ಮುಂಬೈ ದಾಳಿ ಸಂಚುಕೋರ ಹಫೀಜ್ ಸಯೀದ್ ವಿರುದ್ಧ 23 ಪ್ರಕರಣ ದಾಖಲಿಸಿದ ಪಾಕಿಸ್ತಾನ!

ಭಯೋತ್ಪಾದನೆಗೆ ಪಾಕ್​ ಆರ್ಥಿಕ ಸಹಕಾರ ನೀಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್​ ಒಳಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ದೊಡ್ಡ ದೊಡ್ಡ ರಾಷ್ಟ್ರಗಳು ಒತ್ತಡ ಹೇರಿವೆ.

Rajesh Duggumane | news18
Updated:July 4, 2019, 8:45 AM IST
ಮುಂಬೈ ದಾಳಿ ಸಂಚುಕೋರ ಹಫೀಜ್ ಸಯೀದ್ ವಿರುದ್ಧ 23 ಪ್ರಕರಣ ದಾಖಲಿಸಿದ ಪಾಕಿಸ್ತಾನ!
ಹಫೀಝ್ ಸಯೀದ್​ (ಸಂಗ್ರಹ ಚಿತ್ರ)
  • News18
  • Last Updated: July 4, 2019, 8:45 AM IST
  • Share this:
ಲಾಹೋರ್ (ಜು.4)​: ಮುಂಬೈ ದಾಳಿಯ ಸಂಚುಕೋರ ಹಫೀಜ್​ ಸಯೀದ್​ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ ಮುಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ್ದರಿಂದ ಪಾಕ್​ ಈ ನಿರ್ಧಾರಕ್ಕೆ ಬಂದಿದೆ.

2008ರ ಮುಂಬೈ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. ಈ ದಾಳಿಯ ಹಿಂದೆ ಲಷ್ಕರ್​ ಇ ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಭಾರತ ಹಾಗೂ ಅಮೆರಿಕ ಆರೋಪಿಸಿತ್ತು. ಈ ಸಂಘಟನೆಗೆ ಆರ್ಥಿಕ ಸಹಾಯ ಒದಗಿಸಲು ಐದು ಟ್ರಸ್ಟ್​ಗಳನ್ನು ಬಳಕೆ ಮಾಡಿಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಭಯೋತ್ಪಾದನ ನಿಗ್ರಹ ದಳ ಹಫೀಜ್​ ಹಾಗೂ ಆತನ 12 ಸಹಚರರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿದೆ. ಈಗಾಗಲೇ ನಿಷೇಧಕ್ಕೊಳಗಾಗಿರುವ ಜಮಾತ್​ ಉದ್​ ದವಾ ಹಾಗೂ ಫಲಾಹ್​ ಇ ಇನ್ಸಾನಿಯತ್​ ಫೌಂಡೇಶನ್​ ವಿರುದ್ಧವೂ ಕ್ರಮ ಕೈಗೊಳ್ಳುತ್ತಿರುವುದಾಗಿ ಪಾಕ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಸಂಘಟನೆಗಳಿಗೆ ನಿಷೇಧ ಹೇರಿದ ಪಾಕ್

“ಈ ವ್ಯಕ್ತಿಗಳು ಹಾಗೂ ಸಂಸ್ಥೆಗೆ ಸೇರಿದ ಆಸ್ತಿಯನ್ನು ನಾವು ಜಪ್ತಿ ಮಾಡಿ, ಸರ್ಕಾರದ ಅಧೀನಕ್ಕೆ ಕೊಟ್ಟಿದ್ದೇವೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಪಾಕ್​ ಉಗ್ರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದನೆಗೆ ಪಾಕ್​ ಆರ್ಥಿಕ ಸಹಕಾರ ನೀಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್​ ಒಳಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ದೊಡ್ಡ ದೊಡ್ಡ ರಾಷ್ಟ್ರಗಳು ಒತ್ತಡ ಹೇರಿವೆ.

First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ