Pakistan Hindus: ಪಾಕಿಸ್ತಾನದಲ್ಲಿರುವ ಹಿಂದೂಗಳ ಸಂಖ್ಯೆಯೆಷ್ಟು? ಹಿಂದೂ ದೇಗುಲಗಳೆಷ್ಟು?

ಪಾಕಿಸ್ತಾನದಲ್ಲಿ ಪದೇ ಪದೇ ಹಿಂದೂ ದೇಗುಲಗಳ ಮೇಲೆ ದಾಳಿ ನಡೆಯುತ್ತಿದೆ. ಹಾಗಾದರೆ ಪಾಕ್​ನಲ್ಲಿ ಎಷ್ಟು ಹಿಂದೂಗಳು ವಾಸಿಸುತ್ತಿದ್ದಾರೆ? ಎಷ್ಟು ಹಿಂದೂ ದೇಗುಲಗಳಿವೆ? ಇಲ್ಲಿದೆ ಮಾಹಿತಿ.

ಧ್ವಂಸಗೊಳಗಾದ ಹಿಂದೂ ದೇವರ ಪ್ರತಿಮೆಗಳು

ಧ್ವಂಸಗೊಳಗಾದ ಹಿಂದೂ ದೇವರ ಪ್ರತಿಮೆಗಳು

 • Share this:
  ಕರಾಚಿ: ಪಾಕಿಸ್ತಾನದ ಕರಾಚಿ ನಗರದಲ್ಲಿನ ಹಿಂದೂ ದೇವಾಲಯದಲ್ಲಿನ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಕರಾಚಿಯ (Karachi) ಕೋರಂಗಿ ಪ್ರದೇಶದಲ್ಲಿರುವ ಶ್ರೀ ಮಾರಿ ಮಾತಾ ಮಂದಿರದಲ್ಲಿರುವ (Shri Mari Maata Mandir) ದೇವರ ವಿಗ್ರಹಗಳ ಮೇಲೆ ಬುಧವಾರ ದಾಳಿ ನಡೆಸಲಾಗಿದೆ. ಈ ದೇವಾಲಯವು ಕೋರಂಗಿ ಪೊಲೀಸ್ ಠಾಣಾ ವ್ಯಾಪ್ತಿಯ "ಜೆ" ಪ್ರದೇಶದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪೂಜಾ ಸ್ಥಳಗಳ ವಿರುದ್ಧ ಧ್ವಂಸಗೊಳಿಸುವಿಕೆ (Hindu Temple Vandalism) ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. ಹೀಗಾಗಿ ಸ್ಥಳೀಯ ಅಲ್ಪಸಂಖ್ಯಾತ ಹಿಂದೂ ಸಮುದಾಯದಲ್ಲಿ ಆತಂಕ ಉಲ್ಬಣಗೊಳ್ಳುತ್ತಿದೆ ಎಂದು ವರದಿಯಾಗಿದೆ. ಹಾಗಿದ್ದರೆ ಪಾಕಿಸ್ತಾನದಲ್ಲಿ ಎಷ್ಟು ಹಿಂದೂಗಳು ವಾಸಿಸುತ್ತಿದ್ದಾರೆ? ಎಷ್ಟು ಹಿಂದೂ ದೇಗುಲಗಳಿವೆ? ಇಲ್ಲಿದೆ ಮಾಹಿತಿ.

  ವಿಧ್ವಂಸದ ಕುರಿತು ಮಾಹಿತಿ ಪಡೆದ ನಂತರ ಪೊಲೀಸರು ದೇವಾಲಯದ ಪ್ರದೇಶವನ್ನು ತಲುಪಿ ದೇವಾಲಯವನ್ನು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಆ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ.

  ಮೋಟಾರ್ ಬೈಕ್​ಗಳಲ್ಲಿ ಬಂದು ದಾಳಿ
  ಆರರಿಂದ ಎಂಟು ವ್ಯಕ್ತಿಗಳು ಮೋಟಾರು ಸೈಕಲ್‌ಗಳಲ್ಲಿ ಬಂದು ದೇವಸ್ಥಾನದ ಮೇಲೆ ದಾಳಿ ಮಾಡಿದ್ದಾರೆ ಎಂದು ಪ್ರದೇಶದ ಹಿಂದೂ ನಿವಾಸಿ ಸಂಜೀವ್ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ಗೆ ತಿಳಿಸಿದ್ದಾರೆ. ಆದರೆ ಆ ವ್ಯಕ್ತಿಗಳು ಯಾರು, ಏಕೆ ದಾಳಿ ಮಾಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

  ಅಪರಿಚಿತ ದಾಳಿಕೋರರ ವಿರುದ್ಧ ಪ್ರಕರಣ ದಾಖಲು
  ಕೊರಂಗಿ ಎಸ್‌ಎಚ್‌ಒ ಫಾರೂಕ್ ಸಂಜರಾಣಿ, "ಐದರಿಂದ ಆರು ಅಪರಿಚಿತ ಶಂಕಿತರು ದೇವಾಲಯಕ್ಕೆ ಪ್ರವೇಶಿಸಿ ಅದನ್ನು ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ" ಎಂದು ಖಚಿತಪಡಿಸಿದ್ದಾರೆ. ಅಪರಿಚಿತ ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಾಕಿಸ್ತಾನದಾದ್ಯಂತ ಹಿಂದೂ ದೇವಾಲಯಗಳನ್ನು ಆಗಾಗ್ಗೆ ಧ್ವಂಸಗೊಳಿಸುವ ಪ್ರಕರಣಗಳು ವರದಿಯಾಗುತ್ತಲೆ ಇವೆ.

  ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳ ಸಂಖ್ಯೆಯೆಷ್ಟು?
  ಪಾಕಿಸ್ತಾನದಲ್ಲಿ ಹಿಂದೂ ಸಮುದಾಯದ ಅಲ್ಪಸಂಖ್ಯಾತ ಸ್ಥಾನ ಹೊಂದಿದ್ದಾರೆ. ಹಿಂದೂ ಸಮುದಾಯ 22,10,566 ಜನರು ಪಾಕಿಸ್ತಾನದಲ್ಲಿ ಅಧಿಕೃತವಾಗಿ ವಾಸವಿದ್ದಾರೆ. ದೇಶದ ಒಟ್ಟು ನೋಂದಾಯಿತ ಜನಸಂಖ್ಯೆ 18,68,90,601 ಆಗಿದೆ. ಆದರೆ ಇದು ಹಿಂದೂ ಜನಸಂಖ್ಯೆಯ ಕೇವಲ 1.18 ಶೇಕಡಾವನ್ನು ಒಳಗೊಂಡಿದೆ. ಈಕುರಿತು ಸೆಂಟರ್ ಫಾರ್ ಪೀಸ್ ಅಂಡ್ ಜಸ್ಟಿಸ್ ಪಾಕಿಸ್ತಾನ ವರದಿ ಮಾಡಿದೆ.

  5 ಶೇಕಡಾಕ್ಕಿಂತ ಕಡಿಮೆ ಅಲ್ಪಸಂಖ್ಯಾತರು
  ರಾಷ್ಟ್ರೀಯ ಡಾಟಾ ಸಂಚಯ ಮತ್ತು ನೋಂದಣಿ ಪ್ರಾಧಿಕಾರದಿಂದ (NADRA) ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಐದು ಶೇಕಡಾಕ್ಕಿಂತ ಕಡಿಮೆ ಇದ್ದಾರೆ. ಅಲ್ಪಸಂಖ್ಯಾತರ ಪೈಕಿ ಹಿಂದೂಗಳು ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ.

  ಮಾರ್ಚ್‌ವರೆಗಿನ ಅಂಕಿಅಂಶಗಳ ಪ್ರಕಾರ ಪಾಕಿಸ್ತಾನದ ಒಟ್ಟು ನೋಂದಾಯಿತ ಜನರ ಸಂಖ್ಯೆ 18,68,90,601 ಆಗಿದ್ದು, ಅವರಲ್ಲಿ 18,25,92,000 ಮುಸ್ಲಿಂ ಸಮುದಾಯದ ಜನಸಂಖ್ಯೆಯಾಗಿದೆ.

  1,400 ನಾಸ್ತಿಕರು ಪಾಕಿಸ್ತಾನದಲ್ಲಿದ್ದಾರೆ
  ಪಾಕಿಸ್ತಾನ ಸರ್ಕಾರದ ಇನ್ನೊಂದು ವರದಿಯ ಪ್ರಕಾರ 1,400 ನಾಸ್ತಿಕರು ಸೇರಿದಂತೆ ವಿವಿಧ ನಂಬಿಕೆಗಳು ಮತ್ತು ಧರ್ಮಗಳ 17 ಗುರುತುಗಳನ್ನು ದೃಢಪಡಿಸಲಾಗಿದೆ. 

  ಪಾಕಿಸ್ತಾನದ ನೋಂದಾಯಿತ ಹಿಂದೂಗಳ ಸಂಖ್ಯೆ 22,10,566, ಕ್ರಿಶ್ಚಿಯನ್ನರು 18,73,348, ಅಹ್ಮದಿಗಳು 1,88,340, ಸಿಖ್ಖರು 74,130, ಭಾಯಿಗಳು 14,537 ಮತ್ತು 3,917 ಪಾರ್ಸಿಗಳು ವಾಸವಿದ್ದಾರೆ ಎಂದು ಪಾಕಿಸ್ತಾನದಲ್ಲಿ ನಡೆದ ಮೂರು ರಾಷ್ಟ್ರೀಯ ಜನಸಂಖ್ಯಾ ಗಣತಿಯನ್ನು ಆಧರಿಸಿ ವರದಿ ಹೇಳಿದೆ.

  ಇತರ 11 ಅಲ್ಪಸಂಖ್ಯಾತ ಸಮುದಾಯಗಳಿವೆ!
  ಪಾಕಿಸ್ತಾನದಲ್ಲಿ 2,000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಇತರ 11 ಅಲ್ಪಸಂಖ್ಯಾತ ಸಮುದಾಯವಿದೆ.  ಬೌದ್ಧರು 1,787, ಚೈನೀಸ್ 1,151, ಶಿಂಟೋಯಿಸಂ ಅನುಯಾಯಿಗಳು 628, ಯಹೂದಿಗಳು 628, ಆಫ್ರಿಕನ್ ಧರ್ಮಗಳ ಅನುಯಾಯಿಗಳು 1,418, ಕೆಲಾಶಾ ಧರ್ಮದ ಅನುಯಾಯಿಗಳು 1,522 ಮತ್ತು ಜೈನ ಧರ್ಮದ ಸುಮಾರು ಆರು ಅನುಯಾಯಿಗಳು ಪಾಕಿಸ್ತಾನದಲ್ಲಿದ್ದಾರೆ.

  ಪಾಕಿಸ್ತಾನ ಹಿಂದೂ ದೇಗುಲಗಳ ಜವಾಬ್ದಾರಿ ಯಾರದ್ದು?
  ಒಂದು ಮಾಹಿತಿಯ ಪ್ರಕಾರ ಪಾಕಿಸ್ತಾನದಲ್ಲಿರುವ 365 ಹಿಂದೂ ದೇವಾಲಯಗಳಲ್ಲಿ, 13 ದೇವಾಲಯಗಳನ್ನು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ನಿರ್ವಹಿಸುತ್ತಿದೆ. ಇನ್ನುಳಿದ 65 ರ ಜವಾಬ್ದಾರಿಯನ್ನು ಹಿಂದೂ ಸಮುದಾಯಗಳು ನೋಡಿಕೊಳ್ಳುತ್ತಿವೆ.

  ಆದರೆ ಆಲ್ ಪಾಕಿಸ್ತಾನ್ ಹಿಂದೂ ರೈಟ್ಸ್ ಮೂವ್ಮೆಂಟ್ ಪಾಕಿಸ್ತಾನ್ ನಡೆಸಿದ ಸಮೀಕ್ಷೆಯಲ್ಲಿ ಪಾಕಿಸ್ತಾನದಲ್ಲಿರುವ 4280 ಹಿಂದೂ ದೇವಾಲಯಗಳಲ್ಲಿ ಸುಮಾರು 8 ಉಳಿದುಕೊಂಡಿವೆ ಎಂದು ಬಹಿರಂಗಪಡಿಸಿದೆ.

  ಪಾಕಿಸ್ತಾನದ ಅತಿ ದೊಡ್ಡ ಹಿಂದೂ ದೇಗುಲ ಯಾವುದು?
  ಶ್ರೀ ಸ್ವಾಮಿನಾರಾಯಣ ಮಂದಿರ, ಕರಾಚಿ ಪಾಕಿಸ್ತಾನದಲ್ಲಿರುವ ಏಕೈಕ ಸ್ವಾಮಿನಾರಾಯಣ ದೇವಾಲಯವಾಗಿರುವ ಹಿಂದೂ ದೇವಾಲಯವಾಗಿದೆ. ಕರಾಚಿ ನಗರದ M. A. ಜಿನ್ನಾ ರಸ್ತೆಯಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರ 32,306 ಚದರ ಗಜಗಳಿಗಿಂತ ಹೆಚ್ಚಿನ ಗಾತ್ರ ಹೊಂದಿದೆ.

  ಈ ಹಿಂದೆಯೂ ನಡೆದ ದೇಗುಲ ಧ್ವಂಸ
  ಕಳೆದ ಅಕ್ಟೋಬರ್‌ನಲ್ಲಿ, ಕೊಟ್ರಿಯ ಸಿಂಧೂ ನದಿಯ ದಡದಲ್ಲಿರುವ ಐತಿಹಾಸಿಕ ದೇವಾಲಯವನ್ನು ಅಪರಿಚಿತ ವ್ಯಕ್ತಿಗಳು ಅಪವಿತ್ರಗೊಳಿಸಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿತ್ತು.

  ಇದನ್ನೂ ಓದಿ:  Presidential Election: ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮುಹೂರ್ತ, ಯಾರಾಗ್ತಾರೆ ಭಾರತದ ಮುಂದಿನ ಪ್ರಥಮ ಪ್ರಜೆ?

  ಆಗಸ್ಟ್‌ನಲ್ಲಿ ಸ್ಥಳೀಯ ಸೆಮಿನರಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಎಂಟು ವರ್ಷದ ಹಿಂದೂ ಹುಡುಗನಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿತ್ತು. ಆ ನಂತರ ಡಜನ್‌ಗಟ್ಟಲೆ ಜನರು ಭೋಂಗ್ ಪಟ್ಟಣದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದರು. ಅಲ್ಲದೇ ಸುಕ್ಕೂರ್-ಮುಲ್ತಾನ್ ವಾಹನ ಮಾರ್ಗವನ್ನು ತಡೆದಿದ್ದರು ಎಂದು ವರದಿಯಾಗಿತ್ತು.

  ಇದನ್ನೂ ಓದಿ: Sologamy: ತನ್ನನ್ನು ತಾನೇ ಮದುವೆಯಾದ ಗುಜರಾತ್ ಯುವತಿ! ಇಲ್ನೋಡಿ ಫೋಟೋಸ್

  ನ್ಯಾಯಾಲಯದ ತೀರ್ಪಿನ ನಂತರ, ಯುವಕರ ಗುಂಪೊಂದು ಜಮಾಯಿಸಿ ಪಟ್ಟಣದ ಶ್ರೀ ಗಣೇಶ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿತ್ತು ಎಂದು ಹೇಳಲಾಗಿತ್ತು.
  Published by:guruganesh bhat
  First published: