ಅಂತಾರಾಷ್ಟ್ರೀಯ ಒತ್ತಡ ಪರಿಣಾಮ; ಜೈಷ್ ಸಂಘಟನೆಗೆ ಮೂಗುದಾರ ಹಾಕಿದ ಪಾಕಿಸ್ತಾನ

ಜಮಾತ್-ಉದ್-ದಾವಾ, ಲಷ್ಕರ್-ಎ-ತೈಬಾ ಸಂಘಟನೆಗಳಿಗೆ ಸೇರಿದ ಚಾರಿಟಿ ವಿಭಾಗಗಳಿಗೂ ಪಾಕಿಸ್ತಾನ ನಿಷೇಧ ಹೇರಿದೆ.

Vijayasarthy SN | news18
Updated:February 22, 2019, 10:30 PM IST
ಅಂತಾರಾಷ್ಟ್ರೀಯ ಒತ್ತಡ ಪರಿಣಾಮ; ಜೈಷ್ ಸಂಘಟನೆಗೆ ಮೂಗುದಾರ ಹಾಕಿದ ಪಾಕಿಸ್ತಾನ
ಮಸೂದ್ ಅಜರ್
Vijayasarthy SN | news18
Updated: February 22, 2019, 10:30 PM IST
ನವದೆಹಲಿ(ಫೆ. 22): ಪುಲ್ವಾಮ ಉಗ್ರ ದಾಳಿ ಘಟನೆಯ ಸೂತ್ರಧಾರ ಜೈಷ್-ಇ-ಮೊಹಮ್ಮದ್ ಸಂಘಟನೆಯ ಪ್ರಧಾನ ಕಚೇರಿಯನ್ನು ಪಾಕಿಸ್ತಾನ ಸರಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. ಪುಲ್ವಾಮ ಉಗ್ರ ದಾಳಿ ಘಟನೆಗೆ ಜೈಷ್-ಇ-ಮೊಹಮ್ಮದ್ ಸಂಘಟನೆಯು ಹೊಣೆ ಹೊತ್ತುಕೊಂಡಿದ್ದರೂ, ತನಗೂ ಇದಕ್ಕೂ ಸಂಬಂಧ ಇಲ್ಲವೆಂದು ಸಬೂಬು ಹೇಳುತ್ತಿದ್ದ ಪಾಕಿಸ್ತಾನದ ನಿಲುವಿನಲ್ಲಿ ಈಗ ಬದಲಾವನೆಯಾಗಿರುವುದು ಗಮನಾರ್ಹ. ಪಂಜಾಬ್ ಪ್ರಾಂತ್ಯದ ಬಹಾವಲ್​ಪುರ್​ನಲ್ಲಿರುವ ಜೈಷ್ ಸಂಘಟನೆಯ ಮುಖ್ಯ ಕಚೇರಿಯನ್ನು ಪಂಜಾಬ್ ಸರಕಾರ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸೇರಿದಂತೆ ಜಾಗತಿಕವಾಗಿ ಪಾಕಿಸ್ತಾನದ ಮೇಲೆ ಸತತ ಒತ್ತಡ ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನ ಅನಿವಾರ್ಯವಾಗಿ ಈ ಕ್ರಮ ಕೈಗೊಳ್ಳಬೇಕಾಯಿತೆನ್ನಲಾಗಿದೆ.

ಇದನ್ನೂ ಓದಿ: ರವಿಚಂದ್ರನ್ ಮಗಳ ನಿಶ್ಚಿತಾರ್ಥ; ಮದುವೆ ಸಡಗರದಲ್ಲಿ ಕೇಜ್ರಿಸ್ಟಾರ್​​.!

ಲಾಹೋರ್​ನಿಂದ 400 ಕಿಮೀ ದೂರದಲ್ಲಿರುವ ಬಹಾವಲ್​ಪುರ್​ನಲ್ಲಿರುವ ಜೈಷ್ ಮುಖ್ಯ ಕಚೇರಿಯ ಆವರಣದಲ್ಲಿ ಮದ್ರೆಸ್ಸಾತುಲ್ ಸಬೀರ್ ಮತ್ತು ಜಾಮಾ ಮಸ್ಜಿದ್ ಸುಭಾನಲ್ಲಾ ಸಂಸ್ಥೆಗಳ ನಿರ್ವಹಣೆಯಾಗುತ್ತಿವೆ. ಇಲ್ಲಿರುವ ಮದ್ರಸಾದಲ್ಲಿ 70 ಶಿಕ್ಷಕರಿದ್ಧಾರೆ, 600 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಂಜಾಬ್ ಸರಕಾರದ ಆಂತರಿಕ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಪಂಜಾಬ್ ಪೊಲೀಸರು ಈ ಕ್ಯಾಂಪಸ್​ನಲ್ಲಿ ಕಾವಲಿದ್ದಾರೆ. ಜೈಷ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಇದೇ ಕ್ಯಾಂಪಸ್​ನಲ್ಲಿರಬಹುದೆಂದು ಶಂಕಿಸಲಾಗಿದೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ!

ಜೈಷ್ ಸಂಘಟನೆಯನ್ನು 2002ರಲ್ಲಿ ಪಾಕಿಸ್ತಾನ ಸರಕಾರವೇ ನಿಷೇಧ ಮಾಡಿದ್ದರೂ ಅದು ಬೇರೆ ಬೇರೆ ಹೆಸರು, ಗುರುತುಗಳಲ್ಲಿ ಅಸ್ತಿತ್ವದಲ್ಲಿದೆ. ಬಹಾವಲ್​ಪುರ್​ನಲ್ಲೇ ಈ ಸಂಘಟನೆಯ ಕಚೇರಿ ಇದೆ ಎಂದು ಭಾರತ ಸಾಕಷ್ಟು ಪುರಾವೆಯನ್ನೂ ಪಾಕಿಸ್ತಾನಕ್ಕೆ ಕೊಟ್ಟಿತ್ತು. ಆದರೆ, ಪಾಕಿಸ್ತಾನ ಮಾತ್ರ ಜಾಣಗಿವುಡುತನ ಪ್ರದರ್ಶನ ತೋರುತ್ತಾ ಬಂದಿತ್ತು. ಪುಲ್ವಾಮ ದಾಳಿ ಘಟನೆ ಬಳಿಕ ಸಾಕಷ್ಟು ರಾಷ್ಟ್ರಗಳು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿವೆ. ಅಂತಾರಾಷ್ಟ್ರೀಯ ಉಗ್ರರ ಹಣಕಾಸು ಜಾಲದ ಕಣ್ಗಾವಲಾಗಿ ಕಾರ್ಯನಿರ್ವಹಿಸುವ ಎಫ್​ಎಟಿಎಫ್ ಸಂಸ್ಥೆಯು ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಮೊದಲಾದ ಉಗ್ರ ಸಂಘಟನೆಯ ಫಂಡಿಂಗ್ ಬಗ್ಗೆ ಪಾಕಿಸ್ತಾನ ಯಾಕೆ ತಿಳಿದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿತ್ತು. ಇದೇ ವಿಚಾರವಾಗಿ ಪಾಕಿಸ್ತಾನವನ್ನು ತನ್ನ ಗ್ರೇ ಲಿಸ್ಟ್​ಗೆ ಸೇರಿಸಿತ್ತು.

ಇವೆಲ್ಲಾ ಒತ್ತಡದ ಪರಿಣಾಮವಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ದೇಶದ ಭದ್ರತಾ ಸಮಿತಿಯೊಂದಿಗೆ ತುರ್ತು ಸಭೆ ನಡೆಸಿದರು. ಜೈಷ್ ಸಂಘಟನೆಯನ್ನು ವಶಕ್ಕೆ ತೆಗೆದುಕೊಳ್ಳುವುದು, ಹಫೀಜ್ ಸಯೀದ್ ಅವರ ಜಮಾತ್-ಉದ್-ದವಾ, ಫಾಲಾ-ಎ-ಇನ್ಸಾನಿಯಾತ್ ಫೌಂಡೇಶನ್, ಲಷ್ಕ್-ಎ-ತೈಯಬಾ ಸಂಘಟನೆಗಳನ್ನು ನಿಷೇಧಿಸುವುದು ಸೇರಿದಂತೆ ಕೆಲವಾರು ಕ್ರಮಗಳನ್ನು ಜರುಗಿಸಲು ಅಪ್ಪಣೆ ಹೊರಡಿಸಿದ್ದಾರೆ.
Loading...

First published:February 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...