• Home
  • »
  • News
  • »
  • national-international
  • »
  • Pakistan: ಅಣೆಕಟ್ಟು ನಿರ್ಮಾಣಕ್ಕೆ 3000 ಕೋಟಿ ಸಂಗ್ರಹ; ಜಾಹೀರಾತಿಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

Pakistan: ಅಣೆಕಟ್ಟು ನಿರ್ಮಾಣಕ್ಕೆ 3000 ಕೋಟಿ ಸಂಗ್ರಹ; ಜಾಹೀರಾತಿಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಪಾಕಿಸ್ತಾನದ ಆಣೆಕಟ್ಟು ನಿರ್ಮಾಣ

ಪಾಕಿಸ್ತಾನದ ಆಣೆಕಟ್ಟು ನಿರ್ಮಾಣ

ಪಾಕಿಸ್ತಾನದ ಸಂಸದೀಯ ವ್ಯವಹಾರಗಳ ಸಮಿತಿಯ (PAC) ವರದಿಯು ಅಣೆಕಟ್ಟು ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಅಂದಾಜು 3000 ರೂ. ಕೋಟಿ ಅನ್ನು ಸಂಗ್ರಹಿಸಲಾಗಿದೆ. ಆದರೆ ಅಂದಾಜು 5000 ರೂ. ಕೋಟಿ ಹಣವನ್ನು ಅದರ ಜಾಹೀರಾತಿಗಾಗಿ ಖರ್ಚು ಮಾಡಲಾಗಿದೆ.

  • Share this:

ವಿಶ್ವದ ಕೆಲವು ದೇಶಗಳು ತೀವ್ರವಾದ ಮಳೆಯಿಂದ ಪ್ರವಾಹಕ್ಕೆ (Flood) ಸಿಲುಕಿದ್ದವು. ಅದರಲ್ಲಿ ಪಾಕಿಸ್ತಾನವೂ ಒಂದು. ಪಾಕಿಸ್ತಾನವು (Pakistan) ಇತ್ತೀಚೆಗೆ ಮಳೆಯಿಂದ ಭೀಕರ ಪ್ರವಾಹಕ್ಕೆ ಸಿಲುಕಿತ್ತು. ಈ ಪ್ರವಾಹದಿಂದ ಇಡೀ ದೇಶವೇ ಕಂಗಾಲಾಗಿ ಹೋಗಿತ್ತು. ಬಹು ಪ್ರದೇಶಗಳು ಜಲಾವೃತಗೊಂಡಿದ್ದವು. ಇದರ ಕುರಿತು ಅನೇಕ ಹವಾಮಾನ ತಜ್ಞರು ಜಲಪ್ರಳಯಕ್ಕೆ ಮಾನವ-ಉಂಟುಮಾಡುವ ಹವಾಮಾನ ವೈಪರಿತ್ಯವೇ (Climate change) ನೇರ ಕಾರಣ ಎಂದು ದೂಷಿಸಿದರು. ಆದರೆ ಇನ್ನು ಕೆಲವರು ಮಾನವರು ಉಂಟು ಮಾಡುವ ಹವಾಮಾನ ವೈಪರಿತ್ಯ ಒಂದು ಕಡೆ ಆದರೆ ಮತ್ತೊಂದು ಕಡೆ ದೇಶದಲ್ಲಿ ತುಂಬಿದ ಅಣೆಕಟ್ಟುಗಳು (Dam) ಒಡೆದು ಪ್ರವಾಹ ಉಂಟಾಗಿದೆ ಎಂದು ಅಣೆಕಟ್ಟುಗಳ ಕಡೆಗೆ ಬೆರಳು ತೋರಿಸುತ್ತಿದ್ಧಾರೆ.


ವೈಸ್ ನ್ಯೂಸ್‌ನಲ್ಲಿನ ವರದಿಯ ಪ್ರಕಾರ, “ಸಿಂಧೂ ನದಿಯ ಉದ್ದೇಶಿತ ಡೈಮರ್-ಬಾಷಾ ಅಣೆಕಟ್ಟು ಒಂದು ಹಗರಣದಲ್ಲಿ ಸಿಲುಕಿದೆ. ಈ "ಮೆಗಾ ಅಣೆಕಟ್ಟು" ದೇಶಕ್ಕೆ ಪ್ರವಾಹ ಸೇರಿದಂತೆ ಹಲವು ನೀರಿನ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ಸರ್ಕಾರದ ವರದಿಯು ಇಡೀ ಯೋಜನೆಯಲ್ಲಿ ಪ್ರಮುಖ ದೋಷಗಳನ್ನು ಎತ್ತಿ ತೋರಿಸಿದೆ” ಎಂದು ವರದಿ ಮಾಡಿದೆ.


ಇನ್ನೂ ಪೂರ್ಣಗೊಳ್ಳದ ಆಣೆಕಟ್ಟು ಕಾಮಗಾರಿ
ಪಾಕಿಸ್ತಾನದ ಸಂಸದೀಯ ವ್ಯವಹಾರಗಳ ಸಮಿತಿಯ (PAC) ವರದಿಯು ಅಣೆಕಟ್ಟು ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಅಂದಾಜು 3000 ರೂ. ಕೋಟಿ ಅನ್ನು ಸಂಗ್ರಹಿಸಲಾಗಿದೆ. ಆದರೆ ಅಂದಾಜು 5000 ರೂ. ಕೋಟಿ ಹಣವನ್ನು ಅದರ ಜಾಹೀರಾತಿಗಾಗಿ ಖರ್ಚು ಮಾಡಲಾಗಿದೆ. ಅಣೆಕಟ್ಟು ಇನ್ನು ಪೂರ್ಣವಾಗಿಲ್ಲ. ಈ ಅಣೆಕಟ್ಟನ್ನು ಮೂಲತಃ 1980 ರ ದಶಕದಲ್ಲಿ ಪೂರ್ಣಗೊಳಿಸಬೇಕೆಂಬ ಆಸೆಯನ್ನು ಸರ್ಕಾರ ಹೊಂದಿತ್ತು. ಆದರೆ ಪರಿಸರದ ಪ್ರಭಾವ ಮತ್ತು ಹೆಚ್ಚುತ್ತಿರುವ ವೆಚ್ಚದಂತಹ ಅಂಶಗಳು ಯೋಜನೆಯನ್ನು ವಿಳಂಬಗೊಳಿಸುತ್ತಲೇ ಬಂದಿವೆ ಎಂದು ಹೇಳಿದೆ.


ಇದನ್ನೂ ಓದಿ: Anti-India Graffiti: ಕೆನಡಾದ ಸ್ವಾಮಿ ನಾರಾಯಣ ದೇವಸ್ಥಾನದ ಮೇಲೆ ಭಾರತ ವಿರೋಧಿ ಬರಹ


ಇದರ ನಂತರ, 2018 ರಲ್ಲಿ, ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಸಾಕಿಬ್ ನಿಸಾರ್ ಅವರು ಅಣೆಕಟ್ಟು ನಿರ್ಮಾಣಕ್ಕಾಗಿ ಒಂದು ಫಂಡ್‌ ಅಥವಾ ನಿಧಿಯನ್ನು ಸ್ಥಾಪಿಸಿದರು. ಆಗ ಇದರ ವೆಚ್ಚವು 1,115 ರೂ .ಬಿಲಿಯನ್‌ಗೆ ಏರಿತ್ತು. ಶ್ರೀಯುತ ನಿಸಾರ್ ಅವರು ಪಾಕಿಸ್ತಾನದ ಜನರಿಂದ ದೇಣಿಗೆ ಪಡೆಯಲು ನಿಧಿಯನ್ನು ಸ್ಥಾಪಿಸಿದರು. ಅವರು ಅಣೆಕಟ್ಟಿನ ನಿರ್ಮಾಣಕ್ಕೆ ಅಗತ್ಯವಿರುವ ಬಾಕಿ ಹಣವನ್ನು ಒದಗಿಸುತ್ತಾರೆ ಎಂದು ವೈಸ್ ನ್ಯೂಸ್ ವರದಿ ಹೇಳಿದೆ.


ದೇಶದ ಎಲ್ಲರಿಂದಲೂ ಹಣ ಸಂಗ್ರಹ
ಸಾರ್ವಜನಿಕರಿಂದ ಮಾತ್ರವಲ್ಲದೆ ದೇಶದ ಕ್ರಿಕೆಟ್ ತಂಡ ಮತ್ತು ಉನ್ನತ ಸಂಗೀತಗಾರರಿಂದ ಕೊಡುಗೆಗಳು ಬರಲಾರಂಭಿಸಿದೆ. ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಸೈನಿಕರು, ಇತರ ಸೈನ್ಯದ ಅಧಿಕಾರಿಗಳು ಮತ್ತು ಹಲವಾರು ಸರ್ಕಾರಿ ನೌಕರರು ತಮ್ಮ ಸಂಬಳದ ಒಂದು ಭಾಗವಾಗಿ 79 ಬಿಲಿಯನ್ ರೂ. ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ಔಟ್ಲೆಟ್ ಪತ್ರಿಕೆ ಹೇಳಿದೆ.


ಅಣೆಕಟ್ಟು ವಿಚಾರದಲ್ಲಿ ನಡೆದಿದೆ ಭಾರೀ ಭ್ರಷ್ಟಾಚಾರ
ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಈ ನಿಧಿಯ ಜಂಟಿ ನಾಯಕತ್ವವನ್ನು ವಹಿಸಿಕೊಂಡರು. ಶ್ರೀ ನಿಸಾರ್ 2019 ರಲ್ಲಿ ನಿವೃತ್ತರಾದಾಗ, 502 ಬಿಲಿಯನ್ ರೂ. ಕೊರತೆ ಇತ್ತು ಎಂದು ವೈಸ್ ನ್ಯೂಸ್ ಹೇಳಿದೆ.


ಆದರೆ ಅವರ ಹೇಳಿಕೆಯು ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈಗ ನಿವೃತ್ತರಾಗಿರುವ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರು ಈ ನಿಧಿಯು ನಿಜವಾಗಿಯೂ ಅಣೆಕಟ್ಟನ್ನು ನಿರ್ಮಿಸಲು ಎಂದಿಗೂ ಉದ್ದೇಶಿಸಿಲ್ಲ. ಆದರೆ ಜಾಗೃತಿ ಮೂಡಿಸಲು ಎಂದು ಹೇಳಿಕೆ ನೀಡಿರುವುದು ಎಲ್ಲರಿಗೂ ಆಘಾತಕಾರಿ ಎನಿಸಿದೆ. ಇದರಿಂದ ಅಣೆಕಟ್ಟು ವಿಚಾರದಲ್ಲಿ ಭಾರೀ ಭ್ರಷ್ಟಾಚಾರಗಳು ನಡೆದಿವೆ. ಅಣೆಕಟ್ಟು ಯೋಜನೆ ಮೇಲೆ ಆರೋಪಗಳು ಕೇಳಿ ಬಂದಿವೆ. ಅನೇಕ ಪ್ರಭಾವಿ ಪಾಕಿಸ್ತಾನಿಗಳು ಈ ಅಣೆಕಟ್ಟಿನ ಯೋಜನೆಯಲ್ಲಿ ನಡೆದ ಹಗರಣದ ವಿರುದ್ಧ ಮಾತನಾಡಲು ಪ್ರಾರಂಭಿಸಿದರು.


ಇದನ್ನೂ ಓದಿ: Fire Video: ನೋಡ ನೋಡ್ತಿದ್ದಂತೇ ಹೊತ್ತಿ ಉರಿದ 42 ಮಹಡಿಗಳ ಕಟ್ಟಡ! ಭಯಾನಕ ವಿಡಿಯೋ ಇಲ್ಲಿದೆ


ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಅಹ್ಸಾನ್ ಇಕ್ಬಾಲ್, ಅಣೆಕಟ್ಟು ನಿಧಿಗಾಗಿ ಜಾಹೀರಾತಿಗಾಗಿ ಸಂಗ್ರಹಿಸಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಶ್ರೀ ನಿಸಾರ್ ಅವರ ಅವಧಿಯಲ್ಲಿ ಸ್ಥಾಪಿಸಲಾದ ಅಣೆಕಟ್ಟು ನಿಧಿಯ ಬಗ್ಗೆ ವಿವರಣೆಯನ್ನು ನೀಡಲು ಅವರನ್ನು ಕರೆಸಿತ್ತು. ಅಧಿಕಾರಿಗಳ ಪ್ರಕಾರ, ಡೈಮರ್-ಬಾಷಾ ಅಣೆಕಟ್ಟು ನಿರ್ಮಾಣವಾದಾಗ, 272 ಮೀಟರ್ ಎತ್ತರವನ್ನು ಹೊಂದಿರುತ್ತದೆ. ಇದು 4,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುತ್ತದೆ.

Published by:Ashwini Prabhu
First published: