Pakistan Floods 2022: ಟೊಮ್ಯಾಟೊ ಕೆಜಿಗೆ 500, ಈರುಳ್ಳಿ 400 ರೂಪಾಯಿ! ಪ್ಲೀಸ್, ಸಹಾಯ ಮಾಡಿ ಎಂದ ಪಾಕ್

ಪ್ರವಾಹವು ಇಲ್ಲಿಯವರೆಗೆ 1,030 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಬಹುತೇಕ ತೋಟಗಳು ಪ್ರವಾಹದಿಂದ ನಾಶವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಖರ್ಜೂರ ಮತ್ತು ಬಾಳೆಹಣ್ಣಿನ ಬೆಲೆಯೂ ಏರಿಕೆಯಾಗಲಿದೆ ಪ್ರವಾಹದಿಂದಾಗಿ ಬಲೂಚಿಸ್ತಾನ ಅಥವಾ ಇತರ ಪ್ರದೇಶಗಳಿಂದ ಸೇಬು ಪೂರೈಕೆಯನ್ನು ನಿಲ್ಲಿಸಲಾಗಿದೆ.

ಪಾಕಿಸ್ತಾನ ಪ್ರವಾಹ

ಪಾಕಿಸ್ತಾನ ಪ್ರವಾಹ

 • Share this:
  ಕರಾಚಿ: ಪಕ್ಕದ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ವಿಕೋಪ (Pakistan Flood Updates) ತಲುಪಿದೆ. ವಿನಾಶಕಾರಿ ಪ್ರವಾಹದಿಂದಾಗಿ ಲಾಹೋರ್ ಮತ್ತು ಪಂಜಾಬ್ ಪ್ರಾಂತ್ಯದ ಇತರ ಭಾಗಗಳಲ್ಲಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳ (Fruits And Vegetables Price In Pakistan) ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಪಾಕಿಸ್ತಾನದ ಜನರು ದಿನನಿತ್ಯದ ಬಳಕೆಗೆ ಅಗತ್ಯವಿರುವ ತರಕಾರಿ, ಹಣ್ಣು ಹಂಪಲುಗಳನ್ನು ಖರೀದಿ ಮಾಡಲು ಸಹ ಹಿಂದೆಮುಂದೆ ನೋಡುವಂತಹ ದುರದೃಷ್ಟಕರ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ (Pakistan Government) ಭಾರತದಿಂದ ಟೊಮೆಟೊ ಮತ್ತು ಈರುಳ್ಳಿಯನ್ನು ಆಮದು ಮಾಡಿಕೊಳ್ಳಬಹುದು ಎಂದು ಸ್ಥಳೀಯ ಮಾರುಕಟ್ಟೆ ಡೀಲರ್‌ಗಳು ತಿಳಿಸಿದ್ದಾರೆ.  ಕಳೆದ ಭಾನುವಾರದಂದು ಲಾಹೋರ್‌ನ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂ ಟೊಮ್ಯಾಟೊಗೆ ಕೆಜಿಗೆ 500 ರೂ. ಆದರೆ ಈರುಳ್ಳಿಗೆ 400 ರೂ.ಗೆ ಮಾರಾಟವಾಗಿವೆ. ಪ್ರವಾಹದಿಂದಾಗಿ ಬಲೂಚಿಸ್ತಾನ್, ಸಿಂಧ್ ಮತ್ತು ದಕ್ಷಿಣ ಪಂಜಾಬ್‌ನಿಂದ ತರಕಾರಿಗಳ ಪೂರೈಕೆಯು ಕೆಟ್ಟದಾಗಿ ಪರಿಣಾಮ ಬೀರಿರುವುದರಿಂದ ಮುಂಬರುವ ದಿನಗಳಲ್ಲಿ ವಸ್ತುಗಳ ಬೆಲೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

  ಟೊಮ್ಯಾಟೊ ಬೆಲೆ 700 ರೂ. ದಾಟಲಿದೆಯೇ?
  ಬಲೂಚಿಸ್ತಾನ ಮತ್ತು ಸಿಂಧ್‌ನಲ್ಲಿ ಪ್ರವಾಹದಿಂದ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ನಾಶವಾದ ಕಾರಣ ಮಾರುಕಟ್ಟೆಗಳಲ್ಲಿ ತರಕಾರಿಗಳ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ, ಟೊಮ್ಯಾಟೊ ದರ ಕೆಜಿಗೆ 700 ರೂ. ದಾಟಬಹುದು. ಅದೇ ರೀತಿ ಆಲೂಗಡ್ಡೆ ಬೆಲೆ ಕೆಜಿಗೆ 40 ರಿಂದ 120 ಕೆಜಿಗೆ ಏರಿಕೆಯಾಗಿದೆ ಎಂದು ರಿಜ್ವಿ ಎನ್ನುವವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.  ಭಾರತದಿಂದ ತರಕಾರಿ ಆಮದಿನ ಸಾಧ್ಯತೆ
  ವಾಘಾ ಗಡಿಯ ಮೂಲಕ ಭಾರತದಿಂದ ಈರುಳ್ಳಿ ಮತ್ತು ಟೊಮೆಟೊ ಆಮದು ಮಾಡಿಕೊಳ್ಳುವ ಆಯ್ಕೆಯನ್ನು ಅಲ್ಲಿನ ಸರ್ಕಾರ ಪರಿಗಣಿಸುತ್ತಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಲಾಹೋರ್ ಮತ್ತು ಪಂಜಾಬ್‌ನ ಇತರ ನಗರಗಳು ಅಫ್ಘಾನಿಸ್ತಾನದಿಂದ ಟೊರ್ಕಾಮ್ ಗಡಿಯ ಮೂಲಕ ಟೊಮೆಟೊ ಮತ್ತು ಈರುಳ್ಳಿ ಪೂರೈಕೆಯನ್ನು ಪಡೆಯುತ್ತಿವೆ.

  ಪೂರೈಕೆ ಮಾಡಲೇ ಆಗುತ್ತಿಲ್ಲ
  ಟೋರ್ಕಾಮ್ ಗಡಿಯಲ್ಲಿ ಪ್ರತಿದಿನ 100 ಕಂಟೇನರ್ ಟೊಮ್ಯಾಟೊ ಮತ್ತು ಸುಮಾರು 30 ಕಂಟೇನರ್ ಈರುಳ್ಳಿಯನ್ನು ಸ್ವೀಕರಿಸಲಾಗುತ್ತಿದೆ. ಅದರಲ್ಲಿ 2 ಕಂಟೇನರ್ ಟೊಮ್ಯಾಟೊ ಮತ್ತು ಒಂದು ಕಂಟೇನರ್ ಈರುಳ್ಳಿಯನ್ನು ಪ್ರತಿದಿನ ಲಾಹೋರ್ ನಗರಕ್ಕೆ ತರಲಾಗುತ್ತಿದೆ. ಪೂರೈಕೆಯಾಗುತ್ತಿರುವ ಕಂಟೇನರ್‌ಗಳ ಸಂಖ್ಯೆಯು ತುಂಬಾ ಕಡಿಮೆಯಾಗಿದೆ. ಬೇಡಿಕೆಯನ್ನು ಪೂರೈಸಲು ಸಹ ಕಷ್ಟವಾಗುತ್ತಿದೆ ಲಾಹೋರ್ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಶೆಹಜಾದ್ ಚೀಮಾ ಹೇಳಿದ್ದಾರೆ.

  ಇದನ್ನೂ ಓದಿ: Ganesh Chaturthi: ಮಂಗಳೂರು ಗಣಪನ ಅಮೆರಿಕಾ ಪ್ರಯಾಣ!

  ಪ್ರವಾಹದಿಂದಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದ ಕ್ಯಾಪ್ಸಿಕಂನಂತಹ ತರಕಾರಿಗಳ ಪ್ರಮಾಣ ಸಹ ಕಡಿಮೆಯಾಗಿದೆ ಎಂದು ಅವರು ಹೇಳಿದರು.

  ಇರಾನ್ ಸರ್ಕಾರವು ಅದರ ಆಮದು ಮತ್ತು ರಫ್ತಿನ ಮೇಲೆ ತೆರಿಗೆಯನ್ನು ಹೆಚ್ಚಿಸಿರುವುದರಿಂದ ಇರಾನ್‌ನಿಂದ ತಫ್ತಾನ್ ಗಡಿ (ಬಲೂಚಿಸ್ತಾನ್) ಮೂಲಕ ತರಕಾರಿಗಳ ಆಮದು ಕಾರ್ಯಸಾಧ್ಯವಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

  ಖರ್ಜೂರ, ಬಾಳೆಹಣ್ಣಿನ ತೋಟವೂ ನಾಶ
  ಬಹುತೇಕ ತೋಟಗಳು ಪ್ರವಾಹದಿಂದ ನಾಶವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಖರ್ಜೂರ ಮತ್ತು ಬಾಳೆಹಣ್ಣಿನ ಬೆಲೆಯೂ ಏರಿಕೆಯಾಗಲಿದೆ. ಪ್ರವಾಹದಿಂದಾಗಿ ಬಲೂಚಿಸ್ತಾನ ಅಥವಾ ಇತರ ಪ್ರದೇಶಗಳಿಂದ ಸೇಬು ಪೂರೈಕೆಯನ್ನು ನಿಲ್ಲಿಸಲಾಗಿದೆ.

  ಇದನ್ನೂ ಓದಿ: Shocking News: ಛೇ! ಬೆಕ್ಕಿನ ಕೂಗಿಗೆ ಅಮಾಯಕ ಬಲಿ! ದಾರುಣ ಘಟನೆ ಬಯಲಿಗೆ

  ಮೃತಪಟ್ಟವರ ಅಂಕಿ ಅಂಶ ಇಲ್ಲಿದೆ
  ಅಧಿಕಾರಿಗಳ ಪ್ರಕಾರ ಪ್ರವಾಹವು ಇಲ್ಲಿಯವರೆಗೆ 1,030 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಸಿಂಧ್‌ನಲ್ಲಿ 74 ಜನರು ಮೃತಪಟ್ಟಿದ್ದು, ಖೈಬರ್ ಪಖ್ತೌಂಖಾವಾದಲ್ಲಿ 31, ಗಿಲ್ಗಿಟ್-ಬಾಲ್ಟಿಸ್ತಾನ್​ನಲ್ಲಿ 6, ಬಲೂಚಿಸ್ತಾನ್‌ನಲ್ಲಿ 4 ಮತ್ತು ಪಂಜಾಬ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
  Published by:guruganesh bhat
  First published: