• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Imran Khan Arrest: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಬಂಧನ! ಭ್ರಷ್ಟಾಚಾರ ಪ್ರಕರಣದಡಿ ಅರೆಸೇನಾ ಪಡೆಯಿಂದ ಅರೆಸ್ಟ್

Imran Khan Arrest: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಬಂಧನ! ಭ್ರಷ್ಟಾಚಾರ ಪ್ರಕರಣದಡಿ ಅರೆಸೇನಾ ಪಡೆಯಿಂದ ಅರೆಸ್ಟ್

ಇಮ್ರಾನ್ ಖಾನ್ ಬಂಧನ

ಇಮ್ರಾನ್ ಖಾನ್ ಬಂಧನ

ಪಾಕಿಸ್ತಾನದ ಮಾಜಿ ಪ್ರಧಾನಿಯನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ಕೋರ್ಟ್​ ಆವರಣದಲ್ಲಿ ಇಮ್ರಾನ್ ಖಾನ್ ಅವರ ಕಾರನ್ನು ಸುತ್ತುವರಿದ ಅಧಿಕಾರಿಗಳು ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು  ಜಿಯೋ ಟಿವಿ ವರದಿ ಮಾಡಿದೆ.

 • Share this:

ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಬಂಧಿಸಲಾಗಿದೆ. ಕೋರ್ಟ್ ಆವರಣದಲ್ಲೇ ಇಮ್ರಾನ್​ರನ್ನು  ಪಾಕಿಸ್ತಾನ ಪ್ಯಾರಾ ಮಿಲಿಟರಿ ಫೋರ್ಸ್​ ಬಂಧಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಅಧಿಕಾರಿ ಮೇಜರ್ ಜನರಲ್ ಫೈಸಲ್ ನಸೀರ್ ವಿರುದ್ಧ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಮಾಜಿ ಪಾಕ್ ಪಿಎಂ ಬಂಧನವಾಗಿದೆ.  ಇಮ್ರಾನ್​, ಮೇಜರ್ ಜನರಲ್ ಫೈಸಲ್ ನಸೀರ್ ಅವರು ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು  ಆರೋಪಿಸಿದ್ದರು.  ಆದರೆ ಇಮ್ರಾನ್‌ರ ಈ ಹೇಳಿಕೆಗೆ ಪಾಕಿಸ್ತಾನ ಸೇನೆ ಛೀಮಾರಿ ಹಾಕಿತ್ತು.


ಪಾಕಿಸ್ತಾನದ ಮಾಜಿ  ಪ್ರಧಾನಿಯನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಮ್ರಾನ್ ಖಾನ್ ಅವರ ಕಾರನ್ನು ಕೋರ್ಟ್ ಆವರಣದಲ್ಲೇ ಸುತ್ತುವರಿದ ಅಧಿಕಾರಿಗಳು ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು  ಜಿಯೋ ಟಿವಿ ವರದಿ ಮಾಡಿದೆ.


ಇಮ್ರಾನ್ ಖಾನ್ ವಿರುದ್ಧ ಮೇ 1ರಂದೇ ಬಂಧನ ವಾರಂಟ್ ಜಾರಿಯಾಗಿತ್ತು. ಇಂದು ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ತಂಡ ಇಸ್ಲಾಮಾಬಾದ್‌ನಲ್ಲಿ ಬಂಧಿಸಿದ್ದಾರೆ.


ಇಮ್ರಾನ್ ಖಾನ್ ವಶಕ್ಕೆ ಪಡೆದ 50ಕ್ಕೂ ಹೆಚ್ಚು ರೇಂಜರ್​ಗಳು


ತಮ್ಮ ವಿರುದ್ಧ ದಾಖಲಾದ ಹಲವು ಎಫ್‌ಐಆರ್‌ಗಳಲ್ಲಿ ಜಾಮೀನು ಪಡೆಯುವ ಸಲುವಾಗಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್ ಹೈಕೋರ್ಟ್‌ಗೆ ತೆರಳಿದ್ದರು. ಈ ವೇಳೆ ಇಮ್ರಾನ್​ ಖಾನ್​ರನ್ನು 50 ಕ್ಕೂ ಹೆಚ್ಚು ಅರಸೇನಾ ಪಡೆ ಇಮ್ರಾನ್​ ಖಾನ್​ರನ್ನು ಸುತ್ತುವರಿದು ಅವರನ್ನು ಕಾರೊಂದರಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಕುರಿತು  ಪಿಟಿಐ ಪಕ್ಷ ವಿಡಿಯೋವನ್ನು ಬಿಡುಗಡೆ ಮಾಡಿದೆ.


ಇದನ್ನೂ ಓದಿ: Prisoners: ಈ ಜೈಲಿನಲ್ಲಿ ಕೈದಿಗಳು ತಮ್ಮ ಕುಟುಂಬ ಸಮೇತ ಇರಬಹುದಂತೆ! ಇದೇನು ಸೆರೆಮನೆನಾ? ಮನೆನಾ?


ಇಮ್ರಾನ್​ ಖಾನ್ ಪರ ವಕೀಲನಿಗೆ ಗಾಯ


ಇನ್ನು ಇಮ್ರಾನ್ ಖಾನ್​ರನ್ನು ಬಂಧಿಸುವ ವೇಳೆ, ಅವರ ವಕೀಲರ ಮೇಲೆ ಹಲ್ಲೆ ಮಾಡಲಾಗಿದೆ. ಕೋರ್ಟ್​ ಆವರಣದಲ್ಲೇ ವಕೀಲರ ಮೇಲೆ ಹಲ್ಲೆ ಮಾಡಲಾಗಿದ್ದು, ಅವರ ತೀವ್ರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಧೈರ್ಯಶಾಲಿ ಜನರು ಹೊರಗೆ ಬಂದು ತಮ್ಮ ದೇಶದ ಪರ ಹೋರಾಡಬೇಕು ಎಂದು ಪಿಟಿಐ ಪಕ್ಷ ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ತಿಳಿಸಿದೆ.


ಇಮ್ರಾನ್ ಬಂಧನದ ಕುರಿತು ಮಾಜಿ ಮಾಹಿತಿ ನೀಡಿರುವ ಮಾಜಿ ಸಚಿವ ಮತ್ತು ಪಿಟಿಐ ಉಪಾಧ್ಯಕ್ಷ ಫವಾದ್ ಚೌಧರಿ, ಇಮ್ರಾನ್ ಖಾನ್​ರನ್ನು ನ್ಯಾಯಾಲಯದ ಆವರಣದಲ್ಲಿ ರೇಂಜರ್‌ಗಳು ಸುತ್ತುವರಿದು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ. ವಕೀಲರಿಗೆ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಪಾಕಿಸ್ತಾನ್​ ಮಾಜಿ ಪಿಎಂ ವಿರುದ್ಧ ಕೇಳಿ ಬಂದಿರುವ ಆರೋಪಗಳೇನು?


ಪಾಕಿಸ್ತಾನದ ತಹ್ರಿಕ್ ಎ ಇನ್ಸಾಫ್(ಪಿಟಿಐ) ಪಕ್ಷದ ನಾಯಕನ ವಿರುದ್ಧ ತೋಷಖಾನ ಹಗರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್​ನ ಸ್ಥಳೀಯ ನ್ಯಾಯಾಲಯ ಮಾರ್ಚ್​ನಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು. ಆದರೆ ತೋಷಖಾನ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ಸ್ಥಳೀಯ ನ್ಯಾಯಾಲಯದ ಮಹಿಳಾ ನ್ಯಾಯಧೀಶರಿಗೆ ಇಮ್ರಾನ್ ಖಾನ್ ಬಹಿರಂಗವಾಗಿ ಬೆದರಿಕೆ ಹಾಕಲಾಗಿದ್ದಾರೆಂದು ಹೇಳಲಾಗಿತ್ತು.

top videos


  ಆದರೆ ಅವರನ್ನು ಅಂದು ಬಂಧಿಸಲು ಪೊಲೀಸ್ ತಂಡ ಅವರ ನಿವಾಸಕ್ಕೆ ತೆರಳಿದ್ದ ವೇಳೆ, ಅವರ ಬೆಂಬಲಿಗರು ಖಾನ್​ ನಿವಾಸವನ್ನು ಭದ್ರಕೋಟೆಯಂತೆ ಸುತ್ತುವರಿದು ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದು ಅವರನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆಯೊಡ್ಡಿದ್ದರು.

  First published: