Pakistan Police: ಕಳೆದ ಕೆಲವು ತಿಂಗಳುಗಳ ಹಿಂದೆ ಆಫ್ಘಾನಿಸ್ತಾನದಲ್ಲಿ (Afghanistan) ಕುಟುಂಬ ನಿರ್ವಹಣೆಗಾಗಿ ತಂದೆಯೊಬ್ಬ(Father)ತನ್ನ ಎಂಟು ವರ್ಷದ ಮಗಳನ್ನು ಮುದುಕನೊಬ್ಬ ನಿಗೆ ಮಾರಾಟ(Sold) ಮಾಡಿದ ದಾರುಣ ಘಟನೆ ನಡೆದಿತ್ತು.. ಈಗ ಪಾಕಿಸ್ತಾನದಲ್ಲಿಯು ಸಹ ತಂದೆಯೊಬ್ಬ ತನ್ನ ಪುಟ್ಟ ಮಕ್ಕಳನ್ನ ರಸ್ತೆಯಲ್ಲಿ ನಿಂತು ಮಾರಾಟ ಮಾಡಲು ಮುಂದಾಗಿರುವ ಘಟನೆ ನಡೆದಿದೆ. ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ (Imran khan) ಅಧಿಕಾರ ವಹಿಸಿಕೊಂಡ ಬಳಿಕ ನಯಾ ಪಾಕಿಸ್ತಾನ ಎಂಬ ಮಾತನ್ನು ಅಲ್ಲಿನ ಪ್ರಜೆಗಳಿಗೆ ನೀಡಿದ್ರು. ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತು ಸುಳ್ಳಾಗಿತ್ತು ಪಾಕಿಸ್ತಾನದ(Pakistan) ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸರಕಾರ ನಿರ್ವಹಣೆಗಾಗಿ ಸರಕಾರಿ ಆಸ್ತಿಗಳನ್ನು(Government assets)ಮಾರಾಟ ಮಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ..
50 ಸಾವಿರಕ್ಕೆ ಮಗು ಮಾರಲು ಮುಂದಾದ ಪೊಲೀಸ್
ಇದರ ಜೊತೆಗೆ ಪಾಕಿಸ್ತಾನದಲ್ಲಿ ಸೇನೆ ಮತ್ತು ಪ್ರಧಾನಿ ಇಮ್ರಾನ್ ಖಾನ್ ನಡುವಿನ ವಿರಸ ತೀವ್ರವಾಗಿದ್ದು, ಶೀಘ್ರವೇ ಮಾಜಿ ಪ್ರಧಾನಿ ನವಾಜ್ ಶರೀಫ್ ಪಾಕಿಸ್ತಾನದ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಹೀಗಿರುವಾಗಲೇ ಪಾಕಿಸ್ತಾನದ ಪ್ರಜೆಗಳು ತಮ್ಮ ಕುಟುಂಬ ನಿರ್ವಹಣೆಗಾಗಿ ತೀವ್ರ ಸಂಕಷ್ಟ ಪಡುತ್ತಿವೆ.. ಇದಕ್ಕೆ ಉತ್ತಮ ಉದಾಹರಣೆ ಎಂದರೆ ವೃತ್ತಿಯಲ್ಲಿ ಪೋಲಿಸ್ ಆಗಿರುವ ತಂದೆಯೊಬ್ಬ ಕೇವಲ ಐವತ್ತು ಸಾವಿರ ರೂಪಾಯಿ ಗಳಿಗಾಗಿ ನಡುರಸ್ತೆಯಲ್ಲಿ ನಿಂತು ತನ್ನ ಮಕ್ಕಳನ್ನ ಹರಾಜು ಕೂಗಿದ್ದಾನೆ..
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಪೊಲೀಸ್ ನಿಸಾರ್ ತನ್ನ 2 ಪುಟ್ಟ ಮಕ್ಕಳೊಂದಿಗೆ ರಸ್ತೆಗೆ ಬಂದು,ನನ್ನ ಮಗು ಮಾರಾಟಕ್ಕೆ ಇದ್ದಾನೆ ಆತನ ಬೆಲೆ ಕೇವಲ 50 ಸಾವಿರ ರೂಪಾಯಿ ಎಂದು ಕೂಗಲು ಶುರು ಮಾಡಿದ್ದಾನೆ..
ಮೇಲಧಿಕಾರಿಯ ಲಂಚದ ಆಸೆ ಪೂರೈಕೆಗೆ ಮಗು ಮಾರಾಟಕ್ಕೆ ಮುಂದಾದ ಪೊಲೀಸ್
ವೃತಿಯಲ್ಲಿ ಪೋಲಿಸ್ ಆಗಿರುವ ಆಗಿರುವ ನಿಸಾರ್ ಗೆ ತನ್ನ ಮಗುವನ್ನ ವೈದ್ಯರ ಬಳಿ ಕರೆದುಕೊಂಡು ಹೋಗಲು ರಜೆಯ ಅಗತ್ಯತೆ ಇತ್ತಂತೆ.. ಆದರೆ ಇದನ್ನು ನೀಡುವ ಬದಲು ಆತನ ಮೇಲಾಧಿಕಾರಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದನಂತೆ.. ಈ ಹಣವನ್ನು ಕೊಡದೆ ಇದ್ದಾಗ ನಿಸಾರ್ ನನ್ನ 120 ಕಿಮೀ ದೂರದ ಲರ್ಕಾನಾಗೆ ವರ್ಗಾವಣೆ ಮಾಡಲಾಗಿತ್ತಂತೆ.. ಹೀಗಾಗಿ ತಾನು ಇರುವ ಸ್ಥಳದಲ್ಲಿಯೇ ಉಳಿದುಕೊಳ್ಳಲು ತನ್ನ ಮೇಲಾಧಿಕಾರಿಗೆ ಲಂಚ ನೀಡಲು ತನ್ನ ಪುಟ್ಟ ಮಕ್ಕಳನ್ನು ನಿಸಾರ್ ಕೇವಲ ಐವತ್ತು ಸಾವಿರ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ..
ಇದನ್ನೂ ಓದಿ: Shocking Incident: ಜೈಲಿನಲ್ಲಿ ಮಹಿಳೆಯಿಂದ ಬೆತ್ತಲೆ ನೃತ್ಯ ಮಾಡಿಸಿದ ಲೇಡಿ ಪೊಲೀಸ್..!
ತೀವ್ರ ಸಂಕಷ್ಟದಲ್ಲಿರುವ ಕುಟುಂಬ ನಿರ್ವಹಣೆಯ ಜೊತೆಗೆ, ಕರಾಚಿಯಿಂದ ಲರ್ಕಾನಾಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ, ಹಾಗೂ ತನ್ನ ಮಗನ ಚಿಕಿತ್ಸೆಗಾಗಿ ಕಷ್ಟ ಪಡುತ್ತಿರುವಾಗಲೇ ತನ್ನ ಮೇಲಾಧಿಕಾರಿಯ ಲಂಚದ ಆಸೆ ಪೂರೈಸಲು ಮಗು ಮಾರಾಟ ಮಾಡಲು ಮುಂದಾಗಿದ್ದಾರೆ ನಿಸಾರ್ ತನ್ನ ಅಳಲು ತೋಡಿಕೊಂಡಿದ್ದಾರೆ..
گھوٹکی کے پولیس اہلکار کو بچے کے علاج کے لیے چھٹی نہ ملی اور لاڑکانہ تبادلہ کردیا گیا، چھٹی لینے اور تبادلہ رکوانے کے لیے افسران کو پچاس ھزار روپے رشوت دینی پڑے گی، اہلکار پچاس ھزار میں ایک بیٹا بیچنے کی آوازیں لگاتا رہا۔
ہائے انسانیت کہاں ہے 😧😮 pic.twitter.com/i9hRF7IsNQ
— Sheikh Sarmad (@ShSarmad71) November 13, 2021
ಸದ್ಯ ನಡುರಸ್ತೆಯಲ್ಲಿ ನಿಂತು ಕೇವಲ 50 ಸಾವಿರ ರೂಪಾಯಿ ಗಳಿಗಾಗಿ ತನ್ನ ಮಗುವನ್ನು ನಿಸಾರ್ ಹರಾಜು ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪಾಕಿಸ್ತಾನದ ವಿರುದ್ಧ ಜನರು ಮತ್ತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಮರ್ಯಾದೆ ಕಳೆದುಕೊಂಡಿರುವ ಪಾಕಿಸ್ತಾನ ಈ ಘಟನೆಯಿಂದ ಅಧಿಕಾರಿಗಳ ಭ್ರಷ್ಟಾಚಾರ, ಯಾವ ಮಟ್ಟಿಗೆ ಸಾಮಾನ್ಯರನ್ನ ಪೀಡಿಸುತ್ತಿದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.. ಜೊತೆಗೆ ಪಾಕಿಸ್ತಾನದಲ್ಲಿ ಸದ್ಯ ಉಂಟಾಗಿರುವ ಅರಾಜಕತೆಗೂ ಈ ರೀತಿಯ ಅಧಿಕಾರಿಗಳು ಭ್ರಷ್ಟ ನಿಲುವೇ ಕಾರಣ ಎಂದು ಜನ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ