ಪಾಕಿಸ್ತಾನಕ್ಕೆ ಕಾಶ್ಮೀರ ಬೇಡ, ಇರುವ ನಾಲ್ಕು ಪ್ರಾಂತ್ಯಗಳನ್ನೇ ನೋಡಿಕೊಳ್ಳಲು ಸರ್ಕಾರಕ್ಕೆ ಆಗುತ್ತಿಲ್ಲ; ಶಾಹಿದ್​​ ಅಫ್ರಿದಿ

ಇಮ್ರಾನ್​​ ಖಾನ್​​ ನೇತೃತ್ವದ ಸರ್ಕಾರ ದೇಶವನ್ನು ಮೂಲಭೂತವಾದಿಗಳಿಂದ ಕಾಪಾಡುವಲ್ಲಿ ಎಡವಿದೆ. ಜಮ್ಮು-ಕಾಶ್ಮೀರವನ್ನು ಪ್ರತ್ಯೇಕ ದೇಶವಾಗಿ ಘೋಷಿಸಬೇಕು, ಶಾಹಿದ್​ ಅಫ್ರಿದಿ


Updated:November 14, 2018, 4:08 PM IST
ಪಾಕಿಸ್ತಾನಕ್ಕೆ ಕಾಶ್ಮೀರ ಬೇಡ, ಇರುವ ನಾಲ್ಕು ಪ್ರಾಂತ್ಯಗಳನ್ನೇ ನೋಡಿಕೊಳ್ಳಲು ಸರ್ಕಾರಕ್ಕೆ ಆಗುತ್ತಿಲ್ಲ; ಶಾಹಿದ್​​ ಅಫ್ರಿದಿ
#6 ಶಾಹಿದ್ ಅಫ್ರಿದಿ
  • Share this:
ನ್ಯೂಸ್​​-18 ಕನ್ನಡ

ನವದೆಹಲಿ(ನ.14): ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ದಿನದಿಂದ ಕಾಶ್ಮೀರಕ್ಕಾಗಿ ಎರಡೂ ದೇಶಗಳ ನಡುವೆ ಸಮರ ನಡೆಯುತ್ತಲೇ ಇದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಪಾಕ್​ ಸರ್ಕಾರವನ್ನು ಕೆಣಕಿದ್ದಾರೆ.

ಕಾಶ್ಮೀರಕ್ಕಾಗಿ ಪಾಕಿಸ್ತಾನ ಇಟ್ಟಿರುವ ಬೇಡಿಕೆಯಿಂದ ಹಿಂದೆ ಸರಿಯಬೇಕು, ಇರುವ ನಾಲ್ಕು ಪ್ರಾಂತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಅಫ್ರಿದಿ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಕಿವಿಮಾತು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.

ನಮ್ಮ ಪಾಕ್​​ ಸರ್ಕಾರಕ್ಕೆ ಸ್ವದೇಶವನ್ನೇ ನಿಯಂತ್ರಿಸುವಷ್ಟು ಶಕ್ತಿಯಿಲ್ಲ. ಈ ವೇಳೆ ಭಾರತದ ವಶದಲ್ಲಿರುವ ಜಮ್ಮು-ಕಾಶ್ಮೀರ ಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಇದು ಅಸಮಂಜಸ ನಡೆಯಾಗಿದ್ದು, ಕೂಡಲೇ ಈ ಬೇಡಿಕೆಯನ್ನು ಕೈಬಿಡಬೇಕೆಂದು ಮನವಿ ಮಾಡಿದ್ದಾರೆ. ಈ ಮೂಲಕ ತಮ್ಮ ದೇಶದ ವಿರುದ್ಧವೇ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಕಿಡಿಕಾರಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಫ್ಲಿಪ್​ಕಾರ್ಟ್​ ಸಂಸ್ಥಾಪಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ: ರಾಜೀನಾಮೆಗೆ ಇದೇನಾ ಕಾರಣ?

ಪಾಕಿಸ್ತಾನಕ್ಕೆ ಜಮ್ಮು-ಕಾಶ್ಮೀರ ಬೇಕಿಲ್ಲ. ನಮ್ಮ ದೇಶದ ನಾಲ್ಕು ಪ್ರಾಂತ್ಯಗಳನ್ನೇ ನಿಂಯತ್ರಿಸಲು ಪಾಕ್​​ ಸರ್ಕಾರಕ್ಕೆ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಮತ್ತೊಂದು ಪ್ರದೇಶವನ್ನು ತೆಗೆದುಕೊಂಡು ಹೇಗೆ ಆಡಳಿತ ನಡೆಸಲು ಸಾಧ್ಯ ಎಂದು ಶಾಹಿದಿ ಅಫ್ರಿದಿ ಪ್ರಶ್ನಿಸಿದ್ದಾರೆ.

ಅಲ್ಲದೇ ಇಮ್ರಾನ್​​ ಖಾನ್​​ ನೇತೃತ್ವದ ಸರ್ಕಾರ ನಮ್ಮ ದೇಶವನ್ನು ಮೂಲಭೂತವಾದಿಗಳಿಂದ ಕಾಪಾಡುವಲ್ಲಿ ಎಡವಿದೆ. ದೇಶದ ಏಕತೆಯನ್ನು ತೋರುವಲ್ಲಿ ವಿಫಲವಾಗಿದೆ. ಜಮ್ಮು-ಕಾಶ್ಮೀರವನ್ನು ಪ್ರತ್ಯೇಕ ದೇಶವಾಗಿ ಘೋಷಿಸಬೇಕು. ಪಾಕಿಸ್ತಾನ ಮತ್ತು ಭಾರತ ಎರಡು ದೇಶಗಳಿಗೆ ನೀಡಬಾರದು. ಜಮ್ಮು-ಕಾಶ್ಮೀರದಲ್ಲಿ ಪ್ರತಿನಿತ್ಯ ಈ ವಿಚಾರಕ್ಕೆ ಸಾಮಾನ್ಯ ಜನ ಸಾಯುತ್ತಿದ್ದಾರೆ ಎಂದು ಮಾಜಿ ಕ್ರಿಕೆಟಿಗ ತಮ್ಮ ನೋವನ್ನು ತೋಡಿಕೊಂಡರು.ಇದನ್ನೂ ಓದಿ: ಗೆಹ್ಲೊಟ್​​ - ಪೈಲಟ್​ ಹೆಗಲಿಗೆ ರಾಜಸ್ಥಾನ ಚುನಾವಣೆ ಜವಾಬ್ದಾರಿ; ಎರಡೂ ಬಣಗಳ ಬಂಡಾಯ ಶಮನಕ್ಕೆ ಯತ್ನ

ಜಮ್ಮು-ಕಾಶ್ಮೀರ ಜನತೆಯನ್ನು ಬದುಕಲು ಬಿಡಬೇಕು. ಅವರು ನಮ್ಮ ಹಾಗೆಯೇ ಮನುಷ್ಯರು, ಹೀಗಾಗಿ ಮನುಷ್ಯತ್ವ ತೋರುವುದು ನಮ್ಮ ಕರ್ತವ್ಯ. ಭಾರತಕ್ಕಾಗಲೀ, ಪಾಕಿಸ್ತಾನಕ್ಕಾಗಲೀ ಜಮ್ಮು-ಕಾಶ್ಮೀರವನ್ನು ಸೇರ್ಪಡೆ ಮಾಡುವುದು ಬೇಡ. ನಾವು ಜಮ್ಮು-ಕಾಶ್ಮೀರವನ್ನು ಪ್ರತ್ಯೇಕ ದೇಶವಾಗಿ ಘೋಷಿಸದಿದ್ದರೆ, ಜನ ಪ್ರತಿನಿತ್ಯ ಸಾವು - ಬದುಕಿನ ನಡುವೆ ಜೀವನ ಸಾಗಿಸಬೇಕಾದ ಸ್ಥಿತಿ ಮುಂದುವರೆಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ಅಫ್ರಿದಿ ಈ ಹಿಂದೆಯೂ ನೀಡಿದ್ದರು.

----------
ಚುನಾವಣೆ ನಂತರವೂ ಜಾತಿ ರಾಜಕಾರಣ ಮುಂದುವರೆಸಿದ ಆನಂದ್​ ನ್ಯಾಮಗೌಡ
First published:November 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading