ಬರೆದಿದ್ದಾರೆ. ಪಾಕಿಸ್ತಾನದಲ್ಲಿ ಬಡವರಿಗೆ ಜಾಗವಿಲ್ಲ ಎಂದ ಮಹಿಳೆ ಈ ಹುಡುಗಿಯ ಸ್ಥಿತಿ ಹೇಗಿದೆ ಎಂದು ನೀವೇ ನೋಡಬಹುದು. ಇಂತಹ ಪ್ರಕರಣ ಇಲ್ಲಿ ನಡೆಯುತ್ತಿರುವುದರು ಇದೇ ಮೊದಲಲ್ಲ, ಪ್ರತಿದಿನ ಇಂತಹ ಸಾವಿರಾರು ಘಟನೆಗಳು ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾದರೆ ಸಂತ್ರಸ್ತರು ಎಲ್ಲಿಗೆ ಹೋಗುವುದು? ಸರಕಾರ ಜವಾಬ್ದಾರಿಯುತ ಹೆಜ್ಜೆ ಇರಿಸಬೇಕು ಎಂದಿದ್ದಾರೆ.

    ಇದನ್ನೂ ಓದಿ: Mysore: ಮೈಸೂರಿನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಮೇಲೆ ಅತ್ಯಾಚಾರಕ್ಕೆ ಯತ್ನ!

    ಹಿಂದೂ ಹಕ್ಕುಗಳ ಕಾರ್ಯಕರ್ತರೊಬ್ಬರು ಪೋಸ್ಟ್ ಮಾಡಿದ ಮತ್ತೊಂದು ವೀಡಿಯೊ ಕ್ಲಿಪ್‌ನಲ್ಲಿ, ಸಂತ್ರಸ್ತೆ ತಾಯಿ ಸುದ್ದಿ ಮಾಧ್ಯಮದ ಜೊತೆ ಮಾತನಾಡುತ್ತಾ, ಸಂತ್ರಸ್ತ ಬಾಲಕಿ ಸ್ಥಳೀಯ ಅಂಗಡಿಗೆ ಹೋಗಿದ್ದು. ಹಿಂತಿರುಗಿ ಬಂದಿರಲಿಲ್ಲ ಎಂದು ಮಗಳ ಬಗ್ಗೆ ಮಾಹಿತ ನೀಡಿದ್ದಾರೆ.


    ಸ್ಥಳೀಯ ವರದಿಗಳ ಪ್ರಕಾರ, ಉಮರ್ಕೋಟ್ ಪೊಲೀಸರು ಸಂತ್ರಸ್ತೆ ನಾಪತ್ತೆಯಾದ ಕೆಲವೇ ತಾಸಿನಲ್ಲಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ಆಕೆಯನ್ನು ಸ್ಥಳೀಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ, ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆನ್ನಲಾಗಿದೆ.
    Published by:Precilla Olivia Dias
    First published: