ಭಾರತೀಯ ವಾಯುಪಡೆ ಗಡಿ ಪ್ರವೇಶಿಸಿದೆ. ಆದರೆ, ಯಾವುದೇ ಹಾನಿಯಾಗಿಲ್ಲ; ಪಾಕ್​

ಭಾರತದ ವಾಯು ಪಡೆ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಭಾರತೀಯ ವಾಯುಪಡೆ ಗಡಿ ಪ್ರದೇಶವನ್ನು ದಾಟಿದೆ. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ ಎಂದಿದೆ

ಆಸಿಫ್​ ಘಫರ್​

ಆಸಿಫ್​ ಘಫರ್​

  • News18
  • Last Updated :
  • Share this:

ನವದೆಹಲಿ(ಫೆ. 26):  ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ಇಂದು ಪಾಕ್​ ಗಡಿ ನಿಯಂತ್ರಣ ಬಳಿ ದಾಳಿ ನಡೆಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ. ಐಎಎಫ್​ ದಾಳಿಯಿಂದಾಗಿ 200ಕ್ಕೂ ಹೆಚ್ಚು ಜೈಷೆ ಉಗ್ರರರನ್ನು ಹೊಡೆದುರುಳಿಸಿದ್ದಾರೆ. ಬಾಲಕೋಟ್​, ಚಕೋಟಿ ಮತ್ತು ಮುಜಾಫರ್​ಬಾದ್​ ವಲದಲ್ಲಿನ ಜೈಷೆ-ಇ-ಮೊಹಮ್ಮದ್​ ಉಗ್ರರ ನೆಲೆಯ ಮೇಲೆ ದಾಳಿ ನಡೆಸಲಾಗಿದೆ. ಭಾರತದ ವಾಯು ಪಡೆ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಭಾರತೀಯ ವಾಯುಪಡೆ ಗಡಿ ಪ್ರದೇಶವನ್ನು ದಾಟಿದೆ. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ ಎಂದಿದ್ದಾರೆ.

ಆಜಾದ್​ ಜಮ್ಮ ಮತ್ತು ಕಾಶ್ಮೀರದ ಮುಜಾಫರ್​ಬಾದ್​ನಲ್ಲಿ ಭಾರತೀಯ ಸೇನೆ ದಾಳಿ ಮಾಡಿದೆ ಎಂದು ಪಾಕಿಸ್ತಾನದ ಸಾರ್ವಜನಿಕ ಸಂಪರ್ಕ ಸೇವೆಯ ಆಂತರಿಕ ಸೇವೆಯ ಮಹಾ ನಿರ್ದೇಶಕ ಆಸಿಫ್​ ಘಫರ್​ ಸರಣಿ ಟ್ವೀಟ್​ ಮಾಡಿದ್ದಾರೆ.

ಈ ದಾಳಿಯಿಂದಾಗಿ ಪಾಕಿಸ್ತಾನದ ಮೂರು ನಾಲ್ಕು ಮೈಲಿಯೊಳಗೆ ವಿಮಾನ ಹಾರಾಟ ನಡೆಸಿದೆ. ನಿರ್ಜನ ಪ್ರದೇಶದಲ್ಲಿ ಬಾಂಬ್​ ದಾಳಿ ನಡೆಸಲಾಗಿದೆ. ಆದರೆ ಯಾವುದೇ ಹಾನಿಯಾಗಿಲ್ಲ. ಪಾಕಿಸ್ತಾನದ ಸೇನೆಯಿಂದಲೂ ಪರಿಣಾಮಕಾರಿ ಉತ್ತರ ನೀಡಲಾಗುವುದು ಎಂದರು. ಸರ್ಜಿಕಲ್​ ದಾಳಿ 2.0 ಕುರಿತಾದ ಕ್ಷಣ ಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ: Surgical Strikes 2.0 LIVE: ಪಾಕ್​​ ವಿರುದ್ಧ ಭಾರತ ಪ್ರತೀಕಾರ; ಕೇಂದ್ರ ಸಚಿವ ಸಂಪುಟ ತುರ್ತು ಸಭೆ ಕರೆದ ಮೋದಿ ಇದಕ್ಕೂ ಮೊದಲು ಮಾತನಾಡಿದ್ದ ಆಸಿಫ್​ ಘಫರ್​, ನಮಗೆ ಯುದ್ಧ ಬೇಡ, ಆದರೆ ಭಾರತದಿಂದ ದಾಳಿಯಾದರೆ, ನಾವು ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದರು.  

First published: