Pakistan Flood: ಪಾಕಿಸ್ತಾನಕ್ಕೆ ಪಾಕಿಸ್ತಾನವೇ ನೀರಲ್ಲಿ ಮುಳುಗಡೆ; 1,100ಕ್ಕೂ ಹೆಚ್ಚು ಜನರ ಸಾವು

Prime Minister Shehbaz Sharif: ಪ್ರಧಾನಿ ಶೆಹಬಾಜ್ ಷರೀಫ್ ಪಾಕಿಸ್ತಾನದ ರಕ್ಷಣೆಗೆ ಅಂತರರಾಷ್ಟ್ರೀಯ ಸಮುದಾಯದ ನೆರವು ಕೋರಿದ್ದಾರೆ. 

ಪಾಕಿಸ್ತಾನ ಪ್ರವಾಹ

ಪಾಕಿಸ್ತಾನ ಪ್ರವಾಹ

 • Share this:
  ಇಸ್ಲಾಮಾಬಾದ್: ಪಾಕಿಸ್ತಾನವು ಈ ದಶಕದಲ್ಲೇ ಕಂಡು ಕೇಳರಿಯದ ಪ್ರವಾಗ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪಾಕಿಸ್ತಾನ ಪ್ರವಾಹದಲ್ಲಿ (Pakistan Floods) ಈವರೆಗೆ 1,100 ಕ್ಕೂ ಹೆಚ್ಚು ಜನರ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಈ ಪ್ರವಾಹ $ 10 ಶತಕೋಟಿ ಮೌಲ್ಯದ ಹಾನಿಯನ್ನುಂಟು ಮಾಡಿದೆ ಎಂದು ಅಂದಾಜು ಮಾಡಲಾಗಿದೆ. ಸದ್ಯ ಪಾಕಿಸ್ತಾನದ ಮೂರನೇ ಒಂದು ಭಾಗ ನೀರಿನಲ್ಲಿ (Pak UNder Water) ಮುಳುಗಡೆಯಾಗಿದೆ. ಅಲ್ಲದೇ ದೇಶದಲ್ಲಿ ನಗದು ಕೊರತೆಯೂ ಉಂಟಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ (Prime Minister Shehbaz Sharif) ಪಾಕಿಸ್ತಾನದ ರಕ್ಷಣೆಗೆ ಅಂತರರಾಷ್ಟ್ರೀಯ ಸಮುದಾಯದ ನೆರವು ಕೋರಿದ್ದಾರೆ. 

  ರಸ್ತೆಗಳು, ಬೆಳೆಗಳು, ಮೂಲಸೌಕರ್ಯ ಮತ್ತು ಸೇತುವೆಗಳನ್ನು ಕೊಚ್ಚಿಕೊಂಡು ಹೋಗಿವೆ. ಇತ್ತೀಚಿನ ವಾರಗಳಲ್ಲಿ 1,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ . ಪಾಕಿಸ್ತಾನದ ಜನಸಂಖ್ಯೆಯ 33 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ.

  ಬೇಗ ಸಹಜ ಸ್ಥಿತಿಗೆ ಮರಳಿ; ಪ್ರಧಾನಿ ಮೋದಿ
  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿನಾಶಕರ ಪರಿಸ್ಥಿತಿಯನ್ನು ಕಂಡು ದುಃಖಿತರಾಗಿದ್ದಾರೆ.  ಶೀಘ್ರ ಸಹಜ ಸ್ಥಿತಿಗೆ ಪಾಕಿಸ್ತಾನ ಮರಳಲಿ ಎಂದು ಆಶಿಸುತ್ತಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.

  ಭಾರತದಿಂದ ನೆರವು?
  ಪಾಕಿಸ್ತಾನಕ್ಕೆ ಮಾನವೀಯ ನೆರವು ನೀಡುವ ಸಾಧ್ಯತೆಯ ಕುರಿತು ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ. ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೂ, ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

  ಸೋಮವಾರ ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) $1.1bn ಸಹಾಯಧನವನ್ನು ಪಡೆದುಕೊಂಡಿದೆ. ಧಾರಾಕಾರ ಮಳೆಯಿಂದಾಗಿ ರಸ್ತೆಗಳು, ಬೆಳೆಗಳು, ಮನೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ಕೊಚ್ಚಿಹೋಗಿವೆ.

  ತರಕಾರಿ ಬೆಲೆ ಗಗನಕ್ಕೆ
  ಪಕ್ಕದ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ವಿಕೋಪ ತಲುಪಿದೆ. ವಿನಾಶಕಾರಿ ಪ್ರವಾಹದಿಂದಾಗಿ ಲಾಹೋರ್ ಮತ್ತು ಪಂಜಾಬ್ ಪ್ರಾಂತ್ಯದ ಇತರ ಭಾಗಗಳಲ್ಲಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ.

  ಇದನ್ನೂ ಓದಿ: Ganesh Chaturthi: ಮಂಗಳೂರು ಗಣಪನ ಅಮೆರಿಕಾ ಪ್ರಯಾಣ!

  ಪಾಕಿಸ್ತಾನದ ಜನರು ದಿನನಿತ್ಯದ ಬಳಕೆಗೆ ಅಗತ್ಯವಿರುವ ತರಕಾರಿ, ಹಣ್ಣು ಹಂಪಲುಗಳನ್ನು ಖರೀದಿ ಮಾಡಲು ಸಹ ಹಿಂದೆಮುಂದೆ ನೋಡುವಂತಹ ದುರದೃಷ್ಟಕರ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಭಾರತದಿಂದ ಟೊಮೆಟೊ ಮತ್ತು ಈರುಳ್ಳಿಯನ್ನು ಆಮದು ಮಾಡಿಕೊಳ್ಳಬಹುದು ಎಂದು ಸ್ಥಳೀಯ ಮಾರುಕಟ್ಟೆ ಡೀಲರ್‌ಗಳು ತಿಳಿಸಿದ್ದಾರೆ.

  ಭಾರತದಿಂದ ತರಕಾರಿ ಆಮದಿನ ಸಾಧ್ಯತೆ
  ವಾಘಾ ಗಡಿಯ ಮೂಲಕ ಭಾರತದಿಂದ ಈರುಳ್ಳಿ ಮತ್ತು ಟೊಮೆಟೊ ಆಮದು ಮಾಡಿಕೊಳ್ಳುವ ಆಯ್ಕೆಯನ್ನು ಅಲ್ಲಿನ ಸರ್ಕಾರ ಪರಿಗಣಿಸುತ್ತಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಲಾಹೋರ್ ಮತ್ತು ಪಂಜಾಬ್‌ನ ಇತರ ನಗರಗಳು ಅಫ್ಘಾನಿಸ್ತಾನದಿಂದ ಟೊರ್ಕಾಮ್ ಗಡಿಯ ಮೂಲಕ ಟೊಮೆಟೊ ಮತ್ತು ಈರುಳ್ಳಿ ಪೂರೈಕೆಯನ್ನು ಪಡೆಯುತ್ತಿವೆ.

  ಇದನ್ನೂ ಓದಿ: Nitin Gadkari: ನಿತಿನ್ ಗಡ್ಕರಿಗೆ ಕಾಂಗ್ರೆಸ್​ನಿಂದ ಆಹ್ವಾನ! ಕೇಂದ್ರ ಸಚಿವರ ಪ್ರತ್ಯುತ್ತರ ಹೀಗಿತ್ತು

  ಪೂರೈಕೆ ಮಾಡಲೇ ಆಗುತ್ತಿಲ್ಲ
  ಟೋರ್ಕಾಮ್ ಗಡಿಯಲ್ಲಿ ಪ್ರತಿದಿನ 100 ಕಂಟೇನರ್ ಟೊಮ್ಯಾಟೊ ಮತ್ತು ಸುಮಾರು 30 ಕಂಟೇನರ್ ಈರುಳ್ಳಿಯನ್ನು ಸ್ವೀಕರಿಸಲಾಗುತ್ತಿದೆ. ಅದರಲ್ಲಿ 2 ಕಂಟೇನರ್ ಟೊಮ್ಯಾಟೊ ಮತ್ತು ಒಂದು ಕಂಟೇನರ್ ಈರುಳ್ಳಿಯನ್ನು ಪ್ರತಿದಿನ ಲಾಹೋರ್ ನಗರಕ್ಕೆ ತರಲಾಗುತ್ತಿದೆ. ಪೂರೈಕೆಯಾಗುತ್ತಿರುವ ಕಂಟೇನರ್‌ಗಳ ಸಂಖ್ಯೆಯು ತುಂಬಾ ಕಡಿಮೆಯಾಗಿದೆ. ಬೇಡಿಕೆಯನ್ನು ಪೂರೈಸಲು ಸಹ ಕಷ್ಟವಾಗುತ್ತಿದೆ ಲಾಹೋರ್ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಶೆಹಜಾದ್ ಚೀಮಾ ಹೇಳಿದ್ದಾರೆ.
  Published by:guruganesh bhat
  First published: