Pakistan: ಹಿಂದೂ ದೇವಾಲಯ ಪುನರ್​ ಸ್ಥಾಪಿಸಲು ಮುಂದಾದ ನೆರೆಯ ಪಾಕಿಸ್ತಾನ!

ಇತ್ತೀಚೆಗೆ ಒಂದು ಕುಟುಂಬ ಪಾಕಿಸ್ತಾನದ ಲಾಹೋರ್ ನಗರದಲ್ಲಿ 1200 ವರ್ಷಗಳ ಪುರಾತನ ಹಿಂದೂ ದೇವಾಲಯವೊಂದನ್ನು ಅಕ್ರಮವಾಗಿ ಅತಿಕ್ರಮಣಪಡಿಸಿಕೊಂಡು ವಾಸಿಸಲು ಪ್ರಾರಂಭಿಸಿತ್ತು. ಈಗ ಅದನ್ನು ಮತ್ತೆ ನಿರ್ಮಿಸಲು ಪಾಕ್​ ನಿರ್ಧರಿಸಿದೆ.

ಪಾಕಿಸ್ತಾನದ ಪುರಾತನ ಹಿಂದೂ ದೇವಾಲಯ

ಪಾಕಿಸ್ತಾನದ ಪುರಾತನ ಹಿಂದೂ ದೇವಾಲಯ

  • Share this:
ದೇಶ (Country) ವಿಭಜನೆಯಾದ ನಂತರ ರೂಪುಗೊಂಡ ಪಾಕಿಸ್ತಾನದಲ್ಲಿ (Pakistan) ಹಲವು ಹಿಂದೂಗಳು ಅಲ್ಲಿಯೇ ನೆಲೆಸಿದರು ಹಾಗೂ ಅವರು ಅಲ್ಪಸಂಖ್ಯಾತರಾಗಿ (Minority) ಗುರುತಿಸಿಕೊಂಡರು. ಆ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂ ದೇವಾಲಯಗಳಿದ್ದದ್ದು (Hindu Temples) ಸುಳ್ಳಲ್ಲ. ಆದರೆ ಬರಬರುತ್ತ ಕ್ರಮೇಣವಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದ ಹಿಂದೂಗಳ (Hindus) ಸ್ಥಿತಿ ದುಸ್ತರವಾಗುತ್ತ ಸಾಗಿತು ಹಾಗೂ ಹಲವಾರು ಹಿಂದೂ ದೇವಾಲಯಗಳನ್ನು ಅಲ್ಲಿ ಧ್ವಂಸಗೊಳಿಸಲಾಯಿತು. ಇಂದಿಗೂ ಅಲ್ಲಿ ನೆಲೆಸಿರುವ ಹಿಂದೂಗಳು ಸಾಕಷ್ಟು ಕಷ್ಟಕರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆಂದರೆ ತಪ್ಪಾಗಲಾರದು. ಇಂತಹ ಹೊತ್ತಲ್ಲೇ ಪಾಕಿಸ್ತಾನ ಆಶ್ಚರ್ಯಕರ ನಿರ್ಧಾರವೊಂದು ತೆಗೆದುಕೊಂಡಿದೆ.

ಇತ್ತೀಚೆಗೆ ಒಂದು ಕುಟುಂಬ ಪಾಕಿಸ್ತಾನದ ಲಾಹೋರ್ ನಗರದಲ್ಲಿ 1200 ವರ್ಷಗಳ ಪುರಾತನ ಹಿಂದೂ ದೇವಾಲಯವೊಂದನ್ನು ಅಕ್ರಮವಾಗಿ ಅತಿಕ್ರಮಣಪಡಿಸಿಕೊಂಡು ವಾಸಿಸಲು ಪ್ರಾರಂಭಿಸಿತ್ತು.

ಪುರಾತನ ದೇವಸ್ಥಾನ ಪುನರ್ ಸ್ಥಾಪನೆ!

ಸದ್ಯ ಆ ದೇಶದಲ್ಲಿ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲ್ವಿಚಾರಣೆ ನಡೆಸುತ್ತಿರುವ ಅಲ್ಲಿನ ಪ್ರಾಧಿಕಾರವು ಈಗ ನ್ಯಾಯಾಲಯದಲ್ಲಿ ಈ ಬಗ್ಗೆ ಹೋರಾಡಿ ಅಲ್ಲಿರುವ ಅಕ್ರಮವಾಸಿಗರನ್ನು ತೆರವುಗೊಳಿಸಿದ ನಂತರ ಮತ್ತೆ ಆ ಪುರಾತನ ದೇವಸ್ಥಾನವನ್ನು ಪುನರ್ ಸ್ಥಾಪಿಸುವುದಾಗಿ ಪಾಕಿಸ್ತಾನ ಹೇಳಿದೆ ಎಂದು ವರದಿಯಾಗಿದೆ.

ಲಾಹೋರ್​ನಲ್ಲಿರುವ ದೇವಾಲಯಗಳು
ಪಾಕಿಸ್ತಾನದ ಇವ್ಯಾಕ್ಯೂವಿ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಪ್ರಾಧಿಕಾರವು ಈಗಾಗಲೇ ಲಾಹೋರ್ ನಗರದ ಪ್ರಸಿದ್ಧ ಅನಾರ್ಕಲಿ ಬಜಾರ್ ಬಳಿ ಸ್ಥಾಪಿತವಿರುವ ಪುರಾತನ ವಾಲ್ಮಿಕಿ ದೇವಸ್ಥಾನವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ.

ಈ ಸ್ಥಳದಲ್ಲಿ ಕ್ರೈಸ್ತ ಕುಟುಂಬವೊಂದು ವಾಸಿಸುತ್ತಿದ್ದು ಆ ಕುಟುಂಬವು ತಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದೆ. 2 ದಶಕಗಳಿಂದ ಈ ಕುಟುಂಬವು ಹಿಂದೂ ವಾಲ್ಮಿಕಿ ಸಮುದಾಯದವರಿಗೆ ಮಾತ್ರವೇ ಆಚರಣೆಗಳನ್ನು ಆಚರಿಸಲು ಅನುಮತಿಸುತ್ತಿದೆ. ಸದ್ಯ, ಲಾಹೋರ್ ನಗರದಲ್ಲಿ ಕೃಷ್ಣನ ದೇವಸ್ಥಾನ ಹೊರತುಪಡಿಸಿದರೆ ವಾಲ್ಮಿಕಿ ದೇವಾಲಯ ಮಾತ್ರವೇ ಕಾರ್ಯಾಚರಣೆಯಲ್ಲಿದೆ.

ಈ ಸಂದರ್ಭದಲ್ಲಿ ಪಿಟಿಐನೊಂದಿಗೆ ಮಾತನಾಡಿರುವ ಇಟಿಪಿಬಿಯ ವಕ್ತಾರ ಅಮೀರ್ ಹಷ್ಮಿ ಅವರು, ಮುಂಬರುವ ದಿನಗಳಲ್ಲಿ ಈಗಾಗಲೇ ರೂಪಿಸಲಾಗಿರುವ 'ಮಾಸ್ಟರ್ ಪ್ಲ್ಯಾನ್' ಅಡಿಯಲ್ಲಿ ವಾಲ್ಮಿಕಿ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:  Parent Dressing: ಮಕ್ಕಳನ್ನು ಸ್ಕೂಲಿಗೆ ಬಿಡೋಕೆ ಹೋಗುವಾಗ ಪೋಷಕರು ಈ ಬಟ್ಟೆಗಳನ್ನು ಧರಿಸುವಂತಿಲ್ಲ!

ದೇವಾಲಯವನ್ನು ಅತಿಕ್ರಮಣ ಮಾಡಿದ್ದಾದರೂ ಯಾವಾಗ?
ಈ ಮುಂಚೆ ಇಲ್ಲಿ ನೆಲೆಸಿದ್ದ ಕ್ರೈಸ್ತ ಕುಟುಂಬ 20ಕ್ಕೂ ಹೆಚ್ಚು ವರ್ಷಗಳ ಹಿಂದೆ ಈ ದೇವಾಲಯವನ್ನು ಅತಿಕ್ರಮಣ ಮಾಡಿಕೊಂಡಿದ್ದರು ಎನ್ನಲಾಗಿದೆ. ರೆವೆನ್ಯೂ ದಾಖಲೆಯಲ್ಲಿ ಈಗಾಗಲೇ ದೇವಾಲಯದ ಭೂಮಿಯನ್ನು ಇಟಿಪಿಬಿಯ ಸುಪರ್ದಿಗೆ ವರ್ಗಾಯಿಸಲಾಗಿದೆ ಹಾಗೂ 2010-11 ರಲ್ಲಿ ಇದು ತಮ್ಮದೆಂದು ಕ್ಲೈಮ್ ಮಾಡಿರುವ ಕ್ರೈಸ್ತ ಕುಟುಂಬವು ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಹೂಡಿದ್ದಾಗಿ ಹೇಳಿದರು.

ಈ ಕುಟುಂಬವು ಕೇವಲ ಹಿಂದೂ ವಾಲ್ಮಿಕಿ ಸಮುದಾಯದವರಿಗೆ ಮಾತ್ರ ಪ್ರವೇಶಿಸಲು ಅನುಮತಿಸುತ್ತಿದ್ದರು. ಅವರ ಈ ನಡೆಯಿಂದಾಗಿ ನಾವು ಟ್ರಸ್ಟ್ ಮೂಲಕ ನ್ಯಾಯಾಲಯದಲ್ಲಿ ಈ ಬಗ್ಗೆ ಹೋರಾಡುವಂತಾಗಿದೆ. ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಾವೇದಾರರಿಗೆ ಈ ಬಾರಿ ನ್ಯಾಯಾಲಯವು ಛೀಮಾರಿ ಹಾಕಿದೆ.

ವಾಲ್ಮಿಕಿ ದೇವಾಲಯದ ಮೇಲೆ ಆಕ್ರಮಣ 
1992 ರಲ್ಲಿ ಭಾರತದಲ್ಲಿ ಬಾಬ್ರಿ ಮಸೀದಿಯ ಧ್ವಂಸದ ಪರಿಣಾಮದಿಂದಾಗಿ ಕೋಪೋದ್ರಿಕ್ತ ಪ್ರತಿಭಟನಾಕಾರರ ಗುಂಪೊಂದು ಈ ವಾಲ್ಮಿಕಿ ದೇವಾಲಯದ ಮೇಲೆ ಆಕ್ರಮಣ ಮಾಡಿ ಇಲ್ಲಿನ ಮೂರ್ತಿಗಳನ್ನು ಹಾಗೂ ದೇವಸ್ಥಾನದ ಇತರೆ ವಸ್ತುಗಳನ್ನು ಧ್ವಂಸಗೊಳಿಸಿದ್ದರು. ಮೂರ್ತಿಗಳ ಮೇಲೆ ಹಾಕಲಾಗಿದ್ದ ಬಂಗಾರದ ಆಭರಣಗಳನ್ನು ಲೂಟಿ ಹೊಡೆದಿದ್ದರು.

ಇದನ್ನೂ ಓದಿ: Online Quiz: ರಾಮಾಯಣ ಕ್ವಿಝ್​ನಲ್ಲಿ ಮುಸ್ಲಿಂ ಯುವಕರೇ ಟಾಪರ್ಸ್!

ಪ್ರಸ್ತುತ ಇಟಿಪಿಬಿಯು ವಿಭಜನೆಯ ನಂತರ ಹಿಂದೂಗಳು ಹಾಗೂ ಸಿಖ್ಖರು ಇಲ್ಲಿ ಬಿಟ್ಟು ಹೋಗಿರುವ ಭೂಮಿಗಳ ನಿರ್ವಹಣೆ ಮಾಡುತ್ತದೆ. ಸದ್ಯ ಈ ಪ್ರಾಧಿಕಾರವು ಪಾಕಿಸ್ತಾನದಾದ್ಯಂತ 200 ಗುರುದ್ವಾರಾಗಳು ಹಾಗೂ 150 ದೇವಾಲಯಗಳನ್ನು ನೋಡಿಕೊಳ್ಳುತ್ತಿದೆ.
Published by:Ashwini Prabhu
First published: