• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Earthquake in Turkey: ಟರ್ಕಿ ನೆರವಿಗೆ ಹೊರಟ ಭಾರತ ವಿಮಾನಕ್ಕೆ ವಾಯಮಾರ್ಗ ನಿರಾಕರಣೆ, ಮಾನವೀಯತೆ ಮರೆತ ಪಾಕ್​

Earthquake in Turkey: ಟರ್ಕಿ ನೆರವಿಗೆ ಹೊರಟ ಭಾರತ ವಿಮಾನಕ್ಕೆ ವಾಯಮಾರ್ಗ ನಿರಾಕರಣೆ, ಮಾನವೀಯತೆ ಮರೆತ ಪಾಕ್​

ಟರ್ಕಿಗೆ ಹೊರ ಭಾರತ ವಿಮಾನ

ಟರ್ಕಿಗೆ ಹೊರ ಭಾರತ ವಿಮಾನ

ಭೂಕಂಪದಿಂದ ಟರ್ಕಿಯಲ್ಲಿ ಸುಮಾರು 5,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ರಕ್ಷಣಾ ಕಾರ್ಯಕ್ಕಾಗಿ ಟರ್ಕಿಗೆ ಭಾರತ ಸಹಾಯಹಸ್ತ ಚಾಚಿದ್ದು, ಪರಿಹಾರ ಸಾಮಾಗ್ರಿ, ಔಷಧಿಗಳು, NDRF ರಕ್ಷಣಾ ತಂಡ, ವೈದ್ಯಕೀಯ ತಂಡ ಸೇರಿದಂತೆ ಹಲವು ವಸ್ತುಗಳನ್ನು ಒಳಗೊಂಡಿದ್ದ ವಿಮಾನ ಟರ್ಕಿಗೆ ಪ್ರಯಾಣ ಬೆಳೆಸಿತ್ತು. ಆದರೆ ಈ ವಿಮಾನಕ್ಕೆ ಪಾಕಿಸ್ತಾನ ತನ್ನ ವಾಯುಪ್ರದೇಶ ಬಳಸದಂತೆ ತಾಕೀತು ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಮುಂದೆ ಓದಿ ...
 • Share this:

  ನವದೆಹಲಿ: ಸಿರಿಯಾ ಮತ್ತು ಟರ್ಕಿಯಲ್ಲಿ (Syria and Turkey)  ಭೀಕರ ಭೂಕಂಪ (Earthquake)ಸಂಭವಿಸಿ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಇಡೀ ಪ್ರಪಂಚ ದುರಂತದ ಬಗ್ಗೆ ಮರುಕ ವ್ಯಕ್ತಪಡಿಸುತ್ತಿದೆ. ಈ ಸಂದರ್ಭದಲ್ಲಿ ನೊಂದಿರುವ ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ವಿಶ್ವದಾದ್ಯಂತ ಹಲವು ರಾಷ್ಟ್ರಗಳು ನೆರವು ಘೋಷಿಸುತ್ತಿವೆ. ಈ ಮಹತ್ವದ ಕಾರ್ಯಕ್ಕೆ ಭಾರತ ಕೂಡ ಕೈ ಜೋಡಿಸಿದ್ದು, ಟರ್ಕಿಯಲ್ಲಿ ರಕ್ಷಣಾ ಕಾರ್ಯಕ್ಕೆ ಸಾಧ್ಯವಾದಷ್ಟು ನೆರವು ನೀಡುವುದಾಗಿ ಘೋಷಿಸಿದೆ. ಆದರೆ ಟರ್ಕಿಗೆ ತೆರಳಲು ಸಜ್ಜಾಗಿರುವ ಭಾರತದ (India) ವಿಮಾನಕ್ಕೆ ಪಾಕಿಸ್ತಾನ (Pakistan) ತನ್ನ ವಾಯುಪ್ರದೇಶದ ಪ್ರವೇಶವನ್ನು ನಿರಾಕರಿಸಿ ಮಾನವೀಯತೆ ಮರೆತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.


  ಬೇರೆ ಮಾರ್ಗದ ಮೂಲಕ ತೆರಳಿದ ವಿಮಾನ


  ಭೂಕಂಪದಿಂದ ಟರ್ಕಿಯಲ್ಲಿ ಸುಮಾರು 5,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ರಕ್ಷಣಾ ಕಾರ್ಯಕ್ಕಾಗಿ ಟರ್ಕಿಗೆ ಭಾರತ ಸಹಾಯಹಸ್ತ ಚಾಚಿದ್ದು, ಪರಿಹಾರ ಸಾಮಾಗ್ರಿ, ಔಷಧಿಗಳು, NDRF ರಕ್ಷಣಾ ತಂಡ, ವೈದ್ಯಕೀಯ ತಂಡ ಸೇರಿದಂತೆ ಹಲವು ವಸ್ತುಗಳನ್ನು ಒಳಗೊಂಡಿದ್ದ ವಿಮಾನ ಟರ್ಕಿಗೆ ಪ್ರಯಾಣ ಬೆಳೆಸಿತ್ತು. ಆದರೆ ಈ ವಿಮಾನಕ್ಕೆ ಪಾಕಿಸ್ತಾನ ತನ್ನ ವಾಯುಪ್ರದೇಶ ಬಳಸದಂತೆ ತಾಕೀತು ಮಾಡಿದೆ ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ.


  ಭಾರತದ ಪರಿಹಾರ ಸಾಮಗ್ರಿ ಹೊತ್ತಿದ್ದ ಕಾರ್ಗೊ ವಿಮಾನ ಬೋಯಿಮಗ್ ಸಿ- 17ಗೆ ಪಾಕಿಸ್ತಾನ ಪ್ರವೇಶ ನಿರ್ಬಂಧಿಸಿದ ಕಾರಣ, ಭಾರತೀಯ ವಿಮಾನ ಸುತ್ತಿ ಬಳಸಿ ಬೇರೆ ಮಾರ್ಗದಿಂದ ಟರ್ಕಿಯ ಅಡಾನ ವಿಮಾನ ನಿಲ್ದಾಣ ತಲುಪಿದೆ ಎಂದು ತಿಳಿದುಬಂದಿದೆ.


  ಇದನ್ನೂ ಓದಿ: Turkey Earthquake: ಭೂಕಂಪದ ತೀವ್ರತೆಗೆ ಒಡೆದು ಎರಡು ತುಂಡಾದ ಟರ್ಕಿಯ ಏರ್‌ಪೋರ್ಟ್‌ ರನ್‌ವೇ!


  ಪಾಕಿಸ್ತಾನದ ವರ್ತನೆ ಇದೇ ಮೊದಲಲ್ಲ


  ಪಾಕಿಸ್ತಾನ ಭಾರತೀಯ ವಿಮಾನಕ್ಕೆ ತಡೆಯುಡ್ಡುತ್ತಿರುವುದು ಇದೇ ಮೊದಲೇನಲ್ಲ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಪಾಕಿಸ್ತಾನ ಭಾರತ ವಾಯುಮಾರ್ಗಕ್ಕಾಗಿ ತನ್ನ ಭೂಪ್ರದೇಶವನ್ನು ಬಳಸದಂತೆ ತಡೆದಿದೆ. ಡಿಸೆಂಬರ್‌ನಲ್ಲಿ, ಯುದ್ಧ ಪೀಡಿತ ರಾಷ್ಟ್ರಕ್ಕೆ ತನ್ನ ಮಾನವೀಯ ನೆರವಿನ ಭಾಗವಾಗಿ ಭಾರತವು 50,000 ಮೆಟ್ರಿಕ್ ಟನ್ ಗೋಧಿಯನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿತು. ಅಂದೂ ಕೂಡ ಪಾಕಿಸ್ತಾನ ಇದೇ ರೀತಿ ವರ್ತಿಸಿತ್ತು.


  ಭಾರತದಿಂದ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ವಾಘಾ ಗಡಿಯಿಂದ ಪಾಕಿಸ್ತಾನದ ಟ್ರಕ್‌ಗಳಲ್ಲಿ ಸಾಗಿಸಲು ಪ್ರಸ್ತಾಪಿಸಿತು. ನಂತರ ಅದು "ಮಾನವೀಯ ಉದ್ದೇಶಗಳಿಗಾಗಿ ಅಸಾಧಾರಣ ಆಧಾರ" ವನ್ನು ಉಲ್ಲೇಖಿಸಿ ಟ್ರಕ್‌ಗಳನ್ನು ಹಾದುಹೋಗಲು ಅವಕಾಶ ಮಾಡಿಕೊಟ್ಟಿತು. ಆದರೆ ಇಂದು ಮತ್ತೆ ಭಾರತೀಯ ವಿಮಾನಕ್ಕೆ ಅವಕಾಶ ಕೊಡದೇ ಟೀಕೆಗೆ ಗುರಿಯಾಗಿದೆ.
  100 ಸದಸ್ಯರ ತಂಡ ರವಾನೆ


  ಇನ್ನು ಟರ್ಕಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮಾಡಲು 100 ಸದಸ್ಯರ 2 ಎನ್‌ಡಿಆರ್‌ಎಫ್‌ ತಂಡ ಹಾಗೂ ವಿಶೇಷ ತರಬೇತಿ ಪಡೆದ ಶ್ವಾನ ಪಡೆಗಳು, ಅಗತ್ಯ ಸಾಮಗ್ರಿಗಳು ಹಾಗೂ ನುರಿತ ವೈದ್ಯರುಗಳು, ಅರೆ ವೈದ್ಯಕೀಯ ತಂಡಗಳು ಹಾಗೂ ಅಗತ್ಯ ಔಷಧಗಳೊಂದಿಗೆ ವೈದ್ಯಕೀಯ ತಂಡಗಳ ಭಾರತೀಯ ವಾಯುಸೇನಾ ವಿಮಾನದಲ್ಲಿ ಟರ್ಕಿ ತಲುಪಿದೆ.


  ಭಾರತಕ್ಕೆ ಧನ್ಯವಾದ ಅರ್ಪಿಸಿದ ಟರ್ಕಿ


  ಟರ್ಕಿಯಲ್ಲಿ ಭಾರತೀಯ ಮಿಷನ್ ಟರ್ಕಿಯಲ್ಲಿ ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ. ಭಾರತದಲ್ಲಿರುವ ಟರ್ಕಿ ರಾಯಭಾರ ಕಚೇರಿಯು ಭಾರತ ಸರ್ಕಾರ ನೀಡಿದ ಸಹಾಯಕ್ಕಾಗಿ ಧನ್ಯವಾದಗಳನ್ನು ತಿಳಿಸಿದೆ. ಟರ್ಕಿಯ ರಾಯಭಾರಿ ಫಿರತ್​ ಸುನೆಲ್ ಅಗತ್ಯಕ್ಕಾಗುವ ಸ್ನೇಹಿತ ನಿಜವಾಗಿಯೂ ಸ್ನೇಹಿತ ಎಂದು ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.


  5000ಕ್ಕೇರಿದ ಸಾವು


  ಸೋಮವಾರ ಸಂಭವಿಸಿದ ಎರಡು ಪ್ರಬಲ ಭೂಕಂಪದಿಂದ ತತ್ತರಿಸಿರುವ ಟರ್ಕಿಯಲ್ಲಿ ಇಂದು ಮತ್ತೊಮ್ಮೆ 5.6 ತೀವ್ರತೆಯ ಭೂಕಂಪ ವರದಿಯಾಗಿದೆ. ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌ನಿಂದ 33 ಕಿಲೋಮೀಟರ್ ದೂರದಲ್ಲಿ ಹಾಗೂ 17.9 ಕಿ.ಮೀ. ಆಳದಲ್ಲಿ ಸೋಮವಾರ ಮುಂಜಾನೆ 4.17ರ ಹೊತ್ತಿಗೆ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಕೆಲ ಹೊತ್ತಿನ ಬಳಿಕ 7.5 ತೀವ್ರತೆಯ ಭೂಕಂಪವಾಗಿತ್ತು. ಇದರಿಂದಾಗಿ ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿದ್ದವು. ಎರಡು ದಿನಗಳಿಂದ ಟರ್ಕಿ ಮತ್ತು ಸಿರಿಯಾದಲ್ಲಿ 5000 ಜನರು ಪ್ರಾಣ ಬಿಟ್ಟಿದ್ದಾರೆ. ಸುಮಾರು 15000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

  Published by:Rajesha B
  First published: