ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರವು (Pakistan Government) ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಯನ್ನು ಲೀಟರ್‌ಗೆ 35 ರೂ.(ಪಾಕಿಸ್ತಾನ ರೂಪಾಯಿ-PKR) ಹೆಚ್ಚಿಸಿದೆ. ಈ ದರ ಭಾನುವಾರದಿಂದಲೇ ಜಾರಿಗೆ ಬಂದಿದೆ. ಈ ನಡುವೆ ಕಾಶ್ಮೀರವನ್ನು (Kashmir) ಮರೆತು ಭಾರತದೊಂದಿಗೆ (India) ಸ್ನೇಹ ಬೆಳೆಸಿಕೊಳ್ಳಿ ಎಂದು ಪಾಕಿಸ್ತಾನಕ್ಕೆ ಸೌದಿ-ಯುಎಇ (Saudia Arab) ಸಲಹೆ ನೀಡಿದೆ. ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟನ್ನು (Economic crises) ಎದುರಿಸುತ್ತಿದ್ದು ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ವಿದ್ಯುತ್ (Electrycity) , ಆಹಾರ ಪದಾರ್ಥಗಳ (Food Items) ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಇದೀಗ ಪೆಟ್ರೋಲ್, ಡಿಸೇಲ್ ದರ ಏರಿಕೆ ಮತ್ತೊಮ್ಮೆ ಜನಜೀವನದ ಮೇಲೆ ಬರೆ ಎಳೆದಿದೆ.
ಬೆಲೆ ಏರಿಕೆ ಬಗ್ಗೆ ಪಾಕಿಸ್ತಾನ ಹಣಕಾಸು ಸಚಿವಾಲಯ ಟ್ವೀಟ್
ಪೆಟ್ರೋಲ್ ಬೆಲೆ ಏರಿಕೆಯನ್ನು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರು ಘೋಷಿಸಿದ್ದಾರೆ. ಸೀಮೆಎಣ್ಣೆ ಮತ್ತು ಲೈಟ್ ಡೀಸೆಲ್ ಆಯಿಲ್ ಬೆಲೆಯನ್ನು ಲೀಟರ್‌ಗೆ 18 ರೂ. (PKR) ಹೆಚ್ಚಿಸಲಾಗಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ 249.80 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 262.80 ರೂ. ಪಿಆರ್‌ಕೆ ಇದೆ ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯವು ಟ್ವೀಟ್‌ನಲ್ಲಿ ತಿಳಿಸಿದೆ.
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸೂಚನೆ ಹಿನ್ನೆಲೆ ಬೆಲೆ ಏರಿಕೆ
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೂಚನೆ ನೀಡಿದ ಬೆನ್ನಲ್ಲೇ ಈ ನಾಲ್ಕು ಉತ್ಪನ್ನಗಳ ಕನಿಷ್ಠ ಬೆಲೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಕಳೆದ ವಾರ ಪಾಕಿಸ್ತಾನದ ರೂಪಾಯಿ ಅಪಮೌಲ್ಯಕ್ಕೆ ಸಾಕ್ಷಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಶೇ.11 ರಷ್ಟು ಏರಿಕೆಯಾಗುತ್ತಿದೆ ಎಂದು ಇಶಾಕ್ ದಾರ್ ಹೇಳಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ವದಂತಿ
ಹೊಸ ಬೆಲೆಗಳ ಘೋಷಣೆಯು ಪೆಟ್ರೋಲ್ ಪೂರೈಕೆಯ ಕೊರತೆಯ ಬಗ್ಗೆ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ 50 ರೂ. ಏರಿಕೆಯಾಗಲಿದೆ ಎಂಬ ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಎದುರಾಗಲಿದೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್ಗಾಗಿ ಕ್ಯೂ ನಿಂತ ಜನ
ಪೆಟ್ರೋಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂಬ ವದಂತಿ ಹಬ್ಬಿದ್ದರಿಂದ ಪಾಕಿಸ್ತಾನದ ಹಲವು ಭಾಗಗಳಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಜನ ಕ್ಯೂ ನಿಲ್ಲುವಂತಾಯಿತು. ಫೆಬ್ರವರಿ 1 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 45 ರಿಂದ 80 ರೂಪಾಯಿಗಳವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
ಕಾಶ್ಮೀರ ಮರೆತು ಬಿಡಿ, ಪಾಕ್ಗೆ ಯುಎಇ ಸಲಹೆ
ಈ ನಡುವೆ ಪಾಕಿಸ್ತಾನದ ಗೆಳೆಯರಾದ ಸೌದಿ ಅರೇಬಿಯಾ ಮತ್ತು ಯುಎಇ ಕಾಶ್ಮೀರವನ್ನು ಮರೆತು ಭಾರತದೊಂದಿಗೆ ಸ್ನೇಹ ಬೆಳೆಸಿಕೊಳ್ಳಿ ಎಂದು ಪಾಕಿಸ್ತಾನಕ್ಕೆ ನೇರವಾಗಿ ಕರೆ ನೀಡಿದೆ. ಕಾಶ್ಮೀರದ ಆರ್ಟಿಕಲ್ 370 ರದ್ದತಿ ಬಗೆಗಿನ ಆರೋಪಗಳ ಬಗ್ಗೆ ಮೌನವಹಿಸುವಂತೆ ಶಹಬಾಜ್ ಸರ್ಕಾರಕ್ಕೆ ತಾಕೀತು ಮಾಡಿದೆ.
ಇದನ್ನೂ ಓದಿ: Pakistan: ಪಾಕಿಸ್ತಾನದಲ್ಲಿ ಸೇತುವೆಗೆ ಡಿಕ್ಕಿ ಹೊಡೆದು ಬಸ್ ಧಗಧಗ, ದುರ್ಘಟನೆಯಲ್ಲಿ 41 ಮಂದಿ ಸಜೀವ ದಹನ!
ಕಾಶ್ಮೀರ ವಿಚಾರದಲ್ಲಿ ಬೆಂಬಲ ನೀಡುತ್ತಿಲ್ಲ ಪಾಕ್ ಮಿತ್ರ ರಾಷ್ಟ್ರಗಳು
ಒಂದು ಕಾಲದಲ್ಲಿ ತಮ್ಮ ನಿಜವಾದ ಸ್ನೇಹಿತರಾಗಿದ್ದ ಮುಸ್ಲಿಂ ರಾಷ್ಟ್ರಗಳು ಕೀಡ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಸಹಾಯ ಹಸ್ತ ಚಾಚಲು ಹಿಂದೇಟು ಹಾಕಿದೆ. ಅತ್ಯಂತ ಶಕ್ತಿಶಾಲಿ ದೇಶ ಸೌದಿ ಅರೇಬಿಯಾ ಕೂಡ ಇದೀಗ ಪಾಕಿಸ್ತಾನಕ್ಕೆ ಕಾಶ್ಮೀರ ವಿಚಾರದಲ್ಲಿ ಬೆಂಬಲ ನೀಡುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ