HOME » NEWS » National-international » PAKISTAN HAS TO CURB TERRORISM OR PAY A PENALTY DONALD TRUMP MAK

Donald Trump India Visit: ಪಾಕಿಸ್ತಾನ ಭಯೋತ್ಪಾದನೆಯನ್ನು ಹತ್ತಿಕ್ಕಲೇಬೇಕು ಇಲ್ಲದಿದ್ದರೆ ತಕ್ಕ ದಂಡ ತೆರಬೇಕಾಗುತ್ತದೆ; ಡೊನಾಲ್ಡ್ ಟ್ರಂಪ್

ಅಮೆರಿಕ ಭಾರತದ ಜೊತೆಗೆ 3 ಬಿಲಿಯನ್ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲಿದೆ. ಈ ಒಪ್ಪಂದದಂತೆ ಯುದ್ಧ ವಿಮಾನ, ಸಬ್​ಮೆರಿನ್ ಸೇರಿದಂತೆ ನಮ್ಮ ದೇಶದಲ್ಲಿ ಯಾವುದೇ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳನ್ನು ಸಿದ್ಧಪಡಿಸಿದರೂ ನಾವು ಅದನ್ನು ಭಾರತಕ್ಕೆ ನೀಡಲಿದ್ದೇವೆ. ಈ ಮೂಲಕ ಭಾರತ ಏಷ್ಯಾದಲ್ಲಿ ಪ್ರಬಲ ಮಿಲಿಟರಿ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಲಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. 

MAshok Kumar | news18-kannada
Updated:February 24, 2020, 4:16 PM IST
Donald Trump India Visit: ಪಾಕಿಸ್ತಾನ ಭಯೋತ್ಪಾದನೆಯನ್ನು ಹತ್ತಿಕ್ಕಲೇಬೇಕು ಇಲ್ಲದಿದ್ದರೆ ತಕ್ಕ ದಂಡ ತೆರಬೇಕಾಗುತ್ತದೆ; ಡೊನಾಲ್ಡ್ ಟ್ರಂಪ್
ಟ್ರಂಪ್​-ಮೋದಿ
  • Share this:
ಅಹಮದಾಬಾದ್ (ಫೆಬ್ರವರಿ 24); ಭಯೋತ್ಪಾದನೆಯ ತವರು ಮನೆಯಂತಾಗಿರುವ ಪಾಕಿಸ್ತಾನ ಇನ್ನಾದರೂ ಸರಿಯಾಗಬೇಕು, ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತುಹಾಕಬೇಕು. ಇಲ್ಲದಿದ್ದರೆ ಆ ದೇಶ ಇದಕ್ಕೆ ತಕ್ಕ ಫಲ ಅನುಭವಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕಟು ಎಚ್ಚರಿಕೆ ನೀಡಿದ್ದಾರೆ.

  ಗುಜರಾತ್​ನಲ್ಲಿ ಏರ್ಪಡಿಸಲಾಗಿದ್ದ ಮೋದಿ-ಟ್ರಂಪ್ ರೋಡ್ ಶೋ ಮತ್ತು ಮಹಾತ್ಮಾ ಗಾಂಧಿ ಅವರ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ನಂತರ ಮೊಟೆರಾ ಕ್ರೀಡಾಂಗಣದಲ್ಲಿ ಆಯೋಜಿಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, “ಸಿರಿಯಾದಿಂದ ಭಾರತದವರೆಗೆ ಎಲ್ಲೆಡೆ ತಮ್ಮ ಕಬಂಧಬಾಹುಗಳನ್ನು ಚಾಚಿರುವ ಮುಸ್ಲಿಂ ಭಯೋತ್ಪಾದನೆಯನ್ನು ಅಮೆರಿಕ ಸಹಿಸುವುದಿಲ್ಲ. ಹೀಗಾಗಿ ಭಯೋತ್ಪಾದನೆಯನ್ನು ತೊಡೆದುಹಾಕಿ ವಿಶ್ವದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಲು ಅಮೆರಿಕ ಭಾರತದ ಜೊತೆಗೆ ಕೈಜೋಡಿಸಿ ಕೆಲಸ ಮಾಡಲಿದೆ.

ಇನ್ನೂ ಪಾಕಿಸ್ತಾನ ಭಯೋತ್ಪಾದಕರ ತವರು ಮನೆಯಂತಾಗಿದೆ ಇಡೀ ವಿಶ್ವದ ಎದುರು ಬೃಹತ್​ ಬೆದರಿಕೆಯನ್ನು ಇಟ್ಟಿದೆ. ಹೀಗಾಗಿ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸಲು ಈ ಭಯೋತ್ಪಾದನೆಯನ್ನು ಪಾಕಿಸ್ತಾನ ಮಟ್ಟಹಾಕಲೇಬೇಕಿದೆ. ಈ ಕುರಿತು ನಾನು ಸ್ವತಃ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ಮಾತನಾಡಿದ್ದೇನೆ. ಈ ನಿಟ್ಟಿನಲ್ಲಿ ಅಮೆರಿಕ ಸರ್ಕಾರ ಕೆಲಸ ನಿರ್ವಹಿಸುತ್ತಿದೆ. ಒಂದು ವೇಳೆ ಪಾಕಿಸ್ತಾನ ತಕ್ಕ ಕ್ರಮ ತೆಗೆದುಕೊಳ್ಳದಿದ್ದರೆ, ಆ ದೇಶ ಇದಕ್ಕೆ ತಕ್ಕ ಫಲ ಅನುಭವಿಸಬೇಕಾಗುತ್ತದೆ” ಎಂದು ಡೊನಾಲ್ಡ್​ ಟ್ರಂಪ್ ಪಾಕಿಸ್ತಾನವನ್ನು ಎಚ್ಚರಿಸಿದ್ಧಾರೆ.

ಭಾರತ ಅಮೆರಿಕ ಸಂಬಂಧದ ಬಗ್ಗೆ ಮಾತನಾಡಿದ ಅವರು, “ಅಮೆರಿಕ ಭಾರತದ ಜೊತೆಗೆ 3 ಬಿಲಿಯನ್ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲಿದೆ. ಈ ಒಪ್ಪಂದದಂತೆ ಯುದ್ಧ ವಿಮಾನ, ಸಬ್​ಮೆರಿನ್ ಸೇರಿದಂತೆ ನಮ್ಮ ದೇಶದಲ್ಲಿ ಯಾವುದೇ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳನ್ನು ಸಿದ್ಧಪಡಿಸಿದರೂ ನಾವು ಅದನ್ನು ಭಾರತಕ್ಕೆ ನೀಡಲಿದ್ದೇವೆ. ಈ ಮೂಲಕ ಭಾರತ ಏಷ್ಯಾದಲ್ಲಿ ಪ್ರಬಲ ಮಿಲಿಟರಿ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಉಬಯ ದೇಶಗಳ ನಡುವಿನ ವ್ಯಾಪಾರ ಸಂಬಂಧದ ಬಗ್ಗೆ ಮಾತನಾಡಿರುವ ಅವರು, “ಭಾರತದ ರಫ್ತಿಗೆ ಅಮೆರಿಕ ವಿಶ್ವದ ಅತಿದೊಡ್ಡ ಮಾರುಕಟ್ಟೆ. ಭಾರತದ ಸಾವಿರಾರು ವಸ್ತುಗಳಿಗೆ ನಾವು ಅಮೆರಿಕದಲ್ಲಿ ಉತ್ತಮ ಮಾರುಕಟ್ಟೆ ನಿರ್ಮಿಸಿಕೊಟ್ಟಿದ್ದೇವೆ. ಅಮೆರಿಕದ ವಸ್ತುಗಳಿಗೆ ಭಾರತದಲ್ಲಿ ಭಾರೀ ಬೆಡಿಕೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಉಬಯ ದೇಶಗಳ ಮಾರುಕಟ್ಟೆ ಮತ್ತಷ್ಟು ವಿಸ್ತರಣೆಯಾಗಲಿದೆ. ಈ ಮೂಲಕ ಎರಡೂ ದೇಶಕ್ಕೆ ಲಾಭವಾಗಲಿದೆ” ಎಂದಿದ್ದಾರೆ.

ಭಾರತದ ಆತಿಥ್ಯವನ್ನೂ ಕೊಂಡಾಡಿರುವ ಟ್ರಂಪ್, "ಐದು ತಿಂಗಳ ಹಿಂದೆ ಅಮೆರಿಕದ ಟೆಕ್ಸಾಸ್​ನಲ್ಲಿರುವ ದೈತ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದಂತೆ ಅಹಮದಾಬಾದ್​ನ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೋದಿ ನಮ್ಮನ್ನು ಸ್ವಾಗತಿಸಿದ್ದಾರೆ.

ಭಾರತದ ಈ ಗಮನಾರ್ಹ ಆತಿಥ್ಯವನ್ನು ನಾನು ಸದಾಕಾಲ ನೆನೆಸಿಕೊಳ್ಳುತ್ತೇನೆ. ಅಲ್ಲದೆ, ಭಾರತಕ್ಕೆ ಅಮೆರಿಕನ್ನರು ತಮ್ಮ ಹೃದಯದಲ್ಲಿ ವಿಶೇಷ ಸ್ಥಾನಮಾನವನ್ನು ನೀಡಿದ್ದು, ನಾವು ಎಂದಿಗೂ ಈ ದೇಶದ ನಿಷ್ಠಾವಂತ ಸ್ನೇಹಿತನಾಗಿ ಇರಲು ಬಯಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.ಇದನ್ನೂ ಓದಿ : ಅಮೆರಿಕದ ಹೂಡಿಕೆಗೆ ಭಾರತ ಉತ್ತಮ ಸ್ಥಳ ಮತ್ತು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ; ನರೇಂದ್ರ ಮೋದಿ
First published: February 24, 2020, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories