ಭಯೋತ್ಪಾದನಾ ವಿರೋಧಿ ಎಫ್‌ಎಟಿಎಫ್ ಸಭೆ; ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯಿಸಿರುವ ಅಂತಾರಾಷ್ಟ್ರೀಯ ಸಮುದಾಯ

ಪ್ರಸ್ತುತ ಪಾಕಿಸ್ತಾನ ಬೂದು ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದರೆ, ಈ ದೇಶ ‘ಡಾರ್ಕ್ ಗ್ರೇ’ ಪಟ್ಟಿಯಲ್ಲಿ ಸ್ಥಾನಪಡೆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಯುರೋಪಿಯನ್ ಒಕ್ಕೂಟದಿಂದ ಹಣಕಾಸಿನ ನೆರವು ಪಡೆಯುವುದು ಕಷ್ಟಕರವಾಗುತ್ತದೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಅನಿಶ್ಚಿತವಾಗಲಿದೆ.

MAshok Kumar | news18-kannada
Updated:October 15, 2019, 9:01 AM IST
ಭಯೋತ್ಪಾದನಾ ವಿರೋಧಿ ಎಫ್‌ಎಟಿಎಫ್ ಸಭೆ; ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯಿಸಿರುವ ಅಂತಾರಾಷ್ಟ್ರೀಯ ಸಮುದಾಯ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್.
  • Share this:
ಪ್ಯಾರಿಸ್ (ಅಕ್ಟೋಬರ್ 15); ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಹಣಕಾಸು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರವನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಹಣಕಾಸು ವಾಚ್​ಡಾಗ್ ಸಂಸ್ಥೆಯಾದ ಎಫ್ಎಟಿಎಫ್ ಪಾಕ್ ಸರ್ಕಾರವನ್ನು ‘ಡಾರ್ಕ್ ಗ್ರೇ’ ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿದೆ.

ಪ್ಯಾರಿಸ್​ನಲ್ಲಿ ವಾರ್ಷಿಕ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಎಲ್ಲಾ ದೇಶದ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಆದರೆ, ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಜರುಗಿಸುವಲ್ಲಿ ಪಾಕಿಸ್ತಾನ ಸರ್ಕಾರ ಎಡವಿರುವ ಕಾರಣ ಸಭೆಯ ಇತರೆ ದೇಶದ ಸದಸ್ಯರು ಪಾಕಿಸ್ತಾನಕ್ಕೆ ಕಟು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಎಫ್ಎಟಿಎಫ್ ಎಂಬುದು 1989ರಲ್ಲಿ ಸ್ಥಾಪಿಸಲಾದ ಅಂತರ್ ಸರ್ಕಾರಿ ಸಂಸ್ಥೆಯಾಗಿದ್ದು, ದೇಶಗಳ ನಡುವಿನ ಹಣ ವರ್ಗಾವಣೆ, ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರ ಹಾಗೂ ಭಯೋತ್ಪಾದಕರಿಗೆ ಹಣಕಾಸು ನೆರವು ಸೇರಿದಂತೆ ಹಣಕಾಸು ವಿನಿಮಯಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳ ಮೇಲೆ ನಿಗಾ ವಹಿಸುತ್ತಿರುತ್ತದೆ. ಅಲ್ಲದೆ, ಭಯೋತ್ಪಾದಕರಿಗೆ ನೆರವು ನೀಡುವ ರಾಷ್ಟ್ರಗಳಿಗೆ ಎಚ್ಚರಿಕೆ ನೀಡುವುದು ಹಾಗೂ ಭಯೋತ್ಪಾದಕರ ನಿಗ್ರಹಕ್ಕೆ ಸೂಕ್ತ ಕ್ರಮಗಳನ್ನು ಜರುಗಿಸುವಂತೆ ಎಲ್ಲಾ ದೇಶಗಳಿಗೂ ತಾಕೀತು ಮಾಡುವುದು ಈ ವಾಚ್​ಡಾಗ್ ಸಂಸ್ಥೆಯ ಕೆಲಸ.

ಕಳೆದ ವರ್ಷ ಜೂನ್​ನಲ್ಲಿ ಪ್ಯಾರಿಸ್ ಮೂಲಕ ಈ ವಾಚ್​ಡಾಗ್ ಎಫ್ಎಟಿಎಫ್ ಸಂಸ್ಥೆ ಪಾಕಿಸ್ತಾನವನ್ನು ‘ಗ್ರೇ’ ಪಟ್ಟಿಗೆ ಸೇರಿಸಿತ್ತು. ಅಲ್ಲದೆ, 2019ರ ಅಕ್ಟೋಬರ್ ಒಳಗಾಗಿ ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಜರುಗಿಸದೆ ಇದ್ದರೆ ಕಪ್ಪು ಪಟ್ಟಿಗೆ ಸೇರಿಸುವ ಬೆದರಿಕೆ ಒಡ್ಡಿತ್ತು. ಆದರೆ, ಪಾಕ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಇದೀಗ ಇರಾನ್ ಮತ್ತು ಉತ್ತರ ಕೋರಿಯಾ ದೇಶಗಳಂತೆ ಪಾಕಿಸ್ತಾನವೂ ಸಹ ಇದೀಗ ಕಪ್ಪು ಪಟ್ಟಿಯಲ್ಲಿ ಸ್ಥಾನ ಪಡೆಯುವ ಬೆದರಿಕೆಯನ್ನು ಎದುರಿಸುತ್ತಿದೆ.

ಪ್ರಸ್ತುತ ಪಾಕಿಸ್ತಾನ ಬೂದು ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದರೆ, ಈ ದೇಶ ‘ಡಾರ್ಕ್ ಗ್ರೇ’ ಪಟ್ಟಿಯಲ್ಲಿ ಸ್ಥಾನಪಡೆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಯುರೋಪಿಯನ್ ಒಕ್ಕೂಟದಿಂದ ಹಣಕಾಸಿನ ನೆರವು ಪಡೆಯುವುದು ಕಷ್ಟಕರವಾಗುತ್ತದೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಅನಿಶ್ಚಿತವಾಗಲಿದೆ.

ಇದನ್ನೂ ಓದಿ : ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು; ಟ್ರಕ್ ಚಾಲಕನ ಹತ್ಯೆಯ ಹಿಂದೆ ಪಾಕ್​ ಉಗ್ರರ ಕೈವಾಡದ ಶಂಕೆ

First published:October 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading