ದಿವಾಳಿಯಾಗಿ ಕಂಗೆಟ್ಟಿರುವ ಪಾಕಿಸ್ತಾನ ಸರ್ಕಾರ(Pakistan Government) ದೇಶದ ಆರ್ಥಿಕತೆಯನ್ನು(Economy) ಸರಿದೂಗಿಸಲು ತನ್ನ ಆಸ್ತಿ-ಪಾಸ್ತಿಗಳ ಮೇಲೆ ಕಣ್ಣಿಟ್ಟಿದೆ. ಸದ್ಯ ತನ್ನ ರಾಯಭಾರ ಕಚೇರಿ(Embassy Property) ಮಾರಾಟಕ್ಕೆ(Sale) ಮುಂದಾಗಿದ್ದು, ಬಿಡ್(Bid) ಸಹ ಕರೆಯಲಾಗಿದೆ.
ರಾಯಭಾರಿ ಕಚೇರಿಯ ಮಾರಾಟಕ್ಕೆ ಮುಂದಾದ ಪಾಕ್
ಪಾಕ್ ಆರ್ಥಿಕ ಸ್ಥಿತಿ ಹೀನಾಯ ಮಟ್ಟಕ್ಕೆ ಬಂದು ತಲುಪಿದೆ, ಇದಕ್ಕೆ ಪಾಕ್ ತನ್ನ ಕಟ್ಟಡ, ಆಸ್ತಿಗಳನ್ನು ಮಾರಾಟ ಮಾಡುವ ಹಂತಕ್ಕೆ ತಲುಪಿದೆ. ತಾಜಾ ನಿದರ್ಶನ ಎನ್ನುವಂತೆ ಅಮೇರಿಕಾದ ವಾಷಿಂಗ್ಟನ್ಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಸೇಲ್ ಮಾಡಲು ಪಾಕ್ ಸರ್ಕಾರ ನಿರ್ಧರಿಸಿದೆ.
ವಾಷಿಂಗ್ಟನ್ನಲ್ಲಿರುವ ದೇಶದ ರಾಯಭಾರ ಕಚೇರಿಯ ರಕ್ಷಣಾ ವಿಭಾಗವನ್ನು ಹೊಂದಿದ್ದ ಕಟ್ಟಡಕ್ಕಾಗಿ ಪಾಕಿಸ್ತಾನವು ಈಗಾಗ್ಲೇ ಮೂರು ಬಿಡ್ಗಳನ್ನು ಪಡೆದುಕೊಂಡಿದೆ.
ಪಾಕಿಸ್ತಾನವು ವಾಷಿಂಗ್ಟನ್ನಲ್ಲಿ 1950 ರ ದಶಕದ ಮಧ್ಯಭಾಗದಿಂದ 2000 ರ ದಶಕದ ಆರಂಭದವರೆಗೆ ರಾಷ್ಟ್ರದ ರಕ್ಷಣಾ ಇಲಾಖೆಯನ್ನು ಹೊಂದಿದ್ದ ಕಟ್ಟಡವನ್ನು ಮಾರಾಟ ಮಾಡುತ್ತಿದೆ.
ಕಟ್ಟಡದಲ್ಲಿ ಯಾವುದೇ ರೀತಿಯ ಕೆಲಸ-ಕಾರ್ಯಗಳು ನಿಷ್ಕ್ರಿಯಗೊಂಡ ಕಾರಣ ಕಟ್ಟಡದ ರಾಜತಾಂತ್ರಿಕ ಸ್ಥಾನಮಾನವನ್ನು 2018 ರಲ್ಲಿ ಹಿಂತೆಗೆದುಕೊಳ್ಳಲಾಯಿತು.
ಇದನ್ನೂ ಓದಿ:Elon Musk: ಅಮೆರಿಕಾ ಅಧ್ಯಕ್ಷರಾಗ್ತಾರಂತೆ ಎಲಾನ್ ಮಸ್ಕ್! ಭವಿಷ್ಯ ನುಡಿದ ರಷ್ಯಾದ ಮಾಜಿ ಅಧ್ಯಕ್ಷ
ಬಿಡ್ ರೇಸ್ನಲ್ಲಿ ಯಾರಿದ್ದಾರೆ?
ಪಾಕ್ ರಾಯಭಾರ ಕಚೇರಿಯನ್ನು ಖರೀದಿಸಲು ಹಲವರು ಬಿಡ್ ಮಾಡಿದ್ದಾರೆ. ಅದರಲ್ಲಿ ಮೂವರು ಪ್ರಮುಖವಾಗಿ ಖರೀದಿ ರೇಸ್ನಲ್ಲಿದ್ದಾರೆ.
ಮೊದಲನೆಯದಾಗಿ ಜೆವಿಷ್ ಗ್ರೂಪ್ 6.8 ಮಿಲಿಯನ್ ಡಾಲರ್ಗೆ ಬಿಡ್ ಮಾಡಿದೆ ಎಂದು ವಾಷಿಂಗ್ಟನ್ನ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನಿ ಪತ್ರಿಕೆ ಡಾನ್ ವರದಿ ಮಾಡಿದೆ.
ಎರಡನೇ ಸ್ಥಾನದಲ್ಲಿ ಭಾರತ ಮೂಲದ ರಿಯಲ್ ಎಸ್ಟೇಟ್ ಗ್ರೂಪ್ ಸುಮಾರು $ 5 ಮಿಲಿಯನ್ ಬಿಡ್ ಹೊಂದಿದೆ, ನಂತರ ಪಾಕಿಸ್ತಾನಿ ರಿಯಲ್ ಎಸ್ಟೇಟ್ ಗ್ರೂಪ್ ಸುಮಾರು $ 4 ಮಿಲಿಯನ್ ಬಿಡ್ ಮಾಡಿದೆ ಎಂದು ವರದಿ ತಿಳಿಸಿದೆ.
ಮೂವರು ಬಿಡ್ದಾರರು ಸಾಕಷ್ಟು ಪ್ರಭಾವಿಶಾಲಿಗಳಾಗಿದ್ದು, ಭಾರತ ಸೇರಿ ಯಾವ ದೇಶದ ಪಾಲಿಗೆ ಪಾಕ್ ರಾಯಭಾರ ಕಚೇರಿ ಹೋಗುತ್ತೆ ಅಂತಾ ಕಾದು ನೋಡಬೇಕಿದೆ.
ಮತ್ತೊಂದು ಕಟ್ಟಡವೂ ಮಾರಾಟಕ್ಕಿದೆ
ವಾಷಿಂಗ್ಟನ್ನಲ್ಲಿರುವ ದೇಶದ ಮೂರು ರಾಜತಾಂತ್ರಿಕ ಆಸ್ತಿಗಳಲ್ಲಿ ಒಂದಾದ ಪ್ರತಿಷ್ಠಿತ R ಸ್ಟ್ರೀಟ್ NW ನಲ್ಲಿರುವ ಕಟ್ಟಡವು ಸಹ ಮಾರಾಟಕ್ಕಿದೆ ಎಂದು ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ಡಾನ್ಗೆ ತಿಳಿಸಿದ್ದಾರೆ.
ಸೋಮವಾರ, ಪಾಕಿಸ್ತಾನದ ಖಾಸಗೀಕರಣದ ಕ್ಯಾಬಿನೆಟ್ ಸಮಿತಿಯು ನ್ಯೂಯಾರ್ಕ್ನಲ್ಲಿರುವ ರೂಸ್ವೆಲ್ಟ್ ಹೋಟೆಲ್ ಸೈಟ್ ಅನ್ನು ಗುತ್ತಿಗೆಗೆ ಹಣಕಾಸು ಸಲಹೆಗಾರರನ್ನು ನೇಮಿಸುವಂತೆ ಖಾಸಗೀಕರಣ ಆಯೋಗವನ್ನು ಕೇಳಿದೆ. ಹಣಕಾಸು ಸಚಿವ ಇಶಾಕ್ ದಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಾಷಿಂಗ್ಟನ್ನಲ್ಲಿರುವ ರಾಯಭಾರ ಕಚೇರಿ ಅಧಿಕಾರಿಗಳು ಕಟ್ಟಡವನ್ನು ಹಾಗೆಯೇ ಮಾರಾಟ ಮಾಡಬೇಕೆ ಅಥವಾ ಕೆಲವು ನವೀಕರಣದ ನಂತರ ಮಾಡಬೇಕೆ ಎಂಬುದರ ಬಗ್ಗೆ ಮೌಲ್ಯಮಾಪಕರನ್ನು ಸಂಪರ್ಕಿಸುತ್ತಿದ್ದಾರೆ ಎಂದು ವರದಿಯಲ್ಲಿ ಸೇರಿಸಲಾಗಿದೆ.
"ನಾವು ಯಾವುದೇ ಆತುರದಲ್ಲಿಲ್ಲ, ಮತ್ತು ಪಾಕಿಸ್ತಾನಕ್ಕೆ ಲಾಭವಾದರೆ ಮಾತ್ರ ನಾವು ಖರೀದಿ ಒಪ್ಪಂದವನ್ನು ಮುಕ್ತಾಯಗೊಳಿಸುತ್ತೇವೆ" ಎಂದು ರಾಯಭಾರ ಕಚೇರಿಯ ಅಧಿಕಾರಿ ಹೇಳಿದ್ದಾರೆ. ದೇಶದ ಕ್ಯಾಬಿನೆಟ್ ಸಹ ಮಾರಾಟಕ್ಕೆ ಅನುಮೋದನೆ ನೀಡಿದೆ.
ಇದನ್ನೂ ಓದಿ:Intranasal Covid Vaccine: ಮೂಗಿನ ಮೂಲಕ ಕೊರೊನಾ ಲಸಿಕೆ, ಯಾವ ಆಸ್ಪತ್ರೆಯಲ್ಲಿ ಎಷ್ಟು ದರ?
ಸಾಲ ಸಂಕಟ
ಪಾಕಿಸ್ತಾನದ ಸಾಲ ಕೂಡ ಈಗ ಬೆಟ್ಟದಷ್ಟಿದೆ. ಪಾಕಿಸ್ತಾನದ ಸಾಲವು ಹೊಸ ಗರಿಷ್ಠ ಪಾಕಿಸ್ತಾನಿ ರುಪಾಯಿ 60 ಟ್ರಿಲಿಯನ್ಗೆ ತಲುಪಿದೆ. ಪಾಕಿಸ್ತಾನದ ವಿದೇಶಿ ಮೀಸಲು ಈಗಾಗಲೇ ಪ್ರತಿ ತಿಂಗಳು ಬೇಡಿಕೆಯಲ್ಲಿದೆ. ಹಣದುಬ್ಬರ ಗಣನೀಯವಾಗಿ ಏರಿಕೆಯಾಗಿದ್ದು, ವಸ್ತುಗಳ ಬೆಲೆ ಸಹ ಗಗನಕ್ಕೇರಿದೆ.
ಕತ್ತೆ ಮಾರಾಟ ಮಾಡಿದ್ದ ಪಾಕ್
ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿರುವ ಪಾಕ್ ಈ ಹಿಂದೆ ರಫ್ತಿಗೆ ತನ್ನ ಕತ್ತೆಗಳನ್ನು ಬಳಸಿಕೊಂಡಿತ್ತು. ನೆರೆಯ ಚೀನಾ ದೇಶಗಳಿಗೆ ತನ್ನ ದೇಶದ ಕತ್ತೆಗಳನ್ನು ಮಾರುವ ನಿರ್ಧಾರವನ್ನು ಪಾಕ್ ಸರ್ಕಾರ ತೆಗೆದುಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ