ತೀರ್ಪು ನೀಡುವವರೆಗೂ ‘ಕುಲಭೂಷಣ್ ಜಾಧವ್​​’ರನ್ನು ಗಲ್ಲಿಗೇರಿಸುವಂತಿಲ್ಲ; ಅಂತರಾಷ್ಟ್ರೀಯ ನ್ಯಾಯಲಯ ಆದೇಶ!

ಪಾಕ್​​ ತೀರ್ಪನ್ನು ವಿರೋಧಿಸಿ ಭಾರತ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಯಿತು. ಇದೀಗ ಭಾರತ ಸರ್ಕಾರ ಮನವಿ ಮೇರೆಗೆ ಕುಲಭೂಷಣ್ ಜಾಧವ್ ಅವರ ಪ್ರಕರಣದ ವಿಚಾರಣೆಯನ್ನು ಅಂತಾರಾಷ್ಟ್ರೀಯ ಕೋರ್ಟ್ ಕೈಗೆತ್ತಿಕೊಂಡಿದೆ.

Ganesh Nachikethu | news18
Updated:February 18, 2019, 7:14 PM IST
ತೀರ್ಪು ನೀಡುವವರೆಗೂ ‘ಕುಲಭೂಷಣ್ ಜಾಧವ್​​’ರನ್ನು ಗಲ್ಲಿಗೇರಿಸುವಂತಿಲ್ಲ; ಅಂತರಾಷ್ಟ್ರೀಯ ನ್ಯಾಯಲಯ ಆದೇಶ!
ಅಂತರಾಷ್ಟ್ರೀಯ ಕೋರ್ಟ್​​ ನ್ಯಾಯಮೂರ್ತಿ
  • News18
  • Last Updated: February 18, 2019, 7:14 PM IST
  • Share this:
ನವದೆಹಲಿ(ಫೆ.18): ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಯೋಧರನ್ನು ಉಗ್ರರು ಬಲಿ ತೆಗೆದುಕೊಂಡಿದ್ದಾರೆ. ಈ ಉಗ್ರರ ಬಾಂಬ್​​ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಇಡೀ ದೇಶವೇ ನೆರೆಯ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಕೆಂಡಕಾರುತ್ತಿದೆ. ಉಗ್ರರ ದಾಳಿ ಬಳಿಕ ಪಾಕ್​​-ಭಾರತ ನಡುವಿನ ಸಂಬಂಧ ಮತ್ತಷ್ಟು ಹದಗಟ್ಟಿದೆ ಎಂಬುದು ಕಣ್ಣಿಗೆ ಗೋಚರಿಸುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದ್ದು, ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್​ ಕೇಸನ್ನು ಇಂದು ವಿಚಾರಣೆ ನಡೆಸಲಾಗಿದೆ.​ ಇಂದು ಅಂತಾರಾಷ್ಟ್ರೀಯ ಕೋರ್ಟ್​​ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿದ್ದು, ‘ಕುಲಭೂಷಣ್ ಜಾಧವ್​​’ರನ್ನು ಪ್ರಚಾರಕ್ಕಾಗಿ ಪಾಕಿಸ್ತಾನ ಬಳಸಿಕೊಳ್ಳುತ್ತಿದೆ ಎಂದು ಭಾರತ ಪರವಾಗಿ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ಕೋರ್ಟ್​​​ ತೀರ್ಪನ್ನು ಕಾಯ್ದಿರಿಸಿದ್ದು, ಜಾಧವ್​​ರನ್ನು ಗಲ್ಲಿಗೇರಿಸುವಂತಿಲ್ಲ ಎಂದು ಆದೇಶಿದೆ.  

ಇಂದು​​ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾದವ್ ಪ್ರಕರಣದ ವಿಚಾರಣೆ ನಡಯಿತು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿರುವ ಆರೋಪದ ಮೇಲೆ ಅಲ್ಲಿನ ಕೋರ್ಟ್​​ ಜಾಧವ್​​ಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಜಾಧರವನ್ನು ಬಂಧಿಲಾಗಿದೆ. ಇವರ ವಿರುದ್ಧದ ಚಾರ್ಜ್​​ಶೀಟ್​​ ಪ್ರತಿಯನ್ನು ಕೂಡ ಭಾರತಕ್ಕೆ ಪಾಕ್​​ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿಗಳ ಪೀಠದ ಮುಂದೆ ಹರೀಶ್​​ ಸಾಳ್ವೆ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ನ್ಯಾಯಾಲಯದಲ್ಲಿ ಭಾರತದ ಪರವಾಗಿ ಹರೀಶ್ ಸಾಳ್ವೆ ನೇತೃತ್ವ ವಕೀಲರ ತಂಡ ವಾದ ನಡೆಸಿದೆ. ಜಾಧವ್ ಸೆರೆ ಮೂಲಕ ಪಾಕಿಸ್ತಾನ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಮಾಡಿದೆ. ಕುಲಭೂಷಣ್ ಜಾಧವ್ ಓರ್ವ ಅಮಾಯಕ ಎಂದು ಭಾರತದ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್ ವಾದ ಮಂಡಿಸಿದ್ದಾರೆ. ಜತೆಗೆ ಪಾಕಿಸ್ತಾನ ಮುಗ್ಧ ಭಾರತೀಯನಿಗೆ ಗಲ್ಲುಶಿಕ್ಷೆ ನೀಡುತ್ತಿದೆ. ಮುಗ್ಧನ ಜೀವ ಸಂಕಷ್ಟದಲ್ಲಿರುವುದು ದುರದೃಷ್ಟಕರ ಎಂದು ಪ್ರಕರಣದ ಅಂತಿಮ ವಿಚಾರಣೆ ವೇಳೆಯಲ್ಲೂ ಸಾಳ್ವೆ ವಾದಿಸಿದ್ದಾರೆ.

ಇನ್ನು ಜಾಧವ್​ ವಿರುದ್ಧ ಗಂಭೀರ ಆರೋಪಗಳಿಲ್ಲ. ಗಂಭೀರ ಆರೋಪಗಳನ್ನು ಪಾಕ್ ಸಾಬೀತುಪಡಿಸಿಲ್ಲ. ಜಾಧವ್​ ಭೇಟಿಗೆ ಪಾಕ್​ ಅವಕಾಶ ನಿಡಿಲ್ಲ. 13 ಬಾರಿ ಮನವಿ ಮಾಡಿದರು ಅವಕಾಶ ಕೊಡುತ್ತಿಲ್ಲ. ವಿಚಾರಣೆಗೆ ಸಂಬಂಧಿತೆಯೂ ದಾಖಲೆ ನೀಡಿಲ್ಲ. ಸಾಕ್ಷಿಗಳ ವಿಚಾರಣೆಗೂ ಅವಕಾಶ ನೀಡುತ್ತಿಲ್ಲ. ಭಾರತಕ್ಕೆ ಚಾರ್ಜ್​ಶೀಟ್​ ಪ್ರತಿಯನ್ನೂ ಕಳಿಸಿಲ್ಲ. ಈ ಮೂಲಕ ಪಾಕ್​ ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿದೆ ಎಂದು ಹರೀಶ್ ಸಾಳ್ವೆ ಪಾಕ್​​ ವಿರುದ್ಧ ಚಾಟಿ ಬೀಸಿದ್ಧಾರೆ.

ಇದನ್ನೂ ಓದಿ: ಭಾರತ-ಪಾಕ್ ನಡುವೆ ಹೊಸ ಯುದ್ಧ: ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಇಂದಿನಿಂದ ಕುಲಭೂಷಣ್ ವಿಚಾರಣೆ

ಈ ಹಿಂದೆಯೇ ಪಾಕಿಸ್ತಾನ ತನ್ನ ದೇಶದಲ್ಲಿನ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಲಭೂಷಣ್​​ ಜಾಧವ್​​ ​ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿತ್ತು. ಬಳಿಕ ಅಲ್ಲಿನ ಮಿಲಿಟರಿ ನ್ಯಾಯಾಲಯವೇ ಮೂಲಕ ಜಾಧವ್​​​ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ವಿರೋಧಿಸಿ ಭಾರತ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಯಿತು. ಇದೀಗ ಭಾರತ ಸರ್ಕಾರ ಮನವಿ ಮೇರೆಗೆ ಕುಲಭೂಷಣ್ ಜಾಧವ್ ಅವರ ಪ್ರಕರಣದ ವಿಚಾರಣೆಯನ್ನು ಅಂತಾರಾಷ್ಟ್ರೀಯ ಕೋರ್ಟ್ ಇಂದು ನಡೆಸಲಾಯ್ತು.

ಈಗಾಗಲೇ ಪುಲ್ವಾಮ ಉಗ್ರರ ದಾಳಿಯಲ್ಲಿ ತನ್ನದೇನೂ ಕೈವಾಡ ಇಲ್ಲ ಎಂದು ಪಾಕಿಸ್ತಾನ ಹೇಳಿದೆ. ಅಲ್ಲದೇ ಇವತ್ತು ಕುಲಭೂಷಣ್ ವಿಚಾರದ ಬಗ್ಗೆಯೂ ಮಾತನಾಡಿ ಭಾರತವನ್ನು ಟೀಕಿಸಿದೆ. ಪಾಕಿಸ್ತಾನದಲ್ಲಿ ಹಿಂಸಾಚಾರಗಳಿಗೆ ಪ್ರಚೋದನೆ ಮಾಡಿರುವುದಾಗಿ ಸ್ವತಃ ಕುಲಭೂಷಣ್ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ಭಾರತ ಮಾತ್ರ ಒಪ್ಪಿಕೊಳ್ಳುತ್ತಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಇನ್ನು ಪಾಕಿಸ್ತಾನದ ವಾದಕ್ಕೆ ವಿರುದ್ಧವಾಗಿರುವ ಭಾರತ ಅಲ್ಲಿನ ಕೋರ್ಟ್​ ಕುಲಭೂಷಣ ಜಾಧವ್​​ ಅವರಿಗೆ ನೀಡಿದ ಗಲ್ಲುಶಿಕ್ಷೆ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಕುಲಭೂಷಣ್ ಜಾಧವ್ ಅವರು ತಮ್ಮ ನೌಕಾಪಡೆ ಅಧಿಕಾರಿಯಾಗಿ ಸೇವೆಯಿಂದ ನಿವೃತ್ತರಾಗಿದ್ದರು. ಯಾವುದೋ ವೈಯಕ್ತಿಕ ವ್ಯವಹಾರದ ನಿಮಿತ್ತ ಇರಾನ್ ಗೆ ಹೋಗಿದ್ದರು. ಈ ವೇಳೆ ಪಾಕಿಸ್ತಾನವು ಪಿತೂರಿ ನಡೆಸಿ ಅವರನ್ನು ಅಪಹರಿಸಿದೆ ಎಂದು ಭಾರತ ತನ್ನ ವಾದ ಮಂಡಿಸಿತ್ತು.

--------------
First published: February 18, 2019, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading